# ದ.ಕ: ಹಿರಿಯ ವ್ಯಕ್ತಿಯ ಮೊಬೈಲ್‌ ಬ್ಲಾಕ್‌-ಖಾತೆ ಫ್ರೀಜ್‌ ಮಾಡಿ, ಲಕ್ಷ ಲಕ್ಷ ಹಣ ಉಳಿಯಿತು!

- Link: https://hosakannada.com/crime/dak-a-senior-persons-mobile-bank-account-got-frozen-saved-lakhs-of-money/
- Published: 2026-08-22T11:20:26+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು: ಮೊಬೈಲ್‌ ನಂಬರ್‌ನ ನೆಟ್‌ವರ್ಕ್‌ ಆಕ್ಸೆಸ್‌ ಪಡೆದು ಹಿರಿಯ ವ್ಯಕ್ತಿಯೊಬ್ಬರ ಖಾತೆಯಿಂದ
2,12,95,500 ರೂ. ವರ್ಗಾವಣೆ ಮಾಡಿ ವಂಚನೆ ಮಾಡಿರುವ ಪ್ರಕರಣಕ್ಕೆ ಕುರಿತಂತೆ ಸೈಬರ್‌ ಕ್ರೈಂ ಠಾಣೆ
ಪೊಲೀಸರು ತನಿಖೆ ಆರಂಭ ಮಾಡಿದ್ದು, ಪೊಲೀಸರು ಬ್ಯಾಂಕ್‌ ಖಾತೆಯನ್ನು ಫ್ರೀಜ್‌ ಮಾಡಿದ್ದಾರೆ. ಸುಮಾರು
50ಲಕ್ಷ ರೂ ವರ್ಗಾವಣೆ ಆಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Sponsored

78 ವರ್ಷದ ದೂರುದಾರರು, ಮುಂಬಯಿಯ ಖಾಸಗಿ ಸಂಸ್ಥೆಯಲ್ಲಿ ಸುಮಾರು 50 ವರ್ಷಗಳ ಕೆಲಸ ಮಾಡಿ ನಿವೃತ್ತಿ
ಹೊಂದಿ ಮಂಗಳೂರಿಗೆ ಬಂದು ನೆಲೆಸಿದ್ದರು. ಜುಲೈ ತಿಂಗಳಲ್ಲಿ ಇವರ ಮೊಬೈಲ್‌ ಸಿಮ್‌ ಬ್ಲಾಕ್‌ ಆಗಿತ್ತು.
ಈ ಕುರಿತು ದೂರವಾಣಿ ಸಂಸ್ಥೆ ಕಚೇರಿಗೆ ಹೋಗಿ ವಿಚಾರಿಸಿದಾಗ ಈ ನಂಬರ್‌ ಇನ್ನೊಂದು ಸಂಸ್ಥೆಗೆ ಪೋರ್ಟ್‌
ಆಗಿರುವುದು ತಿಳಿದು ಬಂದಿದೆ. ಕೂಡಲೇ ನಂಬರ್‌ ಬ್ಲಾಕ್‌ ಮಾಡುವಂತೆ ದೂರು ನೀಡಿದ ಅವರು ಬ್ಯಾಂಕಿಗೆ
ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಐದು ಬ್ಯಾಂಕ್‌ಗಳ ಖಾತೆಯಿಂದ ಹಣ ವರ್ಗಾವಣೆ ಆಗಿರುವುದು ತಿಳಿದು 
ಬಂದಿದೆ.

Advertisement

Advertisement

ಸಿಮ್‌ ಒಂದು ತಿಂಗಳ ಕಾಲ ಸ್ತಬ್ಧಗೊಂಡಿದ್ದೃೂ ಅವರು ಪರಿಶೀಲಿಸುವ ಗೋಜಿಗೆ ಹೋಗಿರಲಿಲ್ಲ. ಬದಲಿಗೆ 
ಬೇರೆ ಸಿಮ್‌ ಪಡೆದಿದ್ದರು. ಹಂತ ಹಂತವಾಗಿ ವಹಿವಾಟು ನಡೆದಿರುವುದರಿಂದ ಬ್ಯಾಂಕ್‌ ಸಿಬ್ಬಂದಿಯವರು 
ಇದು ನೈಜ ವರ್ಗಾವಣೆ ಎಂದು ಹೇಳಿದ್ದಾರೆ ಎಂದಿದ್ದಾರೆ ಪೊಲೀಸರು.

ಸಾರ್ವಜನಿಕರ ಮೊಬೈಲ್‌ ಸಂಖ್ಯೆ ಹಠಾತ್‌ ಬ್ಲಾಕ್‌ ಆದರೆ ಕೂಡಲೇ ದೂರವಾಣಿ ಸಂಸ್ಥೆಯನ್ನು ಸಂಪರ್ಕ ಮಾಡಿ
ಪರಿಶೀಲಿಸಬೇಕು. ಜೊತೆಗೆ ಬ್ಯಾಂಕಿಗೂ ಮಾಹಿತಿ ನೀಡಬೇಕು. ಅಗತ್ಯವಿದ್ದರೆ ಮೊಬೈಲ್‌ ನಂಬರ್‌ಗೆ ಲಿಂಕ್‌
ಆಗಿರುವ ಬ್ಯಾಂಕ್‌ ಖಾತೆಗಳ ಆನ್‌ಲೈನ್‌ ವಹಿವಾಟವನ್ನು ರದ್ದು ಮಾಡುವುದು ಉತ್ತಮ- ಮಿಥುನ್‌ ಎಚ್‌ 
ಎನ್‌ ಡಿಸಿಪಿ-ಕಾನೂನು ಸುವ್ಯವಸ್ಥೆ

Advertisement
