# Maharastra : ಮಹಿಳೆಯರಿಗೆ ಪ್ರಸಾದದಲ್ಲಿ ವಯಾಗ್ರ ಹಾಕುತಿದ್ದ ಜ್ಯೋತಿಷಿ – ಕಳಸ ಹಿಡಿದು ನಿಲ್ಲುತ್ತಿದ್ದಂತೆ ಕೆಲಸ ಆರಂಭ

- Link: https://hosakannada.com/crime/astrologer-who-was-giving-viagra-to-women-in-prasadam-work-begins-as-soon-as-he-stops-holding-the-pot/
- Published: 2026-03-20T17:47:57+00:00
- Author: ಹೊಸಕನ್ನಡ ನ್ಯೂಸ್

Maharastra : ಮಹಾರಾಷ್ಟ್ರದ ನಾಸಿಕ್‌ನಲ್ಲಿ ಆಧ್ಯಾತ್ಮದ ಸೋಗಿನಲ್ಲಿ 35 ವರ್ಷದ ಮಹಿಳೆಯ ಮೇಲೆ ಪದೇ
ಪದೇ ಅತ್ಯಾಚಾರ ಎಸಗಿದ ಹಾಗೂ 58 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಜ್ಯೋತಿಷಿ
ಅಶೋಕ್ ಖಾರಟ್‌ (Ashok Kharat) ನನ್ನು ಬಂಧಿಸಲಾಗಿದೆ. ಇದೀಗ ಈ ಖ್ಯಾತ ಜ್ಯೋತಿಷ್ಯನ ಬಣ್ಣ ಒಂದಾಗಿ
ಬದಲಾಗುತ್ತಿದೆ. 

Sponsored

ಪ್ರಮುಖ ರಾಜಕೀಯ ನಾಯಕರ ಭವಿಷ್ಯ ನುಡಿಯುವ ಮೂಲಕ ಸುದ್ದಿಯಾಗಿದ್ದ ಸ್ವಯಂ ಘೋಷಿತ ಜ್ಯೋತಿಷಿ ‘ಕ್ಯಾಪ್ಟನ್’
ಅಶೋಕ್ ಖರತ್‌ನನ್ನು 35 ವರ್ಷದ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ನಾಸಿಕ್ ಅಪರಾಧ ವಿಭಾಗದ ಪೊಲೀಸರು
ಕಾರ್ಯಾಚರಣೆ ನಡೆಸಿ ಖರತ್‌ನನ್ನು ವಶಕ್ಕೆ ಪಡೆದಿದ್ದಾರೆ.

Advertisement

Advertisement

ಆರೋಪಿಯು ಸಮಾಜದ ಪ್ರಭಾವಿ ಮಹಿಳೆಯರೂ ಸೇರಿದಂತೆ ಒಟ್ಟು 58 ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ರಹಸ್ಯವಾಗಿ
ಚಿತ್ರೀಕರಿಸಿರುವುದು ಪತ್ತೆಯಾಗಿದೆ. ಸರ್ಕಾರವಾಡಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದೀಗ ತನಿಖೆಯಲ್ಲಿ ಈ ಅಶೋಕ್ ಖಾರಟ್ ಮತ್ತೊಂದು ಕರಾಳ ಮುಖ ಬಯಲಾಗಿದೆ. ಜ್ಯೋತಿಷ್ಯ, ಆಧ್ಯಾತ್ಮ ಹೆಸರಿನಲ್ಲಿ
ಮೋಸ ಮಾಡುತ್ತಿದ್ದ ಈತ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಮಹಿಳೆಯರಿಗೆ ನೀಡತ್ತಿದ್ದ ಪ್ರಸಾದದಲ್ಲಿ
ವಯಾಗ್ರ ಹಾಕಿ ಕೊಡುತ್ತಿದ್ದ ಬಳಿಕ ಕೆಲ ಹೊತ್ತು ಇರಲು ಹೇಳಿ ಕಾಮಕ್ಕೆ ಬಳಸಿಕೊಳ್ಳುತ್ತಿದ್ದ. ಈ ವಿಡಿಯೋಗಳು
ಇದೀಗ ಹೊರಬಂದಿದೆ.

ಹೌದು, ಪರಿಹಾರ ಕೇಳಿ ಬರುತ್ತಿದ್ದ ಮಹಿಳೆಯರಿಗೆ ಆಧ್ಯಾತ್ಮ ಸೇರಿದಂತೆ ಹಲವು ಹೆಸರು ಹೇಳಿ ಕೆಲ ಪೂಜೆ
ಹಾಗೂ ಧಾರ್ಮಿಕ ಪ್ರಕ್ರಿಯೆಗಳನ್ನು ಮಾಡುತ್ತಿದ್ದ. ಒಬ್ಬೊಬ್ಬ ಮಹಿಳೆಯರ ಕೂರಿಸಿ ಪೂಜೆ ಮಾಡಿಸುತ್ತಿದ್ದ.
ಪೂಜೆ ಹೆಸರಿನಲ್ಲಿ ಆರಂಭದಲ್ಲೇ ವಯಾಗ್ರ ನೀಡುತ್ತಿದ್ದ. ಬಳಿಕ ವಯಾಗ್ರ ಆಕೆಯ ದೇಹದಲ್ಲಿ ಪ್ರತಿಕ್ರಿಯೆ
ನೀಡುವವರೆಗೆ ಪೂಜೆ ಮಾಡುತ್ತಿದ್ದ. ಇದರ ನಡುವೆ ಆಕೆಯನ್ನು ಮೆಲ್ಲನೆ ಮುಟ್ಟಿ ಪ್ರಚೋದಿಸುವ ಕೆಲಸವನ್ನೂ
ಈತ ಮಾಡುತ್ತಿದ್ದ ಅನ್ನೋದು ತನಿಖೆಯಲ್ಲಿ ಬಹಿರಂಗವಾಗಿದೆ.

ಈತನ ಆಧ್ಯಾತ್ಮಿಕ ಪ್ರಕ್ರಿಯೆ ನಡುವಿನ ಈ ಅಶ್ಲೀಲ ವಿಡಿಯೋ ಇದೀಗ ವೈರಲ್ ಆಗಿದೆ. ವಯಾಗ್ರ ಕೆಲಸ ಆರಂಭಿಸುತ್ತಿದ್ದಂತೆ
ಸ್ವಯಂ ಘೋಷಿತ ದೇವಮಾನವನ ಆಟವೂ ಆರಂಭಗೊಳ್ಳುತ್ತಿತ್ತು. ಮಹಿಳೆಯ ತಲೆ ಮೇಲೆ ಕಳಶ ರೀತಿ ಹಿಡಿದು ನಿಲಲ್ಲು
ಸೂಚಿಸಿದ್ದಾನೆ. ಕೆಲವೇ ಹೊತ್ತಲ್ಲಿ ಮಹಿಳೆಯನ್ನು ಪುಸಲಾಯಿಸಿ ಕಾಮಕ್ಕೆ ಬಳಸಿಕೊಂಡಿದ್ದಾನೆ. ಸದ್ಯ
ಈತನ ಬಳಿ ಇದ್ದ ಪೆನ್‌ಡ್ರೈವ್‌ನಲ್ಲಿ 58 ವಿವಿಧ ಮಹಿಳೆಯರ ಜೊತೆ ಇದೇ ರೀತಿ ಕಾಮಕೇಳಿ ನಡೆಸಿದ ವಿಡಿಯೋಗಳನ್ನು
ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement
