# Chandan-Nivedita: 9 ತಿಂಗಳ ಬಳಿಕ ಮತ್ತೆ ಒಂದಾದ ಚಂದನ್- ನಿವೇದಿತಾ !! ಪ್ರೆಸ್ ಮೀಟ್ ಕರೆದು ಹೇಳಿದ್ದೇನು?

- Link: https://hosakannada.com/cinema-sports/chandan-nivedita-reunited-after-9-months/
- Published: 2025-03-12T07:31:58+00:00
- Author: ಹೊಸಕನ್ನಡ

Chandan-Nivedita: ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪರಿಚಯವಾಗಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ
ಗೌಡ ಬಳಿಕ ಪ್ರೀತಿಸಿ ಮದುವೆಯಾಗಿದ್ದರು. ನಾಲ್ಕು ವರ್ಷ ಖುಷಿಯಾಗಿ ಸಂಸಾರ ನಡೆಸಿದ್ದ ಈ ಜೋಡಿ ಬಳಿಕ
ವಿಚ್ಛೇದನ ಪಡೆದು ಬೇರೆಯಾಗಿತ್ತು. ವಿಚ್ಛೇದನ ಪಡೆದ ಒಂಬತ್ತು ತಿಂಗಳ ಬಳಿಕ ಈ ಜೋಡಿ ಮಂಗಳವಾರ ಮತ್ತೆ
ಜೊತೆಯಾಗಿ ಪ್ರೆಸ್‌ಮೀಟ್ ನಡೆಸಿದೆ. ಅಷ್ಟೇ ಅಲ್ಲದೆ ಚಂದನ್ ಶೆಟ್ಟಿ ಅವರು ನಿವೇದಿತಾ ಅವರಿಗೆ ಕಣ್ಣೀರು
ಒರೆಸಿ ಸಮಾಧಾನ ಮಾಡಿದ್ದಾರೆ.

Sponsored

https://www.instagram.com/reel/DHDzAGDTg8O/?igsh=MTZweDZwdDNpZTQwaw==

Advertisement

Advertisement

ಹೌದು, ಒಂಬತ್ತು ತಿಂಗಳು ನಂತರ ಮತ್ತೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮುಖಾಮುಖಿಯಾಗಿದ್ದಾರೆ.
ಒಂದೇ ಸಿನಿಮಾದಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ನಟಿಸಿದ್ದಾರೆ. ಇಂದು ‘ಮುದ್ದು ರಾಕ್ಷಸಿ’
ಸಿನಿಮಾದ ಕೊನೆ ದಿನ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ಶೂಟಿಂಗ್ ವೇಳೆ ನಿವೇದಿತಾ ಗೌಡ ಅಳುತ್ತಿದ್ದು
ಚಂದನ್ ಶೆಟ್ಟಿ ತಬ್ಬಿಕೊಂಡು ಸಮಾಧಾನಪಡಿಸಿದ್ದಾರೆ. ಮುದ್ದು ರಾಕ್ಷಸಿ ಸಿನಿಮಾದ ಕೊನೆಯ ದೃಶ್ಯ ಇದಾಗಿದೆ
ಎಂದು ಹೇಳಲಾಗಿದೆ. ಈ ದೃಶ್ಯದಲ್ಲಿ ನಿವೇದಿತಾ ಗೌಡ ಚಂದನ್‌ ಶೆಟ್ಟಿಯನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ
ಅತ್ತಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ನೀವಿಬ್ಬರು ಮತ್ತೆ ಒಂದಾಗಿ ಎಂದು ಕಮೆಂಟ್ ಮಾಡಿದ್ದಾರೆ.

ಇನ್ನೂ, ವಿಚ್ಚೇದನಕ್ಕೂ ಮೊದಲೇ ಈ ಸಿನಿಮಾ ಸೆಟ್ಟೇರಿತ್ತು. ಸಿನಿಮಾದ ಕ್ಲೈಮ್ಯಾಕ್ಸ್ ಶೂಟ್ ಆಗೋಕು
ಮೊದಲೇ ವಿಚ್ಚೇದನ ಆಗಿತ್ತು. ಈ ಮೊದಲು ಸಿನಿಮಾಗೆ ಕ್ಯಾಂಡಿ ಕ್ರಶ್ ಅಂತಾ ಟೈಟಲ್ ಇಡಲಾಗಿತ್ತು. ಆದ್ರೆ
ಈಗ ಇದೀಗ ಮುದ್ದು ರಾಕ್ಷಸಿ ಅಂತಾ ಟೈಟಲ್ ಚೇಂಚ್​ ಮಾಡಿದ್ದಾರೆ.

Advertisement
