ನ್ಯೂಸ್

ಮಾ.1 : ಮುಕ್ಕೂರಿನಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ

ಬೆಳ್ಳಾರೆ : ಮುಕ್ಕೂರು-ಕುಂಡಡ್ಕ ನೇಸರ ಯುವಕ ಮಂಡಲ,‌‌ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ಇದರ ಆಶ್ರಯದಲ್ಲಿ ಮಾ.1 ರಂದು ಬೆಳಗ್ಗೆ 8 ರಿಂದ ಸಂಜೆ‌ 4 ರ ತನಕ ಮುಕ್ಕೂರು ಶಾಲಾ ವಠಾರದಲ್ಲಿ‌‌ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ನಡೆಯಲಿದೆ. ಈ ಸಂದರ್ಭದಲ್ಲಿ ಆಧಾರ್ ಹೊಸ ನೋಂದಣಿ, ವಿಳಾಸ ಬದಲಾವಣೆ, ಜನ್ಮದಿನಾಂಕ ಬದಲಾವಣೆ, ಹೆಸರು ಬದಲಾವಣೆಗೆ ಅವಕಾಶ ಇದೆ. ಇದಕ್ಕಾಗಿ ಅಗತ್ಯ ದಾಖಲೆ ಪತ್ರಗಳನ್ನು ಸಲ್ಲಿಸಿ ಪ್ರಯೋಜನ ‌ಪಡೆದುಕೊಳ್ಳಬಹುದು.  ಪೂರ್ವಭಾವಿಯಾಗಿ …

ಮಾ.1 : ಮುಕ್ಕೂರಿನಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ Read More »

ಬೆಳ್ತಂಗಡಿ ತಾಲೂಕು 17 ನೇ ಕನ್ನಡ ಸಾಹಿತ್ಯ ಸಮ್ಮೇಳನ, ಹೊಸಂಗಡಿಯ ಪಡ್ಯಾರಬೆಟ್ಟುವಿನಲ್ಲಿ | ಮಾ. 24 ರಂದು

ಬೆಳ್ತಂಗಡಿ :  ಬೆಳ್ತಂಗಡಿ ತಾಲೂಕಿನ 17 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹೊಸಂಗಡಿ ಪಡ್ಯಾರಬೆಟ್ಟು ಸಂತೃಪ್ತಿ ಸಭಾಭವನದಲ್ಲಿ 2020 ಮಾರ್ಚ್ 24 ನೇ ಮಂಗಳವಾರ ನಡೆಸುವುದೆಂದು ತೀರ್ಮಾನಿಸಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ ಪ್ರದೀಪ ಕುಮಾರ ಕಲ್ಕೂರ, ತಾ| ಅಧ್ಯಕ್ಷ ಡಾ. ಬಿ ಯಶೋವರ್ಮ, ಸಮ್ಮೇಳನ ಸಂಯೋಜನಾ ಸಮಿತಿ ಗೌರವಾಧ್ಯಕ್ಷ ಜೀವಂಧರ ಕುಮಾರ್, ಅಧ್ಯಕ್ಷ ಜಯರಾಜ್ ಕಂಬಳಿ, ಕಾರ್ಯದರ್ಶಿ ಪಿ ಧರಣೇಂದ್ರ ಕುಮಾರ್ ಇವರು ಈ ಬಗ್ಗೆ ತಿಳಿಸಿರುತ್ತಾರೆ. ಈ ಬಗ್ಗೆ ಪ್ರಥಮ ಹಂತದ …

ಬೆಳ್ತಂಗಡಿ ತಾಲೂಕು 17 ನೇ ಕನ್ನಡ ಸಾಹಿತ್ಯ ಸಮ್ಮೇಳನ, ಹೊಸಂಗಡಿಯ ಪಡ್ಯಾರಬೆಟ್ಟುವಿನಲ್ಲಿ | ಮಾ. 24 ರಂದು Read More »

