# Kantara -2: ವಿದೇಶದಲ್ಲಿ ನಡೆಯಲಿದೆ ಕಾಂತಾರ-2 ‘ಪಂಜುರ್ಲಿ’ ದೈವದ ಚಿತ್ರೀಕರಣ, ಇದೆನಾ ಕಾರಣ ?

- Link: https://hosakannada.com/cinema-sports/entertainment-sandalwood-news-actor-rishabh-shettys-kantara-2-cinema-shooting-in-london/
- Published: 2023-11-23T07:02:20+00:00
- Author: ಕೆ. ಎಸ್. ರೂಪಾ

Kantara -2: ಇಡೀ ವಿಶ್ವವೇ ಕನ್ನಡ ಸಿನಿಮಾ ಇಂಡಸ್ಟ್ರಿಯತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ 
ಅಂದ್ರೆ ಅದು ಕಾಂತಾರ. ಇದೀಗ ನಾಡಿನ ಜನ ಭಾರೀ ಕುತೂಹಲದಿಂದ ಕಾದಿರುವ ಕಾಂತಾರ-2(Kantara -2) ಚಿತ್ರೀಕರಣಕ್ಕೆ
ಮುಹೂರ್ತ ಫಿಕ್ಸ್ ಆಗಿದ್ದು ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ. ಇದರೊಂದಿಗೆ ಕಾಂತಾರ-2 ಕಾಣುವ ಪಂಜುರ್ಲಿ
ದೈವದ ಚಿತ್ರೀಕರಣ ವಿದೇಶದಲ್ಲಿ ನಡೆಯುತ್ತದೆ ಎನ್ನುವ ಸುದ್ದಿಯೊಂದು ಬಂದಿದೆ.

Sponsored

ಹೌದು, ಕಾಂತಾರ 2 ಸಿನಿಮಾದ ಮುಹೂರ್ತದ ಡೇಟ್​ ಕೂಡ ಫಿಕ್ಸ್ ಆಗಿದೆ. ನವೆಂಬರ್​ 27ರಂದು ಕಾಂತಾರ ಪ್ರಿಕ್ವೆಲ್
ಸೆಟ್ಟೇರುತ್ತಿದ್ದು, ಈ ಹಿಂದೆ ಕಾಂತಾರ ಸಿನಿಮಾದ ಮುಹೂರ್ತ ನಡೆದಿದ್ದ ಕೆರಾಡಿಯ ಆನೆಗುಡ್ಡೆ ದೇವಸ್ಥಾನದಲ್ಲಿ
ಕಾಂತಾರ 2 ಮುಹೂರ್ತ ನೆರವೇರಲಿದೆ. ಚಿತ್ರದ ಮುಹೂರ್ತ ಕಾರ್ಯಕ್ರಮದಲ್ಲಿ ಅನೇಕ ಚಂದನವನದ ಗಣ್ಯರು ಭಾಗಿಯಾಗಲಿದ್ದಾರೆ
ಎನ್ನುವ ಮಾಹಿತಿಯಿದೆ.

Advertisement

Advertisement

ಅಂದಹಾಗೆ ಕಾಂತಾರ ಪ್ರೀಕ್ವೆಲ್​​ಗಾಗಿ ಅದ್ಭುತವಾಗಿ ಕಥೆ ಹೆಣೆದಿರುವ ನಟ ರಿಷಬ್ ಶೆಟ್ಟಿ(Rishab 
shetty), ಚಿತ್ರದ ಮುಹೂರ್ತ ಪೂಜೆ ಬಳಿಕ ಡಿಸೆಂಬರ್ 2ನೇ ವಾರದಲ್ಲಿ ಶೂಟಿಂಗ್ ಆರಂಭಿಸಲು ಪ್ಲಾನ್ 
ಮಾಡಿದ್ದು ಎಲ್ಲಾ ಸಿದ್ದತೆಗಳು ನಡೆದಿವೆ. ಇನ್ನು ಕಾಂತಾರ-2 ಹೆಚ್ಚಾಗಿ ವಿದೇಶದಲ್ಲೇ ಚಿತ್ರೀಕರಣಗೊಳ್ಳಲಿದೆಯಂತೆ.
ಈಗಾಗಲೇ ಶ್ರೀಲಂಕಾ, ಕರಾವಳಿ ಸುತ್ತಮುತ್ತ ಪ್ರದೇಶಗಳಲ್ಲಿ ಶೂಟಿಂಗ್‌ಗಾಗಿ ಲೊಕೇಶನ್ ಕೂಡ ಫಿಕ್ಸ್ 
ಮಾಡಿದ್ದು, ಈ ಸಿನಿಮಾದ ಬಹುತೇಕ ಚಿತ್ರೀಕರಣ​ ಶ್ರೀಲಂಕಾದಲ್ಲಿಯೇ ನಡೆಯಲಿದೆ ಎನ್ನಲಾಗ್ತಿದೆ.

ಇದನ್ನೂ ಓದಿ : [ಮಂಗಳೂರು:ಶೋಧ ನಡೆಸಿದರೂ ಸಿಗದ ವ್ಯಕ್ತಿಯ ಮೃತದೇಹ, ಮುದ್ದಿನ ನಾಯಿ ಬಂದೊಡನೆ ತೇಲಿ ಬಂತು!! ಪೊಳಲಿ ಫಲ್ಗುಣಿ ನದಿಯಲ್ಲಿ ಹೀಗೊಂದು ಪವಾಡ](https://hosakannada.com/2023/11/23/mangaluru-news-dead-body-of-a-person-found-with-help-of-pet-dog-in-polali/)

Advertisement
