ಹವ್ಯಾಸಿ ಬರಹಗಾರರು

ಮಮತೆಯ ಕರುಳ ಬಳ್ಳಿ ಅಮ್ಮ | ಅಮ್ಮಂದಿರ ದಿನದ ಶುಭಾಶಯಗಳು !

ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಅಪಾರವಾಗಿದೆ. ತನ್ನ ಪ್ರಪಂಚ ತನ್ನ ಮಕ್ಕಳೇ ಎಂದು ಹೇಳುವ ಕರುಣಾಮಯಿ ತಾಯಿ. ಪ್ರೀತಿ, ಸ್ನೇಹ, ಕರುಣೆ, ವಾತ್ಸಲ್ಯ ಹಾಗೂ ಮಮತೆಯಿಂದ ನೋಡಿಕೊಳ್ಳುವ ಜೀವವೇ ಅಮ್ಮ. ಒಂದು ಮಗುವಿಗೆ ಸೊಲ್ಪ ಆರೋಗ್ಯದಲ್ಲಿ ಸಮಸ್ಯೆ ಬಂದಿದೆ ಎಂದು ಗೊತ್ತಾದರೆ ಸಾಕು ತಕ್ಷಣವೇ ಉಪಚರಿಸಿಕೊಂಡು ಔಷದಿಗಳನ್ನು ನೀಡುವಳು. ಆದರೆ ತನ್ನ ಆರೋಗ್ಯದ ಬಗ್ಗೆ ಚಿಂತೆ ಮಾಡದೇ ತನ್ನ ಮನೆಯವರ ಹಾಗೂ ಮಕ್ಕಳ ಅರೋಗ್ಯದ ಬಗ್ಗೆ ಕಾಳಜಿ ವಹಿಸುವಳು. ತಾಯಿಯು ಮಕ್ಕಳಿಗೋಸ್ಕರ ಪ್ರೀತಿಯನ್ನೇ ತ್ಯಾಗ ಮಾಡುವರು. …

ಮಮತೆಯ ಕರುಳ ಬಳ್ಳಿ ಅಮ್ಮ | ಅಮ್ಮಂದಿರ ದಿನದ ಶುಭಾಶಯಗಳು ! Read More »

ಕೊರೊನಾದ ಬಗ್ಗೆ ಅರಿತಿರುವವರೇ ತಪ್ಪು ಮಾಡುತ್ತಿರುವುದು ಎಷ್ಟು ಸರಿ? ಅಂಗಡಿ ಮಾಲೀಕರಿಗೆ ದಂಡ ವಿಧಿಸುವುದನ್ನು ಮೊದಲು ನಿಲ್ಲಿಸಿ !

ಕೊರೊನಾ….. ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಭಯ ಹುಟ್ಟಿಸಿದ್ದು ಅಲ್ಲದೇ ಜನರ ಜೀವನವನ್ನೇ ಅಸ್ತವ್ಯಸ್ತವಾಗಿಸಿತು. ಮುಖಕ್ಕೆ ಮಾಸ್ಕ್ ಧರಿಸಿ ಪ್ರಕೃತಿಗೆ ಮುಖ ತೋರಿಸುವ ಯೋಗ್ಯತೆಯನ್ನು ಕಳೆದುಕೊಂಡು ಬಿಟ್ಟಿದ್ದೇವೆ. ತಿನ್ನಲು ಸರಿಯಾಗಿ ಸಿಗದೇ ಪ್ರಾಣ ಕಳೆದುಕೊಂಡವರು, ಕೆಲಸವನ್ನು ಕಳೆದುಕೊಂಡವರು ಇದ್ದಾರೆ. ಜೀವನದಲ್ಲಿ ಅಮೂಲ್ಯವಾದ ಕೆಲವೊಂದನ್ನು ಕಳೆದುಕೊಂಡಿದ್ದೇವೆ. ಏನೆಲ್ಲಾ ಆಗಿಹೋಗಿದೆ. ಆಗುತ್ತಿದೆ ಕೂಡ. ಇಷ್ಟಾದರೂ ಜನರಿಗೆ ಬುದ್ಧಿ ಇದೆಯೇ…?? ಎರಡನೇ ಕೊರೊನಾ ಅಲೆಯನ್ನು ನಿಯಂತ್ರಿಸಲು ಸಕಾ೯ರ ಬೆಳಗ್ಗೆ 6 ರಿಂದ 10 ರವರೆಗೆ ವಸ್ತುಗಳ ಖರೀದಿಗೆ ಅವಕಾಶವನ್ನು ನೀಡಿತು. ಆದರೆ ಯಾವುದೇ …

ಕೊರೊನಾದ ಬಗ್ಗೆ ಅರಿತಿರುವವರೇ ತಪ್ಪು ಮಾಡುತ್ತಿರುವುದು ಎಷ್ಟು ಸರಿ? ಅಂಗಡಿ ಮಾಲೀಕರಿಗೆ ದಂಡ ವಿಧಿಸುವುದನ್ನು ಮೊದಲು ನಿಲ್ಲಿಸಿ ! Read More »

ಬರಹಗಾರಿಕೆಯಲ್ಲೇ ಸವಾಲೊಡ್ದುವ ‘ಬರವುದ ಮಾಣಿಕ್ಯ ‘ – ಕೇಶವ ನೆಲ್ಯಾಡಿ | ನಾವಿಂದು ಪರಿಚಯಿಸುವ ತೆರೆಮರೆಯ ಪ್ರತಿಭಾವಂತ ಕಲಾವಿದ !

ಬರಹಗಾರಿಕೆ ಕೂಡಾ ಒಂದು ಅತ್ಯದ್ಭುತ ಕಲೆ ಎಂದೇ ನಂಬಿಕೆ. ಆ ನಂಬಿಕೆ ನಿಜಕ್ಕೂ ಸತ್ಯ. ಎಲ್ಲರೂ ಬರಹಗಾರರಾಗಲು, ಅಥವಾ ಅರ್ಥೈಸಲು ಅರ್ಹರಾಗಿರುವುದಿಲ್ಲ. ಬರಹವೇ ತನ್ನ ಸರ್ವಸ್ವ, ಕೂತಲ್ಲಿ ನಿಂತಲ್ಲಿ, ಕಣ್ಣಿಗೆ ಕಾಣದನ್ನು ಕಲ್ಪನೆ ಮಾಡಿಕೊಂಡು ಬರೆಯುವ ಕವಿಯು ನಮ್ಮ ಕನ್ನಡ ನಾಡಿಗೆ ಅನೇಕ ಪ್ರಶಸ್ತೀ ತಂದುಕೊಟ್ಟಿದ್ದಾರೆ. ಇಂಥ ಕವಿ, ಲೇಖಕರ ಪಾಲಿಗೆ ಸೇರಿದ ಓರ್ವ ಧೀಮಂತ ವ್ಯಕ್ತಿ, ಕಷ್ಟದಿಂದಲೇ ಮೇಲೆ ಬಂದು ಉತ್ತಮ ಬರಹಗಾರರಾಗಿ ಅನೇಕ ನಾಟಕ, ಕವನಗಳನ್ನು ರಚಿಸಿ ನಿರ್ದೇಶಸಿ ಇದೀಗ ‘ಬರವುದ ಮಾಣಿಕ್ಯ’ ಎಂಬ …

ಬರಹಗಾರಿಕೆಯಲ್ಲೇ ಸವಾಲೊಡ್ದುವ ‘ಬರವುದ ಮಾಣಿಕ್ಯ ‘ – ಕೇಶವ ನೆಲ್ಯಾಡಿ | ನಾವಿಂದು ಪರಿಚಯಿಸುವ ತೆರೆಮರೆಯ ಪ್ರತಿಭಾವಂತ ಕಲಾವಿದ ! Read More »

ಸಧ್ಧರ್ಮ ಬಂಧುಗಳೇ, ಎಲ್ಲರಿಗೂ ಶ್ರುತ ಪಂಚಮಿ ಪರ್ವದ ಹಾರ್ದಿಕ ಶುಭಾಶಯಗಳು

ಶ್ರುತ ಪಂಚಮಿ ಪರ್ವದ ವೈಶಿಷ್ಟ್ಯತೆ: ಪ್ರಪಂಚದ ಮಹೋನ್ನತ ಧರ್ಮಗಳ ಸಾಲಿನಲ್ಲಿ ಶಾಂತಿಯುತ ಸದ್ಗುಣ ಮೂರ್ತಿಯಾಗಿ ನಿಂತಿರುವಂತಹ ಶ್ರೇಷ್ಠ ಧರ್ಮ ಜೈನ ಧರ್ಮ.ಜೈನ ಧರ್ಮ ಆಚರಿಸುವ ಪ್ರಮುಖ ಪರ್ವಗಳಲ್ಲಿ ‘ಶ್ರುತ ಪಂಚಮಿ’ಕೂಡ ಒಂದು.ಶ್ರುತ ಎಂದರೆ ಜಿನವಾಣಿ ಅಥವಾ ಜೈನ ಸಾಹಿತ್ಯ, ಹಾಗೂ ಪಂಚಮಿ ಎಂದರೆ ಐದನೇ ದಿನ ಎಂಬರ್ಥವನ್ನು ಹೊಂದಿದೆ. ಇಬ್ಬರು ಜೈನ ಆಚಾರ್ಯ ಶ್ರೇಷ್ಠರು ಮೊದಲ ಜೈನ ಸಾಹಿತ್ಯವನ್ನು ರಚಿಸಿದಂತಹ ಸುದಿನವಿದು.ಜೈನ ಧರ್ಮದ ೨೪ನೇ ತೀರ್ಥಂಕರ ಭಗವಾನ್ ಮಹಾವೀರರು ಅತ್ಯದ್ಭುತ ಜ್ಞಾನ ಶಕ್ತಿಯನ್ನು ಹೊಂದಿದ್ದವರು. ಅವರು ತಮ್ಮಲ್ಲಿನ …

ಸಧ್ಧರ್ಮ ಬಂಧುಗಳೇ, ಎಲ್ಲರಿಗೂ ಶ್ರುತ ಪಂಚಮಿ ಪರ್ವದ ಹಾರ್ದಿಕ ಶುಭಾಶಯಗಳು Read More »

ಕಾಂತಾವರದ ಕನ್ನಡದ ಕಣ್ಮಣಿ ಡಾ.ನಾ.ಮೊಗಸಾಲೆ ಎಂಬ ಮುಗ್ಧ ಮನದ ಸಾಧಕ

ನಮಸ್ಕಾರ. ನಾನು ಓದುತ್ತಾ ಇರೋದು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನಲ್ಲಿ. ಸಾಹಿತ್ಯಾಭಿರುಚಿಯನ್ನು ಹೆಚ್ಚಿಸಿಕೊಳ್ಳಲು ಖಂಡಿತವಾಗಲು ಈ ಶಿಕ್ಷಣಾ ಸಂಸ್ಥೆ ನನಗೆ ಸಹಕಾರಿಯಾಗುತ್ತಾ ಇದೆ ಎಂದರೆ ಬಹುಶಃ ತಪ್ಪಾಗ್ಲಿಕ್ಕಿಲ್ಲ.ಹೀಗೆ ಸಾಹಿತ್ಯದತ್ತ ಹೊರಟಾಗ ಒಮ್ಮೆ ನಮ್ಮ ಕಾಲೇಜಿನಲ್ಲಿ ಒಂದು ಸಾಹಿತ್ಯದ ಕುರಿತಾದ ಕಾರ್ಯಕ್ರಮ ನಡೆಯುತ್ತದೆ. ಅವತ್ತಿನ ದಿನ ಮುಖ್ಯ ಅತಿಥಿಯಾಗಿದ್ದಂತಹ ಸಾಹಿತಿಯ ಬಗ್ಗೆ ನಾನು ನಿಮಗೆ ತಿಳಿಸಲೇಬೇಕು. ‘ಸಾರಸ್ವತ ಲೋಕದ ಸ್ನೇಹದ ಬೆಟ್ಟ’, ‘ಸ್ನೇಹ ಪರಿಷತ್ತಿನ ಶಾಶ್ವತ ಸದಸ್ಯ’, ಕಾಂತಾವರದ ಕಣ್ಮಣಿ ಡಾ.ನಾ.ಮೊಗಸಾಲೆಯವರು.ನನಗೆ ಕುತೂಹಲ ಹೆಚ್ಚಿದ್ದು ನಾ.ಮೊಗಸಾಲೆಯವರ ‘ಪ್ರತಿ ಕ್ಷಣವೂ …

ಕಾಂತಾವರದ ಕನ್ನಡದ ಕಣ್ಮಣಿ ಡಾ.ನಾ.ಮೊಗಸಾಲೆ ಎಂಬ ಮುಗ್ಧ ಮನದ ಸಾಧಕ Read More »

ವಿಶ್ವ ಮಾನವ | 20 ನೇ ಶತಮಾನ ಕಂಡ ದೈತ್ಯ ಪ್ರತಿಭೆ ರಾಷ್ಟ್ರ ಕವಿ ಕುವೆಂಪು

20 ನೇ ಶತಮಾನ ಕಂಡ ದೈತ್ಯ ಪ್ರತಿಭೆ ರಾಷ್ಟ್ರ ಕವಿ ಕುವೆಂಪುರವರು, ವರಕವಿ ಬೇಂದ್ರೆಯವರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡು, ವಿಶ್ವ ಮಾನವ ಸಂದೇಶ ಸಾರಿ ಆದರ್ಶ ಪುರುಷ. ಜಯ ಭಾರತ ಜನನಿಯ ತನುಜಾತೆ, ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು,ಓ ನನ್ನ ಚೇತನ ಆಗು ನೀ ಅನಿಕೇತನ ಹೀಗೆ ಇವರ ಹಲವಾರು ಕವನಗಳು ಕನ್ನಡಿಗರ ಮನದಾಳದಲ್ಲಿ ಹಾಸುಹೊಕ್ಕಾಗಿವೆ. ಇವರನ್ನು ಮಲೆನಾಡಿನ ಚಿತ್ರಕಾರ ಎಂದರೆ ತಪ್ಪಾಗುವುದಿಲ್ಲ.ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ, …

ವಿಶ್ವ ಮಾನವ | 20 ನೇ ಶತಮಾನ ಕಂಡ ದೈತ್ಯ ಪ್ರತಿಭೆ ರಾಷ್ಟ್ರ ಕವಿ ಕುವೆಂಪು Read More »

ನೈಟಿಂಗೇಲ್ ಎಂಬ ದೀಪದ ಬೆಳಕು

ಜಗತ್ತಿನಲ್ಲಿ ಅನೇಕ ಮಹಾಮಾರಿ ಕಂಟಕಗಳು ಎದುರಾದಾಗ ನಮ್ಮೆಲ್ಲರಿಗೆ ಹೆಗಲು ಕೊಡುತ್ತಾ ನಿಂತಿದ್ದು ದಾದಿಯರು. ಯುದ್ದದಲ್ಲಿ ಗಾಯಗೊಂಡವರ ಸೇವೆಯಿಂದ ಹಿಡಿದು ಇವತ್ತಿನ ಕೊರೊನಾ ಕಂಟಕದವರೆಗೆ ನಮ್ಮೆಲ್ಲರ ಬೆನ್ನ ಹಿಂದೆ ನಿಂತು, ರೋಗಿಗಳಿಗಿರುವ ರೋಗಕ್ಕೆ ಅಸಹ್ಯ ಪಡದೆ, ಆ ರೋಗ ತಮಗೂ ಬರಬಹುದೆಂಬ ಭಯ ಪಡದೆ ಸೇವೆಯೆಂಬ ಯಜ್ಞದಲ್ಲಿ ಸಮಿಧೆ ಉರಿಯುತ್ತಾ ಬಂದ ಮಾತೃ ವಾತ್ಸಲ್ಯಮಯಿಗಳು ನರ್ಸ್ ಗಳು. ಮೇ 12 ನೇ ತಾರೀಖಿನಂದು ಪ್ರತಿ ವರ್ಷ ವಿಶ್ವ ನರ್ಸ್ ದಿನಾಚರಣೆಯಾಗಿ ಆಚರಿಸುತ್ತಾರೆ. ಮೇ12 ದೀಪದ ಮಹಿಳೆ ‘ಫ್ಲಾರೆನ್ ನೈಟಿಂಗೇಲ್’ …

ನೈಟಿಂಗೇಲ್ ಎಂಬ ದೀಪದ ಬೆಳಕು Read More »

ಅಮ್ಮ ನಿನ್ನ ಪ್ರೀತಿಗೆ ಸರಿ ಸಾಟಿಯೇ ಇಲ್ಲ

ಅಮ್ಮ….ಅಂದರೆ ಅದೇನೋ ಶಕ್ತಿ.ಅತ್ತಾಗ ಸಾಂತ್ವನ ನೀಡುವ ಸ್ನೇಹಿತೆಯಾಗಿ, ಸೋತಾಗ ಕೈ ಹಿಡಿದು ನಡೆಸುವ ಗುರುವಾಗಿ,ತಪ್ಪು ಮಾಡಿದಾಗ ಬೈದು ಬುದ್ಧಿ ಹೇಳುವ ತಂದೆಯಾಗಿ ಅವಳೊಬ್ಬಳೇ ಎಲ್ಲರ ಸ್ಥಾನವನ್ನು ನಿಭಾಯಿಸಬಹುದು.ಆಕೆಯ ಪ್ರೀತಿಗೆ ಸರಿಸಾಟಿ ಯಾರೂ ಇಲ್ಲ. ಬೇಸರವನಿಸಿದಾಗ ಆಕೆಯ ಮಡಿಲಲ್ಲಿ ಪುಟ್ಟ ಮಗುವಂತೆ ಇರಬೇಕು ಎಂಬ ಆಸೆ ಇದ್ದರೂ,ಇಂದು ಪುರುಸೊತ್ತು ಇಲ್ಲದಾಗಿದೆ.ಅಲ್ಲದೆ ನಮ್ಮ ನೋವಿಗೆ ಸ್ಪಂದಿಸುವ ಆ ಮುಗ್ದ ಮನಸ್ಸಿನ ನೋವು ಕೇಳಲು‌ ನಮ್ಮಿಗೂ ಸಮಯದ ಅಭಾವ ಕಾಡುತ್ತಿದೆ. ಆಕೆಯ ಬಗ್ಗೆ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಆಕೆ ತನ್ನ ಖುಷಿಯನ್ನು …

ಅಮ್ಮ ನಿನ್ನ ಪ್ರೀತಿಗೆ ಸರಿ ಸಾಟಿಯೇ ಇಲ್ಲ Read More »

ಅಮ್ಮಾ……

ನನ್ನೀ ಜೀವಕೆ ಜಗವನು ತೋರಿದಮೊದಲನೇ ದೇವತೆ ನೀನಮ್ಮಹೊಂದುತ ಬಾಳಲು ಕಲಿಸಿದವಂದಿತ ಶ್ರೀ ಗುರು ನೀನಮ್ಮಾ… ಬೆಚ್ಚಗಿನ ಆರೈಕೆಯಲ್ಲಿ ತಿನ್ನಿಸುತಿದ್ದೆ ನೀ ಮುದ್ದಾದ ತುತ್ತುಜೋಗುಳವ ಹಾಡುತ್ತಾ ಕೊಡುತ್ತಿದ್ದೆ ನೀ ಮುತ್ತುತುತ್ತು ಮುತ್ತು ಇದಾಗಿತ್ತು ನಿನ್ನ ಅಮೂಲ್ಯ ಸೊತ್ತುಇದರಿಂದ ನನಗಾಗುತಿತ್ತು ಬಲು ಗಮ್ಮತ್ತು…. ಅಮ್ಮ ಎಂಬ ಈ ಜೀವ ಯಾವಾಗಲೂ ಹಸನ್ಮುಖಿತಿಳಿಯದು ಅವಳೆಷ್ಟು ದುಃಖಿತೋರಲು ಎಂದೆಂದಿಗೂ ಅವಳ ಕಷ್ಟವತೀರಿಸದೆ ಬಿಡಳು ನಮ್ಮಷ್ಟವ….. ಬೈದರೂ ಮುದ್ದಿಸುವಳುಹಸಿವಿಲ್ಲದಿದ್ದರು ಉಣಿಸುವಳುನೋವಲ್ಲು ನಗುವಳುಎಲ್ಲಾ ಬೇಡಿಕೆಗಳಿಗೆ ಸ್ಪಂದಿಸುವ ವಿಸ್ಮಯ ಸ್ವರೂಪಿ ಅವಳು….. ಕೋಟಿ ಕೋಟಿ ಜನ್ಮವೆತ್ತಿ ದರೂನಿನ್ನ …

ಅಮ್ಮಾ…… Read More »

ನಮ್ಮ ರಾಷ್ಟ್ರಗೀತೆಯ ಕರ್ತೃವಿನ ಜನುಮದಿನವಿಂದು

ಅದೊಂದು ಗೀತೆ ಕೇಳಿದರೆ ಸಾಕು ಭಾರತೀಯರು ಜಾಗೃತಗೊಳ್ಳುತ್ತಾರೆ. ಎದ್ದು ನಿಂತು ಗೌರವ ಸಲ್ಲಿಸುತ್ತಾರೆ. ಅದು ಮತ್ತಾವುದೂ ಅಲ್ಲ, ನಮ್ಮ ರಾಷ್ಟ್ರಗೀತೆ. ‘ಜನ ಗಣ ಮನ…’ ಎಂದು ಆರಂಭವಾಗುವ ನಮ್ಮ ರಾಷ್ಟ್ರಗೀತೆಯನ್ನು ಕೇಳಿದಾಕ್ಷಣ ಪ್ರತಿಯೊಬ್ಬ ಭಾರತೀಯರ ಕಿವಿಗಳು ನಿಮಿರುತ್ತವೆ. ಕಾಲುಗಳು ತಾನಾಗಿಯೇ ಮೇಲೇಳುತ್ತವೆ. ಅಷ್ಟೊಂದು ಶಕ್ತಿಯುಳ್ಳ ಗೀತೆಯನ್ನು ರಚಿಸಿದ ಮಹಾನ್ ಸಾಹಿತಿಯೇ ರವೀಂದ್ರನಾಥ ಠಾಗೋರ್. ಮಾತ್ರವಲ್ಲದೇ ಏಷ್ಯಾದಲ್ಲೇ ಪ್ರತಿಷ್ಟಿತವಾದ ನೋಬೆಲ್ ಪುರಸ್ಕಾರವನ್ನು ಪಡೆದ ವ್ಯಕ್ತಿ ಹಾಗೂ ಮೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನು ಹೊಂದಿರುವ ಗೌರವಾನ್ವಿತರು. ರವೀಂದ್ರನಾಥ ಠಾಗೋರರ …

ನಮ್ಮ ರಾಷ್ಟ್ರಗೀತೆಯ ಕರ್ತೃವಿನ ಜನುಮದಿನವಿಂದು Read More »

error: Content is protected !!
Scroll to Top