ಮಂಗಳೂರು ಸಮಾಚಾರ

ಕೃಷಿಸಂಜೀವಿನಿ ಯೋಜನೆಯ ಸೌಲಭ್ಯ ಪಡೆಯಲು ಸೂಚನೆ

ಕೃಷಿಕರಿಗೆ ಕೃಷಿ ಸಮಸ್ಯೆಗೆ ಪರಿಹಾರ ಪಡೆಯಲು ಅನುಕೂಲವಾಗುವಂತೆ ಕೃಷಿ ಸಂಜೀವಿನಿ ಎಂಬ ನೂತನ ಯೋಜನೆಯು ಜಾರಿಗೆ ಬಂದಿದೆ. ರೈತರು ತಮ್ಮ ಜಮೀನಿನಲ್ಲಿ ಮಣ್ಣು ಪರೀಕ್ಷೆ, ಕೀಟ ಮತ್ತು ರೋಗಗಳು ಸೇರಿದಂತೆ ಮತ್ತಿತರ ಸಮಸ್ಯೆಗಳು ಕಂಡು ಬಂದಲ್ಲಿ ಉಚಿತ ಸಹಾಯ ವಾಣಿ ಸಂಖ್ಯೆ: 155313ಕ್ಕೆ ಕರೆ ಮಾಡಿದಲ್ಲಿ ತಮ್ಮ ಜಮೀನಿಗೆ ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯದ ಸಿಬ್ಬಂದಿ ವರ್ಗ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡಲಿದ್ದಾರೆ. ಸಹಾಯವಾಣಿ ಸಂಖ್ಯೆ ಸಂಪರ್ಕ ಸಿಗದಿದ್ದಲ್ಲಿ ದೂ.ಸಂ: 0824-243602/2423604ಗೆ ಕರೆ ಮಾಡಿ ರೈತರು …

ಕೃಷಿಸಂಜೀವಿನಿ ಯೋಜನೆಯ ಸೌಲಭ್ಯ ಪಡೆಯಲು ಸೂಚನೆ Read More »

ಕರಾವಳಿಯ ವಿವಿದೆಡೆ ಭಾರೀ ಗಾಳಿ ,ಮಳೆ,ಸಿಡಿಲಿಗೆ ದನ ಸಾವು,ವಿವಿದೆಡೆ ಮುರಿದು ಬಿದ್ದ ಮರಗಳು,ಮನೆಗೆ ಹಾನಿ

ಕರಾವಳಿಯ ವಿವಿದೆಡೆ ಭಾರೀ ಗಾಳಿ ,ಮಳೆಯಾಗಿದ್ದು,ಬೆಳ್ತಂಗಡಿಯಲ್ಲಿ ಸಿಡಿಲಿಗೆ ದನವೊಂದು ಸಾವಿಗೀಡಾಗಿದೆ,ಮನೆಹೊಂದರ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ತೋಟಗಳಲ್ಲಿ ತೆಂಗು,ಅಡಿಕೆ ಸೇರಿದಂತೆ ವಿವಿದ ಮರಗಳು ಮುರಿದು ಬಿದ್ದಿದೆ. ಕಡಬ ತಾಲೂಕಿನ ಕೊಯಿಲದಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿಯಾಗಿದೆ. ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಕೊಡೆಂಕಿರಿ ಲೋಕಯ್ಯ ನಾಯ್ಕ ಎಂಬವರ ಮನೆಗೆ ಮೇ. 5ರಂದು ಸಂಜೆ ಬೀಸಿದ ಗಾಳಿ ಮಳೆಗೆ ಮರಬಿದ್ದು, ಪಕ್ಕಾಸು, ಹಂಚುಗಳಿಗೆ ಹಾನಿಯಾಗಿದೆ. ಮಳೆ, ಗಾಳಿಗೆ ಮೂಲ್ಕಿ ಹೋಬಳಿಯ ಅತಿಕಾರಿಬೆಟ್ಟು ಗ್ರಾಪಂ ವ್ಯಾಪ್ತಿಯ ಮೈಲೊಟ್ಟು ಬಳಿ ಮೀನಾಕ್ಷಿ ಮೊಯಿಲಿ …

ಕರಾವಳಿಯ ವಿವಿದೆಡೆ ಭಾರೀ ಗಾಳಿ ,ಮಳೆ,ಸಿಡಿಲಿಗೆ ದನ ಸಾವು,ವಿವಿದೆಡೆ ಮುರಿದು ಬಿದ್ದ ಮರಗಳು,ಮನೆಗೆ ಹಾನಿ Read More »

ಬಾಡಿಗೆ ಕೇಳಿದ ಮಹಿಳೆಗೆ ರೌಡಿಗಳನ್ನು ಬಿಟ್ಟು ಬೆದರಿಕೆ: “ಬಾಡಿಗೆ ಕೇಳಿದರೆ ಬಾಂಬ್ ಇಟ್ಟು ಬಿಲ್ಡಿಂಗ್‌ ಉಡಾಯಿಸುವೆ ” ಎಂದರಂತೆ ಮಾಜಿ ಸಚಿವರು

ಮಂಗಳೂರು: ಕಟ್ಟಡದ ಬಾಡಿಗೆ ನೀಡುವಂತೆ ಕೇಳಿದ ಮಹಿಳೆ ಮೇಲೆ ಸ್ಥಳೀಯ ರೌಡಿಗಳನ್ನು ಬಿಟ್ಟು “ಬಾಡಿಗೆ ಕೇಳಿದರೆ ಬಿಲ್ಡಿಂಗ್‌ಗೆ ಬಾಂಬ್ ಇಟ್ಟು ಉರುಳಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ ಎಂದು ಮಾಜಿ ಸಚಿವ ನಾಗರಾಜ ಶೆಟ್ಟಿ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಭೂಮಿ ರಾಮಚಂದ್ರ ಅವರು ಮಾಜಿ ಸಚಿವ ನಾಗರಾಜ ಶೆಟ್ಟಿ ವಿರುದ್ಧ ದೂರು ನೀಡಿದ್ದಾರೆ. ಅತ್ತಾವರ ರಸ್ತೆಯ ಕೆ.ಎಂ.ಸಿ ಆಸ್ಪತ್ರೆ ಸಮೀಪ ಭೂಮಿ ರಾಮಚಂದ್ರಪ್ಪ ಎಂಬವರಿಗೆ ಸೇರಿದ ಬಹು ಮಹಡಿ ವಾಣಿಜ್ಯ ಕಟ್ಟಡವಿದ್ದು, …

ಬಾಡಿಗೆ ಕೇಳಿದ ಮಹಿಳೆಗೆ ರೌಡಿಗಳನ್ನು ಬಿಟ್ಟು ಬೆದರಿಕೆ: “ಬಾಡಿಗೆ ಕೇಳಿದರೆ ಬಾಂಬ್ ಇಟ್ಟು ಬಿಲ್ಡಿಂಗ್‌ ಉಡಾಯಿಸುವೆ ” ಎಂದರಂತೆ ಮಾಜಿ ಸಚಿವರು Read More »

ಮೇ.10ರಿಂದ ಆನ್ ಲೈನ್ ತರಗತಿ | ಮಂಗಳೂರು ವಿ.ವಿ‌.ನಿರ್ಧಾರ

ಮಂಗಳೂರು: ಮಂಗಳೂರು ವಿವಿಯ ಎಲ್ಲ ಸಂಯೋಜಿತ, ಸ್ವಾಯತ್ತ, ಘಟಕ ಕಾಲೇಜುಗಳ ಪದವಿ ವಿದ್ಯಾರ್ಥಿಗಳಿಗೆ ಆನ್​ಲೈನ್ ತರಗತಿಗಳನ್ನು ಮೇ 10 ರಿಂದ ನಡೆಸಲು ನಿರ್ಧರಿಸಲಾಗಿದೆ. ಮಂಗಳೂರು ವಿವಿ ಪ್ರಾಂಶುಪಾಲರ ಆನ್‌ಲೈನ್ ಸಭೆಯಲ್ಲಿ ಪದವಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸಲು ತೀರ್ಮಾನಿಸಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲ ಸಂಯೋಜಿತ ಘಟಕ ಕಾಲೇಜುಗಳಲ್ಲಿ 2020-21ನೇ ಸಾಲಿನ ಸ್ನಾತಕ‌ ಕಾರ್ಯಕ್ರಮಗಳ ದ್ವಿತೀಯ, ಚತುರ್ಥ ಮತ್ತು ಆರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ಮೇ 10ರಿಂದ ಆರಂಭವಾಗಲಿದೆ. ಉಳಿದಂತೆ ಪ್ರಥಮ, ತೃತೀಯ ಮತ್ತು ಐದನೇ ಸೆಮಿಸ್ಟರ್ …

ಮೇ.10ರಿಂದ ಆನ್ ಲೈನ್ ತರಗತಿ | ಮಂಗಳೂರು ವಿ.ವಿ‌.ನಿರ್ಧಾರ Read More »

ಕೋವಿಡ್ 19 ನಿಯಮ ಉಲ್ಲಂಘನೆ ಆರೋಪ |ಬೀಚ್‌ನಲ್ಲಿ ಮದುವೆ ಪಾರ್ಟಿಗೆ ಅಧಿಕಾರಿಗಳ ದಾಳಿ

ಮಂಗಳೂರಿನ ಕುಳಾಯಿ ಶೋರ್ ಬೀಚ್ ರೆಸಾರ್ಟ್‌ನಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ ಎನ್ನಲಾದ ಆರೋಪದಲ್ಲಿ ಮದುವೆ ಪಾರ್ಟಿಗೆ ಮಂಗಳವಾರ ಅಧಿಕಾರಿಗಳು ದಾಳಿ ನಡೆಸಿ ಕೇಸು ದಾಖಲಿಸಿದ್ದಾರೆ. ಶೋರ್ ರೆಸಾರ್ಟ್‌ನಲ್ಲಿ ಮಂಗಳವಾರ ಸಂಜೆ ಮದುವೆ ಪಾರ್ಟಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಮಾರ್ಗಸೂಚಿ ಉಲ್ಲಂಘಿಸಿ ಅಧಿಕ ಸಂಖ್ಯೆಯಲ್ಲಿ ಜನ ಸೇರಿಸಲಾಗಿತ್ತು. ಅಲ್ಲದೆ ಡಿಜೆ, ಮದ್ಯಪಾನದ ವ್ಯವಸ್ಥೆ ಮಾಡಲಾಗಿತ್ತು‌ ಎನ್ನಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಮಾರ್ಗಸೂಚಿ ಉಲ್ಲಂಘಿಸಿ ಅಧಿಕ ಸಂಖ್ಯೆಯಲ್ಲಿ ಜನ ಸೇರಿಸಲಾಗಿತ್ತು. ಇದು ಮಾತ್ರವಲ್ಲದೆ ಡಿಜೆ, ಮದ್ಯಪಾನ ವ್ಯವಸ್ಥೆ …

ಕೋವಿಡ್ 19 ನಿಯಮ ಉಲ್ಲಂಘನೆ ಆರೋಪ |ಬೀಚ್‌ನಲ್ಲಿ ಮದುವೆ ಪಾರ್ಟಿಗೆ ಅಧಿಕಾರಿಗಳ ದಾಳಿ Read More »

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್; ಮಂಗಳೂರಿನಲ್ಲಿ ಆರು ಮಂದಿ ಬುಕ್ಕಿಗಳ ಬಂಧನ

ಮೊಬೈಲ್ ಆ್ಯಪ್‌ಗಳ ಮೂಲಕ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿದ್ದ ಆರೋಪದಲ್ಲಿ ಆರು ಮಂದಿ ಬುಕ್ಕಿಗಳನ್ನು ಮಂಗಳೂರು ನಗರ ಸಿಸಿಬಿ ಮತ್ತು ಇಕೊನಾಮಿಕ್ ಆ್ಯಂಡ್ ನಾರ್ಕೊಟಿಕ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಸೋಮೇಶ್ವರ ಕುಂಪಲದ ವಿಕ್ರಂ, ಕೃಷ್ಣಾಪುರದ ಧನಪಾಲ್ ಶೆಟ್ಟಿ, ಮೂಲತಃ ರಾಜಸ್ಥಾನದ ಪ್ರಸ್ತುತ ಸುರತ್ಕಲ್‌ನಲ್ಲಿ ವಾಸವಾಗಿರುವ ಕಮಲೇಶ್, ಮುಂಬೈಯ ಹರೀಶ್ ಶೆಟ್ಟಿ, ಅಶೋಕ್ ನಗರದ ಪ್ರೀತೇಶ್ ಯಾನೆ ಪ್ರೀತಂ, ಉರ್ವ ಮಾರಿಗುಡಿಯ ಅವಿನಾಶ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ …

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್; ಮಂಗಳೂರಿನಲ್ಲಿ ಆರು ಮಂದಿ ಬುಕ್ಕಿಗಳ ಬಂಧನ Read More »

ಕಾರು- ಬೈಕ್ ಡಿಕ್ಕಿ | ಬೈಕ್ ಸವಾರ ಮೃತ್ಯು,ಇನ್ನೋರ್ವ ಗಂಭೀರ

ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಸವಾರ ಮೃತಪಟ್ಟು ಇನ್ನೋರ್ವ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರ ಹೊಸಬೆಟ್ಟು ಎಂಬಲ್ಲಿ ನಡೆದಿದೆ. ಮೃತರನ್ನು ಉಪ್ಪಳ ಗೇಟ್ ಸಮೀಪದ ಅಬ್ದುಲ್ ರಶೀದ್ (65) ಎಂದು ಗುರುತಿಸಲಾಗಿದೆ. ಅವರ ಸಂಬಂಧಿ ಮುಹಮ್ಮದ್ ಅನೀಸ್ (24) ಗಾಯಗೊಂಡಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ತಲಪಾಡಿ ಕಡೆಗೆ ತೆರಳುತ್ತಿದ್ದ ಬೈಕ್ ಮತ್ತು ಕುಂಬಳೆಯತ್ತ ಹೋಗುತ್ತಿದ್ದ ಕಾರಿನ ನಡುವೆ ಅಪಘಾತ ಉಂಟಾಗಿದೆ. ಢಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ರಶೀದ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, …

ಕಾರು- ಬೈಕ್ ಡಿಕ್ಕಿ | ಬೈಕ್ ಸವಾರ ಮೃತ್ಯು,ಇನ್ನೋರ್ವ ಗಂಭೀರ Read More »

ಮಂಗಳೂರು ದಕ್ಕೆಯಲ್ಲಿ ಮೀನು ಖರೀದಿಗೆ ಸಾರ್ವಜನಿಕರಿಗಿಲ್ಲ ಅವಕಾಶ : ದ.ಕ. ಜಿಲ್ಲಾಧಿಕಾರಿ

ಮಂಗಳೂರಿನ ಬಂದರ್ ದಕ್ಕೆಯ ಮೀನುಗಾರಿಕಾ ಬಂದರಿನಲ್ಲಿ ಚಿಲ್ಲರೆ ಮೀನು ಮಾರಾಟಗಾರರು ಮೀನು ಮಾರಾಟ ಮಾಡುವುದು ಹಾಗೂ ಸಾರ್ವಜನಿಕರು ಅವರಿಂದ ಮೀನು ಖರೀದಿಸುವುದನ್ನು ನಿಷೇಧಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ. ತಿಳಿಸಿದ್ದಾರೆ. ಹಳೆ ಬಂದರಿನಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡುವ ಕುರಿತು ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಾಸಕರು ಹಾಗೂ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳ ಜೊತೆ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾರ್ವಜನಿಕರು ಮೀನುಗಾರಿಕಾ ಬಂದರಿನಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ …

ಮಂಗಳೂರು ದಕ್ಕೆಯಲ್ಲಿ ಮೀನು ಖರೀದಿಗೆ ಸಾರ್ವಜನಿಕರಿಗಿಲ್ಲ ಅವಕಾಶ : ದ.ಕ. ಜಿಲ್ಲಾಧಿಕಾರಿ Read More »

ದ.ಕ.: ಕೋವಿಡ್ ರೂಲ್ಸ್ ಬ್ರೇಕ್ | ಸೋಮವಾರ 73 ವಾಹನಗಳು ವಶ

ದ.ಕ.ಜಿಲ್ಲೆಯಲ್ಲಿ ಸೋಮವಾರ ಕೋವಿಡ್ -19 ಮಾರ್ಗಸೂಚಿ ಉಲ್ಲಂಘನೆಯಡಿ 26 ಕೇಸು ದಾಖಲಿಸಲಾಗಿದೆ. ಅಲ್ಲದೆ 659 ಮಾಸ್ಕ್ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, 73 ವಾಹನಗಳನ್ನು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ 10, ಮಾಸ್ಕ್ ಉಲ್ಲಂಘನೆ 432 ಕೇಸ್, ರಾಷ್ಟ್ರೀಯ ವಿಪತ್ತು ಉಲ್ಲಂಘನೆ 14 ಮತ್ತು 51 ದ್ವಿಚಕ್ರ, 1 ತ್ರಿಚಕ್ರ, 1 ನಾಲ್ಕು ಚಕ್ರದ ವಾಹನ ಸಹಿತ 53 ವಾಹನ ವಶಪಡಿಸಲಾಗಿದೆ. ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್ ಮಾರ್ಗಸೂಚಿ …

ದ.ಕ.: ಕೋವಿಡ್ ರೂಲ್ಸ್ ಬ್ರೇಕ್ | ಸೋಮವಾರ 73 ವಾಹನಗಳು ವಶ Read More »

ವೆನ್ಲಾಕ್ ಆಸ್ಪತ್ರೆಯ 2ನೇ ಮಹಡಿಯಿಂದ ಜಿಗಿದ ಕೋವಿಡ್ ಸೋಂಕಿತ

ಮಂಗಳೂರು: ನಗರದ ವೆನ್ಲಾಕ್ ಕೋವಿಡ್ ಆಸ್ಪತ್ರೆಯ 2ನೇ ಮಹಡಿಯಿಂದ ಕೊರೊನಾ ಸೋಂಕಿತನೋರ್ವ ಹಾರಿದ ಘಟನೆ ಇಂದು ನಡೆದಿದ್ದು, ಆತ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ. ಮಂಗಳೂರಿನ ಕಲ್ಲಮುಂಡ್ಕೂರಿನ ಬನಂಗಡಿ ನಿವಾಸಿ ಹರೀಶ್(30) 2ನೇ ಮಹಡಿಯಿಂದ ಹಾರಿದಾತ. ಹರೀಶ್‌ಗೆ ಕೊರೊನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ನಗರದ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ‌ ಇವರು ಇಂದು ಕೋವಿಡ್ ಆಸ್ಪತ್ರೆಯ 2ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಪರಿಣಾಮ ತಲೆಗೆ ಹಾಗೂ …

ವೆನ್ಲಾಕ್ ಆಸ್ಪತ್ರೆಯ 2ನೇ ಮಹಡಿಯಿಂದ ಜಿಗಿದ ಕೋವಿಡ್ ಸೋಂಕಿತ Read More »

error: Content is protected !!
Scroll to Top