ಬೆಳ್ತಂಗಡಿ

ಕೊಕ್ಕಡ : ಮಹಿಳೆ ಆತ್ಮಹತ್ಯೆ -ಮನೆಗೆ ಬಂದ ಪತಿಯೂ ಆತ್ಮಹತ್ಯೆ ಯತ್ನ

ನೆಲ್ಯಾಡಿ: ಕೊಕ್ಕಡ ಗ್ರಾಮದ ಪುತ್ಯ ನಿವಾಸಿ ಮಹಿಳೆಯೋರ್ವರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮತ್ತು ಈ ವಿಚಾರ ತಿಳಿದು ಆಕೆಯ ಪತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಅ. 18 ರಂದು ಮಧ್ಯಾಹ್ನ ನಡೆದಿದೆ. ಪುತ್ಯೆ ನಿವಾಸಿ ರಾಜೇಶ್ ಎಂಬವರ ಪತ್ನಿ ರಶ್ಮಿತಾ(28ವ.) ಆತ್ಮಹತ್ಯೆ ಮಾಡಿಕೊಂಡವರು. ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದ ವೇಳೆ ರಶ್ಮಿತಾರವರು ಮನೆಯ ಕೋಣೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುದ್ದಿ ತಿಳಿದು ಮನೆಗೆ ಬಂದ ರಶ್ಮಿತಾರವರ ಪತಿ ರಾಜೇಶ್ ಆತ್ಮಹತ್ಯೆಗೆ ಮುಂದಾಗಿದ್ದು ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ …

ಕೊಕ್ಕಡ : ಮಹಿಳೆ ಆತ್ಮಹತ್ಯೆ -ಮನೆಗೆ ಬಂದ ಪತಿಯೂ ಆತ್ಮಹತ್ಯೆ ಯತ್ನ Read More »

ಪುಂಜಾಲಕಟ್ಟೆ : ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ | ಪೊಲೀಸ್ ಸಿಬ್ಬಂದಿ ಮೃತ್ಯು

ಬೆಳ್ತಂಗಡಿ: ಬೈಕ್ ಮತ್ತು ಆಕ್ಟಿವ್ ನಡುವೆ ಭೀಕರ ಅಪಘಾತ ಸಂಭವಿಸಿ ಪುಂಜಾಲಕಟ್ಟೆಯ ಪೊಲೀಸ್ ಸಿಬ್ಬಂದಿ ಮೃತಪಟ್ಟ ಘಟನೆ ಪುಂಜಾಲಕಟ್ಟೆ ಸಮೀಪದ ನೇರಳಕಟ್ಟೆ ಎಂಬಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಪುಂಜಾಲಕಟ್ಟೆಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಅಬೂಬಕ್ಕರ್ ಎಂದು ಗುರುತಿಸಲಾಗಿದೆ. ಪುಂಜಾಲಕಟ್ಟೆಯ ಇತರ ಸಿಬ್ಬಂದಿ ಗಳೊಂದಿಗೆ ಗೃಹ ಪ್ರವೇಶಕ್ಕೆ ತೆರಳಿದ್ದು, ಅಬೂಬಕ್ಕರ್ ಅವರು ತನ್ನ ಬೈಕಿನಲ್ಲಿ ವಾಪಸು ಆಗುತ್ತಿದ್ದರೆ ಉಳಿದವರು ಇಲಾಖಾ ಜೀಪಿನಲ್ಲಿ ಹಿಂಬಂದಿಯಿಂದ ಆಗಮಿಸುತ್ತಿದ್ದರು. ನೇರಳಕಟ್ಟೆ ಸಮೀಪ ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಈ …

ಪುಂಜಾಲಕಟ್ಟೆ : ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ | ಪೊಲೀಸ್ ಸಿಬ್ಬಂದಿ ಮೃತ್ಯು Read More »

ಬೆಳ್ತಂಗಡಿ| ಆಶ್ರಯ ನೀಡುತ್ತಿದ್ದ ಮರವೇ ಬುಡ ಸಮೇತ ಉರುಳಿ ವ್ಯಕ್ತಿ ದುರಂತ ಸಾವು !

