# ಬೆಳ್ತಂಗಡಿ: ಅಕ್ರಮ ಕೋಳಿ ಅಂಕದ ಮೇಲೆ ಪೊಲೀಸ್‌ ದಾಳಿ

- Link: https://hosakannada.com/crime/belthangady-police-raid-illegal-chicken-market/
- Published: 2026-03-14T07:47:06+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿ: ಕರಾಯ ಗ್ರಾಮದ ಶೆಟ್ಟಿಕೋಡಿ ಪ್ರದೇಶದಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಪೊಲೀಸರು
ದಾಳಿ ನಡೆಸಿದ್ದು, ಐವರು ಆರೋಪಿಗಳನ್ನು ಬಂಧನ ಮಾಡಿದ ಘಟನೆ ಮಾ.13 ರಂದು ಮಧ್ಯಾಹ್ನ ನಡೆದಿದೆ.

Sponsored

ಮಾ.13 ರಂದು ಮಧ್ಯಾಹ್ನ ಸುಮಾರು 1.30 ರ ವೇಳೆಗೆ ಶೆಟ್ಟಿಕೋಡಿ ಪ್ರದೇಶದಲ್ಲಿ ಅಕ್ರಮ ಕೋಳಿ ಅಂಕ ನಡೆಯುತ್ತಿರುವ
ಕುರಿತು ಪೊಲೀಸರಿಗೆ ಖಚಿತ ಮಾಹಿತಿ ದೊರಕಿದ್ದು, ಈ ಆಧಾರದಲ್ಲಿ ಕರಾಯ-ಗುರುವಾಯನಕೆರೆ ರಸ್ತೆಯಿಂದ 
ಸುಮಾರು 400 ಮೀಟರ್‌ ಒಳಗಡೆ ಇರುವ ಮೈದಾನಕ್ಕೆ ತೆರಳಿ ಪರಿಶೀಲನೆ ಮಾಡಿದಾಗ ಹಲವು ಜನ ಸೇರಿ ಕೋಳಿಗಳ
ಕಾಲಿಗೆ ಬಾಳು ಕಟ್ಟಿ ಕಾದಾಟ ನಡೆಸುತ್ತಿರುವುದು ಕಂಡು ಬಂದಿರುವುದಾಗಿ ವರದಿಯಾಗಿದೆ.

Advertisement

Advertisement

ಪೊಲೀಸರ ದಾಳಿಗೆ ಅಲ್ಲಿದ್ದವರು ಓಡಲು ಪ್ರಯತ್ನ ಪಟ್ಟಿದ್ದು, ಈ ವೇಳೆ ಪೊಲೀಸರು ಐವರನ್ನು ವಶಕ್ಕೆ 
ಪಡೆದಿದ್ದಾರೆ. ಬಂಧಿತರಲ್ಲಿ ಅಂಕಿತ್‌ (23), ಯಶೋಧರ (32), ಶಿವಪ್ಪ (45), ಕರುಣಾಕರ ಪೂಜಾರಿ (25)
ಮತ್ತು ಉಮೇಶ್‌(42) ಎಂದು ಗುರುತಿಸಲಾಗಿದೆ.

ಹಾಗೂ ಘಟನಾ ಸ್ಥಳದಿಂದ ನಾಲ್ಕು ಕೋಳಿಗಳು, ಜೂಜಾಟಕ್ಕೆ ಬಳಸಿದ ರೂ.2500 ನಗದು, ನಾಲ್ಕು ನೈಲಾನ್‌ 
ಚೀಲಗಳು, ಒಂದು ನೀಲಿ ಟರ್ಪಲ್‌, ಒಂದು ಗೋಣಿಚೀಲ, ಎರಡು ಕೋಳಿ ಬಾಳುಗಳು, ಹಾಗೂ ಒಂದು ಆಟೋ ರಿಕ್ಷಾ
ಸೇರಿ ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಕರ್ನಾಟಕ ಪೊಲೀಸ್‌ ಕಾಯ್ದೆ ಅನುಸಾರ ಪ್ರಕರಣ ದಾಖಲಾಗಿದೆ.
ಪೊಲೀಸರು ತನಿಖೆ ಮಾಡುತ್ತಿದ್ದಾರೆ.

Advertisement
