# ಬಂಟ್ವಾಳ: ಬಿ.ಸಿ.ರೋಡ್‌ ಬಸ್ಸು ನಿಲ್ದಾಣದ ಬಳಿ ಯುವತಿಗೆ ಚೂರಿ ಇರಿತ

- Link: https://hosakannada.com/crime/bantwal-young-woman-stabbed-near-b-c-road-bus-stand/
- Published: 2026-07-16T18:50:04+00:00
- Author: ಹೊಸಕನ್ನಡ ನ್ಯೂಸ್

ಬಂಟ್ವಾಳ ಜು,16: ಬಿಸಿ ರೋಡ್‌ನ ಕೆಎಸ್‌ಆರ್‌ಟಿಸಿ ನೂತನ ಬಸ್‌ ನಿಲ್ದಾಣದ ಬಳಿ ಗುರುವಾರ ಸಂಜೆ ಸುಮಾರು
6 ಗಂಟೆ ವೇಳೆಗೆ ಬಸ್‌ಗಾಗಿ ಕಾಯುತ್ತಿದ್ದ ಸುಮಾರು 21-25 ವರ್ಷದ ಯುವತಿಯ ಮೇಲೆ ವ್ಯಕ್ತಿಯೊಬ್ಬ ಹರಿತವಾದ
ಆಯುಧದಿಂದ ಗಂಭೀರವಾಗಿ ಹಲ್ಲೆ ಮಾಡಿ ಪರಾರಿಯಾಗಿರುವ ಕುರಿತು ವರದಿಯಾಗಿದೆ.

Sponsored

ಗಂಭೀರವಾಗಿ ಗಾಯಗೊಂಡ ಯುವತಿಯನ್ನು ಕೂಡಲೇ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ
ನೀಡಲಾಗುತ್ತಿದೆ. ಯುವತಿಯ ಆರೋಗ್ಯ ಸ್ಥಿತಿಯ ಕುರಿತು ವೈದ್ಯರು ನಿಗಾವಹಿಸಿದ್ದಾರೆ.

Advertisement

Advertisement

ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ
ಭೇಟಿ ನೀಡಿ ಪರಿಶಿಲನೆ ಮಾಡಿದ್ದಾರೆ. ಪ್ರಕರಣ ದಾಖಲು ಮಾಡಿ ಆರೋಪಿ ಪತ್ತೆಗೆ ತನಿಖೆ ಆರಂಭಿಸಲಾಗಿದೆ.

ಹಲ್ಲೆಗೆ ಕಾರಣವೇನೆಂದು ಇನ್ನಷ್ಟೇ ತಿಳಿದು ಬರಬೇಕಿದೆ.

Advertisement
