ಲೋಕಲ್ ನ್ಯೂಸ್

ಸುಬ್ರಹ್ಮಣ್ಯ | ಕುಮಾರಧಾರ ನದಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ಇಂದು ಮಧ್ಯಾಹ್ನ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತ ಮಹಿಳೆಗೆ ಸುಮಾರು 55 ವರ್ಷ ಆಗಿರಬಹುದೆಂದು ಅಂದಾಜಿಸಲಾಗಿದೆ. ವಿಳಾಸ ಪತ್ತೆ ಇನ್ನಷ್ಟೇ ಆಗಬೇಕಿದೆ. ಗೃಹ ರಕ್ಷಕ ದಳದ ಸಿಬ್ಬಂದಿಗಳು ಸ್ಥಳೀಯರ ನೆರವಿನೊಂದಿಗೆ ಕುಮಾರಧಾರ ನದಿಯಿಂದ ಮೃತ ದೇಹವನ್ನು ಮೇಲೆಕ್ಕೆತ್ತಿದ್ದಾರೆ. ಬಳಿಕ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮೃತ ದೇಹವನ್ನು ಇರಿಸಲಾಗಿದೆ. ಸುಬ್ರಹ್ಮಣ್ಯ ಪೊಲೀಸ್ ಠಾಣಾಧಿಕಾರಿ ಜಂಬೂರಾಜ್ ಮಹಾಜನ್, ಎ ಎಸ್.ಐ ಮೋಹನ್. ಕೆ ಮಹಾಲಕ್ಷ್ಮಿ ಮಹೇಶ್ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

ಬಂಟ್ವಾಳ | ಕಟ್ಟೆಯಲ್ಲಿದ್ದ ಭಗವಾಧ್ವಜ ಹಾಗೂ ಹನುಮನ ಚಿತ್ರಕ್ಕೆ ಹಾನಿಗೈದ ದುಷ್ಕರ್ಮಿಗಳು, ದೂರು ದಾಖಲು

ಮಾರ್ಗಸೂಚಿ ಕಟ್ಟೆಯಲ್ಲಿದ್ದ ಭಗವಾಧ್ವಜ ಹಾಗೂ ಹನುಮಂತನ ಚಿತ್ರಕ್ಕೆ ದುಷ್ಕರ್ಮಿಗಳು ಹಾನಿ ಮಾಡಿದ ಘಟನೆ ಬಂಟ್ವಾಳದ ಎಸ್ ವಿಎಸ್ ಕಾಲೇಜಿನ ಬಳಿ ಇರುವ ಮಂಡಾಡಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. 10-12 ವರ್ಷಗಳಿಂದ ಈ ಕಟ್ಟೆ ಇದ್ದು, ಕಳೆದ ಕೆಲವು ದಿನಗಳ ಹಿಂದೆ ವಿಶ್ವ ಹಿಂದೂ ಪರಿಷತ್ ಮಂಡಾಡಿ ಶಾಖೆಯು ಈ ಕಟ್ಟೆಯನ್ನು ನವೀಕರಣಗೊಳಿಸಿತ್ತು. ಅದಕ್ಕೆ ಹನುಮಂತನ ಚಿತ್ರ, ಭಗವಾಧ್ವಜ ಅಳವಡಿಸಲಾಗಿತ್ತು. ನಿನ್ನೆ ತಡರಾತ್ರಿ ದುಷ್ಕರ್ಮಿಗಳು ಕಟ್ಟೆಯನ್ನು ಒಡೆದುಹಾಕಿ, ಭಗವಾಧ್ವಜವನ್ನು ಕಿತ್ತೊಯ್ದಿದ್ದಾರೆ. ನಿನ್ನೆ ರಾತ್ರಿ 2 ಗಂಟೆ ಸುಮಾರಿಗೆ ಕಾರೊಂದು …

ಬಂಟ್ವಾಳ | ಕಟ್ಟೆಯಲ್ಲಿದ್ದ ಭಗವಾಧ್ವಜ ಹಾಗೂ ಹನುಮನ ಚಿತ್ರಕ್ಕೆ ಹಾನಿಗೈದ ದುಷ್ಕರ್ಮಿಗಳು, ದೂರು ದಾಖಲು Read More »

ಉಪ್ಪಿನಂಗಡಿ : ದ್ವಿಚಕ್ರ ವಾಹನಕ್ಕೆ ಮೀನು ಸಾಗಾಟದ ಲಾರಿ ಡಿಕ್ಕಿ ,ಬೈಕ್ ಸವಾರ ಸ್ಥಳದಲ್ಲೇ ಮೃತ್ಯು, ಇನ್ನೋರ್ವ ಗಂಭೀರ

ಉಪ್ಪಿನಂಗಡಿ: ಮೀನಿನ ಲಾರಿ ಮತ್ತು ಆಕ್ಟಿವಾ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ದಾರುಣ ಮೃತಪಟ್ಟ ಘಟನೆ ಉಪ್ಪಿನಂಗಡಿ ಗೋಳಿತೊಟ್ಟು ಸಮೀಪ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಮಂಗಳೂರು ಸಮೀಪದ ಕುಂಟಲ್ಪಾಡಿ ಪದವು ನಿವಾಸಿ ಸಚಿನ್(29) ಎಂದು ತಿಳಿದು ಬಂದಿದೆ.ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸವಾರನ ತಲೆಯ ಮೇಲೆ ಮೀನು ತುಂಬಿಸಿಕೊಂಡು ಹೊರಟಿದ್ದ ಲಾರಿ ಹರಿದಿದ್ದು, ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಹಸವಾರನಿಗೆ ಗಂಭೀರ ಗಾಯಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ.

