# ಬೆಳ್ಳಾರೆ: ಪರವಾನಿಗೆ ಇಲ್ಲದೆ ಪಟಾಕಿ ದಾಸ್ತಾನು ಪ್ರಕರಣ ದಾಖಲು

- Link: https://hosakannada.com/crime/bellare-crackers-in-godown-case-filed/
- Published: 2026-11-08T14:31:35+00:00
- Author: ಹೊಸಕನ್ನಡ ನ್ಯೂಸ್

ಬೆಳ್ಳಾರೆ: ಯಾವುದೇ ಪರವಾನಿಗೆ ಇಲ್ಲದೆ ಮಾರಾಟದ ಉದ್ದೇಶದಿಂದ ಮನೆಯ ಅಂಗಳದಲ್ಲಿ ಅಕ್ರಮವಾಗಿ ಪಟಾಕಿಗಳನ್ನು
ದಾಸ್ತಾನು ಇರಿಸಿದ್ದ ಪ್ರಕರಣ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಳ್ಯ ಮುಪ್ಪೇರಿಯ ಗ್ರಾಮದ ಉರುಂಬಿಯಲ್ಲಿ
ಬೆಳಕಿಗೆ ಬಂದಿದೆ.

Sponsored

ಉರುಂಬಿ ನಿವಾಸಿ ಸುಧಾಕರ ರೈ ಎಂಬವರ ಮನೆಯ ಬಳಿ ಅಕ್ರಮವಾಗಿ ಪಟಾಕಿ ದಾಸ್ತಾನು ಇರಿಸಿರುವ ಬಗ್ಗೆ ಮಾಹಿತಿ
ಪಡೆದ ಬೆಳ್ಳಾರೆ ಪೊಲೀಸ್‌ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ಮುರುಗೇಶ್ ಅವರು ಸಿಬ್ಬಂದಿಗಳೊಂದಿಗೆ
ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯ ಅಂಗಳದ ಬಳಿ ಪಟಾಕಿ ಬಾಕ್ಸ್‌ಗಳು ಪತ್ತೆಯಾಗಿವೆ.

Advertisement

Advertisement

ಈ ಬಗ್ಗೆ ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೆ ಮಾರಾಟದ ಉದ್ದೇಶದಿಂದ ಪಟಾಕಿಗಳನ್ನು ತಂದಿರುವುದಾಗಿ
ಸುಧಾಕರ ರೈ ತಿಳಿಸಿದ್ದಾರೆ ಎನ್ನಲಾಗಿದೆ.

ಸಾರ್ವಜನಿಕರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ, ಪರವಾನಿಗೆ
ಇಲ್ಲದೆ ಸ್ಫೋಟಕ ವಸ್ತುಗಳನ್ನು ಅಕ್ರಮವಾಗಿ ದಾಸ್ತಾನು ಇರಿಸಿರುವ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement
