# Bengaluru : ವೈಯರ್‌ನಿಂದ ಕತ್ತು ಬಿಗಿದು ಲಿವ್ ಇನ್ ಗೆಳತಿಯ ಹತ್ಯೆ ಮಾಡಿದ ಗೆಳೆಯ – ಕಾರಣ ಶಾಕಿಂಗ್ !!

- Link: https://hosakannada.com/crime/bengaluru-boyfriend-kills-live-in-girlfriend-by-strangling-her-with-a-wire/
- Published: 2026-03-14T12:39:10+00:00
- Author: ಹೊಸಕನ್ನಡ ನ್ಯೂಸ್

Bengaluru : ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಯುವತಿಯನ್ನು ಆಕೆಯ ಪ್ರಿಯಕರನೇ ವೈಯರ್‌ನಿಂದ 
ಕತ್ತು ಬಿಗಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವರ್ತೂರಿನಲ್ಲಿನಡೆದಿದೆ. ಕಾರಣ ನಿಜಕ್ಕೂ ಅಚ್ಚರಿ
ಮೂಡಿಸುತ್ತದೆ.

Sponsored

ಯಸ್, ಮದುವೆಯ ಸತ್ಯ ಬಯಲು ಮಾಡಿದ ಯುವತಿಯನ್ನು ಆಕೆಯ ಲಿವ್-ಇನ್ ಪ್ರಿಯಕರ ವೈಯರ್‌ನಿಂದ ಕತ್ತು ಬಿಗಿದು
ಲಿವ್ ಇನ್‌ ಗೆಳತಿಯನ್ನು ವಿವಾಹಿತ ಕೊಲೆ ಮಾಡಿದ್ದಾನೆ. ಕೊಡಗು ಮೂಲದ ರಂಜಿತಾಳನ್ನು (23) ಮೃತ ಯುವತಿ.
ಕೊಲೆ ಆರೋಪಿ ಅಯ್ಯಪ್ಪ ಎನ್ನಲಾಗಿದೆ.

Advertisement

Advertisement

ಆರೋಪಿ ಅಯ್ಯಪ್ಪನಿಗೆ ಈ ಮೊದಲೇ ಮದುವೆಯಾಗಿತ್ತು. ಆದರೆ ಮದುವೆಯಾಗಿರುವ ವಿಷಯ ಯುವತಿಗೆ ತಿಳಿದಿರಲಿಲ್ಲ.
ಇದೀಗ ಈ ವಿಚಾರ ತಿಳಿದು ಇಬ್ಬರ ಮಧ್ಯೆ ಗಲಾಟೆ ಶುರುವಾಗಿತ್ತು. ಈ ವಿಚಾರವಾಗಿ ಇಬ್ಬರ ನಡುವೆ ತೀವ್ರ
ಗಲಾಟೆ ಶುರುವಾಗಿದೆ. ಗಲಾಟೆ ವಿಕೋಪಕ್ಕೆ ಹೋದಾಗ, ಆಕ್ರೋಶಗೊಂಡ ಅಯ್ಯಪ್ಪ ವೈಯರ್‌ನಿಂದ ರಂಜಿತಾಳ ಕತ್ತು
ಬಿಗಿದು ಹತ್ಯೆ ಮಾಡಿದ್ದಾನೆ. ಈ ಬಗ್ಗೆ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು
ಆರೋಪಿ ಅಯ್ಯಪ್ಪನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Advertisement