ಮಾಡನ್ನೂರು ಉವೈಸ್ ಸಖಾಫಿ ನಿಧನ

ಪುತ್ತೂರು : ಮಾಡನ್ನೂರು ಗ್ರಾಮದ ನಡುವಡ್ಕ ದಿ.ಅಬ್ಬಾಸ್ ಅವರ ಪುತ್ರ ಉವೈಸ್ ಸಖಾಫಿ ಹೃದಯಾಘಾತದಿಂದ ಫೆ.16ರಂದು ರಾತ್ರಿ ನಿಧನರಾದರು. ಇಸ್ಲಾಂ ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ ಇವರು ಎಲ್ಲರೊಂದಿಗೂ ಅತ್ಮೀಯತೆಯಿಂದ ಇರುತ್ತಿದ್ದರು. ಇವರ ಅಕಾಲಿಕ ನಿಧನದಿಂದ ಒಬ್ಬ ಮುಸ್ಲಿಂ ಧಾರ್ಮಿಕ ಗುರುವನ್ನು ಕಳೆದು ಕೊಂಡಂತಾಗಿದೆ. ಕುಂದಾಪುರ ತಾಲೂಕಿನ ಹಾಲಾಡಿ ಮಸೀದಿಯಲ್ಲಿ ಖತೀಬರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಕುಂದಾಪುರ ವಲಯದ ತರಬೇತಿ ವಿಭಾಗದ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಫೆ.16ರಂದು ಇತಿಹಾಸ ಪ್ರಸಿದ್ಧ ಬೆಳ್ತಂಗಡಿ ತಾಲೂಕಿನ ಕಾಜೂರು ದರ್ಗಾ …

ಮಾಡನ್ನೂರು ಉವೈಸ್ ಸಖಾಫಿ ನಿಧನ Read More »

ಬೆಳ್ತಂಗಡಿಯ ಇಂದಬೆಟ್ಟು : ಆಳವಾದ ಕಮರಿಗೆ ರಿಕ್ಷಾ ಬಿದ್ದು ಇಬ್ಬರು ಮಹಿಳೆಯರ ಸಾವು, ಮೂವರಿಗೆ ಗಾಯ

ಬೆಳ್ತಂಗಡಿ: ಇಲ್ಲಿನ ಇಂದಬೆಟ್ಟು ಪಡಂಬಿಲ ಪಾಲೆದಬೆಟ್ಟು ಎಂಬಲ್ಲಿ ವೇಗವಾಗಿ ಚಲಿಸುತ್ತಿದ್ದ ರಿಕ್ಷಾವೊಂದು ಸ್ಕಿಡ್ ಆಗಿ 25 ಅಡಿ ಆಳವಾದ ಕಮರಿಗೆ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮರಣ ಹೊಂದಿದ್ದಾರೆ. ಮೃತಪಟ್ಟವರು ನಡ ಗ್ರಾಮದ ಕೊಲ್ಲೊಟ್ಟು ನಿವಾಸಿ ಹಾಜಿರಾಬಿ (55) ಮತ್ತು ಅದೇ ಗ್ರಾಮದ ಬೈಲು ದರ್ಕಾಸು ನಿವಾಸಿ ಸಾಜಿದಾಬಿ (56). ಇವರೆಲ್ಲ ಒಂದೇ ಕುಟುಂಬದ ನಿವಾಸಿಗಳಾಗಿದ್ದು ಮಮ್ತಾಝ್ (30), ಶೈನಾಝ್ (29) ಎಂಬವರು ಗಂಭೀರ ಗಾಯಗೊಂಡಿದ್ದು ಅವರನ್ನು …

ಬೆಳ್ತಂಗಡಿಯ ಇಂದಬೆಟ್ಟು : ಆಳವಾದ ಕಮರಿಗೆ ರಿಕ್ಷಾ ಬಿದ್ದು ಇಬ್ಬರು ಮಹಿಳೆಯರ ಸಾವು, ಮೂವರಿಗೆ ಗಾಯ Read More »

