ಸುಳ್ಯ

ಪುತ್ತೂರು ತಾ|ಖಾಝಿ ನೇಮಕ ವಿಚಾರದಲ್ಲಿ ತಕರಾರು ಹೊಯ್‌ ಕೈ ನೂಕುನುಗ್ಗಲಿನ ವಿಡಿಯೋ ವೈರಲ್

ಪುತ್ತೂರು:ಸಂಯುಕ್ತ ಖಾಝಿ ನೇಮಕ ವಿಚಾರದಲ್ಲಿ ಮಸೀದಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಚರ್ಚೆ ನಡೆದು , ನೂಕುನುಗ್ಗಲು ನಡೆದಿರುವ ಘಟನೆ ಇಲ್ಲಿನ ಮಸೀದಿಯೊಂದರಲ್ಲಿ ನಡೆದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುತ್ತೂರು ತಾಲೂಕಿನ ಸಂಯುಕ್ತ ಖಾಝಿ ನೇಮಕದ ಕುರಿತು ಚರ್ಚಿಸುವ ಉದ್ದೇಶದಿಂದ ಅ.15ರಂದು ಇಲ್ಲಿನ ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿತ್ತು. ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಮದ್ರಸ ಸಭಾಂಗಣದಲ್ಲಿ ಸಭೆ ನಡೆಯಿತು.ಸಮಸ್ತದ ಅಧ್ಯಕ್ಷ ಅಸಯ್ಯದ್ ಸಯ್ಯದುನಾ ಶೈಖುನಾ …

ಪುತ್ತೂರು ತಾ|ಖಾಝಿ ನೇಮಕ ವಿಚಾರದಲ್ಲಿ ತಕರಾರು ಹೊಯ್‌ ಕೈ ನೂಕುನುಗ್ಗಲಿನ ವಿಡಿಯೋ ವೈರಲ್ Read More »

ಮುರುಳ್ಯದಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆ

ಕಾಣಿಯೂರು : ಮುರುಳ್ಯ ಗ್ರಾಮದ ಸಮಹಾದಿಯಲ್ಲಿ ಯುವಕನೋರ್ವ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.14 ರಂದು ನಡೆದಿದೆ. ಮುರುಳ್ಯ ಸಮಹಾದಿ ದಿ.ಶೀನ ಎಂಬವರ ಪುತ್ರ ಪ್ರದೀಪ (21) ಎಂಬವರು ಮನೆಯ ಸಮೀಪದ ಗುಡ್ಡದಲ್ಲಿ ಗೇರು ಬೀಜದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅ.16ರಂದು ಜಿಲ್ಲಾಧಿಕಾರಿಯವರಿಂದ ಸುಳ್ಯ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ

ಮಂಗಳೂರು:- ಸರ್ಕಾರದ ಜನಪರ ಯೋಜನೆಗಳನ್ನು ತಳಮಟ್ಟದಲ್ಲಿ ಜನಸಾಮಾನ್ಯರಿಗೆ ನೇರವಾಗಿ ಒದಗಿಸಬೇಕೆಂಬ ಆಶಯದಂತೆ ಜಿಲ್ಲೆಯ ಎಲ್ಲಾ ಕಂದಾಯ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರತೀ ತಿಂಗಳ ಮೂರನೇ ಶನಿವಾರದಂದು ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವ್ಯ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆದರಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಇದೇ ಅ.16ರ ಶನಿವಾರ ಸುಳ್ಯ ತಾಲೂಕಿನ ಅಮರಮುಡ್ನೂರು ಮತ್ತು ಅಮರಪಡ್ನೂರು ಗ್ರಾಮಕ್ಕೆ ಭೇಟಿ ನೀಡಿ, ಅಂದು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಗ್ರಾಮ …

ಅ.16ರಂದು ಜಿಲ್ಲಾಧಿಕಾರಿಯವರಿಂದ ಸುಳ್ಯ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ Read More »

ಸುಳ್ಯ| ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವಕ

ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದಲ್ಲಿ ನಡೆದಿದೆ. ಬಂಗ್ಲೆಗುಡ್ಡೆ ಲಿಖಿತ್(22) ಮೃತಪಟ್ಟ ಯುವಕ. ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಮನೆಯ ಅಡ್ಡಕ್ಕೆ ಹಗ್ಗ ಹಾಕಿ ನೇಣು ಹಾಕಿಕೊಂಡಿದ್ದಾನೆ. ನಂತರ ಮನೆಯವರು ಆತನನ್ನು ಕೂಡಲೇ ಸಂಪಾಜೆ ಆರೋಗ್ಯ ಕೇಂದ್ರಕ್ಕೆ ಕರೆತಂದು ಅಲ್ಲಿಂದ ಸುಳ್ಯ ಸರಕಾರಿ ಆಸ್ಪತ್ರೆಗೆ ತಂದಿದ್ದರು. ಪರೀಕ್ಷೆ ನಡೆಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಸುಳ್ಯ : ಮತ್ತೆ ಧರಣಿ ಕುಳಿತ ಆಸಿಯಾ ,ಹಿಂದೂ ಧರ್ಮ ಬಿಟ್ಟು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದ ಶಾಂತಿ | ಕೈ ಕೊಟ್ಟು ಬಿಟ್ಟೋಡಿದ ಇಬ್ರಾಹಿಂ ಖಲೀಲ್

ಕಳೆದ ಹಲವು ತಿಂಗಳುಗಳಿಂದ ಸಂಚಲನ ಮೂಡಿ ಸಿದ್ದ ಆಸಿಯಾ-ಇಬ್ರಾಹಿಂ ಖಲೀಲ್ ಪ್ರಕರಣ ಇದೀಗ ಹೊಸ ತಿರುವು ಪಡೆದಿದ್ದು ಅಂತಿಮ ನಿರ್ಣಯ ಸಿಗದ ಕಾರಣ ಆಸಿಯಾ ಅವರು ಗಾಂಧಿನಗರದಲ್ಲಿರುವ ಯುವಕನ ಅಂಗಡಿ ಮುಂಭಾಗದಲ್ಲಿ ಸೋಮವಾರ ದಿಂದ ಮತ್ತೆ ಧರಣಿ ಕುಳಿತಿದ್ದಾರೆ. ಸುಳ್ಯದ ಇಬ್ರಾಹಿಂ ಖಲೀಲ್‌ಗೆ ಕೇರಳದ ಹಿಂದೂ ಧರ್ಮಕ್ಕೆ ಸೇರಿದ ಶಾಂತಿ ಪರಿಚಯವಾಗಿ ಬಳಿಕ ಮತಾಂತರವಾಗಿ ಅವರಿಬ್ಬರು ಮದುವೆಯಾಗಿದ್ದಾರೆ ಎಂದು ಆಸಿಯಾ ಹೇಳಿದ್ದು, ಈಗ ಖಲೀಲ್ ಆಕೆಯನ್ನು ದೂರ ಮಾಡಿದ್ದಾನೆ ಎಂದು ಆಪಾದಿಸಿ ವರ್ಷದ ಹಿಂದೆ ಶಾಂತಿ ಜೂಬಿ …

ಸುಳ್ಯ : ಮತ್ತೆ ಧರಣಿ ಕುಳಿತ ಆಸಿಯಾ ,ಹಿಂದೂ ಧರ್ಮ ಬಿಟ್ಟು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದ ಶಾಂತಿ | ಕೈ ಕೊಟ್ಟು ಬಿಟ್ಟೋಡಿದ ಇಬ್ರಾಹಿಂ ಖಲೀಲ್ Read More »

ಸುಳ್ಯ : ಮೂರೂರು ಬಳಿ ಲಾರಿ-ಓಮ್ನಿ ಡಿಕ್ಕಿ ,ನಾಲ್ವರಿಗೆ ಗಾಯ

ಸುಳ್ಯ – ಕಾಸರಗೋಡು ಗಡಿ ಪ್ರದೇಶವಾದ ಮುರೂರು ಬಳಿ ಈಚರ್ ಲಾರಿ ಮತ್ತು ಓಮಿನಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಇಂದು ವರದಿಯಾಗಿದೆ. ಕಾಸರಗೋಡಿನಿಂದ ಮಡಿಕೇರಿಗೆ ತೆರಳುತ್ತಿದ್ದ ಮಡಿಕೇರಿ ಮೂಲದ ಒಂದೇ ಕುಟುಂಬದ ನಾಲ್ವರು ಓಮಿನಿ ಕಾರ್‌ಗೆ ಕೇರಳಕ್ಕೆ ಹೋಗುತ್ತಿದ್ದ ತರಕಾರಿ ತುಂಬಿದ ಈಚರ್ ವಾಹನ ಮೂರೂರು ಬಳಿ ರಸ್ತೆಯ ತಿರುವಿನಲ್ಲಿ ಡಿಕ್ಕಿಯಾಗಿದೆ. ಘಟನೆಯಿಂದ ಓಮ್ನಿ ಚಾಲಕ ಸೇರಿ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಹಾಗೂ ಪುಟ್ಟ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ಸುಳ್ಯ ಸರ್ಕಾರಿ …

ಸುಳ್ಯ : ಮೂರೂರು ಬಳಿ ಲಾರಿ-ಓಮ್ನಿ ಡಿಕ್ಕಿ ,ನಾಲ್ವರಿಗೆ ಗಾಯ Read More »

