# ಬಂಟ್ವಾಳ: ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ

- Link: https://hosakannada.com/crime/bantwal-female-student-waiting-for-a-bus-attacked-with-lethal-weapons/
- Published: 2026-07-06T11:24:59+00:00
- Author: ಹೊಸಕನ್ನಡ ನ್ಯೂಸ್

ಬಂಟ್ವಾಳ: ಬಸ್ಸಿಗಾಗಿ ಕಾಯುತ್ತಿದ್ದ ಪಿಯು ವಿದ್ಯಾರ್ಥಿನಿಯ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿರುವ
ಆಘಾತಕಾರಿ ಘಟನೆ ನಡೆದಿದೆ.

Sponsored

ಇರಾ ಗ್ರಾಮದಲ್ಲಿ ಬಸ್ಸಿಗೆಂದು ಕಾಯುತ್ತಿದ್ದ ಪಿಯು ವಿದ್ಯಾರ್ಥಿನಿಯ ಮೇಲೆ ಮಾರಕಾಸ್ತ್ರಗಳಿಂದ ದಾಳಿ
ಮಾಡಿರುವ ಘಟನೆ ಆತಂಕ ಸೃಷ್ಟಿಸಿದೆ. ಜವ್ವರ್‌ ಎನ್ನುವಾತ ದಾಳಿ ಮಾಡಿದ್ದಾನೆ ಎನ್ನಲಾಗಿದ್ದು, ಗಾಯಗೊಂಡ
ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Advertisement

Advertisement

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಬಂಟ್ವಾಳ ನಗರ ಪೊಲೀಸ್‌ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ
ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿ ಜವ್ವರ್‌ನ ಪತ್ತೆಗೆ
ಕ್ರಮ ಕೈಗೊಂಡಿದ್ದಾರೆ.

ವಿದ್ಯಾರ್ಥಿನಿಯನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement
