# Sienna Weir: ಕುದುರೆ ಸವಾರಿ ವೇಳೆ ಅಪಘಾತ!  2022 ರ ಮಿಸ್ ಯೂನಿವರ್ಸ್ ಫೈನಲಿಸ್ಟ್ ʻಸಿಯೆನ್ನಾ ವೀರ್ʼ ಇನ್ನಿಲ್ಲ!

- Link: https://hosakannada.com/cinema-sports/miss-universe-2022-finalist-sienna-weir-is-no-more/
- Published: 2023-05-06T12:08:53+00:00
- Author: ಕಾವ್ಯ ವಾಣಿ

Sienna Weir: 2022 ರ ಮಿಸ್ ಯೂನಿವರ್ಸ್ ಫೈನಲಿಸ್ಟ್ ಮತ್ತು ಆಸ್ಟ್ರೇಲಿಯನ್ ಫ್ಯಾಷನ್ ಮಾಡೆಲ್ [ಸಿಯೆನ್ನಾ ವೀರ್](https://es.m.wikipedia.org/wiki/Sienna_Weir)(
Sienna Weir) ಕೇವಲ 23ನೇ ವಯಸ್ಸಿನಲ್ಲಿಯೇ ದುರಂತ ಅಂತ್ಯ ಕಂಡಿದ್ದಾರೆ.

Sponsored

ಏಪ್ರಿಲ್ 2 ರಂದು ಸಿಯೆನ್ನಾ ವೀರ್ ಆಸ್ಟ್ರೇಲಿಯಾದ ವಿಂಡ್ಸರ್ ಪೋಲೋ ಮೈದಾನದಲ್ಲಿ ತನ್ನ ಮೆಚ್ಚಿನ 
ಹವ್ಯಾಸದಲ್ಲಿ ಒಂದಾಗಿರುವ ಕುದುರೆ ಸವಾರಿಯನ್ನು ಮಾಡುತ್ತಿದ್ದ ವೇಳೆ, ಕುದುರೆ ಇದ್ದಕ್ಕಿದ್ದಂತೇ 
ಕೆಳಕ್ಕೆ ಬಿದ್ದಿತ್ತು. ಆ ಸಮಯದಲ್ಲಿ ಗಂಭೀರ ಸ್ವರೂಪದ ಗಾಯಗೊಂಡಿದ್ದ ಅವರನ್ನು ವೆಂಟಿಲೇಟರ್‌ ನಲ್ಲಿ
ಇಟ್ಟು ಹಲವು ವಾರಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು.

Advertisement

Advertisement

ಆದರೆ ಹಲವು ದಿನಗಳಲ್ಲಿ ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಕೃತಕ ಉಸಿರಾಟದ
ನೆರವನ್ನು ( ಮೇ. 4 ರಂದು) ತೆಗೆಯಲು ಹೇಳಿದ್ದು, ಇದೀಗ ನಟಿಯ ಮಾಡೆಲಿಂಗ್ ಏಜೆನ್ಸಿ ಸ್ಕೂಲ್ ಮ್ಯಾನೇಜ್‌ಮೆಂಟ್
ಅವರ ಸಾವನ್ನು ಖಚಿತಪಡಿಸಿದೆ. ಮತ್ತು ಅವರು ನಮ್ಮ ಹೃದಯದಲ್ಲಿ ಯಾವಾಗಲೂ ಇರುತ್ತಾರೆ ಎಂಬ ಶೀರ್ಷಿಕೆಯೊಂದಿಗೆ
ಅವರ ಹಲವಾರು ಚಿತ್ರಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.

ಸಿಯೆನ್ನಾ ವೀರ್ 2022 ರ ಆಸ್ಟ್ರೇಲಿಯನ್ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ 27 ಅಂತಿಮ ಸ್ಪರ್ಧಿಗಳಲ್ಲಿ
ಸಿಯೆನ್ನಾ ವೀರ್ ಒಬ್ಬರಾಗಿದ್ದರು.ಅದಲ್ಲದೆ ಸಿಡ್ನಿ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯ 
ಮತ್ತು ಮನೋವಿಜ್ಞಾನದಲ್ಲಿ ಡಬಲ್ ಪದವಿ ಪಡೆದ ಖ್ಯಾತಿ ಹೊಂದಿದ್ದಾರೆ.

ಇದನ್ನೂ ಓದಿ:  [BECIL ನಲ್ಲಿ ಉದ್ಯೋಗವಕಾಶ! ಪಿಯುಸಿ ಪಾಸಾದವರಿಗೂ ಕೆಲಸ, ಮಾಸಿಕ ರೂ.30,000 ಸಂಬಳ!](https://hosakannada.com/2023/05/06/becil-recruitment-2023-job-opportunity-with-high-salary/)

Advertisement