ಜಾಲ್ಸೂರು : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ,ನಜ್ಜುಗುಜ್ಜಾದ ಕಾರು,ಪ್ರಯಾಣಿಕರಿಗೆ ಗಾಯ

ಸುಳ್ಯ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ಜಾಲ್ಲೂರು ಗ್ರಾಮದ ಅಡ್ಕಾರಿನ ಮಾವಿನಕಟ್ಟೆ ಬಳಿ ಅ.18ರಂದು ಮಧ್ಯಾಹ್ನ ಸಂಭವಿಸಿದೆ. ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರು ಅಡ್ಯಾರು ಮಾವಿನಕಟ್ಟೆಯ ಬಳಿ ಇರುವ ಪೊಲೀಸ್ ಬ್ಯಾರಿಕೇಡ್ ಬಳಿಗೆ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಪಕ್ಕದ ತೋಟಕ್ಕೆ ಪಲ್ಟಿಯಾಯಿತೆನ್ನಲಾಗಿದೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಚಾಲಕ ಸಹಿತ ಪ್ರಯಾಣಿಕರಾದ ಮೈಸೂರಿನ ಶ್ರೇಯಸ್, ಭುವನ್ ಹಾಗೂ ಸರ್ವೇಶ್ ಅವರಿಗೆ ತೀವ್ರ ತರದ ಗಾಯಗಳಾಗಿದ್ದು, ಅವರು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಪ್ಪಿನಂಗಡಿ : ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಪುತ್ತೂರು: ಉಪ್ಪಿನಂಗಡಿಯ ನೇತ್ರಾವತಿ ನದಿಗೆ ಹಾರಿ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯ ಮುತ್ತಪ್ಪ ಶೆಟ್ಟಿ(70ವ) ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.18ರಂದು ಬೆಳಿಗ್ಗೆ ನಡೆದಿದೆ. ಮುತ್ತಪ್ಪ ಶೆಟ್ಟಿ ಅವರನ್ನು ರಕ್ಷಿಸಲು ಸ್ಥಳೀಯ ಯುವಕರು ಪ್ರಯತ್ನ ಪಟ್ಟರೂ ವೇಳೆಗೆ ಮೃತಪಟ್ಟಿದ್ದರೆಂದು ಮಾಹಿತಿ ಲಭಿಸಿದೆ. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿದ್ದಾರೆ.

ಇಂದಿನಿಂದ ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳದವರ ಮೇಲೆ ಕಠಿಣ ನಿಯಮ ಜಾರಿ – ಜಿಲ್ಲಾಧಿಕಾರಿ ವಾರ್ನಿಂಗ್

ಮಾಲ್ ಮತ್ತು ಚಿತ್ರ ಮಂದಿರಗಳ ಪ್ರವೇಶಕ್ಕೆ ಕೋವಿಡ್ ಲಸಿಕೆ ಕಡ್ಡಾಯ ನಿಯಮವನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತವು ಜಿಲ್ಲೆಯಲ್ಲಿ ಜಾರಿಗೊಳಿಸಿದ್ದು, ಈ ಕುರಿತು ಜಿಲ್ಲಾಧಿಕಾರಿ ರಾಜೇಂದ್ರ ಅವರು ಮಾಹಿತಿ ನೀಡಿದ್ದಾರೆ. ಮಲ್ಟಿಪ್ಲೆಕ್ಸ್ ಗಳು, ಥಿಯೇಟರ್ ಗಳು, ಚಿತ್ರಮಂದಿರಗಳಿಗೆ ಎರಡು ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ನೀಡಿದರೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಎಲ್ಲರೂ ಲಸಿಕೆಯನ್ನು ತೆಗೆದುಕೊಳ್ಳಲೇಬೇಕು ಎಂದು ಅವರು ಎಚ್ಚರಿಸಿದ್ದಾರೆ. ಈ ಬಗ್ಗೆ ಕಟ್ಟು ನಿಟ್ಟಾದ ಕ್ರಮವನ್ನು ಜಾರಿಗೆ ತರಲಾಗುವುದು. ಅಧಿಕಾರಿಗಳು ಇನ್ನು ಮುಂದೆ ಸಾರ್ವಜನಿಕವಾಗಿ ಲಸಿಕೆ …

ಇಂದಿನಿಂದ ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳದವರ ಮೇಲೆ ಕಠಿಣ ನಿಯಮ ಜಾರಿ – ಜಿಲ್ಲಾಧಿಕಾರಿ ವಾರ್ನಿಂಗ್ Read More »

ಮಂಗಳೂರಿನ ದೀಪಕ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಿಂದ ನಡೆಯುತ್ತಿದೆಯೇ ಸಾಕ್ಷಿದಾರರ ಕೊಲೆಗೆ ಪ್ಲಾನ್!!? ಮತ್ತೊಮ್ಮೆ ಉದ್ವಿಗ್ನಗೊಳ್ಳಲಿದೆಯೇ ಮಂಗಳೂರು!?