ಮನೆಯ ಅಂಗಳದಲ್ಲಿದ್ದ ಮರವೊಂದು ಯಾವುದೇ ಮುನ್ಸೂಚನೆ ಇಲ್ಲದೆ ಬುಡಸಮೇತ ವ್ಯಕ್ತಿಯೊಬ್ಬರ ಮೇಲೆ ಬಿದ್ದು, ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದಲ್ಲಿ ನಡೆದಿದೆ. ತಾವೇ ಮನೆಯ ಅಂಗಳದಲ್ಲಿ ನೆಟ್ಟು ಬೆಳೆಸಿದ ಮರವೊಂದು ತಮ್ಮ ಜೀವಕ್ಕೆ ಕುತ್ತು ತಂದಿದೆ. ಹೌದು, ಮನೆಯ ಅಂಗಳದಲ್ಲಿದ್ದ ಮರವೊಂದು ಮನೆಯ ಸದಸ್ಯನ ಮೇಲೆ ಬಿದ್ದಿದೆ. ಪರಿಣಾಮ ವ್ಯಕ್ತಿಯ ತಲೆಗೆ ತೀವ್ರ ಪೆಟ್ಟಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಪುದುವೆಟ್ಟು ಗ್ರಾಮದ ಸಾಮೆದಕಲಪು ವರಸಾರಿ ಮನೆ ನಿವಾಸಿ …

ಬೆಳ್ತಂಗಡಿ| ಆಶ್ರಯ ನೀಡುತ್ತಿದ್ದ ಮರವೇ ಬುಡ ಸಮೇತ ಉರುಳಿ ವ್ಯಕ್ತಿ ದುರಂತ ಸಾವು ! Read More »

ಕರಾವಳಿಯಲ್ಲಿ ಮತ್ತೆ ಅನಿರೀಕ್ಷಿತ ಮಳೆ | ಅ.16ರವರೆಗೂ ಸುರಿಯಲಿದೆ ಗುಡುಗು ಸಹಿತ ಭಾರೀ ಮಳೆ

ಕರಾವಳಿಯಲ್ಲಿ ಮತ್ತೆ ಅನಿರೀಕ್ಷಿತ ಮಳೆಯಿಂದ ಬಹುತೇಕ ಜನಜೀವನ ಅಸ್ತವ್ಯಸ್ತಗೊಂಡಿದೆ. ದ.ಕ. ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು,ಅ.16ರವರೆಗೂ ಕರಾವಳಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜಿಲ್ಲೆಯ ಘಟ್ಟದ ತಪ್ಪಲಿನ ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲೂ ಭಾರೀ ಮಳೆ ಸುರಿದಿದೆ. ಘಟ್ಟದ ಮೇಲಿನ ಭಾಗಗಳಲ್ಲೂ ಮಳೆಯಾಗುತ್ತಿರುವುದರಿಂದ ನದಿ, ತೊರೆಗಳಲ್ಲಿ ನೀರಿನ ಹರಿವು ಮತ್ತೆ ಹೆಚ್ಚಾಗಿದೆ. ತಗ್ಗು ಪ್ರದೇಶದಲ್ಲಿರುವ ತೋಟ, ಗದ್ದೆಗಳಿಗೆ ನೀರು ನುಗಿದ್ದು ರೈತರು ನಷ್ಟ ಅನುಭವಿಸಿದ್ದಾರೆ. ಇನ್ನೊಂದೆಡೆ ಗದ್ದೆಯಲ್ಲಿ ಕಟಾವಿಗೆ ಸಿದ್ಧವಾಗಿರುವ …

ಕರಾವಳಿಯಲ್ಲಿ ಮತ್ತೆ ಅನಿರೀಕ್ಷಿತ ಮಳೆ | ಅ.16ರವರೆಗೂ ಸುರಿಯಲಿದೆ ಗುಡುಗು ಸಹಿತ ಭಾರೀ ಮಳೆ Read More »

ಬೆಳ್ತಂಗಡಿ | ಬಂದಾರಿನಲ್ಲಿ ಡ್ರೆಜ್ಜಿಂಗ್ ಮೂಲಕ ಅಕ್ರಮ ಮರಳುಗಾರಿಕೆ | 1 ಡ್ರೆಜ್ಜಿಂಗ್ ಯಂತ್ರ, 1 ಹಿಟಾಚಿ, 4 ಟಿಪ್ಪರ್ ಲಾರಿ ವಶಕ್ಕೆ

ನೇತ್ರಾವತಿ ನದಿಯಿಂದ ಅಕ್ರಮವಾಗಿ ಡ್ರೆಜ್ಜಿಂಗ್ ಮೂಲಕ ಮರಳು ತೆಗೆಯುತ್ತಿದ್ದ ಅಡ್ಡೆಗೆ ಧರ್ಮಸ್ಥಳ ಪೊಲೀಸ್‌ ಉಪನಿರೀಕ್ಷಕರ ಕೃಷ್ಣಕಾಂತ್ ಎ. ಅವರ ತಂಡ ದಾಳಿ ನಡೆಸಿ 39 ಲಕ್ಷ ರೂ. ಮೌಲ್ಯದ ಸೊತ್ತುಗಳ ವಶಪಡಿಸಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಬಟ್ಲಡ್ಕ ಎಂಬಲ್ಲಿ ನಡೆದಿದೆ. ಸಂದೇಶ ಮತ್ತು ಜಗದೀಶ ಎಂಬುವರು ಅಕ್ರಮವಾಗಿ ಮರಳು ತೆಗೆದು ಸಾಗಾಟ ಮಾಡುತ್ತಿರುವುದರ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ದಾಳಿ ವೇಳೆ ಮರಳು ತೆಗೆಯುತ್ತಿದ್ದವರು ಪರಾರಿಯಾಗಿದ್ದು, ಸ್ಥಳದಲ್ಲಿದ್ದ …

ಬೆಳ್ತಂಗಡಿ | ಬಂದಾರಿನಲ್ಲಿ ಡ್ರೆಜ್ಜಿಂಗ್ ಮೂಲಕ ಅಕ್ರಮ ಮರಳುಗಾರಿಕೆ | 1 ಡ್ರೆಜ್ಜಿಂಗ್ ಯಂತ್ರ, 1 ಹಿಟಾಚಿ, 4 ಟಿಪ್ಪರ್ ಲಾರಿ ವಶಕ್ಕೆ Read More »

ಬೆಳ್ತಂಗಡಿ| ಅಕ್ರಮ ಮರಳುಗಾರಿಕೆ ವ್ಯಾಪಕ | ಅಧಿಕೃತ ಟೆಂಡರ್‌ದಾರರಿಗೆ ಸಮಸ್ಯೆ

ಬೆಳ್ತಂಗಡಿ ತಾಲೂಕಿನಾದ್ಯಂತ ಅಕ್ರಮ‌ಮರಳುಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದು ಗಣಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮೌನ ವಹಿಸಿರುವುದು ಆತಂಕ ಹಾಗೂ ಅಚ್ಚರಿಗೆ ಕಾರಣವಾಗಿದೆ.ಇದರಿಂದ ಅಧಿಕೃತ ಟೆಂಡರ್‌ದಾರರಿಗೆ ಸಮಸ್ಯೆಯಾಗಿದೆ. ಲಭ್ಯ ಮಾಹಿತಿಯಂತೆ ಬೆಳ್ತಂಗಡಿ ತಾಲೂಕಿನ ನೇತ್ರಾವತಿ, ಮೃತ್ಯುಂಜಯ ನದಿಗಳ ಪಾತ್ರಗಳಲ್ಲಿ ,ಧರ್ಮಸ್ಥಳ ಗ್ರಾಮದ ಅಜಿಕುರಿ, ಕಲ್ಮಂಜ ಗ್ರಾಮದ ಪಜಿರಡ್ಕ, ಇಂದಬೆಟ್ಟು ಗ್ರಾಮದ ಬೆಳ್ಳೂರು ಬೈಲು, ಮಿತ್ತಬಾಗಿಲು ಗ್ರಾಮದ ಕಿಲ್ಲೂರು, ಮುಂಡಾಜೆ ಗ್ರಾಮದ ಗುಂಡಿ, ಹೊಸಕಾಪು ಹಾಗೂ ಕೊಯ್ಯೂರು ಗ್ರಾಮದ ಡೆಂಬುಗ ಪ್ರದೇಶಗಳ ನದಿ ಪಾತ್ರಗಳಲ್ಲಿ ಯಾವುದೇ ಪರವಾನಿಗೆಯಿಲ್ಲದೆ ಅಕ್ರಮ ಮರಳುಗಾರಿಕೆ …

ಬೆಳ್ತಂಗಡಿ| ಅಕ್ರಮ ಮರಳುಗಾರಿಕೆ ವ್ಯಾಪಕ | ಅಧಿಕೃತ ಟೆಂಡರ್‌ದಾರರಿಗೆ ಸಮಸ್ಯೆ Read More »

ಕರಾವಳಿ ,ಮಲೆನಾಡಿನಲ್ಲಿ ಮತ್ತೆ ಸದ್ದು ಮಾಡಿದೆ ಸ್ಯಾಟ್‌ಲೈಟ್ ಕರೆ | ಗುಪ್ತಚರ ಇಲಾಖೆ ಹೈ ಅಲರ್ಟ್

ಮಂಗಳೂರು: ಕರಾವಳಿ ಸೇರಿದಂತೆ ಮಲೆನಾಡಿನಲ್ಲಿ ಮತ್ತೆ ಸ್ಯಾಟಲೈಟ್ ಕರೆ ಸದ್ದು ಮಾಡಿದೆ. ಈ ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಟ್ಟಾರಣ್ಯದಿಂದ ನಿಷೇಧಿತ ತುರಾಯ ಸ್ಯಾಟಲೈಟ್ ಫೋನ್ ಕರೆ ಬೆಚ್ಚಿ ಬೀಳಿಸಿತ್ತು. ವಿದೇಶಕ್ಕೆ ಸತತ ಫೋನ್ ಕರೆ ಮಾಡಿರುವುದನ್ನು ಗುಪ್ತಚರ ಇಲಾಖೆ ಪತ್ತೆಹಚ್ಚಿತ್ತು. ಇದೀಗ ಮತ್ತೆ ಕರಾವಳಿ ಹಾಗೂ ಮಲೆನಾಡಿನಲ್ಲಿ ಸ್ಯಾಟಲೈಟ್ ಫೋನ್ ಕರೆ ಸದ್ದು ಮಾಡಿದೆ. ಈ ನಿಟ್ಟಿನಲ್ಲಿ ಗುಪ್ತಚರ ಇಲಾಖೆ ಅಲರ್ಟ್ ಆಗಿದ್ದು, ಪೂರಕ ಮಾಹಿತಿಯನ್ನು ಕಲೆ ಹಾಕುತ್ತಿದೆ. ಸ್ಯಾಟಲೈಟ್ ಫೋನ್ ಕರೆಯ …

ಕರಾವಳಿ ,ಮಲೆನಾಡಿನಲ್ಲಿ ಮತ್ತೆ ಸದ್ದು ಮಾಡಿದೆ ಸ್ಯಾಟ್‌ಲೈಟ್ ಕರೆ | ಗುಪ್ತಚರ ಇಲಾಖೆ ಹೈ ಅಲರ್ಟ್ Read More »

ಬೆಳ್ತಂಗಡಿ | ವೇಣೂರಿನಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ

ಜೊತೆಯಾಗಿ ಕುಡಿದು ಗಲಾಟೆ ಮಾಡಿ, ನಂತರ ವ್ಯಕ್ತಿಯನ್ನು ಮಾವನ ಮಗನೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ವೇಣೂರಿನಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕರಿಮಣೇಲು ಗ್ರಾಮದ ಗಾಂಧಿನಗರ ನಿವಾಸಿ ಸಂಜೀವ ಶೆಟ್ಟಿ ಎಂದು ಗುರುತಿಸಲಾಗಿದೆ. ಸುಮಾರು 60 ವರ್ಷ ಪ್ರಾಯದ ಇವರನ್ನು ಕಡಿದು ಕೊಲೆ ಮಾಡಲಾಗಿದೆ. ಸಂಜೀವ ಶೆಟ್ಟಿ ಇವರು ಬೇರೆಯವರ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಇವರ ಜೊತೆ ಕೆಲಸಕ್ಕೆ ಹೋಗುತ್ತಿದ್ದ ಇನ್ನೋರ್ವ ಇಂದು ಬೆಳಗ್ಗೆ ತಡವಾದರೂ ಸಂಜೀವ ಅವರು ಏಕೆ ಬಂದಿಲ್ಲ ಎಂದು ಅವರ …

ಬೆಳ್ತಂಗಡಿ | ವೇಣೂರಿನಲ್ಲಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ Read More »

ಬೆಳ್ತಂಗಡಿ: ಮೆಸ್ಕಾಂ ಜಾಗೃತದಳದ ಅಧಿಕಾರಿಯೆಂದು ಮನೆ ಮನೆಗೆ ಭೇಟಿ | ಹಣಕ್ಕಾಗಿ ಪೀಡನೆ -ಪೊಲೀಸ್ ದೂರು

ಬೆಳ್ತಂಗಡಿ : ಮೆಸ್ಕಾಂ ಇಲಾಖೆಯ ಸಮವಸ್ತ್ರ ಧರಿಸಿ, ಗುರುತು ಚೀಟಿ ತೋರಿಸಿ, ಜಾಗೃತ ದಳದ ಅಧಿಕಾರಿ ಎಂದು ತಿರುಗಾಟ ಮಾಡುತ್ತಿದ್ದ ಕೊಯ್ಯೂರಿನ ವ್ಯಕ್ತಿಯೋರ್ವನ ವಿರುದ್ಧ ಮೆಸ್ಕಾಂ ಜೆ.ಇ.ಯವರು ಬೆಳ್ತಂಗಡಿ ಪೋಲಿಸ್ ಠಾಣೆಗೆ ಹಾಗೂ ಮಂಗಳೂರು ಮೆಸ್ಕಾಂ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ನೀಡಿದ ಘಟನೆ ಅ.1ರಂದು ನಡೆದಿದೆ. ಕೊಯ್ಯೂರಿನ ಪಾಂಬೇಲು ನಿವಾಸಿ ವಿವಾಹಿತ ಹರೀಶ್ ಯಾನೆ ಲೋಕೇಶ್ ಗೌಡ ಎಂಬವರ ಮೇಲೆ ಈ ಆರೋಪವನ್ನು ಹೊರಿಸಿ ದೂರನ್ನು ನೀಡಲಾಗಿದೆ. ಮಂಗಳೂರು ಮೆಸ್ಕಾಂ ಇಲಾಖೆಯ ಸಮವಸ್ತ್ರ ಧರಿಸಿ, ಗುರುತು ಚೀಟಿ …

ಬೆಳ್ತಂಗಡಿ: ಮೆಸ್ಕಾಂ ಜಾಗೃತದಳದ ಅಧಿಕಾರಿಯೆಂದು ಮನೆ ಮನೆಗೆ ಭೇಟಿ | ಹಣಕ್ಕಾಗಿ ಪೀಡನೆ -ಪೊಲೀಸ್ ದೂರು Read More »

ಬೆಳ್ತಂಗಡಿ | ತಾನು ವಿಷ ಸೇವಿಸಿ ಮಕ್ಕಳಿಗೂ ಜ್ಯೂಸ್ ನಲ್ಲಿ ವಿಷ ಬೆರೆಸಿ ಕುಡಿಸಿದ ಪಾಪಿ ತಂದೆ

ವ್ಯಕ್ತಿಯೋರ್ವ ತಾನು ವಿಷ ಸೇವಿಸಿದಲ್ಲದೇ ತನ್ನ ಮಕ್ಕಳಿಗೂ ಜ್ಯೂಸ್ ನಲ್ಲಿ ವಿಷ ಬೆರಿಸಿಕೊಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದ ಬಾಳೆಗುಂಡಿಯಲ್ಲಿ ನಡೆದಿದೆ. ಈ ಕೃತ್ಯ ಎಸಗಿದ ವ್ಯಕ್ತಿಯನ್ನು ಶಿಶಿಲ ಗ್ರಾಮದ ಬಾಳೆಗುಂಡಿ ನಿವಾಸಿ ವಿಶ್ವನಾಥ ಎಂದು ಗುರುತಿಸಲಾಗಿದೆ. ವಿಶ್ವನಾಥ ಕುಡಿತದ ಚಟ ಹೊಂದಿದ್ದು, ಕುಡಿದು ಬಂದು ಪತ್ನಿ ಚಂದ್ರಾವತಿ ಜೊತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಆರೋಪಿ ವಿಶ್ವನಾಥ ಅಪ್ರಾಪ್ತ ಮಕ್ಕಳಿಗೆ ಜ್ಯೂಸ್ ನೀಡಿದ್ದು, ಓರ್ವ ಮಗ ಜ್ಯೂಸ್ ಬೇಡವೆಂದು ನಿರಾಕರಿಸಿದ್ದಾನೆ. ಇನ್ನೋರ್ವ ಮಗನಿಗೆ ಒತ್ತಾಯ ಪೂರ್ವಕವಾಗಿ ಜ್ಯೂಸ್ …

ಬೆಳ್ತಂಗಡಿ | ತಾನು ವಿಷ ಸೇವಿಸಿ ಮಕ್ಕಳಿಗೂ ಜ್ಯೂಸ್ ನಲ್ಲಿ ವಿಷ ಬೆರೆಸಿ ಕುಡಿಸಿದ ಪಾಪಿ ತಂದೆ Read More »

error: Content is protected !!
Scroll to Top