ನ್ಯೂಸ್

ಕೊರೋನಾದ ಎಲ್ಲಾ ರೂಪಾಂತರಿಗಳಿಗೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಪರಿಣಾಮಕಾರಿ | ಕೇಂದ್ರ ಸಚಿವಾಲಯ ಮಾಹಿತಿ

ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳು ಕೊರೋನಾ ರೂಪಾಂತರಿಗಳಾದ ಆಲ್ಫಾ, ಬೀಟಾ, ಗಾಮಾ ಹಾಗೂ ಡೆಲ್ಟಾಗಳ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐಸಿಎಂಆರ್ ನಿರ್ದೇಶಕ ಡಾ. ಬಲರಾಂ ಭಾರ್ಗವ, ಕೊರೊನಾ ವೈರಸ್ ಸೋಂಕಿಗೆ ನಾಲ್ಕು ರೂಪಾಂತರವಿದೆ. ಅವು ಯಾವುವೆಂದರೆ ಆಲ್ಫಾ, ಬೀಟಾ, ಗಾಮಾ ಹಾಗೂ ಡೆಲ್ಟಾ. ಈಗ ದೇಶದಲ್ಲಿ ಬರುತ್ತಿರುವ ಡೆಲ್ಟಾ ಪ್ಲಸ್ ರೂಪಾಂತರಿಯು ಡೆಲ್ಟಾದ ವಂಶಾವಳಿಯಾಗಿದೆ. ಕೊರೊನಾದ ವಿವಿಧ ರೂಪಾಂತರಿಗಳ ತೀವ್ರತೆಯನ್ನು ಕಡಿಮೆ ಮಾಡುವ ಸಾಮರ್ಥ್ಯ ಕೊರೊನಾ …

ಕೊರೋನಾದ ಎಲ್ಲಾ ರೂಪಾಂತರಿಗಳಿಗೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಪರಿಣಾಮಕಾರಿ | ಕೇಂದ್ರ ಸಚಿವಾಲಯ ಮಾಹಿತಿ Read More »

ಸ್ವಂತ ಮಗುವನ್ನು ಕೊಂದು ಹೂತು ಹಾಕಿದ ತಂದೆ-ತಾಯಿ | ಸ್ಥಳೀಯರ ಮಾಹಿತಿಯಿಂದ ಪ್ರಕರಣ ಬೆಳಕಿಗೆ

ತಂದೆ – ತಾಯಿ ಇಬ್ಬರು ಸೇರಿ ಸ್ವಂತ ಮಗುವನ್ನೇ ಕೊಂದು ಶವವನ್ನು ಕಾಫಿತೋಟದಲ್ಲಿ ಹೂತಿರುವ ಅನುಮಾನದ ಮೇಲೆ ಮಗುವಿನ ಮೃತದೇಹ ಹೊರತೆಗೆದು ಅಧಿಕಾರಿಗಳು ಪರಿಶೀಲನೆ ನಡೆಸಿದ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹೊಸಕೋಟೆ ಹೋಬಳಿಯ ಕಾಡ್ಲೂರು ಕೊಪ್ಪಲು ಎಂಬ ಗ್ರಾಮದಲ್ಲಿ ನಡೆದಿದೆ. ಕೂಲಿ ಕೆಲಸಕ್ಕೆಂದು ಅಸ್ಸಾಂನಿಂದ ಆಲೂರು ತಾಲೂಕಿನ ಕೆ.ಹೊಸಕೋಟೆ ಹೋಬಳಿಗೆ ಆಗಮಿಸಿದ್ದ ಕೂಲಿಕಾರ್ಮಿಕರ ಕುಟುಂಬಸ್ಥರಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಪತಿ, ಪತ್ನಿ ನಡುವೆ ಕೌಟುಂಬಿಕ ಕಾರಣಕ್ಕೆ ಜಗಳ ಪ್ರಾರಂಭವಾಗಿ ಮಗುವನ್ನು ಹೊಡೆದು ಸಾಯಿಸಿ …

