# Priyanka Chopra : ರೋಮ್ ನಲ್ಲಿ ಪ್ರಿಯಾಂಕಾ ಚೋಪ್ರಾ ನಿಕ್ ಜೋನಸ್ ರೊಮ್ಯಾಂಟಿಕ್ ಸೀನ್!  ವಿಡಿಯೋ ವೈರಲ್

- Link: https://hosakannada.com/cinema-sports/priyanka-chopra-romantic-scene-with-nick-jonas/
- Published: 2023-04-21T16:54:56+00:00
- Author: ಕಾವ್ಯ ವಾಣಿ

Priyanka Chopra : ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕನ್​ ಗಾಯಕ ನಿಕ್​ ಜೋನಾಸ್
ಸೆಲೆಬ್ರಿಟಿ ದಂಪತಿ ಇತ್ತೀಚಿಗೆ ತಮ್ಮ ಪ್ರೀತಿಯ ಕ್ಷಣಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದು
ಸಖತ್ ಸುದ್ದಿಯಲ್ಲಿದ್ದಾರೆ. ಇದೀಗ ಶುಕ್ರವಾರ ಬೆಳಗ್ಗೆ ಹೊಸ ವಿಡಿಯೋವೊಂದನ್ನು ನಿಕ್​ ಜೋನಾಸ್​ ತಮ್ಮ
ಇನ್​ಸ್ಟಾ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

Sponsored

ಈ ವಿಡಿಯೋದಲ್ಲಿ ದಂಪತಿಯು ಇಟಲಿಯ ರೋಮ್​ನ ಬೀದಿಗಳಲ್ಲಿ ನಡೆದುಕೊಂಡು ಹೋಗುವುದು, ಒಬ್ಬರನ್ನೊಬ್ಬರು
ಚುಂಬಿಸುವುದು ಮತ್ತು ಜೊತೆಯಾಗಿ ಐಸ್​ಕ್ರೀಮ್​ ಸೇವಿಸುವುದನ್ನು ಕಾಣಬಹುದು. ನಿಕ್​ ಗುಲಾಬಿ ಬಣ್ಣದ
ಶರ್ಟ್​ ಧರಿಸಿದ್ದು, ಪ್ರಿಯಾಂಕಾ ಚೋಪ್ರಾ ತಿಳಿ ಹಸಿರು ಬಣ್ಣದ ಉಡುಪಿನ ಮೇಲೆ ಕಪ್ಪು ಜಾಕೆಟ್​ ಧರಿಸಿದ್ದರು.
ಈ ವಿಡಿಯೋ ಗೆ ‘ರೋಮ್​’ ಎಂದು ಶೀರ್ಷಿಕೆ ಸಹ ನಿಕ್ ಅವರು ನೀಡಿದ್ದಾರೆ.

Advertisement

Advertisement

ಒಟ್ಟಿನಲ್ಲಿ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ನಿಕ್ ಜೋನಸ್ ಜೊತೆ ಹಾಯಾಗಿ ಸಂಸಾರ
ಮಾಡುತ್ತಿದ್ದಾರೆ. ಸಿನಿಮಾ ಕೆಲಸಗಳ ಬಿಡುವಿನಲ್ಲಿ ಈ ದಂಪತಿ ಪ್ರವಾಸ ಕೈಗೊಂಡಿದ್ದು, ಪ್ರಸ್ತುತ ಇವರು
ರೋಮ್ ನಗರದಲ್ಲಿ ಸುತ್ತಾಡುತ್ತಿದ್ದಾರೆ. ರೋಮ್ ನಗರಕ್ಕೆ ತೆರಳಿರುವ ನಿಕ್ ಜೋನಸ್ ಅವರು ಸಿಕ್ಕಾಪಟ್ಟೆ
ರೊಮ್ಯಾಂಟಿಕ್ ಮೂಡ್ ನಲ್ಲಿ ಇದ್ದಂತೆ ಕಾಣುತ್ತಿದೆ .

ಸದ್ಯ ಈ ವಿಡಿಯೋ ನೋಡಿದ ಕೆಲವೇ ಗಂಟೆಗಳಲ್ಲಿ (Priyanka Chopra Viral Video) ಲಕ್ಷಾಂತರ ಅಭಿಮಾನಿಗಳು
ಲೈಕ್ ಮಾಡಿದ್ದಾರೆ. ಜೊತೆಗೆ ಕಾಮೆಂಟ್ ಗಳ ಸುರಿಮಳೆ ಗೈದಿದ್ದಾರೆ.

 

https://www.instagram.com/reel/CrRX7LhJAaF/?utm_source=ig_web_copy_link

 

 

 

ಇದನ್ನು ಓದಿ: [Railway station: ರೈಲ್ವೆ ನಿಲ್ದಾಣದ ಎಲ್ಲಾ ಕರ್ತವ್ಯಗಳನ್ನು ಗ್ರಾಮಸ್ಥರೇ ನೋಡಿಕೊಳ್ತಾರಂತೆ!](https://hosakannada.com/2023/04/21/villagers-take-all-the-duties-of-the-railway-station/)

 

Advertisement
