ನ್ಯೂಸ್

ಅಶ್ಲೀಲ ವಿಡಿಯೋ ತಯಾರಿಕೆ ಮತ್ತು ಹಂಚಿಕೆ ಆರೋಪದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಆರೆಸ್ಟ್ | ಶಾಕಿಂಗ್ ನಲ್ಲಿದೆ ಶಿಲ್ಪಾ ಕುಟುಂಬ

ಮುಂಬೈ: ಅಶ್ಲೀಲ ಚಿತ್ರ ತಯಾರಿಸಿದ ಮತ್ತು ವಿತರಿಸಿದ ಪ್ರಕರಣದಲ್ಲಿ ಮುಂಬೈ ಪೊಲೀಸರು ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರ ಅವರನ್ನು ಬಂಧಿಸಿದ್ದಾರೆ. ಉದ್ಯಮಿ ರಾಜ್ ಕುಂದ್ರ ಅವರನ್ನು ಪೋರ್ನ್ ಚಲನಚಿತ್ರಗಳನ್ನು ಸೃಷ್ಟಿಸಿ ಆಪ್ ಗಳ ಮೂಲಕ ಪ್ರಸಾರ ಮಾಡುತ್ತಿದ್ದ ಆರೋಪದ ಅಡಿ ಬಂಧಿಸಲಾಗಿದೆ ಎಂದು ಮುಂಬೈ ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕ್ರೈಮ್ ಬ್ರಾಂಚ್ ನ ಅಧಿಕಾರಿಗಳು ಈ ಕಾರ್ಯಾಚರಣೆಯನ್ನು ನಡೆಸಿದ್ದು, ಕುಂದ್ರ ಅವರು ಪ್ರಮುಖ ಆರೋಪಿಯಾಗಿದ್ದಾರೆ. “ಪೋರ್ನ್ ಸಿನಿಮಾಗಳನ್ನು ಸೃಷ್ಟಿಸಿ …

ಅಶ್ಲೀಲ ವಿಡಿಯೋ ತಯಾರಿಕೆ ಮತ್ತು ಹಂಚಿಕೆ ಆರೋಪದಲ್ಲಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಆರೆಸ್ಟ್ | ಶಾಕಿಂಗ್ ನಲ್ಲಿದೆ ಶಿಲ್ಪಾ ಕುಟುಂಬ Read More »

ಮಂಗಳೂರು : ಜಿಲ್ಲಾಧಿಕಾರಿ ಕಚೇರಿಯ ಲಿಫ್ಟ್ ಜಾಮ್ ,ಪರದಾಡಿದ ಮಹಿಳೆ,ಅಗ್ನಿಶಾಮಕದಳದಿಂದ ರಕ್ಷಣೆ

ಮಂಗಳೂರು: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಲಿಫ್ಟ್ ಬಾಗಿಲು ಜಾಮ್ ಆಗಿ ಮಹಿಳೆಯೊಬ್ಬರು ಸಿಲುಕಿ ಹಾಕಿಕೊಂಡ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಲಿಫ್ಟ್ ಜಾಮ್ ಆದ ಕಾರಣ ಕಚೇರಿಯ ಕೆಲಸದಾಳು ಮಹಿಳೆ ಸುಮಾರು 15 ನಿಮಿಷ ಕಾಲ ಲಿಫ್ಟ್ ನೊಳಗೆ ಬಾಕಿಯಾದರು. ಕೂಡಲೇ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.

ಬೆಳ್ತಂಗಡಿ, ಧರ್ಮಸ್ಥಳ | ಚಿಕ್ಕ ಪ್ರಾಯದ ವಿವಾಹಿತ ಯುವಕ ಹೃದಯಾಘಾತಕ್ಕೆ ಬಲಿ

ಬೆಳ್ತಂಗಡಿ ತಾಲೂಕು ಧರ್ಮಸ್ಥಳ ಗ್ರಾಮದ ನಾರ್ಯ ಎಂಬಲ್ಲಿ ಚಿಕ್ಕ ಪ್ರಾಯದ ಯುವಕನೊಬ್ಬ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ವೃತ್ತಿಯಲ್ಲಿ ಉಪ್ಪಿನಂಗಡಿಯಲ್ಲಿ ಶಾಲೆಯೊಂದರಲ್ಲಿ ಕ್ಲಾರ್ಕ್ ಆಗಿದ್ದ, ಕೇವಲ  ಸದಾನಂದ ಅವರು ಇತ್ತೀಚೆಗೆ ಲಾಕ್ಡೌನ್ ನಿಮಿತ್ತ ಕೆಲಸವಿಲ್ಲದೆ ತಮ್ಮ ಮನೆಯಲ್ಲಿಯೇ ಇದ್ದರು. ಮನೆಯಲ್ಲಿದ್ದು ಅಕ್ಕ ಪಕ್ಕದ ಮನೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಇಂದು ಹಾಗೆಯೇ ಸುದೆಮಾರ್ ಎಂಬಲ್ಲಿ ಕೈತೋಟದ ಕೆಲಸಮಾಡುತ್ತಿರುವಾಗ ಹಾಗೆಯೇ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಮೃತರಿಗೆ ಮದುವೆಯಾಗಿದ್ದು ಇದೀಗ ಪತ್ನಿ ಗರ್ಭಿಣಿಯಾಗಿದ್ದು ಪತ್ನಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಮತ್ತು …

ಬೆಳ್ತಂಗಡಿ, ಧರ್ಮಸ್ಥಳ | ಚಿಕ್ಕ ಪ್ರಾಯದ ವಿವಾಹಿತ ಯುವಕ ಹೃದಯಾಘಾತಕ್ಕೆ ಬಲಿ Read More »

ಸೀಡಿ ಕಳಂಕಿತ ನರೇಶ್ ಗೌಡನಿಗೆ ಹುಟ್ಟೂರಲ್ಲಿ ತಳಿರು ತೋರಣ ಕಟ್ಟಿ ಅದ್ದೂರಿ ಸ್ವಾಗತ | ಕಾಂಗ್ರೆಸ್ ಸೇರ್ಪಡೆ ಬಗ್ಗೆ ಡಿಕೇಶಿ ಮೌನ !!

ತುಮಕೂರು, ಜುಲೈ 19: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಕೇಸ್ ಪ್ರಕರಣದಲ್ಲಿ ಕೇಳಿಬಂದಿದ್ದ, ಕಳಂಕಿತ ನರೇಶ್ ಗೌಡಗೆ ಯುವ ಕಾಂಗ್ರೆಸ್ ಮುಖಂಡ ಎಂಬ ಪಟ್ಟಕಟ್ಟಿ ಹೂವಿನ ಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಆಮೂಲಕ ಸಿಡಿಗೂ, ಲೇಡಿಯೋ ಡಿಕೇಶಿಗೂ ಸಂಪರ್ಕ ಬಟಾಬಯಲು. ನರೇಶ್ ಗೌಡನ ಹುಟ್ಟೂರು ಶಿರಾದ ಭುವನಳ್ಳಿ. ನರೇಶ್ ಗೌಡ ಸಿಡಿ ಪ್ರಕರಣದಲ್ಲಿ ಭಾಗಿಯಾಗಿದ್ದ ನಂತರ ತಲೆಮರೆಸಿಕೊಂಡಿದ್ದ. ಬಳಿಕ ಇದೇ ಮೊದಲ ಬಾರಿಗೆ ಸ್ವಗ್ರಾಮಕ್ಕೆ ಬಂದಿದ್ದಾನೆ. ನರೇಶ್ ಗೌಡ ಗ್ರಾಮಕ್ಕೆ ಎಂಟ್ರಿಯಾಗುತ್ತಿದ್ದಂತೆ …

ಸೀಡಿ ಕಳಂಕಿತ ನರೇಶ್ ಗೌಡನಿಗೆ ಹುಟ್ಟೂರಲ್ಲಿ ತಳಿರು ತೋರಣ ಕಟ್ಟಿ ಅದ್ದೂರಿ ಸ್ವಾಗತ | ಕಾಂಗ್ರೆಸ್ ಸೇರ್ಪಡೆ ಬಗ್ಗೆ ಡಿಕೇಶಿ ಮೌನ !! Read More »

ಮೊಬೈಲ್ ಕಳ್ಳತನವಾದರೆ,ಕಳೆದು ಹೋದರೆ ಈ ರೀತಿ ಮಾಡಿದರೆ ನೀವೂ ಸೇಫ್,ಹಣವೂ ಸೇಫ್!!

ಮೊಬೈಲ್ ಫೋನ್ ಕಳ್ಳತನ ಮಾಡಿ ಅದನ್ನು ಮತ್ತೊಬ್ಬರಿಗೆ ಮಾರಾಟ ಮಾಡುವುದು ಬಹಳ ಹಿಂದಿನಿಂದ ನಡೆದುಕೊಂಡು ಬಂದ ಅತಿ ದೊಡ್ಡ ಕಳ್ಳ ವ್ಯವಹಾರವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಳ್ಳರು ಕೇವಲ ನಿಮ್ಮ ಫೋನ್ ಕದ್ದು ಅದನ್ನು ಮಾರಾಟ ಮಾಡಿ ಹಣ ಸಂಪಾದಿಸುವುದು ಮಾತ್ರವಲ್ಲದೆ, ಅದಕ್ಕಿಂತಲೂ ಹೆಚ್ಚಿನ ಉದ್ದೇಶವನ್ನಿಟ್ಟುಕೊಂಡಿದ್ದಾರೆ. ಹೌದು, ಏಕೆಂದರೆ ಈಗ ನಿಮ್ಮ ಫೋನೇ ನಿಮ್ಮ ಬ್ಯಾಂಕ್ ಆಗಿದೆ. ಒಂದೋ ಎರಡೋ ಯುಪಿಐ ಐಡಿಗಳು, ಆನ್ಲೈನ್ ವ್ಯಾಲೆಟ್ಟುಗಳು ಹೀಗೆ ಸಕಲ ಹಣಕಾಸು ವ್ಯವಹಾರದ ಕೀಲಿ ಕೈ ನಿಮ್ಮ ಫೋನಲ್ಲಿಯೇ …

ಮೊಬೈಲ್ ಕಳ್ಳತನವಾದರೆ,ಕಳೆದು ಹೋದರೆ ಈ ರೀತಿ ಮಾಡಿದರೆ ನೀವೂ ಸೇಫ್,ಹಣವೂ ಸೇಫ್!! Read More »

ಪಡುಬಿದ್ರಿ | ಕಾರು ಚರಂಡಿಗೆ ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವು

ಪಡುಬಿದ್ರಿ ಉಚ್ಚಿಲ – ಮುದರಂಗಡಿ ರಸ್ತೆಯ ಎಲ್ಲೂರು ಬಳಿಯ ಪಣಿಯೂರು ಪೆಜತ್ತಕಟ್ಟೆ ಬಳಿ ಕಾರು ಚರಂಡಿಗೆ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಕಾಪು ಕೊಪ್ಪಲಂಗಡಿ ನಿವಾಸಿ ರವೀಂದ್ರ ಪೂಜಾರಿ (38) ಎಂಬುವವರು ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಉದ್ಯಾವರ ಬಲಾಯಿಪಾದೆಯಲ್ಲಿ ಗ್ಯಾರೇಜ್ ನಡೆಸುತ್ತಿದ್ದ ರವೀಂದ್ರ ಅವರು ರವಿವಾರ ರಾತ್ರಿ ಎಲ್ಲೂರಿಗೆ ತೆರಳಿದ್ದು, ಅಲ್ಲಿಂದ ವಾಪಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಾರು ರಸ್ತೆ ಬದಿಯ ಚರಂಡಿ ಮತ್ತು ಮಣ್ಣಿನ ದಿಬ್ಬಕ್ಕೆ ಢಿಕ್ಕಿ ಹೊಡೆದಿದ್ದು, …

ಪಡುಬಿದ್ರಿ | ಕಾರು ಚರಂಡಿಗೆ ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವು Read More »

ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಹಾರಿಕೊಂಡು ಬಂದು ಡಿಕ್ಕಿಯಾದ ನವಿಲು | ನವಿಲು, ವಾಹನ ಸವಾರ ಸಾವು

ಉಡುಪಿ : ತೆಂಕ ಎರ್ಮಾಳು ಗರೋಡಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನವಿಲೊಂದಕ್ಕೆ ಡಿಕ್ಕಿಯಾಗಿ ತನ್ನ ವಾಹನದ ನಿಯಂತ್ರಣ ಕಳೆದುಕೊಂಡ ದ್ವಿಚಕ್ರ ವಾಹನ ಸವಾರ ರಸ್ತೆಯಂಚಿನ ಕಲ್ಲೊಂದಕ್ಕೆ ಡಿಕ್ಕಿಯಾಗಿ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕನನ್ನು ಬೆಳಪು ನಿವಾಸಿ ಪಡುಬಿದ್ರಿ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ. ಅಬ್ದುಲ್ (25) ಎಂದು ಗುರುತಿಸಲಾಗಿದೆ. ಈತ ಪಡುಬಿದ್ರಿ ಕಡೆಯಿಂದ ತನ್ನ ಸ್ಕೂಟರಲ್ಲಿ ಬರುತ್ತಿದ್ದಾಗ ನವಿಲೊಂದು ಹಾರಿಕೊಂಡು ಬಂದು ಡಿಕ್ಕಿಯಾಗಿದೆ. ಅಪಘಾತದಲ್ಲಿ ನವಿಲು ಸ್ಥಳದಲ್ಲೇ ಮೃತಪಟ್ಟರೆ, ಗಾಯಾಳು ಅಬ್ದುಲ್ …

ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಹಾರಿಕೊಂಡು ಬಂದು ಡಿಕ್ಕಿಯಾದ ನವಿಲು | ನವಿಲು, ವಾಹನ ಸವಾರ ಸಾವು Read More »

ಬೆಂಗಳೂರಿನಲ್ಲಿ ಹಾಡು ಹಗಲೇ ತಲ್ವಾರ್ ಬೀಸಿದ ಸದ್ದು | ಬ್ಯಾಂಕಿನ ಒಳಗೆ ನುಗ್ಗಿ ರೌಡಿಶೀಟರ್ ಬಬ್ಲಿಯ ಡೆಡ್ಲಿ ಹತ್ಯೆ | ಪತ್ನಿಯ ಎದುರೇ ನಡೆದುಹೋದ ಮರ್ಡರ್ !!

ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ತಲವಾರ್ ಝಳಪಿಸಲಾಗಿದ್ದು, ಬ್ಯಾಂಕ್ ಒಳಗೆ ನುಗ್ಗಿ ರೌಡಿಶೀಟರ್ ಒಬ್ಬನನ್ನು ಹತ್ಯೆ ಮಾಡಲಾಗಿದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಯೂನಿಯನ್ ಬ್ಯಾಂಕ್ ಗೆ ನುಗ್ಗಿದ ಆಗಂತುಕರು ಬ್ಯಾಂಕಿನ ಒಳಗಿದ್ದ ಬಬ್ಲಿ ಎಂಬಾತನನ್ನು ಬರ್ಬರವಾಗಿ ಹತ್ಯೆಮಾಡಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ. ರೌಡಿಶೀಟರ್ ಬಬ್ಲಿ ಯು ತನ್ನ ಪತ್ನಿಯೊಂದಿಗೆ ಬ್ಯಾಂಕ್ ಕೆಲಸಕ್ಕೆಂದು ಬಂದಿದ್ದ. ಆತ ಯೂನಿಯನ್ ಬ್ಯಾಂಕಿನ ಒಳಗೆ ಬ್ಯಾಂಕ್ ಕೆಲಸದಲ್ಲಿ ನಿರತನಾಗಿದ್ದಾಗ ಈ ದಾಳಿ ನಡೆದಿದೆ. ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿದ್ದಾರೆ.

