ನ್ಯೂಸ್

ಫೆ.7ರಿಂದ ಫೆ.8 : ಸವಣೂರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ

ಫೆ.7ರಿಂದ ಫೆ.8 : ಸವಣೂರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ಸವಣೂರು : ಸವಣೂರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ಫೆ.7ರಿಂದ ಫೆ.8ರವರೆಗೆ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಫೆ.6ರಂದು ಬೆಳಿಗ್ಗೆ ಊರ ಭಕ್ತಾಧಿಗಳಿಂದ ಸಮರ್ಪಿಸಿದ ಹೊರೆಕಾಣಿಕೆಗೆ ಸವಣೂರು ಪುದುಬೆಟ್ಟು ಜಿನಮಂದಿರದ ಬಳಿಯಲ್ಲಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತು ಚಾಲನೆ ನೀಡಿದರು. ಈ ಸಂದರ್ಭ ಉತ್ಸವ ಸಮಿತಿ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು,ಕಾರ್ಯದರ್ಶಿ ದಯಾನಂದ ಮಾಲೆತ್ತಾರು,ಸೇವಾ ಸಮಿತಿ ಅಧ್ಯಕ್ಷ ಉಮಾಪ್ರಸಾದ್ ರೈ …

ಫೆ.7ರಿಂದ ಫೆ.8 : ಸವಣೂರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ Read More »

ಆನ್ ಲೈನ್ ಶಾಪಿಂಗ್ ಸಂಸ್ಥೆಯ ಹೆಸರಿನಲ್ಲಿ ದೋಖಾ! ಕಾಣಿಯೂರಿನ ಸುಂದರಣ್ಣಗೆ 15 ಸಾವಿರ ಲುಕ್ಸಾನ್!

ಆನ್ ಲೈನ್ ಶಾಪಿಂಗ್ ಸಂಸ್ಥೆಯ ಹೆಸರಿನಲ್ಲಿ ದೋಖಾ! ಕಾಣಿಯೂರಿನ ಸುಂದರಣ್ಣಗೆ 15 ಸಾವಿರ ಲುಕ್ಸಾನ್! ಪುತ್ತೂರು:ಮೋಸ ಹೋಗುವವರು ಎಲ್ಲಿ ತನಕ ಇರುತ್ತಾರೋ ಅಲ್ಲಿ ತನಕ ಮೋಸ ಮಾಡುವವರೂ ಇರುತ್ತಾರೆ. NAPTOL ಆನ್ ಲೈನ್ ಶಾಪಿಂಗ್ ಸಂಸ್ಥೆ ಯ ಹೆಸರಿನಲ್ಲಿ ಬಂದ 14 ಲಕ್ಷದ 90 ಸಾವಿರ ರೂಪಾಯಿ ಮೊತ್ತದ ಬಹುಮಾನದ ಘೋಷಣೆಯ ಪತ್ರವೊಂದಕ್ಕೆ ಮನಸೋತ ಕಾಣಿಯೂರಿನ ನಾಗಲೋಕದ ಸುಂದರ ಎಂಬವರು 14,900 ₹ ಗಳನ್ನು ನಷ್ಟ ಮಾಡಿ ಕೊಂಡಿದ್ದಾರೆ. ಅಂದ ಹಾಗೆ ಸುಂದರ ಅವರು ಜ.30ರಂದು ಹಣ …

ಆನ್ ಲೈನ್ ಶಾಪಿಂಗ್ ಸಂಸ್ಥೆಯ ಹೆಸರಿನಲ್ಲಿ ದೋಖಾ! ಕಾಣಿಯೂರಿನ ಸುಂದರಣ್ಣಗೆ 15 ಸಾವಿರ ಲುಕ್ಸಾನ್! Read More »

ಕಾಣಿಯೂರು ಹಾ.ಉ.ಸ.ಸಂಘದ ವತಿಯಿಂದ ಸಂವಾದ ಕಾರ್ಯಕ್ರಮ

ಕಾಣಿಯೂರು: ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಜಾನುವಾರುಗಳಲ್ಲಿ ಪಶು ಆಹಾರ, ಲವಣ ಮಿಶ್ರಣ ಹಾಗೂ ಇತರ ಸ್ಥಳೀಯ ವಸ್ತುಗಳ ಸದ್ಬಳಕೆ ಬಗ್ಗೆ ಸಂವಾದ ಕಾರ್ಯಕ್ರಮವು ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಬೊಬ್ಬೆಕೇರಿ ಶಾಖಾ ಕಚೇರಿಯಲ್ಲಿ ನಡೆಯಿತು. ಹಿರಿಯ ವಿಜ್ಞಾನಿ ಡಾ|| ಶಿವಕುಮಾರ್ ಗೌಡ ಬೆಂಗಳೂರು ಮಾಹಿತಿ ನೀಡಿದರು. ಕಾಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಮೂಡೈಮಜಲು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ|| ಸತೀಶ್ ರಾವ್, …

ಕಾಣಿಯೂರು ಹಾ.ಉ.ಸ.ಸಂಘದ ವತಿಯಿಂದ ಸಂವಾದ ಕಾರ್ಯಕ್ರಮ Read More »

40 ದಿನದ ಪುಟ್ಟ ಕಂದಗೆ ಹೃದಯ ಚಿಕಿತ್ಸೆ : ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ

ಮಂಗಳೂರು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ 40 ದಿನದ ಪುಟ್ಟ ಕಂದಮ್ಮನನ್ನು ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಕರೆದೊಯ್ಯಲಾಯಿತು. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈಫುಲ್ ಅಝ್ಮಾನ್ ಎಂಬ ಪುಟ್ಟ ಮಗುವನ್ನು ಶಸ್ತ್ರ ಚಿಕಿತ್ಸೆಗಾಗಿ ಐಸಿಯು ಆಂಬುಲೆನ್ಸಿನಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಝೀರೋ ಟ್ರಾಫಿಕ್ ನಲ್ಲಿ ಕರೆದೊಯ್ಯುವ ಆಂಬ್ಯುಲೆನ್ಸ್ ಮಂಗಳೂರಿನಿಂದ ಹೊರಟಿತು. ಉಪ್ಪಿನಂಗಡಿ ಮೂಲಕ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಅಂಬ್ಯುಲೆನ್ಸ್ ಸಂಚರಿಸಿದ ವೇಳೆ ಉಪ್ಪಿನಂಗಡಿ,ನೆಲ್ಯಾಡಿ,ಗುಂಡ್ಯ ಕಡೆಗಳಲ್ಲಿ ಪೋಲೀಸರು, …

40 ದಿನದ ಪುಟ್ಟ ಕಂದಗೆ ಹೃದಯ ಚಿಕಿತ್ಸೆ : ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ Read More »

ಸವಣೂರು :ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೇಪರ್ ಪ್ರೆಸೆಂಟೇಷನ್ ಕಾರ್ಯಗಾರ

ಪುತ್ತೂರು: ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೇಪರ್ ಪ್ರೆಸೆಂಟೇಷನ್ ಕಾರ್ಯಗಾರ ಪೇಪರ್ ಪಬ್ಲಿಕೇಷನ್ ಮತ್ತು ಪ್ರೆಸೆಂಟೇಷನ್ ಕಾರ್ಯಗಾರ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೆ.5 ರಂದು ನಡೆಯಿತು. ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಗಳಾದ ಅಶ್ವಿನ್ ಎಲ್. ಶೆಟ್ಟಿ ರವರು ವಹಿಸಿದ್ದು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರಾಜಲಕ್ಷ್ಮಿ ಎಸ್ ರೈ ಯವರು ಪೇಪರ್ ಪಬ್ಲಿಕೇಷನ್ ಮತ್ತು ಪ್ರೆಸೆಂಟೇಷನ್ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ವಾಣಿಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ. ನಿತೇಶ್ ಸ್ವಾಗತಿಸಿ, …

ಸವಣೂರು :ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೇಪರ್ ಪ್ರೆಸೆಂಟೇಷನ್ ಕಾರ್ಯಗಾರ Read More »

ಭಜನಾ ಸತ್ಸಂಗ ಸಮಾವೇಶ: ಸಿದ್ದತಾ ಸಭೆ

ಪುತ್ತೂರು: ಫೆ. 8 ರಂದು ನಡೆಯಲಿರುವ ಭಜನಾ ಸತ್ಸಂಗ ಸಮಾವೇಶ ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಪಠಣ ಹಾಗೂ ಭಜನಾ ಸಂಕೀರ್ತನ ಮೆರವಣಿಗೆಯ ಕಾರ್ಯಕ್ರಮ ದ ಅಂತಿಮ ಪೂರ್ವಭಾವಿ ಸಿದ್ದತಾ ಸಭೆ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ನಡೆಯಿತು. ಸಭೆಯಲ್ಲಿ ಶ್ರೀ ಕ್ಷೇತ್ರ ಮಾಣಿಲ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ ಕಾರ್ಯಕ್ರಮದಲ್ಲಿ ಹಲವು ಮಠಾಧಿಪತಿಗಳು, ಜನಪ್ರತಿನಿದಿಗಳು, ಅಧಿಕಾರಿಗಳು ಭಾಗವಹಿಸಲಿದ್ದಾರೆ, ಮಾನವೀಯತೆಯ ಮೌಲ್ಯಗಳು ಸಮಾಜದಲ್ಲಿ ನೆಲೆಸಬೇಕು, ಎಲ್ಲರನ್ನು ಒಗ್ಗೂಡಿಸಬೇಕೆಂದು ಈ ಭಜನಾ …

ಭಜನಾ ಸತ್ಸಂಗ ಸಮಾವೇಶ: ಸಿದ್ದತಾ ಸಭೆ Read More »

ಪಂಜ ಪಂಚಲಿಂಗೇಶ್ವರದೇವರ ಸಾನಿಧ್ಯದಲ್ಲಿ ಶ್ರೀ ಪರಿವಾರ ಪಂಚಲಿಂಗೇಶ್ವರ ಐಟಿಐ ಶಿಕ್ಷಣ ಸಂಸ್ಥೆಯ ಸ್ವಯಂ ಸೇವೆ

✍ ಭಾಸ್ಕರ ಜೋಗಿಬೆಟ್ಟು ,ಕಿರಣ್ ಕೊಂಡೆಬಾಯಿ ಪಂಜ ಪರಿವಾರ ಪಂಚಲಿಂಗೇಶ್ವರ ದೇವಾಲಯವು ಅತ್ಯಂತ ಪುರಾತನ ದೇವಾಲಯ ಆಗಿದ್ದು , ಋಷಿಗಳ ತಪಸ್ಸಿನ ಪ್ರಭಾವದಿಂದ ಸ್ಥಾಪಿಸಲ್ಪಟ್ಟಿದೆ ಎಂಬ ಇತಿಹಾಸವಿದೆ. ಈ ಪುರಾತನ ದೇವಾಲಯದ ಪಂಚಲಿಂಗೇಶ್ವರ ದೇವರಿಗೆ ಇಂದು ಮತ್ತು ನಾಳೆ ಜಾತ್ರೆಯ ಸಂಭ್ರಮ. ಹಲವಾರು ದೇವಾಲಯಗಳ ಜಾತ್ರೋತ್ಸವಗಳಲ್ಲಿ ಅಲ್ಲಿನ ಊರ ಪರಊರ ಸಂಘ ಸಂಸ್ಥೆಗಳು, ಸ್ವಯಂ ಸೇವಕರು ಬಂದು ಸ್ವಯಂ ಸೇವೆ ಮಾಡುವುದು ಸಾಮಾನ್ಯ. ಆದರೆ ಪಂಜ ಜಾತ್ರೋತ್ಸವದಲ್ಲಿ ಸ್ವಲ್ಪ ವಿಭಿನ್ನವಾಗಿದೆ. ಪ್ರತಿ ವರ್ಷ ಜಾತ್ರೋತ್ಸವದ ಸಮಯದಲ್ಲಿ ಕೆ.ಎಸ್ …

ಪಂಜ ಪಂಚಲಿಂಗೇಶ್ವರದೇವರ ಸಾನಿಧ್ಯದಲ್ಲಿ ಶ್ರೀ ಪರಿವಾರ ಪಂಚಲಿಂಗೇಶ್ವರ ಐಟಿಐ ಶಿಕ್ಷಣ ಸಂಸ್ಥೆಯ ಸ್ವಯಂ ಸೇವೆ Read More »

ಫೆ .7 ,8 : ಶ್ರೀ ದೈಪಿಲ ಶಿರಾಡಿ ರಾಜನ್ ದೈವದ ನೇಮೋತ್ಸವ – ಸಂತಾನ ದೋಷ, ಅನಾರೋಗ್ಯ, ಉದ್ಯೋಗ, ಕೋರ್ಟು ಕಛೇರಿ ವ್ಯವಹಾರ, ಕಳವು, ಮೋಸ, ವಂಚನೆಗಳಿಗೆ ದೈವದಿಂದ ಪರಿಹಾರ

ಫೆ .7 ,8 : ಶ್ರೀ ದೈಪಿಲ ಶಿರಾಡಿ ರಾಜನ್ ದೈವದ ನೇಮೋತ್ಸವ ಸಂತಾನ ದೋಷ, ಅನಾರೋಗ್ಯ, ಉದ್ಯೋಗ, ಕೋರ್ಟು ಕಛೇರಿ ವ್ಯವಹಾರ, ಕಳವು, ಮೋಸ, ವಂಚನೆಗಳಿಗೆ ದೈವದಿಂದ ಪರಿಹಾರ ಸವಣೂರು : ಕಾರಣಿಕ ಶಕ್ತಿಗಳ ಸಾನಿಧ್ಯವಿರುವ ದೈಪಿಲ ಕ್ಷೇತ್ರಕ್ಕೆ 800 ವರ್ಷಗಳ ಇತಿಹಾಸ ಇದೆ. ಶ್ರೀ ಶಿರಾಡಿ ಗ್ರಾಮ ದೈವವು ದೈಪಿಲ ಅಲ್ಲದೆ ಅಂಕದ ಕೂಟೇಲುವಿನಲ್ಲಿಯೂ ದೈವದ ನೇಮ ಹಿಂದಿ ನಿಂದಲೂ ನಡೆದು ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಕೊಪ್ಪದ ಭಂಡಾರದ ಮನೆಯಲ್ಲಿ ವರ್ಷಂಪ್ರತಿ ನೇಮ ನಡೆಯುತ್ತಿದೆ. …

ಫೆ .7 ,8 : ಶ್ರೀ ದೈಪಿಲ ಶಿರಾಡಿ ರಾಜನ್ ದೈವದ ನೇಮೋತ್ಸವ – ಸಂತಾನ ದೋಷ, ಅನಾರೋಗ್ಯ, ಉದ್ಯೋಗ, ಕೋರ್ಟು ಕಛೇರಿ ವ್ಯವಹಾರ, ಕಳವು, ಮೋಸ, ವಂಚನೆಗಳಿಗೆ ದೈವದಿಂದ ಪರಿಹಾರ Read More »

ಬೈತಡ್ಕ: 31ನೇ ಸ್ವಲಾತ್ ವಾರ್ಷಿಕ ಸಮಾರೋಪ

ಸವಣೂರು: ಜುಮಾ ಮಸೀದಿ ಮತ್ತು ದರ್ಗಾ ಶರೀಫ್ ಬೈತಡ್ಕ, ಕಾಣಿಯೂರು ಇದರ ಆಶ್ರಯದಲ್ಲಿ ಅಸ್ವಲಾತುಲ್ ಕಫೀಲು ಬಿಶ್ಯಫಾಅಃ ಇದರ 31ನೇ ವಾರ್ಷಿಕ ಮತ್ತು ನಾಲ್ಕು ದಿನಗಳ ಧಾರ್ಮಿಕ ಮತಪ್ರಭಾಷಣದ ಸಮಾರೋಪ ನಡೆಯಿತು. ಮಗ್ರಿಬ್ ನಮಾಜಿನ ಬಳಿಕ ಸಯ್ಯದ್ ಅಹ್ಮದ್ ಮುಖ್ತಾರ್ ತಂಙಳ್ ಕುಂಬೋಳ್‌ರವರು ವಾರ್ಷಿಕ ಸ್ವಲಾತ್ ಮಜ್ಲಿಸ್‌ಗೆ ನೇತೃತ್ವ ನೀಡಿ ದುವಾ ನೆರವೇರಿಸಿದರು. ಪಾರತ್ರಿಕ ನರಕಾಗ್ನಿಯಿಂದ ಮುಕ್ತಿಹೊಂದಲು ಮತ್ತು ಐಹಿಕ ಜೀವನದಲ್ಲಿ ಯಶಸ್ಸು ಸಂಪಾದಿಸಬೇಕಾದರೆ ಪ್ರವಾದಿ ಮುಹಮ್ಮದ್(ಸ.ಅ)ರವರ ಸಂದೇಶಗಳನ್ನು ಪಾಲಿಸಬೇಕು, ಪ್ರವಾದಿಯವರ ಮೇಲೆ ನಿರಂತರ ಸ್ವಲಾತ್ ಹೇಳುತ್ತಿರಬೇಕು, …

ಬೈತಡ್ಕ: 31ನೇ ಸ್ವಲಾತ್ ವಾರ್ಷಿಕ ಸಮಾರೋಪ Read More »

ಪ್ಲಾಸ್ಟಿಕ್ ಮುಕ್ತ ಗ್ರಾಮ ಕನಸಲ್ಲಿ ಯಶ ಕಂಡ ಉದ್ಯಮಿ ಹರಿಪ್ರಸಾದ್ ಕುಂಟಿಕಾನ : ಸಾಥ್ ನೀಡಿದ ಕೊಳ್ತಿಗೆ ಗ್ರಾ.ಪಂ.

ಕೊಳ್ತಿಗೆ : ಪ್ಲಾಸ್ಟಿಕ್ ಮುಕ್ತ ಗ್ರಾಮ ಕನಸಲ್ಲಿ ಯಶ ಕಂಡ ಉದ್ಯಮಿ ಹರಿಪ್ರಸಾದ್ ಕುಂಟಿಕಾನ ಪುತ್ತೂರು : ಕಳೆದ ನಾಲ್ಕು ವರ್ಷಗಳ ಹಿಂದೆ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯ ರಸ್ತೆ ಬದಿಗಳಲ್ಲಿ ಮೆರವಣಿಗೆಯೊಂದು ಸಾಗುತ್ತಿತ್ತು. ಮೆರವಣಿಗೆಯಲ್ಲಿದ್ದ ವಿದ್ಯಾರ್ಥಿಗಳು, ಸಾರ್ವಜನಿಕರು ಪ್ಲಾಸ್ಟಿಕ್ ವಿರೋಽ ಘೋಷಣೆಗಳನ್ನು ಕೂಗುತ್ತಿದ್ದರು, ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಕಾರ ಅದನ್ನು ಬಳಸಬೇಡಿ, ಬಳಸಿದರೆ ಎಲ್ಲೆಂದರಲ್ಲಿ ಎಸೆಯಬೇಡಿ ಎಂದು ಘೋಷಣೆ ಕೂಗುತ್ತಾ ರಸ್ತೆಯಲ್ಲಿ ಸಾಗುತ್ತಿದ್ದರು. ಈ ಮೆರವಣಿಗೆ ಸ್ಥಳೀಯ ಜಿನಸು ವ್ಯಾಪಾರಿ ಹರಿಪ್ರಸಾದ್ ಕುಂಟಿಕಾನ ಅವರ ಅಂಗಡಿಯ ಮುಂದೆ ಸಾಗುತ್ತಿತ್ತು. …

ಪ್ಲಾಸ್ಟಿಕ್ ಮುಕ್ತ ಗ್ರಾಮ ಕನಸಲ್ಲಿ ಯಶ ಕಂಡ ಉದ್ಯಮಿ ಹರಿಪ್ರಸಾದ್ ಕುಂಟಿಕಾನ : ಸಾಥ್ ನೀಡಿದ ಕೊಳ್ತಿಗೆ ಗ್ರಾ.ಪಂ. Read More »

error: Content is protected !!
Scroll to Top