ಸ್ವಂತ ಮಗುವನ್ನು ಕೊಂದು ಹೂತು ಹಾಕಿದ ತಂದೆ-ತಾಯಿ | ಸ್ಥಳೀಯರ ಮಾಹಿತಿಯಿಂದ ಪ್ರಕರಣ ಬೆಳಕಿಗೆ Read More »

ತಾಳಿಕಟ್ಟುವ ಶುಭವೇಳೆ…..ನಿರ್ಬಂದ ಸಡಿಲಿಕೆ ಮಾಡಿದ ಸರಕಾರ | ಕಲ್ಯಾಣ ಮಂಟಪದಲ್ಲೂ ಮದುವೆಗೆ ಅಸ್ತು ಎಂದ ಸರಕಾರ | 40 ಮಂದಿಗೆ ಅವಕಾಶ

ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳಿಗೆ ವಿಧಿಸಿದ್ದ ನಿರ್ಬಂಧಗಳನ್ನು ರಾಜ್ಯ ಸರಕಾರ ಸಡಿಲಿಕೆ ಮಾಡಿ, ಮಾರ್ಗಸೂಚಿ ಹೊರಡಿಸಿದೆ.ಈ ಆದೇಶ ಜೂ.28ರಿಂದ ಜಾರಿಗೆ ಬರಲಿದೆ. ಮೈಸೂರು ಜಿಲ್ಲೆಯನ್ನು ಹೊರತುಪಡಿಸಿ, ಉಳಿದ ಜಿಲ್ಲೆಗಳಲ್ಲಿ ಈ ಆದೇಶ ಅನ್ವಯವಾಗಲಿದೆ. ಮದುವೆ ಸಮಾರಂಭದಲ್ಲಿ ಗರಿಷ್ಠ 40 ಮಂದಿಗೆ ಅವಕಾಶವಿದ್ದು, ಪೂರ್ವಾನುಮತಿ ಹಾಗೂ ಭಾಗವಹಿಸುವ ಎಲ್ಲರಿಗೂ ಪಾಸ್ ನೀಡುವುದು ಕಡ್ಡಾಯ. ಮದುವೆ ಸಮಾರಂಭ ಏರ್ಪಡಿಸುವವರು ಆಯಾ ಸ್ಥಳೀಯಾಡಳಿತದಿಂದ ಸೂಕ್ತ ಅನುಮತಿ ಪಡೆದುಕೊಳ್ಳಬೇಕು. ಸಭಾಂಗಣ ಅಥವಾ ಕಲ್ಯಾಣ ಮಂಟಪಗಳಲ್ಲಿ ಮದುವೆ ಸಮಾರಂಭ ನಡೆಯಲು ಅವಕಾಶ ಕಲ್ಪಿಸಲಾಗಿದೆ.

ಈತ ಬರೋಬ್ಬರಿ 43 ಬಾರಿ ಕೋರೋನಾ ಪಾಸಿಟಿವ್ ಆಗಿದ್ದ | ಸುದೀರ್ಘ 305 ದಿನ ಆಸ್ಪತ್ರೆಯಲ್ಲಿ ಕಳೆದು ಕೊನೆಗೂ ಗೆದ್ದ

ನವದೆಹಲಿ: ಈ ಜಗತ್ತಿನಲ್ಲಿ ಹೈಯೆಸ್ಟ್ ಪಾಸಿಟಿವ್ ವ್ಯಕ್ತಿ ಯಾರು ? ಅತ್ಯಂತ ಜಾಸ್ತಿ ಪಾಸಿಟಿವ್ ವ್ಯಕ್ತಿತ್ವದ ವ್ಯಕ್ತಿ ಯಾರು ಅಂತ ಪತ್ತೆ ಮಾಡುವುದು ಕಷ್ಟ. ಆದರೆ, ಅತ್ಯಂತ ಬಾರಿ ಕೋವಿಡ್ ಪಾಸಿಟಿವ್ ಆಗಿ ಬದುಕಿ ಬಂದವನು ಬ್ರಿಟನ್ನಿನ ಈ ವ್ಯಕ್ತಿ. ಹಲವಾರು ಬಾರಿ ಕೋವಿಡ್-19 ಪರೀಕ್ಷೆಗೆ ಒಳಗಾದ ಈತ ಒಟ್ಟು 43 ಸಲ ಪಾಸಿಟಿವ್ ಆಗಿದ್ದಾನೆ. ಮಾತ್ರವಲ್ಲ, ಏಳು ಬಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮೊದಲ ಅಲೆಯಲ್ಲೇ ಕೋರೊನಾ ಸೋಂಕಿಗೆ ಒಳಗಾದ ಈತ ಎರಡನೇ ಅಲೆ ಬಂದರೂ ಸೋಂಕುಮುಕ್ತನಾಗಿರಲಿಲ್ಲ. …

ಈತ ಬರೋಬ್ಬರಿ 43 ಬಾರಿ ಕೋರೋನಾ ಪಾಸಿಟಿವ್ ಆಗಿದ್ದ | ಸುದೀರ್ಘ 305 ದಿನ ಆಸ್ಪತ್ರೆಯಲ್ಲಿ ಕಳೆದು ಕೊನೆಗೂ ಗೆದ್ದ Read More »

ಸುಳ್ಯ : ಇಲಿ ಜ್ವರಕ್ಕೆ ಯುವಕ ಬಲಿ

ಸುಳ್ಯ ತಾಲೂಕಿನ ತೊಡಿಕಾನದಲ್ಲಿ ಇಲಿ ಜ್ವರದಿಂದಾಗಿ ಯುವಕನೋರ್ವ ಮೃತಪಟ್ಟ ಘಟನೆ ವರದಿಯಾಗಿದೆ. ತೊಡಿಕಾನ ಗ್ರಾಮದ ಪಂಜಿಕೋಡಿ ನಿವಾಸಿ ಗಂಗಾಧರ ಪೂಜಾರಿ ಎಂಬ ಯುವಕ ಇಲಿ ಜ್ವರದಿಂದ ಮೃತಪಟ್ಟವರು. ಪಂಜಿಕೋಡಿಯ ಸಂಕಪ್ಪ ಪೂಜಾರಿಯವರ ಪುತ್ರ ಗಂಗಾಧರ ಪೂಜಾರಿ (4೦ವರ್ಷ) ರವರಿಗೆ ಕೆಲವು ದಿನಗಳಿಂದ ಜ್ವರ ಬಾಧಿಸಿತ್ತು, ಸ್ಥಳಿಯವಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ಸುಳ್ಯಕ್ಕೆ ಬಂದು ಮಂಗಳೂರಿನ ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ರಾತ್ರಿ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ. ಮೃತರು ತಂದೆ, ತಾಯಿ, ತಂಗಿ, ಪತ್ನಿ ಹಾಗೂ ಗಂಡು ಮಗುವೊಂದನ್ನು …

ಸುಳ್ಯ : ಇಲಿ ಜ್ವರಕ್ಕೆ ಯುವಕ ಬಲಿ Read More »

ಕನ್ನಡಿಗ ಎಂಬ ಕಾರಣಕ್ಕೆ ನಟ ಪ್ರಕಾಶ್ ರೈಗೆ ತೆಲುಗು ಸಿನಿ ಕಲಾವಿದರ ಸಂಘಕ್ಕೆ ಸ್ಪರ್ಧಿಸಲು ವಿರೋಧ !

ಹೈದರಾಬಾದ್: ತೆಲುಗಿನ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷಗಿರಿಗೆ ಸ್ಪರ್ಧಿಸುತ್ತಿರುವ ನಮ್ಮ ಪ್ರಕಾಶ್ ರೈ, ಅವರ ಪ್ರಕಾಶ್ ರಾಜ್ ಅಲ್ಲೀಗ ತೀವ್ರ ಮುಜುಗರ ಎದುರಿಸುತ್ತಿದ್ದಾರೆ. ಪ್ರಮುಖವಾಗಿ, ಅವರು ಕನ್ನಡದವರಾದ್ದರಿಂದ ಅವರನ್ನು ಅಲ್ಲಿ ಹೊರಗಿನವರು ಎಂದು ನೋಡಲಾಗುತ್ತಿದೆ. ಅಷ್ಟೇ ಅಲ್ಲ, ಕಲಾವಿದರ ಸಂಘದ ಅಧ್ಯಕ್ಷಪಟ್ಟವನ್ನು ಹೊರಗಿನವರಿಗೆ ಬಿಟ್ಟುಕೊಡಬಾರದು ಎಂದು ಕಾರಣಕ್ಕೆ, ಅವರನ್ನು ಸೋಲಿಸುವುದಕ್ಕೆ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಟ ಪ್ರಕಾಶ್ ರಾಜ್ ವಿರುದ್ಧ ಬಹಿರಂಗವಾಗಿ ಕ್ಯಾಂಪೇನ್ ನಡೆಯುತ್ತಿದ್ದು ಈ ವಿಷಯ ಪ್ರಕಾಶ್ ರೈಗೆ ಬೇಸರ ತರಿಸಿದೆ. ಈ ಕುರಿತು ಸಂದರ್ಶನವೊಂದರಲ್ಲಿ …

ಕನ್ನಡಿಗ ಎಂಬ ಕಾರಣಕ್ಕೆ ನಟ ಪ್ರಕಾಶ್ ರೈಗೆ ತೆಲುಗು ಸಿನಿ ಕಲಾವಿದರ ಸಂಘಕ್ಕೆ ಸ್ಪರ್ಧಿಸಲು ವಿರೋಧ ! Read More »

ಇಲ್ಲೊಬ್ಬ ಇದ್ದಾನೆ ‘ ಭಯಂಕರ ವಾರಿಯರ್ ‘ | ಮಾಸ್ಕ್ ಇಲ್ಲದೆ ಬ್ಯಾಂಕ್ ಗೆ ಒಳ ನುಗ್ಗಲು ಯತ್ನಿಸಿದ್ದ ಗ್ರಾಹಕನ ಮೇಲೆ ಗುಂಡು ಹಾರಿಸಿದ ಸೆಕ್ಯೂರಿಟಿ ಗಾರ್ಡ್

ಕೊರೋನಾ ವಾರಿಯರ್ಸ್ ಅಂದರೆ ಯೋಧರಿಗೆ ಸಮನಾಗಿರುತ್ತಾರೆ. ಯೋಧ ಹೇಗೆ ಕೆಚ್ಚೆದೆಯಿಂದ ಹೋರಾಡುತ್ತಾನೆಯೋ ಹಾಗೆಯೇ ವಾರಿಯರ್ಸ್ ಕೂಡ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಹಾಗೆ ಇಲ್ಲೊಬ್ಬ ಭಯಂಕರ ವಾರಿಯರ್ ಇದ್ದಾನೆ. ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಆಗಿರುವ ಆತ ಮಾಸ್ಕ್ ಹಾಕದೇ ಬ್ಯಾಂಕ್ ಗೆ ಒಳಪ್ರವೇಶಿಸಲು ನೋಡಿದ ಬ್ಯಾಂಕ್ ಗ್ರಾಹಕನ ಮೇಲೆ ಗುಂಡು ಹಾರಿಸಿದ್ದಾನೆ! ಹೌದು, ಕೊರೋನಾ ವೈರಸ್ ಕಾರಣ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕೊರೋನಾ ನಿಯಮ ಉಲ್ಲಂಘಿಸಿದರೆ ಎಚ್ಚರಿಕೆ ಜೊತೆಗೆ ದಂಡ ವಿಧಿಸಲಾಗುತ್ತದೆ. ಆದರೆ ಹೀಗೆ ಮಾಸ್ಕ್ ಧರಿಸಿದೆ ಬ್ಯಾಂಕ್ …

ಇಲ್ಲೊಬ್ಬ ಇದ್ದಾನೆ ‘ ಭಯಂಕರ ವಾರಿಯರ್ ‘ | ಮಾಸ್ಕ್ ಇಲ್ಲದೆ ಬ್ಯಾಂಕ್ ಗೆ ಒಳ ನುಗ್ಗಲು ಯತ್ನಿಸಿದ್ದ ಗ್ರಾಹಕನ ಮೇಲೆ ಗುಂಡು ಹಾರಿಸಿದ ಸೆಕ್ಯೂರಿಟಿ ಗಾರ್ಡ್ Read More »

ಹೂಸು ಬಿಡದ, ತೇಗು ಹಾಕದ ವರ ಬೇಕಾಗಿದ್ದಾನೆ | ಸ್ತ್ರೀವಾದಿ ಹುಡುಗಿ ಕೇಳುತ್ತಿರುವ ಈ ಅರ್ಹತೆ ನಿಮ್ಮಲ್ಲಿ ಯಾರಲ್ಲಾದರೂ ಇದೆಯಾ ?!

‘ ನನಗೆ ತೇಗು ಹಾಕದ, ಹೂಸು ಬಿಡದ ವರ ಬೇಕಾಗಿದೆ ‘ಆಕೆ ಹೀಗಂತ ಒಂದು ಜಾಹೀರಾತು ನೀಡಿದ್ದಾಳೆ.ಆಕೆಯ ಆಕೆ ಕೊಟ್ಟ ಜಾಹೀರಾತನ್ನು ಇನ್ನಷ್ಟು ವಿವರವಾಗಿ ನೋಡಬೇಕೆಂದರೆ, ಅದು ಯಥಾವತ್ ಈ ರೀತಿ ಇದೆ. ಇಂಗ್ಲಿಷ್ ಸುದ್ದಿಪತ್ರಿಕೆಯಲ್ಲಿ ವರ ಬೇಕಾಗಿದ್ದಾರೆ ಎಂಬ ಈ ಜಾಹೀರಾತು ಪ್ರಕಟವಾಗಿದ್ದು ಒಂದು ಕಡೆ ತಮಾಷೆಯ ವಸ್ತುವಾಗಿ ಈ ಜಾಹೀರಾತು ಗೋಚರಿಸಿದರೆ, ಮತ್ತೊಂದು ಕಡೆ ಸಮಾಜ ಸೇವೆಯಲ್ಲಿ ತೊಡಗಿರುವ ಅಥವಾ ತೊಡಗಿದ್ದೇವೆ ಎಂದುಕೊಳ್ಳುವ ಕೆಲವು ವ್ಯಕ್ತಿತ್ವಗಳ ಮನಸ್ಥಿತಿ ಹೇಗಿರುತ್ತದೆ ಎಂಬುದಕ್ಕೆ ಈ ಒಂದು ಜಾಹೀರಾತು …

ಹೂಸು ಬಿಡದ, ತೇಗು ಹಾಕದ ವರ ಬೇಕಾಗಿದ್ದಾನೆ | ಸ್ತ್ರೀವಾದಿ ಹುಡುಗಿ ಕೇಳುತ್ತಿರುವ ಈ ಅರ್ಹತೆ ನಿಮ್ಮಲ್ಲಿ ಯಾರಲ್ಲಾದರೂ ಇದೆಯಾ ?! Read More »