ಗೋವಾ ಪರ್ತಗಾಳಿ ಮಠಾಧೀಶ ವಿದ್ಯಾಧಿರಾಜ ತೀರ್ಥರು ಇನ್ನಿಲ್ಲ

ಗೋವಾದ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮಿಜಿ ಅವರು ಪರ್ತಗಾಳಿ ಮೂಲ‌ಮಠದಲ್ಲಿ ನಿಧನರಾದರು. 1945ರಲ್ಲಿ ಗಂಗೊಳ್ಳಿಯಲ್ಲಿ ಜನಿಸಿದ ಶ್ರೀಗಳು 1967ರಲ್ಲಿ ಸನ್ಯಾಸತ್ವ ಸ್ವೀಕರಿಸಿದರು. 1973ರಲ್ಲಿ ಪೀಠಾರೋಹಣ ಮಾಡಿದ್ದು,2017ರಲ್ಲಿ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮಿಜಿ ಅವರನ್ನು ಶಿಷ್ಯರಾಗಿ ಸ್ವೀಕರಿಸಿದರು. ಸನ್ಯಾಸ ಸ್ವೀಕರಿಸಿ 54 ವರ್ಷ ಸುಧೀರ್ಘವಾಗಿ ಮಠವನ್ನು, ಮಠದ ಆಡಳಿತದಲ್ಲಿರುವ ದೇವಾಲಯಗಳನ್ನು, ಮಠದ ಲಕ್ಷಾಂತರ  ಶಿಷ್ಯರನ್ನು  ಧಾರ್ಮಿಕವಾಗಿ ಮುನ್ನಡೆಸಿ ಅಪಾರ ಪ್ರಗತಿಗೆ ಕಾರಣರಾಗಿದ್ದ ಶ್ರೀಗಳು ಹೃದಯಾಘಾತದಿಂದ ತಮ್ಮ 76ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಗಂಗೊಳ್ಳಿಯಲ್ಲಿ …

ಗೋವಾ ಪರ್ತಗಾಳಿ ಮಠಾಧೀಶ ವಿದ್ಯಾಧಿರಾಜ ತೀರ್ಥರು ಇನ್ನಿಲ್ಲ Read More »

ಆಲಂಕಾರು : ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ ಯೋಜನೆಯಡಿ ಆರ್ಥಿಕ ನೆರವು ಹಸ್ತಾಂತರ

ಆಲಂಕಾರು : ಕ್ಯಾಂಪ್ಕೋ ಸಂಸ್ಥೆ ಮಂಗಳೂರು ಇದರ ವತಿಯಿಂದ “ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ” ಎಂಬ ಯೋಜನೆಯಡಿಯಲ್ಲಿ ಕ್ಯಾಂಪ್ಕೋ ನೀಡಿದ ಆರ್ಥಿಕ ಸಹಕಾರ ನೆರವಿನ ಹಸ್ತಾಂತರ ಆಲಂಕಾರು ಕ್ಯಾಂಪ್ಕೋ ಶಾಖೆಯಲ್ಲಿ ನಡೆಯಿತು. ಯೋಜನೆಯ ಫಲಾನುಭವಿ ಹಾಗೂ ಕ್ಯಾಂಪ್ಕೋ ಸದಸ್ಯ ಬಲ್ಯ ನಿವಾಸಿ ಕೊರಗಪ್ಪ ಗೌಡ ರವರ ಹೃದಯ ಚಿಕಿತ್ಸೆ (ಅಂಜಿಯೋಪ್ಲಾಸ್ಟಿ) ರೂ.12,500/- ಮೊತ್ತದ ಚೆಕನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ಶ್ರೀ ಕೃಷ್ಣಪ್ರಸಾದ್ ಮಡ್ತಿಲ ಅವರು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಮುಖ್ಯ ಪ್ರಾದೇಶಿಕ ಮಾರುಕಟ್ಟೆ ಪ್ರಬಂಧಕರಾದ …

ಆಲಂಕಾರು : ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ ಯೋಜನೆಯಡಿ ಆರ್ಥಿಕ ನೆರವು ಹಸ್ತಾಂತರ Read More »

error: Content is protected !!
Scroll to Top