# ಮನೆಯ ರೂಂ ನಲ್ಲಿ ಮಗಳ ಜೊತೆ ಕೆಲಸದವನನ್ನು ಕಂಡು ಬ್ಯಾಟಿನಿಂದ ಹೊಡೆದು ಕೊಂದ ತಂದೆ

- Link: https://hosakannada.com/crime/a-father-who-killed-a-worker-with-a-bat-after-finding-him-with-his-daughter-in-the-room/
- Published: 2026-11-05T06:23:53+00:00
- Author: ಹೊಸಕನ್ನಡ ನ್ಯೂಸ್

**ಬೆಂಗಳೂರು: ಮನೆಯ ಕೊಠಡಿಯೊಂದರಲ್ಲಿ ಪುತ್ರಿ ಜೊತೆ ಸಿಕ್ಕಿಬಿದ್ದ ಕೆಲಸಗಾರನನ್ನು ತಂದೆಯೊಬ್ಬ ಕ್ರಿಕೆಟ್‌
ಬ್ಯಾಟ್‌ ಮತ್ತು ಪೈಪ್‌ನಿಂದ ಹಲ್ಲೆ ಮಾಡಿ ಹತ್ಯೆ ಮಾಡಿರುವ ಘಟನೆ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.**

Sponsored

ಕೇರಳ ಮೂಲದ ಕಿರಣ್‌ (24) ಕೊಲೆಯಾದ ಯುವಕ. ಆನಂದ್‌ ರಾಜ್‌ (45) ಆರೋಪಿ ತಂದೆಯಾಗಿದ್ದು, ಇವರ ಬಂಧನವಾಗಿದೆ

Advertisement

Advertisement

ತಮಿಳುನಾಡು ಮೂಲದವರಾದ ಆನಂದ್‌ ರಾಜ್‌ ಯಲಹಂಕದ ಕೋಗಿಲು ಬಂಡೆ ರಸ್ತೆಯಲ್ಲಿ ಪತ್ನಿ ಮತ್ತು ಇಬ್ಬರು
ಮಕ್ಕಳ ಜೊತೆ ವಾಸವಿದ್ದು, ಪಾಪ್‌ಕಾರ್ನ್‌ ತಯಾರು ಮಾಡುವ ವ್ಯವಹಾರ ಮಾಡುತ್ತಿದ್ದರು. ಇವರ ಜೊತೆ ಮೂರು
ವರ್ಷಗಳಿಂದ ಕೇರಳ ಮೂಲದ ಕಿರಣ್‌ ಎನ್ನುವಾದ ಕೆಲಸದಲ್ಲಿದ್ದ. ತಮ್ಮ ಮನೆ ಸಮೀಪವೇ ಕೆಲಸದವನಿಗೂ ಬಾಡಿಗೆ
ಮಾಡಿ ಕೊಟ್ಟಿದ್ದರು ಆನಂದ್‌ ರಾಜ್‌.

ಈ ಮಧ್ಯೆ ಆನಂದ್‌ ರಾಝ್‌ ಅವರ ಹಿರಿಯ ಪುತ್ರಿ ಮತ್ತು ಕಿರಣ್‌ ನಡುವೆ ಸ್ನೇಹ ಬೆಳೆದಿತ್ತು. ಈ ವಿಚಾರ
ತಿಳಿದ ಆನಂದ್‌ ರಾಜ್‌ ಇದನ್ನು ಖಚಿತ ಮಾಡಿಕೊಳ್ಳಲು ಊರಿಗೆ ಹೋಗುವ ನಾಟಕ ಮಾಡಿದ್ದ ಎಂದು ಪೊಲೀಸರು
ಹೇಳಿದ್ದಾರೆ.

ಹಿರಿಯ ಪುತ್ರ ಮೈಸೂರಿನಲ್ಲಿ ಓದುತ್ತಿದ್ದು, ರಜೆ ಕಾರಣ ಕೆಲ ದಿನಗಳ ಹಿಂದಷ್ಟೇ ಮನೆಗೆ ಬಂದಿದ್ದಳು.
ಕಿರಣ್‌ ಆಕೆಯ ಜೊತೆ ನಿರಂತರ ಮೊಬೈಲ್‌ ಸಂಪರ್ಕದಲ್ಲಿದ್ದ. ನ.3 ರ ಬೆಳಗ್ಗೆ ಆನಂದ್‌ ರಾಜ್‌ ಪತ್ನಿ
ಜೊತೆ ತಮಿಳುನಾಡಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ. ಆದರೆ ಒಂದೇ ಗಂಟೆಯಲ್ಲಿ ಮನೆಗೆ ವಾಪಸ್‌
ಬಂದಿದ್ದಾರೆ. ಮನೆಗೆ ಬಂದಾಗ ರೂಮ್‌ನಲ್ಲಿ ಪುತ್ರಿ ಕಿರಣ್‌ ಜೊತೆ ಇರುವುದನ್ನು ಆನಂದ್‌ ರಾಝ್‌ ಗಮನಿಸಿದ್ದು,
ಪುತ್ರಿ ಮತ್ತು ಕಿರಣ್‌ ಮೇಲೆ ಹಲ್ಲೆ ಮಾಡಿದ್ದಾನೆ. ಕೂಡಲೇ ಮಗಳನ್ನು ಚಿಕ್ಕಬಳ್ಳಾಪುರದಲ್ಲಿರುವ ತಮ್ಮ
ಸಂಬಂಧಿಕರ ಮನೆಗೆ ಕಳುಹಿಸಿದ್ದ ಆತ ಕಿರಣ್‌ನನ್ನು ಮನೆಯಲ್ಲಿಯೇ ಕೂಡಿ ಹಾಕಿ ಕ್ರಿಕೆಟ್‌ ಬ್ಯಾಟ್‌ 
ಮತ್ತು ಪೈಪ್‌ನಿಂದ ಹಲ್ಲೆ ಮಾಡಿದ್ದಾನೆ.

ಕಿರಣ್‌ ಬಿದ್ದ ಹೊಡೆತಕ್ಕೆ ಪ್ರಜ್ಞೆ ತಪ್ಪಿದ್ದಾನೆ. ಇದನ್ನು ಕಂಡು ಗಾಬರಿಗೊಂಡ ಆರೋಪಿ, ಆಟೋ ಕರೆಸಿ
ಕಿರಣ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಪರೀಕ್ಷೆ ಮಾಡಿದ ವೈದ್ಯರು ಆತ ಮೃತಪಟ್ಟಿರುವುದಾಗಿ
ದೃಢಪಡಿಸಿದ್ದಾರೆ ಎಂದು ಪೊಲೀಸರು ಹೇಳಿದರು.

ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
