ಪುತ್ತೂರು

ತಾಯಿಯ ಆಶೀರ್ವಾದ,ತರವಾಡು ಮನೆ ಭೇಟಿ ವಿಶೇಷ ಅರ್ಥ ಬೇಡ-ನಳಿನ್ ಕುಮಾರ್

ಸವಣೂರು: ದ.ಕ.ಸಂಸದ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತನ್ನ ಹುಟ್ಟೂರು ಕಡಬದ ಪಾಲ್ತಾಡಿ ಗ್ರಾಮದ ಕುಂಜಾಡಿಗೆ ಬಂದು ತಾಯಿಯ ಆಶೀರ್ವಾದ ಹಾಗೂ ದೈವ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಿದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ.ಇದು ನನ್ನ ಎಂದಿನ ಸಂಪ್ರದಾಯ ಎಂದು ಸಂಸದ ನಳಿನ್ ಕುಮಾರ್ ತಿಳಿಸಿದ್ದಾರೆ. ವಿವಿಧ ಮಾಧ್ಯಮಗಳಲ್ಲಿ ,ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವರದಿಗಳು ಬರುತ್ತಿರುವುದರಿಂದ ನಳಿನ್ ಕುಮಾರ್ ಕಟೀಲ್ ಈ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿ ಸುಳ್ಯ ಮಂಡಲದ ವಿಶೇಷ ಕಾರ್ಯಕಾರಣಿ ಸಭೆ ಉದ್ಘಾಟನೆ,ಅಗಲಿದ ನಾಯಕರಿಗೆ,ಕಾರ್ಗಿಲ್ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಸುಳ್ಯ : ಬಿಜೆಪಿ ಸುಳ್ಯ ಮಂಡಲದ ವಿಶೇಷ ಕಾರ್ಯಕಾರಣಿ ಸಭೆಯು ಜುಲೈ 26 ರಂದು ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನ ದಲ್ಲಿ ನಡೆಯಿತು. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ನರೇಂದ್ರ ಮೋದಿ ಅವರ ಸದೃಢ ನೇತೃತ್ವದಿಂದಾಗಿ ಭಾರತ ಬಲಿಷ್ಠ ರಾಷ್ಟ್ರವಾಗಿ ಜಗತ್ತಿನಲ್ಲಿ ತಲೆ ಎತ್ತಿ ನಿಂತಿದೆ. ಕಳೆದ ಏಳು ವರ್ಷದಲ್ಲಿ ಹಲವಾರು ಸವಾಲುಗಳ ಮಧ್ಯೆ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತವನ್ನು ನೀಡಿದೆ. ದೇಶವನ್ನು ಆಧುನಿಕ ರೀತಿಯಲ್ಲಿ …

ಬಿಜೆಪಿ ಸುಳ್ಯ ಮಂಡಲದ ವಿಶೇಷ ಕಾರ್ಯಕಾರಣಿ ಸಭೆ ಉದ್ಘಾಟನೆ,ಅಗಲಿದ ನಾಯಕರಿಗೆ,ಕಾರ್ಗಿಲ್ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ Read More »

ಇಂದಿನಿಂದ ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲಾ ಸೇವೆಗಳಿಗೆ ಅನುಮತಿ

ಕೊರೊನಾ ಎರಡನೇ ಅಲೆ ಪರಿಣಾಮ ಎರಡು ತಿಂಗಳುಗಳಿಂದ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದ್ದ ದೇವಸ್ಥಾನ, ಮಸೀದಿ, ಚರ್ಚ್‌, ಗುರುದ್ವಾರ ಸಹಿತ ಎಲ್ಲ ಧಾರ್ಮಿಕ ಸ್ಥಳಗಳು ರವಿವಾರದಿಂದ ಭಕ್ತರಿಗೆ ಮುಕ್ತವಾಗಲಿವೆ. ಈ ಸಂಬಂಧ ಶನಿವಾರ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಪತ್ತು ನಿರ್ವಹಣ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆಗಿರುವ ಎನ್‌. ಮಂಜುನಾಥ್‌ ಪ್ರಸಾದ್‌ ಆದೇಶ ಹೊರಡಿಸಿದ್ದಾರೆ. ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಸಿಮೀತಗೊಳಿಸಿ ಜು. 3ರಂದು ಹೊರಡಿಸಲಾಗಿದ್ದ ಆದೇಶವನ್ನು ಮಾರ್ಪಡಿಸಿ ಹೊಸದಾಗಿ ಹೊರಡಿಸಲಾಗಿದೆ. ರಾಜ್ಯಾದ್ಯಂತ ಮಂದಿರ, …

ಇಂದಿನಿಂದ ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲಾ ಸೇವೆಗಳಿಗೆ ಅನುಮತಿ Read More »

ಪುತ್ತೂರು: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು

ಪುತ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಜು.23 ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೆದಿಲ ಗ್ರಾಮದ ಗಡಿಯಾರ ಮನೆಯ ಮಜೀದ್‌ ( 45 ) ಎಂದು ಗುರುತಿಸಲಾಹಿದೆ. ಈತನ ವಿರುದ್ದ ಪುತ್ತೂರು ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ: 143,147,148,326,504,506 ಜೊತೆಗೆ 149 ರಂತೆ ಪ್ರಕರಣ ದಾಖಲಾಗಿತ್ತು. ಆರೋಪಿಯ ಬಗ್ಗೆ ಪೊಲೀಸರು ಸುಮಾರು 2 ವರ್ಷಗಳಿಂದ ಮಾಹಿತಿ ಸಂಗ್ರಹಿಸಿ ಬೆಂಗಳೂರು ,ಕೋಲಾರ ಮುಂತಾದ ಕಡೆ ವಾಸವಿದ್ದು, ಬಳಿಕ …

ಪುತ್ತೂರು: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು Read More »

ಪುತ್ತೂರು ನಗರಸಭೆ ಕಾರ್ಯಾಚರಣೆ : ಅಕ್ರಮವಾಗಿ ನಿರ್ಮಿಸಿದ ಅಂಗಡಿಗಳ ತೆರವು

ಪುತ್ತೂರು ನಗರಸ ಸಭಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೀದಿ ಬದಿಯಲ್ಲಿ ನಿರ್ಮಿಸಿದ ಅಂಗಡಿಗಳ ತೆರವು ಕಾರ್ಯಾಚರಣೆ ಜು.23ರಂದು ಬೆಳ್ಳಂಬೆಳಗ್ಗೆ ನಡೆಯಿತು. ನಗರಸಭೆ ಆಯುಕ್ತ ಮಧು ಎಸ್ ಮನೋಹರ ಅವರ ನೇತೃತ್ವದಲ್ಲಿ ಪೊಲೀಸರ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಯಿತು.

ಪತ್ರಕರ್ತ ಪಿ.ಬಿ.ಹರೀಶ್ ರೈ ಅವರ ಫೇಸ್‌ಬುಕ್‌ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ

ವಿಜಯವಾಣಿ ಮುಖ್ಯ ವರದಿಗಾರ ಪಿ.ಬಿ.ಹರೀಶ್ ರೈ ಅವರ ಹೆಸರಿನಲ್ಲಿ ಫೇಸ್‌ಬುಕ್‌ ನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಪಿ.ಬಿ.ಹರೀಶ್ ರೈ ಅವರ ಹೆಸರು,ಪೋಟೋ ಬಳಸಿ ಪೇಸ್ ಬುಕ್ ನಲ್ಲಿ ನಕಲಿ ಅಕೌಂಟ್ ತೆರೆದು ಹಲವರಿಗೆ ಸ್ನೇಹಿತರರಾಗಿ ರಿಕ್ವೆಸ್ಟ್ ಕಳುಹಿಸಿ ಹಣದ ಬೇಡಿಕೆ ಇರಿಸಿದ್ದಾರೆ. ಈ ಬಗ್ಗೆ ಗೆಳೆಯರಿಂದ ಮಾಹಿತಿ ಪಡೆದ ಹರೀಶ್ ರೈ, ಇದೊಂದು ನಕಲಿಯಾಗಿ ಸೃಷ್ಟಿಸಿದ ಪೇಸುಬುಕ್ ಖಾತೆ ಆಗಿದ್ದು ಯಾರೂ ಕೂಡ ಹಣ ಕಳುಹಿಸಬೇಡಿ ಎಂದು ವಿನಂತಿಸಿದ್ದಾರೆ. 8130479237 ನಂಬರ್ ಗೆ …

