ಪ್ರಕೃತಿ-ವಿಜ್ಞಾನ

ಇಂದಿನಿಂದ 2 ದಿನ ದಕ್ಷಿಣ ಕನ್ನಡ ಉಡುಪಿ ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಭಾರೀ ಮಳೆಯ ನಿರೀಕ್ಷೆ

ಕರಾವಳಿ ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡು ಮತ್ತು ಬಹುತೇಕ ಜಿಲ್ಲೆಗಳಲ್ಲಿ ಮೇ 5 ರಿಂದ ಮೇ 7 ರವರೆಗೆ ಗುಡುಗುಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ ದಕ್ಷಿಣಕನ್ನಡ ಮತ್ತಿತರ ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಗಾಳಿಯ ವೇಗವೂ ಕೂಡಾ ಅಧಿಕವಾಗಿರಲಿದೆ. ಅದು ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಡುಪಿ …

ಇಂದಿನಿಂದ 2 ದಿನ ದಕ್ಷಿಣ ಕನ್ನಡ ಉಡುಪಿ ಸೇರಿದಂತೆ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಭಾರೀ ಮಳೆಯ ನಿರೀಕ್ಷೆ Read More »

ಗಡಾಯಿಕಲ್ಲು ಗಡ ಗಡ | ಅಪಾಯದಲ್ಲಿದೆಯಾ ನರಸಿಂಹ ಗಡ ?

ದಕ್ಷಿಣಕನ್ನಡ ಜಿಲ್ಲೆಯ ಗಡಾಯಿಕಲ್ಲು ಬೆಟ್ಟದಲ್ಲಿ ಬಿರುಕು ಬಿಟ್ಟಿದ್ದು, ಬೆಟ್ಟದ ಒಂದು ಪಾರ್ಶ್ವದಲ್ಲಿ ಗುಡ್ಡದ ಮಣ್ಣು‌ ಕುಸಿದು ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇಲ್ಲಿನ ಸ್ಥಳೀಯರ ಮಾಹಿತಿ ಪ್ರಕಾರ ಈ ಪರಿಸರದಲ್ಲಿ ಸ್ಪೋಟದ ಭಾರೀ ಶಬ್ದ ಕೇಳಿಸಿಕೊಂಡಿದೆ ಎನ್ನಲಾಗಿದೆ. ಚಾರಣಪ್ರಿಯರ ಹಾಟ್ ಸ್ಪಾಟ್ ಆಗಿರುವ ಬೆಳ್ತಂಗಡಿಯ ಈ ಪ್ರವಾಸಿತಾಣ ನರಸಿಂಹಗಢ ಎಂದೂ ಕರೆಯಲ್ಪಡುತ್ತದೆ. ಭೂಮಿಯಿಂದ 1700 ಅಡಿ ಎತ್ತರದಲ್ಲಿರುವ ನರಸಿಂಹಗಡ ಗಡಾಯಿಕಲ್ಲಿನಲ್ಲಿ ಭಾರೀ ಶಬ್ಧ ಕೇಳಿಬಂದಿದ್ದು,ಕಲ್ಲಿನ ಒಂದು ಪಾರ್ಶ್ವದಲ್ಲಿ ಕುಸಿತವಾಗಿದೆ ಎಂದು ಹೇಳಲಾಗಿದೆ. ಕಳೆದ ವರ್ಷವೂ ಇದೇ ರೀತಿಯಲ್ಲಿ …

ಗಡಾಯಿಕಲ್ಲು ಗಡ ಗಡ | ಅಪಾಯದಲ್ಲಿದೆಯಾ ನರಸಿಂಹ ಗಡ ? Read More »

ಎಷ್ಟೇ ಪ್ರತಿಕೂಲ ವಾತಾವರಣದಲ್ಲೂ, ಸೂರ್ಯ-ಚಂದ್ರ ಇರುವ ವರೆಗೂ ಬದುಕುಳಿಯಬಲ್ಲ ಜೀವಿ ಯಾವುದು ಗೊತ್ತಾ?!

ಭೂಮಿಯ ಮೇಲೆ ಇರುವ ಜೀವಿಗಳಲ್ಲಿ ಅತ್ಯಂತ ಕಠಿನತಮ ಜೀವಿ ಯಾವುದು? ಇದೀಗ ಜೀವಂತ ಇರುವ ಪ್ರಾಣಿಗಳಲ್ಲಿ ಯಾವ ಜೀವಿ ವಿಶ್ವದ ಎಕ್ಸ್ಟ್ರೀಮ್ ಅನ್ನುವಂತಹ ವಾತಾವರಣಗಳನ್ನು ಕೂಡ ತಾಳಿಕೊಂಡು ಮತ್ತೆ ಜೀವಂತವಾಗಿ ಬರಬಲ್ಲದು ? ಯಾವುದೇ ಉತ್ಪಾತಗಳಾದರೂ ಬದುಕುಳಿಯಬಲ್ಲ ಜೀವಿ ಯಾವುದಾದರೂ ಇದೆಯಾ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಅಂತಹ ಜೀವ ಪ್ರಭೇದವೊಂದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಮುಖ್ಯವಾಗಿ ಈ ಜೀವಿಯನ್ನು ​ಸೂರ್ಯ-ಚಂದ್ರ ಇರುವ ವರೆಗೂ ಉಳಿಯುವ ಜೀವಿ ಎನ್ನಲಾಗುತ್ತಿದೆ. ಭೂಮಿ ಮೇಲಿನ ಜೀವಿಗಳೆಲ್ಲ ನಾಶವಾದ ಬಳಿಕವೂ …

ಎಷ್ಟೇ ಪ್ರತಿಕೂಲ ವಾತಾವರಣದಲ್ಲೂ, ಸೂರ್ಯ-ಚಂದ್ರ ಇರುವ ವರೆಗೂ ಬದುಕುಳಿಯಬಲ್ಲ ಜೀವಿ ಯಾವುದು ಗೊತ್ತಾ?! Read More »

ಜೂ.4‌ | ಸವಣೂರು, ನೆಲ್ಯಾಡಿ, ಕಡಬ, ಸುಬ್ರಹ್ಮಣ್ಯ ಉಪ ಕೇಂದ್ರದಲ್ಲಿ ವಿದ್ಯುತ್ ನಿಲುಗಡೆ

ಪುತ್ತೂರು: 33ಕೆವಿ ಪುತ್ತೂರು-ಕಡಬ ಏಕಮಾರ್ಗವನ್ನು ದ್ವಿಮಾರ್ಗಗೊಳಿಸುವ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಹಾಗೂ 33ಕೆವಿ ಮಾರ್ಗದ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ.4ರಂದು ಪೂರ್ವಾಹ್ನ 10 ರಿಂದ ಅಪರಾಹ್ನ 5 ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ 33/11ಕೆವಿ ಸವಣೂರು, ನೆಲ್ಯಾಡಿ, ಕಡಬ ಮತ್ತು ಸುಬ್ರಹ್ಮಣ್ಯ ಉಪ ವಿದ್ಯುತ್ ಕೇಂದ್ರದಿಂದ ಹೊರಡುವ ಎಲ್ಲಾ 11ಕೆವಿ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಗಮನಿಸಬೇಕೆಂದು ಪ್ರಕಟಣೆ ತಿಳಿಸಿದೆ.

ಕೇರಳ : ಗರ್ಭಿಣಿ ಆನೆಯ ಹತ್ಯೆ| ಅಮಾನವೀಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ

ತಿರುವನಂತಪುರ: ಗರ್ಭ ಧರಿಸಿದ್ದ ಆನೆಯೊಂದರ ಬಾಯೊಳಗೆ ಸ್ಫೋಟಕ ಸಿಡಿಸಿ ಈ ಪ್ರಾಣಿಯ ಮೇಲೆ ಕೆಲ ದುಷ್ಕರ್ಮಿಗಳು ವಿನಾ ಕಾರಣದ ಕ್ರೌರ್ಯ ಮೆರೆದಿದ್ದಾರೆ. ಸ್ಫೋಟಕ ಅಡಗಿಸಿಟ್ಟ ಅನಾನಸ್‌ ಹಣ್ಣು ಸೇವಿಸಿದಾಗ ಅದು ಆನೆಯ ಬಾಯಿಯಲ್ಲಿ ಸ್ಫೋಟಿಸಿದೆ. ತತ್ಪರಿಣಾಮ ಗಬ್ಬದ ಆನೆ ತನ್ನೊಡಲ ಕಂದನ ಸಮೇತ ದುರಂತ ಸಾವು ಕಂಡಿದೆ. ಕಳೆದ ಬುಧವಾರ ನಡೆದಿರುವ ಈ ಘಟನೆಯ ವಿವರಗಳನ್ನು ಮಲಪ್ಪುರಂ ಜಿಲ್ಲೆಯ ಅರಣ್ಯಾಧಿಕಾರಿ ಮೋಹನ್‌ ಕೃಷ್ಣನ್‌ ಅವರು ಫೇಸ್‌ಬುಕ್‌ ಮೂಲಕ ಬಹಿರಂಗಪಡಿಸಿದ ಬಳಿಕವೇ ಹೊರ ಜಗತ್ತಿಗೆ ಗೊತ್ತಾಗಿದೆ. ಅರಣ್ಯ ತೊರೆದಿದ್ದ …

ಕೇರಳ : ಗರ್ಭಿಣಿ ಆನೆಯ ಹತ್ಯೆ| ಅಮಾನವೀಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ Read More »

ಕಡಬ ತಾಲೂಕಿಗೂ ಕಾಲಿಟ್ಟ ಮಿಡತೆಗಳ ಹಿಂಡು

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯ ವ್ಯಕ್ತಿಯೊಬ್ಬರ ತೋಟದಲ್ಲಿ ಮಿಡತೆಗಳ ಗುಂಪು ಇರುವುದು ಪತ್ತೆಯಾಗಿದೆ. ರೆಂಜಿಲಾಡಿಯ ವಿಶ್ವನಾಥ ಎಂಬವರ ತೋಟದಲ್ಲಿ ಗುಂಪಾಗಿ ಆಗಮಿಸಿದ ಮಿಡತೆಗಳು ಮರದ ಎಲೆಗಳನ್ನು ತಿನ್ನುತ್ತಿವೆ. ಈಗಾಗಲೇ ನೆರೆಯ ಪಾಕಿಸ್ತಾನದಿಂದ ಬಂದಿರುವ ಮರುಭೂಮಿ ರಕ್ಕಸ ಮಿಡತೆಗಳು ಉತ್ತರ ಭಾರತದ ಒಂದೊಂದೇ ರಾಜ್ಯಗಳಿಗೆ ತಮ್ಮ ಸಾಮ್ರಾಜ್ಯ ವಿಸ್ತರಿಸುತ್ತಿವೆ. ಈಗಾಗಲೇ 7 ರಾಜ್ಯಗಳಲ್ಲಿ ತನ್ನ ಹಾವಳಿ ಪ್ರಾರಂಭಿಸಿರುವ ಮಿಡತೆಗಳು ಕೃಷಿ ಭೂಮಿಯಲ್ಲಿನ ಬೆಳೆಗಳಿಗೆ ಮುತ್ತಿಗೆ ಹಾಕಿವೆ. ಮರುಭೂಮಿ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುವ ಕೃಷಿ ಬೆಳೆಗಳಿಗೆ ಮಾರಕವಾಗಿರುವ ಈ …

ಕಡಬ ತಾಲೂಕಿಗೂ ಕಾಲಿಟ್ಟ ಮಿಡತೆಗಳ ಹಿಂಡು Read More »

ಲಾಕ್ ಡೌನ್ ನ ಸಮಯದಲ್ಲಿ ವನ್ಯಲೋಕದಲ್ಲೊಂದು ಕಲಿಕೆ | ಸವಣೂರಿನ ಮೂರನೇ ಕ್ಲಾಸಿನ ಆರಾಧ್ಯಳ ಅರಣ್ಯ ಪಾಠ

ಆರಾಧ್ಯ ಪ್ರಸ್ತುತ ಕಾಣಿಯೂರಿನ ಪ್ರಗತಿ ಇಂಗ್ಲೀಷ್ ಮೀಡಿಯಂ ಸ್ಕೂಲಿನಲ್ಲಿ ಮೂರನೆಯ ತರಗತಿಯ ವಿದ್ಯಾರ್ಥಿನಿ. ಲಾಕ್ ಡೌನ್ ಸಮಯವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬಹುದು ಎಂದು ಯೋಚಿಸುತ್ತಿರುವಾಗ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ತಿಳಿದುಕೊಂಡರೆ ಹೇಗೆ ಎಂಬ ಯೋಚನೆ ಬಂತು. ತಂದೆ ತಾಯಿಯಲ್ಲಿ ಈ ಬಗ್ಗೆ ವಿಮರ್ಶೆ. ಒಂದೇ ದಿನದಲ್ಲಿ ಬ್ಲೂಪ್ರಿಂಟ್ ರೆಡಿ. ಏನು ಮಾಡೋಣ? ಅದು ಮಾಡಬಹುದು, ಇದನ್ನು ಮಾಡಲೇಬೇಕು, ಇದು ಮಾಡಿದರೆ ಹೆಂಗೆ ? ಹೀಗೆ, ನಮ್ಮ ಸುತ್ತಮುತ್ತ ನೂರಾರು ರೀತಿಯ ಕೀಟಗಳು, ಪತಂಗಗಳು, ಜೀವಜಂತುಗಳು ವಾಸಿಸುತ್ತಿರುತ್ತವೆ. ಅವುಗಳ ಬಗ್ಗೆ …

ಲಾಕ್ ಡೌನ್ ನ ಸಮಯದಲ್ಲಿ ವನ್ಯಲೋಕದಲ್ಲೊಂದು ಕಲಿಕೆ | ಸವಣೂರಿನ ಮೂರನೇ ಕ್ಲಾಸಿನ ಆರಾಧ್ಯಳ ಅರಣ್ಯ ಪಾಠ Read More »

ಎರಡು ಗ್ರಾ.ಪಂ.ಗೊಂದು ರೈತಮಿತ್ರರ ನೇರ ನೇಮಕ | ಹಡೀಲು ಬಿಟ್ಟ ಜಮೀನಿನ ಸಮೀಕ್ಷೆಗೆ ಸೂಚನೆ – ಮಂಗಳೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಾಯ ಮಾಡದೇ ಬೀಳು ಬಿಟ್ಟಿರುವ ಕೃಷಿ ಜಮೀನುಗಳ ಕುರಿತು ಸಮೀಕ್ಷೆ ನಡೆಸಿ, ಸಮಗ್ರ ವರದಿ ಸಲ್ಲಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಜಿಲ್ಲೆಯಲ್ಲಿನ ರೈತರ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಬೀಳು ಬಿಟ್ಟಿರುವ ಜಮೀನುಗಳ ಮಾಲೀಕರಿಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಬ್ಸಿಡಿ, ನೆರವು ಪಾವತಿ …

ಎರಡು ಗ್ರಾ.ಪಂ.ಗೊಂದು ರೈತಮಿತ್ರರ ನೇರ ನೇಮಕ | ಹಡೀಲು ಬಿಟ್ಟ ಜಮೀನಿನ ಸಮೀಕ್ಷೆಗೆ ಸೂಚನೆ – ಮಂಗಳೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ Read More »

ದಕ್ಷಿಣಕನ್ನಡ ಉಡುಪಿ ತಂಪು ತಂಪು | ಅಲ್ಲಲ್ಲಿ ಸಿಡಿಲು ಗುಡುಗು, ಗಾಳಿ ಮಳೆ

ಇವತ್ತಿಗೆ ಇಡೀ ದಕ್ಷಿಣಕನ್ನಡ ಉಡುಪಿ ತಂಪು ತಂಪು. ಎಲ್ಲಾ ಕಡೆಯೂ ಹೆಚ್ಚು ಕಮ್ಮಿ ಮಳೆ ಸುರಿದಿದೆ. ಕೆಲವು ಕಡೆ ನೆಲ ಚಂಡಿಯಾಗುವಷ್ಟು ಮಾತ್ರ ಬಂದಿದ್ದರೆ, ಕೊಯ್ಯೂರು, ಗೇರುಕಟ್ಟೆ, ನಾರಾವಿ, ಕೊಕ್ಕಡ ಸುತ್ತಮುತ್ತ ಒಂದು ಗಂಟೆಗೂ ಅಧಿಕ ಜಡಿ ಬೊಳ್ಳ ಬರ್ಸ ಬಂದಿದೆ. ಕಳೆದ ಕೆಲವು ಮಳೆಗಳು ಕೆಲವೇ ಕಡೆಗಳಲ್ಲಿ ಸುರಿದಿದ್ದವು. ಈ ಸಲ ಮಳೆರಾಯ ಅಂತಹಾ ಯಾವುದೇ ವಿನಾಯಿತಿ ತೋರದೆ ಎಲ್ಲ ಕಡೆಯಲ್ಲಿಯೂ ಹನಿಗಳ ಸಿಂಚನ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ವಿವಿಧೆಡೆಗಳಲ್ಲಿ ರವಿವಾರ ಸಂಜೆ ಗುಡುಗು, …

ದಕ್ಷಿಣಕನ್ನಡ ಉಡುಪಿ ತಂಪು ತಂಪು | ಅಲ್ಲಲ್ಲಿ ಸಿಡಿಲು ಗುಡುಗು, ಗಾಳಿ ಮಳೆ Read More »

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಆಹಾರವಿಲ್ಲದೆ ತಲೆ ಕೆರೆದುಕೊಂಡು ಕೂತಿದ್ದ ಕೋತಿಗಳು | ಸಹಾಯಕ್ಕೆ ಧಾವಿಸಿದ ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿ : ಪ್ರಾಣಿಗಳು ಯಾವತ್ತೂ ಮನುಷ್ಯನಿಗೆ ಡಿಪೆಂಡ್ ಆಗಿರಲಿಲ್ಲ. ಮನುಷ್ಯ ಮಾತ್ರ ಪ್ರಾಣಿಗಳ ಮೇಲೆ ಹಲವು ರೀತಿಯಲ್ಲಿ ಅವಲಂಬಿಸಿದ್ದ. ಅದು ಆತನ ಆಹಾರಕ್ಕೆ ಆಗಿರಬಹುದು, ಅಥವಾ ತನ್ನ ಬೇಟೆಗೆ ಸಹಾಯಕ್ಕಾಗಿ ಇರಬಹುದು ಅಥವಾ ತಮ್ಮ ಸರಕು ಸಾಗಾಟಕ್ಕೆ, ರಕ್ಷಣೆಗೆ, ಯುದ್ಧಕ್ಕೆ ಮತ್ತು ವಿನೋದಕ್ಕೆ ! ಆದರೆ ಈಗ ನಾವು ಪ್ರತಿ ಜೀವ ಸಂಕುಲದ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದೇವೆ. ಈಗ ಎಲ್ಲವೂ ಮಾನವ ನಿರ್ದೇಶಿತ. ನದಿಯಲ್ಲಿ ನೀರಿಲ್ಲ. ಕಾಡು ಬತ್ತಿ ಹೋಗಿದೆ. ಕಾಡಿನಲ್ಲಿ ಆಹಾರ ಹುಡುಕಿ ಬದುಕಬೇಕಾದ ಪ್ರಾಣಿಗಳು ಮನುಷ್ಯರತ್ತ …

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಆಹಾರವಿಲ್ಲದೆ ತಲೆ ಕೆರೆದುಕೊಂಡು ಕೂತಿದ್ದ ಕೋತಿಗಳು | ಸಹಾಯಕ್ಕೆ ಧಾವಿಸಿದ ಶಾಸಕ ಹರೀಶ್ ಪೂಂಜಾ Read More »

error: Content is protected !!
Scroll to Top