ಮಡಿಕೇರಿ ಕಂದಾಯ ಪ್ರದೇಶದಲ್ಲಿ ಸುಳ್ಯಅರಣ್ಯಾಧಿಕಾರಿಗಳ ದಾಂಧಲೆ ,ಕೃಷಿಕನಿಗೆ ಬೆದರಿಕೆ ಆರೋಪ | ಮಡಿಕೇರಿ ಪೊಲೀಸರಿಂದ ಕೇಸು ದಾಖಲು

ಸುಳ್ಯ : ತಮ್ಮ ಕಾರ್ಯ ವ್ಯಾಪ್ತಿಯ ಹೊರತಾದ ಪ್ರದೇಶಕ್ಕೆ ದಾಳಿ ನಡೆಸಿ ಅಕ್ರಮ ಕೃಷಿ ಚಟುವಟಿಕೆ ನಡೆಸಿರುವುದೆಂದು ಆರೋಪಿಸಿ ಕಾನೂನು ಬಾಹಿರವಾಗಿ ಕೃಷಿಯನ್ನು ಕಡಿದು ನಾಶಗೊಳಿಸಿ,ಕೃಷಿಕನಿಗೆ ಜೀವಬೆದರಿಕೆಯೊಡ್ಡಿದ ಆರೋಪದ ಮೇರೆಗೆ ಅರಣ್ಯಾಧಿಕಾರಿ ಸಹಿತ ನಾಲ್ವರ ವಿರುದ್ಧ ಪೊಲೀಸ್ ಕೇಸು ದಾಖಲಾದ ಘಟನೆ ಮಡಿಕೇರಿ ತಾಲೂಕಿನ ಗ್ರಾಮಾಂತರ ವ್ಯಾಪ್ತಿಯಲ್ಲಿ ನಡೆದಿದೆ. ಸುಳ್ಯ ಫಾರೆಸ್ಟರ್ ಚಂದ್ರ ಶೇಖರ , ಹಾಗು ಅರಣ್ಯ ವೀಕ್ಷಕ ಸುಂದರ ಕೆ.,ಪಾರೆಸ್ಟ್ ಗಾರ್ಡ್ ಮನೋಜ್ ಹಾಗೂ ಇಲಾಖೆಯ ಸಿಬ್ಬಂದಿ ಚಿದಾನಂದ ಬಾಳೆಕಜೆ ಎಂಬವರ ವಿರುದ್ಧ ಮಡಿಕೇರಿ …

ಮಡಿಕೇರಿ ಕಂದಾಯ ಪ್ರದೇಶದಲ್ಲಿ ಸುಳ್ಯಅರಣ್ಯಾಧಿಕಾರಿಗಳ ದಾಂಧಲೆ ,ಕೃಷಿಕನಿಗೆ ಬೆದರಿಕೆ ಆರೋಪ | ಮಡಿಕೇರಿ ಪೊಲೀಸರಿಂದ ಕೇಸು ದಾಖಲು Read More »

ಸುಳ್ಯ : ಅರಣ್ಯದಂಚಿನ ಪ್ರದೇಶದಲ್ಲಿ ನಿಲ್ಲದ ಕಾಡಾನೆ ದಾಳಿ | ಅಪಾರ ಕೃಷಿ ನಾಶ

ಸುಳ್ಯ ತಾಲೂಕಿನ ಮಂಡೆಕೋಲು ಸೇರಿದಂತೆ ಗಡಿ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಕಳೆದ ಕೆಲವು ದಿನಗಳಿಂದ ಮಂಡೆಕೋಲು ಭಾಗದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ಮಂಡೆಕೋಲು ದೇವಸ್ಥಾನದ ಸಮೀಪದ ಕೃಷಿಕರ ತೋಟಕ್ಕೆ ನುಗ್ಗಿ ಕೃಷಿ ನಾಶಪಡಿಸಿದೆ. ತೆಂಗು, ಬಾಳೆ, ಅಡಿಕೆ ಮರ ಮತ್ತಿತರ ಕೃಷಿಗಳನ್ನು ನಾಶಪಡಿಸಿದೆ. ಕಳೆದ ಕೆಲವು ದಿನಗಳಿಂದ ಮಂಡೆಕೋಲು ಗ್ರಾಮದ ವಿವಿಧ ಭಾಗಗಳಲ್ಲಿ ಸುತ್ತಾಡುತ್ತಿರುವ ಕಾಡಾನೆಗಳ ಹಿಂಡು ಕೇನಾಜೆ ಮತ್ತಿತರ ಭಾಗಗಳಲ್ಲಿ ಕೃಷಿಗೆ ಹಾನಿ ಮಾಡಿದೆ ಎಂದು ಕೃಷಿಕರು ಹೇಳುತ್ತಾರೆ. ಮಂಡೆಕೋಲಿನಲ್ಲಿ ಕಾಡಾನೆ ಹಾವಳಿ ತಡೆಯಲು …

ಸುಳ್ಯ : ಅರಣ್ಯದಂಚಿನ ಪ್ರದೇಶದಲ್ಲಿ ನಿಲ್ಲದ ಕಾಡಾನೆ ದಾಳಿ | ಅಪಾರ ಕೃಷಿ ನಾಶ Read More »

ಸರಸ್ವತಿ ಕಾಮತ್‌ಗೆ ಹಲ್ಲೆ ಪ್ರಕರಣ |
ಹರೀಶ್ ಕಂಜಿಪಿಲಿ ಸಹಿತ ಬಿಜೆಪಿ ಕಾರ್ಯಕರ್ತರಿಗೆ ಸುಳ್ಯ ಕೋರ್ಟು ವಿಧಿಸಿದ್ದ ಶಿಕ್ಷೆಯ ತೀರ್ಪನ್ನು ಅಮಾನತುಗೊಳಿಸಿದ ಪುತ್ತೂರು ನ್ಯಾಯಾಲಯ

ಪುತ್ತೂರು : 2013ರ ವಿಧಾನಸಭಾ ಚುನಾವಣೆಯ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯೆ ಸರಸ್ವತಿ ಕಾಮತ್ ಮತ್ತು ಇತರ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿಯ ಆಗಿನ ಬಿ.ಜೆ.ಪಿ. ಯುವ ನಾಯಕ, ಈಗಿನ ಮಂಡಲ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ ಮತ್ತು ಅವರ ಜತೆಗಿದ್ದ ಬಿಜೆಪಿ ಕಾರ್ಯಕರ್ತರು ಮರ್ಕಂಜದಲ್ಲಿ ಮಾಡಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ನ್ಯಾಯಾಲಯ ನೀಡಿದ್ದ ಜೈಲು ಶಿಕ್ಷೆಯ ತೀರ್ಪನ್ನು ಪುತ್ತೂರು ಜಿಲ್ಲಾ ನ್ಯಾಯಾಲಯ ಅಮಾನತು ಮಾಡಿದೆ. 2013 ಮೇ.4 ರಂದು …

ಸರಸ್ವತಿ ಕಾಮತ್‌ಗೆ ಹಲ್ಲೆ ಪ್ರಕರಣ |
ಹರೀಶ್ ಕಂಜಿಪಿಲಿ ಸಹಿತ ಬಿಜೆಪಿ ಕಾರ್ಯಕರ್ತರಿಗೆ ಸುಳ್ಯ ಕೋರ್ಟು ವಿಧಿಸಿದ್ದ ಶಿಕ್ಷೆಯ ತೀರ್ಪನ್ನು ಅಮಾನತುಗೊಳಿಸಿದ ಪುತ್ತೂರು ನ್ಯಾಯಾಲಯ
Read More »

ಎಡಮಂಗಲ : ರಿಕ್ಷಾ ಬೈಕ್ ಡಿಕ್ಕಿ – ಬೈಕ್ ಸವಾರನಿಗೆ ಗಾಯ ಆಸ್ಪತ್ರೆಗೆ ದಾಖಲು

ಕಡಬ : ಎಡಮಂಗಲ ಗ್ರಾಮದ ಮರ್ದೂರಡ್ಕ ಎಂಬಲ್ಲಿ ರಿಕ್ಷಾ ಹಾಗೂ ಬೈಕ್ ಡಿಕ್ಕಿ ಹೊಡೆದುಕೊಂಡು ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಅ.5 ರಂದು ನಡೆದಿದೆ. ಕೇಶವ ಎಂಬವರು ಬೈಕಲ್ಲಿ ಮರ್ದೂರಡ್ಕ ಕಡೆಗೆ ಹೋಗುತ್ತಿದ್ದಾಗ ಎಡಮಂಗಲ ಕಡೆಯಿಂದ ರೋಹಿತ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ರಿಕ್ಷಾ ಡಿಕ್ಕಿಹೊಡೆಯಿತು. ಪರಿಣಾಮ ಬೈಕ್ ಚಾಲಕ ಕೇಶವ ಹಾಗೂ ಬೈಕ್ ರಸ್ತೆಗೆ ಬಿದ್ದು ಕೇಶವರ ಕೈಕಾಲಿಗೆ ಗಾಯವಾಗಿದ್ದು ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ …

ಎಡಮಂಗಲ : ರಿಕ್ಷಾ ಬೈಕ್ ಡಿಕ್ಕಿ – ಬೈಕ್ ಸವಾರನಿಗೆ ಗಾಯ ಆಸ್ಪತ್ರೆಗೆ ದಾಖಲು Read More »

error: Content is protected !!
Scroll to Top