ಪತ್ರಕರ್ತ ಪಿ.ಬಿ.ಹರೀಶ್ ರೈ ಅವರ ಫೇಸ್‌ಬುಕ್‌ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ Read More »

ಬಿಜೆಪಿಗೆ ಬಿಎಸ್‌ವೈ ಆತ್ಮ,ಈಶ್ವರಪ್ಪ ,ಶೆಟ್ಟರ್ ಎರಡು ಕಣ್ಣುಗಳಿದ್ದಂತೆ- ನಳಿನ್ ಕುಮಾರ್ ಕಟೀಲ್

ವೈರಲ್ ಆಗಿರುವ ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ. ಮುಖ್ಯಮಂತ್ರಿಗಳಿಗೆ ಈ ಕುರಿತು ಪತ್ರ ಬರೆಯುತ್ತೇನೆ.ಇದರ ತನಿಖೆಯಾಗಬೇಕು.ನಂತರ ಸತ್ಯಾಸತ್ಯತೆ ಹೊರ ಬರಲಿದೆ ಎಂದು ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ನಳಿನ್ ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ರವಿವಾದ ವೈರಲ್ ಆಗಿತ್ತು. ನಾಯಕತ್ವ ಬದಲಾವಣೆ ಕುರಿತು ನಮ್ಮಲ್ಲಿ ಯಾವುದೇ ಚರ್ಚೆಗಳಿಲ್ಲ. ನಮ್ಮ ಪಕ್ಷಕ್ಕೆ ಯಡಿಯೂರಪ್ಪ ಆತ್ಮವಿದ್ದಂತೆ. ಯಡಿಯೂರಪ್ಪ ನಮ್ಮ ಸರ್ವ ಸಮ್ಮತದ ನಾಯಕ. ಈಶ್ವರಪ್ಪ, ಜಗದೀಶ್ ಶೆಟ್ಟರ್ ಪಾರ್ಟಿಯ ಎರಡು ಕಣ್ಣುಗಳು ಇದ್ದಂತೆ ಎಂದರು. ತನಿಖೆಯಾಗದೇ …

ಬಿಜೆಪಿಗೆ ಬಿಎಸ್‌ವೈ ಆತ್ಮ,ಈಶ್ವರಪ್ಪ ,ಶೆಟ್ಟರ್ ಎರಡು ಕಣ್ಣುಗಳಿದ್ದಂತೆ- ನಳಿನ್ ಕುಮಾರ್ ಕಟೀಲ್ Read More »

ಜು.26 ರ ಬಳಿಕ ರಾಜ್ಯ ರಾಜಕಾರಣದಲ್ಲಿ ಆಗಲಿದೆಯಾ ಮಹತ್ತರ ಬದಲಾವಣೆ ? ಏನಾಗಲಿದೆ ಮುಂದೆ..

ಮುಖ್ಯ ಮಂತ್ರಿ ಯಡಿಯೂರಪ್ಪ ಅವರ ದಿಲ್ಲಿ ಭೇಟಿಯ ಬಳಿಕ ರಾಜ್ಯ ಬಿಜೆಪಿಯಲ್ಲಿ ತೆರೆಮರೆಯಲ್ಲಿಕಸರತ್ತು ಆರಂಭವಾಗಿದೆ. ಜು. 26ರ ಅನಂತರದ ರಾಜಕೀಯ ಕುರಿತ ಲೆಕ್ಕಾಚಾರ ನಡೆಯುತ್ತಿದೆ. ಯಡಿಯೂರಪ್ಪ ಅವರು ಪ್ರಧಾನಿ ಮೋದಿ,ಅಮಿತ್ ಶಾ,ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ ಬಳಿಕ “ರಾಜೀನಾಮೆ ನೀಡುವುದಿಲ್ಲ, ಪಕ್ಷದ ನಾಯಕರು ಸೂಚಿಸಿಲ್ಲ,ಅಭಿವೃದ್ಧಿ ವಿಚಾರಗಳ ಕುರಿತು ಮಾತುಕತೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಬಿಜೆಪಿ ವಲಯದಲ್ಲಿ ಮಾತ್ರ ಜು. 26ರ ಭಾರೀ ಸದ್ದು ಮಾಡುತ್ತಿದೆ. ಜು.26 ರ ಬಳಿಕ ಕೆಲ ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಲಾಗುತ್ತದೆ …

ಜು.26 ರ ಬಳಿಕ ರಾಜ್ಯ ರಾಜಕಾರಣದಲ್ಲಿ ಆಗಲಿದೆಯಾ ಮಹತ್ತರ ಬದಲಾವಣೆ ? ಏನಾಗಲಿದೆ ಮುಂದೆ.. Read More »

ಉಡುಪಿ ಗಣಪತಿ ದೇವಸ್ಥಾನ ಕಟ್ಟಿಸಿದ ಕ್ರೈಸ್ತ ಉದ್ಯಮಿ ಗ್ಯಾಬ್ರಿಯಲ್ ಫೇಬಿಯನ್ ನಜರತ್

ಉಡುಪಿ : ಭಗವಂತನ ಮೇಲಿನ ಭಕ್ತಿ ಸೀಮಾತೀತ,ಧರ್ಮಾತೀತ ಎಂಬುದು ಮತ್ತೊಮ್ಮೆ ಸಾಭೀತಾಗಿದೆ.ಉಡುಪಿ ಜಿಲ್ಲೆಯ ಶಿರ್ವದಲ್ಲಿ ಕ್ರೈಸ್ತ ಉದ್ಯಮಿಯೊಬ್ರು ದೇವಸ್ಥಾನ ನಿರ್ಮಿಸುವ ಮೂಲಕ ಭಕ್ತಿ ಧರ್ಮಾತೀತ ಎಂಬುದನ್ನು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ. ಕ್ರೈಸ್ತ ಉದ್ಯಮಿ ಗ್ಯಾಬ್ರಿಯಲ್‌ ಫೇಬಿಯನ್‌ ನಜರತ್‌ ಶಿರ್ವ ಮುಖ್ಯರಸ್ತೆಯ ಅಟ್ಟಿಂಜ ಕ್ರಾಸ್‌ ಬಳಿ ಕಟ್ಟಿಸಿ ಲೋಕಾರ್ಪಣೆಗೊಂಡ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಜೋತಿಷ ವಿದ್ವಾನ್‌ ಉಡುಪಿ ಕನ್ನರ್ಪಾಡಿ ವೇ|ಮೂ|ಸಂದೀಪ್‌ ಉಪಾಧ್ಯಾಯ ಅವರ ನೇತೃತ್ವದಲ್ಲಿ ಬ್ರಹ್ಮಕಲಶವು ಜು.16ರ ಶುಕ್ರವಾರ ಸಂಪನ್ನಗೊಂಡಿದೆ. ಶ್ರೀ ಸಿದ್ಧಿ ವಿನಾಯಕನ ಸನ್ನಿಧಿಯಲ್ಲಿ ಗಣಹೋಮ …

ಉಡುಪಿ ಗಣಪತಿ ದೇವಸ್ಥಾನ ಕಟ್ಟಿಸಿದ ಕ್ರೈಸ್ತ ಉದ್ಯಮಿ ಗ್ಯಾಬ್ರಿಯಲ್ ಫೇಬಿಯನ್ ನಜರತ್ Read More »

ಪಾಲ್ತಾಡು : ರಾಮಣ್ಣ ರೈ ವೈಪಾಲ ನಿಧನ

ಪ್ರಗತಿಪರ ಕೃಷಿಕ, ನೆಟ್ಟಾರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ,ಪೆರುವಾಜೆ ಜಲದುರ್ಗಾ ದೇವಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾಮಣ್ಣ ರೈ ವೈಪಾಲ (71 ವ.) ಜು.17ರಂದು ನಿಧನರಾದ ರು. ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ.

error: Content is protected !!
Scroll to Top