ಕಾಣಿಯೂರಿನ ಹಿರಿಯ ಕಾರು ಚಾಲಕ ಲಿಂಗಪ್ಪ ಗೌಡ ಪೈಕ ನಿಧನ

ಕಾಣಿಯೂರು: ಕಾಣಿಯೂರು ಗ್ರಾಮದ ಪುಣ್ಚತ್ತಾರು ಪೈಕ ನಿವಾಸಿ ಲಿಂಗಪ್ಪ ಗೌಡ (62ವ.)ರವರು ನಿಧನಹೊಂದಿದ್ದಾರೆ. ಮೂಲತಃ ಈಶ್ವರಮಂಗಲದ ಕೊಂಬೆಟ್ಟುದವರಾಗಿದ್ದು, ಪ್ರಸ್ತುತ ಲಿಂಗಪ್ಪರವರು ಪುಣ್ಚತ್ತಾರು ಪೈಕ ನಿವಾಸಿಯಾಗಿದ್ದರು. ಎಲ್ಲರೊಂದಿಗೆ ಆತ್ಮಿಯರಾಗಿದ್ದ ಮೃತರು 40 ವರ್ಷಗಳಿಂದ ಕಾಣಿಯೂರು- ಪುತ್ತೂರು ಮಧ್ಯೆ ಕಾರು ಚಾಲಕ ವೃತ್ತಿ ಮಾಡುತ್ತಿದ್ದು, ಹಿರಿಯ ಕಾರು ಚಾಲಕರೆಂದೇ ಚಿರಪರಿಚಿತರಾಗಿದ್ದರು. ಮೃತರು ಪತ್ನಿ ಹರಿಣಾಕ್ಷೀ, ಪುತ್ರರಾದ ಪ್ರಜ್ಞೇಶ್, ಯಜ್ಞೇಶ್, ಸಹೋದರರಾದ ಬಾಬು ಗೌಡ, ಸುಂದರ ಗೌಡ, ಆನಂದ ಗೌಡ, ಸಹೋದರಿ ಅಕ್ಕಯ್ಯ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ವಾಹನ ಸಂಚಾರ …

ಕಾಣಿಯೂರಿನ ಹಿರಿಯ ಕಾರು ಚಾಲಕ ಲಿಂಗಪ್ಪ ಗೌಡ ಪೈಕ ನಿಧನ Read More »

ಮಣಿಕ್ಕರ ಶಾಲಾ ವಿಸ್ತರಿತ ಕ್ರೀಡಾಂಗಣ ಉದ್ಘಾಟನೆ,ಕ್ರಿಕೆಟ್ ಪಂದ್ಯಾಟ

ಮಣಿಕ್ಕರ ಶಾಲಾ ವಿಸ್ತರಿತ ಕ್ರೀಡಾಂಗಣ ಉದ್ಘಾಟನೆ,ಕ್ರಿಕೆಟ್ ಪಂದ್ಯಾಟ ರಾದಾಕೃಷ್ಣ ಬೋರ್ಕರ್,ರಾಮ ಪಾಂಬಾರು ಅವರನ್ನು ಸಮ್ಮಾನಿಸಿ,ಗೌರವಿಸಲಾಯಿತು ಸವಣೂರು : ಕೊಳ್ತಿಗೆ ಗ್ರಾಮದ ಮಣಿಕ್ಕರ ಸ.ಹಿ.ಪ್ರಾ.ಸಾಲೆ ಹಾಗೂ ಪ್ರೌಢಶಾಲೆಯ ವಿಸ್ತರಿತ ಕ್ರೀಡಾಂಗಣ ಉದ್ಘಾಟನೆ ಹಾಗೂ ಟಿ.-೧೦ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾಟ ಮಣಿಕ್ಕರ ಕ್ರೀಡಾಂಗಣದಲ್ಲಿ ನ್ಯೂ ಬ್ರದರ್ಸ್ ಪಾಲ್ತಾಡು ಮತ್ತು ಗಲ್ ಬ್ರದರ್ಸ್ ಪಾಲ್ತಾಡು ಇದರ ಆಶ್ರಯದಲ್ಲಿ ನಡೆಯಿತು. ವಿಸ್ತರಿತ ಆಟದ ಮೈದಾನವನ್ನು ತಾ.ಪಂ.ಸದಸ್ಯ ರಾಮ ಪಾಂಬಾರು ಉದ್ಘಾಟಿಸಿದರು.ಕ್ರಿಕೆಟ್ ಪಂದ್ಯಾಟವನ್ನು ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆಟದ …

ಮಣಿಕ್ಕರ ಶಾಲಾ ವಿಸ್ತರಿತ ಕ್ರೀಡಾಂಗಣ ಉದ್ಘಾಟನೆ,ಕ್ರಿಕೆಟ್ ಪಂದ್ಯಾಟ Read More »

ನಮ್ಮ ಭೂಮಿಯ ತರಕಾರಿ ಬ್ರಹ್ಮಕಲಶಕ್ಕೆ: ಕೋಡಿಂಬಾಡಿ ಮಠಂತಬೆಟ್ಟು ದೇವಸ್ಥಾನದ ಬ್ರಹ್ಮಕಲಶ

ಪುತ್ತೂರು: ಮುಂಬರುವ ಎಪ್ರಿಲ್ ತಿಂಗಳ 21 ನೇ ತಾರೀಖಿನಿಂದ 26 ನೇ ತಾರೀಖಿನವರೆಗೆ ನಡೆಯುವ ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು ಕೋಡಿಂಬಾಡಿ ಇದರ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಕ್ತರ ಮಹಾದಾಸೆಯಂತೆ ತರಕಾರಿ ಬೆಳೆಯುವ ಮಹತ್ವಾಕಾಂಕ್ಷೆಯ ಯೋಜನೆಯಾದ ನಮ್ಮ ಭೂಮಿಯ ತರಕಾರಿ ಬ್ರಹ್ಮಕಲಶಕ್ಕೆ ಪೂರ್ವ ತಯಾರಿ ಎಂಬ ಶೀರ್ಷಿಕೆಯಡಿ ತರಕಾರಿ ಬೆಳೆಯುವ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮ,ಶ್ರಮದಾನ ಹಾಗೂ ಸಂವಾದ ಕಾರ್ಯಕ್ರಮವು ದಿನಾಂಕ 16.02.2020 ರಂದು ಬೆಳಿಗ್ಗೆ ಮಠಂತಬೆಟ್ಟು ಪಾಲ್ತಿಮಾರು ಗದ್ದೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿಯ …

ನಮ್ಮ ಭೂಮಿಯ ತರಕಾರಿ ಬ್ರಹ್ಮಕಲಶಕ್ಕೆ: ಕೋಡಿಂಬಾಡಿ ಮಠಂತಬೆಟ್ಟು ದೇವಸ್ಥಾನದ ಬ್ರಹ್ಮಕಲಶ Read More »

ಫೆ.19-27 :ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆ

ಈಶ್ವರಮಂಗಲ: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಫೆ.19ರಿಂದ ಫೆ.27ರವರೆಗೆ ವರ್ಷಾವಧಿ ಜಾತ್ರೋತ್ಸವವು ನಡೆಯಲಿದೆ. ಫೆ.18ರಂದು ಹಸಿರುವಾಣಿ ಹೊರೆಕಾಣಿಕೆ ನಡೆದು ಸಂಜೆ 6.30ಕ್ಕೆ ಉಗ್ರಾಣ ತುಂಬುವುದು, ರಾತ್ರಿ 7ಕ್ಕೆ ಶ್ರೀ ದುರ್ಗಾ ಪೂಜೆ ನಡೆಯಲಿದೆ. ಫೆ.19ರಂದು ಬೆಳಿಗ್ಗೆ ಗಣಪತಿ ಹೋಮ, 9ಕ್ಕೆ ಧ್ವಜಾರೋಹಣ, ಬಲಿವಾಡು ಶೇಖರಣೆ, ಬೆಳಿಗ್ಗೆ 10ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಆನಂದ ಗೌಡ ದೊಡ್ಡಮನೆ ಇವರು ಉದ್ಘಾಟಿಸಲಿದ್ದಾರೆ. ನಂತರ ಯಕ್ಷಗಾನ ತಾಳಮದ್ದಳೆ ಪ್ರಸಂಗ “ಭಕ್ತ ಸುಧನ್ವ”(ಪೌರಾಣಿಕ …

ಫೆ.19-27 :ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೆ Read More »

ಐತಿಹಾಸಿಕ ಕಾಜೂರು ಉರೂಸ್ ಸಮಾಪನ : ಸಾವಿರಾರು ಜನರು ಭಾಗಿ

ಐತಿಹಾಸಿಕ ಕಾಜೂರು ಉರೂಸ್ : ಸಾವಿರಾರು ಜನರು ಭಾಗಿ ಬೆಳ್ತಂಗಡಿ: 800 ವರ್ಷಗಳ ಇತಿಹಾಸ ಹೊಂದಿರುವ ಸರ್ವಧರ್ಮೀಯರ ಸಮನ್ವಯ ಕೇಂದ್ರ, ಕಾಜೂರು ದರ್ಗಾ ಶರೀಫ್‌ನ ಐತಿಹಾಸಿಕ ಉರೂಸ್ ಸಂಭ್ರಮದಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು. ದರ್ಗಾಕ್ಕೆ ಭೇಟಿ ನೀಡಿದ ಮುಸ್ಲಿಂ ಬಾಂಧವರು ಕುರಾನ್ ಪಠಿಸಿ ತಮ್ಮ ಇಷ್ಟರ್ಥ ನೆರವೇರಲು ಹರಕೆ ರೂಪವಾಗಿ ಮಲ್ಲಿಗೆ ಹೂ ಹಾಗೂ ಚಾದರ ಅರ್ಪಿಸಿದರು. ಕಳೆದ 8 ವರ್ಷಗಳ ಹಿಂದೆ ನಡೆದಿದ್ದ ಉರೂಸ್ ಬಳಿಕದ ದಿನಗಳಲ್ಲಿ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಉರೂಸ್ ಸಂಭ್ರಮಾಚರಣೆಗೆ ಊರ …

ಐತಿಹಾಸಿಕ ಕಾಜೂರು ಉರೂಸ್ ಸಮಾಪನ : ಸಾವಿರಾರು ಜನರು ಭಾಗಿ Read More »

ಗಯಾಪದ ಕ್ಷೇತ್ರ ಉಬಾರ್ ಒಂದನೇ ಮಖೆ ಜಾತ್ರೆ ಸಂಪನ್ನ

ಗಯಾಪದ ಕ್ಷೇತ್ರ ಉಬಾರ್ ಒಂದನೇ ಮಖೆ ಜಾತ್ರೆ ಸಂಪನ್ನ ಉಪ್ಪಿನಂಗಡಿ: ಗಯಾಪದ ಕ್ಷೇತ್ರ, ದಕ್ಷಿಣಕಾಶಿ ಎಂದೇ ಕರೆಯಲ್ಪಡುವ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ಇದರ ಕಾಲಾವಧಿ ಜಾತ್ರೆ, ಮಖೆ ಜಾತ್ರೆ ಮತ್ತು ಉತ್ಸವಾದಿಗಳು ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪವಿತ್ರಪಾಣಿ ಕರಾಯ ವಿಷ್ಣುಮೂರ್ತಿ ಕುದ್ದಣ್ಣಾಯ ಅವರ ಉಪಸ್ಥಿತಿಯಲ್ಲಿ ಫೆ. 15ರಿಂದ ಆರಂಭಗೊಂಡು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಫೆ. 15ರಂದು 1ನೇ ಅಷ್ಟಮಿ ಮಖೆ ಕೂಟದ ಅಂಗವಾಗಿ ರಾತ್ರಿ ಬಲಿ ಹೊರಟು ಉತ್ಸವ-ರಥೋತ್ಸವ, ಬಲಿ, ಮಹಾಪೂಜೆ …

ಗಯಾಪದ ಕ್ಷೇತ್ರ ಉಬಾರ್ ಒಂದನೇ ಮಖೆ ಜಾತ್ರೆ ಸಂಪನ್ನ Read More »

error: Content is protected !!
Scroll to Top