ಗ್ರಾಮ ಪಂಚಾಯತ್ ಅಧ್ಯಕ್ಷೆಯ ಮನೆಯಲ್ಲಿ ಅಕ್ರಮ ಕಳ್ಳಭಟ್ಟಿ ಪತ್ತೆ | ಅಧ್ಯಕ್ಷೆ ಪತಿ ಅಂದರ್

ಮೂಡಿಗೆರೆ: ಕಳ್ಳಭಟ್ಟಿ ಸಂಗ್ರಹಿಸಿಟ್ಟದ್ದ ಆರೋಪದ ಮೇಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ಪತಿಯನ್ನು ಬಂಧಿಸಲಾಗಿದೆ. ಜಾವಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಂಧ್ಯಾ ರವರ ಮನೆಯಲ್ಲಿ ಸುಮಾರು 60 ಲೀಟರ್ ಕಳ್ಳಭಟ್ಟಿ, 200 ಲೀಟರ್ ಬೆಲ್ಲದ ಕೊಳೆ ಸಂಗ್ರಹಿಸಿಟ್ಟಿದ್ದರು ಎಂದು ತಿಳಿದುಬಂದಿದೆ. ಖಚಿತ ಮಾಹಿತಿಯನ್ನಾಧರಿಸಿ ಅಬಕಾರಿ ಇನ್ಸ್‌ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ಜಾವಳಿ ಗ್ರಾಮದ ಕಾಳಿಕಟ್ಟೆ ಮನೆಯ ಮೇಲೆ ದಾಳಿ ನಡೆಸಿದ್ದು, ಅಧ್ಯಕ್ಷೆಯ ಪತಿ ಸುರೇಶ್ ರವರನ್ನು ಬಂಧಿಸಲಾಗಿದೆ. ಮೂಡಿಗೆರೆ ಅಬಕಾರಿ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಜುಲೈ 1 ರಿಂದ ರಾಜ್ಯಾದ್ಯಂತ ಶೈಕ್ಷಣಿಕ ಚಟುವಟಿಕೆ ಆರಂಭ | ವಿಡಿಯೋ ಪಾಠಗಳ ವೇಳಾಪಟ್ಟಿ ಪ್ರಕಟ

ಬೆಂಗಳೂರು : ಜುಲೈ 1ರಿಂದ ರಾಜ್ಯಾದ್ಯಂತ 2021-22 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಲಿದ್ದು, 1ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿದಿನ ಸಂವೇದಾ ವೀಡಿಯೋ ಪಾಠ ಪ್ರಸಾರವಾಗಲಿದೆ.ಈ ಬಗ್ಗೆ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟ ಮಾಡಿದೆ. ಜುಲೈ 1ರಿಂದ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ 4 ಗಂಟೆಯವರೆಗೆ ವೀಡಿಯೋ ಪಾಠಗಳು ನಡೆಯಲಿವೆ. ತರಗತಿವಾರು ವೇಳಾಪಟ್ಟಿ ಶಾಲಾ ಮುಖ್ಯೋಪಾಧ್ಯಾಯರಿಗೆ ಕಳುಹಿಸಲಾಗಿದ್ದು, ಜು.1ರಿಂದ 30 ದಿನಗಳ ಸೇತುಬಂಧ ಕಾರ್ಯಕ್ರಮ ನಡೆಸಲಾಗುತ್ತದೆ. ಮೊದಲಿಗೆ ವಿದ್ಯಾರ್ಥಿಗಳಿಗೆ ಪೂರ್ವ ಪರೀಕ್ಷೆ ನಡೆಸಿ, ಫಲಿತಾಂಶ …

ಜುಲೈ 1 ರಿಂದ ರಾಜ್ಯಾದ್ಯಂತ ಶೈಕ್ಷಣಿಕ ಚಟುವಟಿಕೆ ಆರಂಭ | ವಿಡಿಯೋ ಪಾಠಗಳ ವೇಳಾಪಟ್ಟಿ ಪ್ರಕಟ Read More »

error: Content is protected !!
Scroll to Top