# Cricket: 331 ಎಸೆತಗಳಲ್ಲಿ ಹೊಸ ವಿಶ್ವ ದಾಖಲೆ ಮಾಡಿದ ಅಭಿಷೇಕ್ ಶರ್ಮಾ

- Link: https://hosakannada.com/cinema-sports/abhishek-sharma-set-new-world-record-in-331-balls/
- Published: 2025-09-22T14:11:40+00:00
- Author: ಹೊಸಕನ್ನಡ ನ್ಯೂಸ್

Cricket: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ (Cricket) ಟೀಮ್ ಇಂಡಿಯಾದ ಯುವ ಆಟಗಾರ ಅಭಿಷೇಕ್
ಶರ್ಮಾ (Abhishek Sharma) ಅವರು ಹೊಸ ವಿಶ್ವ ದಾಖಲೆ ಮಾಡಿದ್ದಾರೆ.

Sponsored

ದುಬೈನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 39 ಎಸೆತಗಳಲ್ಲಿ 5 ಸಿಕ್ಸ್​
ಗಳೊಂದಿಗೆ 74 ರನ್ ಗಳಿಸಿ, ಟಿ20 ಕ್ರಿಕೆಟ್​ನಲ್ಲಿ ಐವತ್ತು ಸಿಕ್ಸರ್​ಗಳನ್ನು ಕೇವಲ 331 ಎಸೆತಗಳಲ್ಲಿ
ಬಾರಿಸಿದ್ದಾರೆ. ಹೀಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಅತೀ ಕಡಿಮೆ ಎಸೆತಗಳಲ್ಲಿ 
50 ಸಿಕ್ಸ್​ಗಳ ಬಾರಿಸಿದ ವಿಶ್ವ ದಾಖಲೆ ಅಭಿಷೇಕ್ ಶರ್ಮಾ ಪಾಲಾಗಿದೆ.

Advertisement

Advertisement

[ಇದನ್ನೂ ಓದಿ:Nirmala Sitharaman GST 2.0: ಹೊಸ ಜಿಎಸ್‌ಟಿ ಜಾರಿ: ಇಂದಿನಿಂದ ಈ ವಸ್ತುಗಳು ದುಬಾರಿ](https://hosakannada.com/2025/09/22/new-gst-implementation-these-items-will-expensive-from-today/)

ಈ ಮೊದಲು ಮುನ್ನ ಈ ಭರ್ಜರಿ ದಾಖಲೆ ವೆಸ್ಟ್ ಇಂಡೀಸ್​ನ ಎವಿನ್ ಲೂಯಿಸ್ ಹೆಸರಿನಲ್ಲಿತ್ತು. ಇವರು 366
ಎಸೆತಗಳಲ್ಲಿ 50 ಸಿಕ್ಸ್ ಸಿಡಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಅತೀ ವೇಗವಾಗಿ 50 ಸಿಕ್ಸರ್​
ಗಳನ್ನು ಬಾರಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಮಾಡಿದ್ದರು. ಇದೀಗ ಈ ದಾಖಲೆಯನ್ನು ಮುರಿದು 
ಅಭಿಷೇಕ್ ಶರ್ಮಾ ಹೊಸ ಇತಿಹಾಸ ನಿರ್ಮಿಸಿದ್ದಾರೆ.

Advertisement
