# ಬೆಳ್ತಂಗಡಿ: ಅನಾರೋಗ್ಯದ ಹಿನ್ನೆಲೆ, ವ್ಯಕ್ತಿ ಆತ್ಮಹತ್ಯೆ

- Link: https://hosakannada.com/crime/belthangady-man-commits-suicide-due-to-ill-health/
- Published: 2026-05-08T07:47:06+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿ: ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧರೊಬ್ಬರು ಮನೆಯ ಹೊರಗೆ ಅಳವಡಿಸಿದ್ದ ರಾಡ್‌ಗೆ
ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಧರ್ಮಸ್ಥಳದಲ್ಲಿ ನಡೆದಿದೆ.

Sponsored

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಜೋಡುಸ್ನಾನದ ಅಗುಳೆ ನಿವಾಸಿ ಐತಪ್ಪ ಪೂಜಾರಿ (68) ಎಂಬುವವರು
ಮೇ 6 ರಂದು ರಾತ್ರಿ 11 ಗಂಟೆಯಿಂದ ಮೇ 7 ರ ಬೆಳಗ್ಗೆ 6 ಗಂಟೆ ಒಳಗಡೆ ಮನೆಯ ಹೊರಗೆ ಅಳವಡಿಸಿದ್ದ ರಾಡ್‌ಗೆ
ನೈಲಾನ್‌ ಹಗ್ಗದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

Advertisement

ಐತಪ್ಪ ಪೂಜಾರಿಯವರ ಸೊಸೆ ಬೆಳಗ್ಗೆ 6 ಗಂಟೆಗೆ ಎದ್ದು ಮನೆಯ ಅಂಗಳಕ್ಕೆ ಬಂದಾಗ ಆತ್ಮಹತ್ಯೆ ಘಟನೆ ಬೆಳಕಿಗೆ
ಬಂದಿದೆ ಎಂದು ಮೇ 7 ರಂದು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿರುವ ಕುರಿತು
ವರದಿಯಾಗಿದೆ.

Advertisement
