# ಅಬ್ದುಲ್ ಕಲಾಂ ಬಯೋ ಪಿಕ್: ಈ ಚಿತ್ರಕ್ಕೆ ಧನುಷ್ ಹೀರೊ

- Link: https://hosakannada.com/cinema-sports/abdul-kalam-biopic-dhanush-is-the-hero-for-this-film/
- Published: 2025-05-22T17:19:49+00:00
- Author: ಹೊಸಕನ್ನಡ ನ್ಯೂಸ್

Hyderabad: ಇದೀಗ ತೆರೆ ಮೇಲೆ ಕಾಣಿಸಿಕೊಳ್ಳೋಕೆ ತಯಾರಾಗ್ತಿದೆ ಅಬ್ದುಲ್ ಕಲಾಂ ಬಯೋ ಪಿಕ್. ಹೌದು!
ತಮಿಳಿನ ಖ್ಯಾತ ನಟ, ನಿರ್ಮಾಕ, ಗಾಯಕ ಆಗುವಂತಹ ಧನುಷ್ ಈ ಚಿತ್ರದಲ್ಲಿ ಕಲಾಂ ಪಾತ್ರದಲ್ಲಿ ಮಿಂಚಲಿದ್ದಾರೆ.

Sponsored

ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಿರ್ದೇಶಕ ಓಂ ರಾವತ್ ಈ ಕುರಿತಾಗಿ ತಿಳಿಸಿದ್ದು, ಫಸ್ಟ್ ಲುಕ್ ಪೋಸ್ಟರ್
ಅನ್ನು ಕೂಡ ಅನಾವರಣಗೊಳಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ‘ಕಲಾಂ: ದಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾ’
ಎಂದು ನಾಮಕರಣ ಮಾಡಿದ್ದು, ಆದಿ ಪುರುಷ್ ಚಿತ್ರದ ನಿರ್ದೇಶಕ ಓಂ ರಾವತ್ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ.

Advertisement

Advertisement

ಈ ಸಿನಿಮಾವನ್ನು ಅಭಿಷೇಕ್ ಅಗರ್ವಾಲ್ (ದಿ ಕಾಶ್ಮೀರಿ ಫೈಲ್ಸ್ ನ ನಿರ್ಮಾಪಕ), ಭೂಷಣ್ ಕುಮಾರ್, ಕೃಷನ್
ಕುಮಾರ್ ಹಾಗೂ ಅನಿಲ್ ಸುಂಕರ ನಿರ್ಮಾಣ ಮಾಡುತ್ತಿದ್ದು, ಸೈವಿನ್ ಕ್ವಾಡ್ರಾಸ್ ಅವರು ಈ ಚಿತ್ರಕ್ಕೆ
ಚಿತ್ರಕಥೆ ಬರೆಯುತ್ತಿದ್ದಾರೆ. ಹಾಗೂ ಧನುಷ್ ಅವರು ತಾನು ತೆರೆ ಮೇಲೆ ಕಲಾಂ ಆಗಿ ಕಾಣಿಸಿಕೊಳ್ಳಲು 
ಅತ್ಯಂತ ಧನ್ಯನಾಗಿದ್ದೇನೆ ಎಂದು ತಿಳಿಸಿದ್ದಾರೆ.

Advertisement