ಕೆಲ ಸಮಯದಿಂದ ಶಾಂತವಾಗಿದ್ದ ಮಂಗಳೂರಿನಲ್ಲಿ ಮತ್ತೊಮ್ಮೆ ನೆತ್ತರು ಹರಿಸಿ ಕೋಮು ದ್ವೇಷ ಸಾಧಿಸಲು ಪ್ಲಾನ್ ನಡೆಯುತ್ತಿದೆ ಎಂಬ ಮಾಹಿತಿಯೊಂದು ಬಂದಿದ್ದು, ಈ ಬಗೆಗೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆಯ ತುಣುಕೊಂದು ಸದ್ಯ ವೈರಲ್ ಆಗಿದೆ. ಕೆಲ ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದ ಹಿಂದೂ ಕಾರ್ಯಕರ್ತ ದೀಪಕ್ ರಾವ್ ಹತ್ಯೆಯ ಪ್ರಮುಖ ಆರೋಪಿ ಪಿಂಕಿ ನವಾಜ್ ಎಂಬಾತ ಕೊಲೆಯ ಬಗ್ಗೆ ಸಾಕ್ಷಿದಾರನಾಗಿರುವ ಕಾಟಿಪಳ್ಳ ಮೂರನೇ ವಾರ್ಡ್ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆಗೆ ವಾಟ್ಸಪ್ ಗ್ರೂಪ್ ಒಂದರಲ್ಲಿ ಬಹಿರಂಗವಾಗಿ ಧಮ್ಕಿ ಹಾಕಿರುವ …

ಮಂಗಳೂರಿನ ದೀಪಕ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಿಂದ ನಡೆಯುತ್ತಿದೆಯೇ ಸಾಕ್ಷಿದಾರರ ಕೊಲೆಗೆ ಪ್ಲಾನ್!!? ಮತ್ತೊಮ್ಮೆ ಉದ್ವಿಗ್ನಗೊಳ್ಳಲಿದೆಯೇ ಮಂಗಳೂರು!? Read More »

ಶಿರಾಡಿ : ರಸ್ತೆ ಬದಿಯ ಧರೆಗೆ ಲಾರಿ ಡಿಕ್ಕಿ | ಚಾಲಕ ಸಾವು

ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ನಲ್ಲಿ ಲಾರಿಯೊಂದು ರಸ್ತೆ ಬದಿಯ ಗೋಡೆಗೆ ಬಡಿದು ಚಾಲಕ ಸಾವನ್ನಪಿದ ಘಟನೆ ಶನಿವಾರ ಮುಂಜಾನೆ ನಡೆದಿದೆ. ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿರ ಬಹುದೆಂದು ಅಂದಾಜಿಸಲಾಗಿದೆ. ಮೃತ ಚಾಲಕನನ್ನು ಗೌರಿಬಿದನೂರಿನ ಮಂಜುನಾಥ ಎಂದು ಗುರುತಿಸಲಾಗಿದೆ. ಕ್ರೇನ್ ಸಹಾಯದಿಂದ ವಾಹನ ತೆರವು ಕಾರ್ಯ ನಡೆಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಉಪ್ಪಿನಂಗಡಿ:
ಮೆಸ್ಕಾಂ ಕಛೇರಿಗೆ ಆಡು ಬಂದ ವಿಚಾರವಾಗಿ ನಡೆದ ಜಗಳ, ಕರ್ತವ್ಯನಿರತ ಲೈನ್ ಮ್ಯಾನ್ ಗಳಿಗೆ ಹಲ್ಲೆ, ಆಸ್ಪತ್ರೆಗೆ ದಾಖಲು

ಉಪ್ಪಿನಂಗಡಿಯಲ್ಲಿ ಕರ್ತವ್ಯ ನಿರತ ಮೆಸ್ಕಾಂ ಸಿಬಂದಿಗಳ ಮೇಲೆ ವ್ಯಕ್ತಿಯೋರ್ವ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಅ 15 ರಂದು ಸಂಜೆ ಉಪ್ಪಿನಂಗಡಿ ಮೆಸ್ಕಾಂ ಕಚೇರಿಯಲ್ಲಿ ನಡೆದಿದ್ದು,ಆಡಿನ ವಿಚಾರದಲ್ಲಿ ನಡೆದ ವಾಗ್ವಾದ ಹಲ್ಲೆಯ ಮಟ್ಟಕ್ಕೆ ತಲುಪಿದೆ.ಘಟನೆಯಲ್ಲಿ ಉಪ್ಪಿನಂಗಡಿಯ ಮೆಸ್ಕಾಂ ಕಚೇರಿಯ ಸಿಬಂದಿಗಳಾದ ಜೂನಿಯರ್ ಲೈನ್ ಮ್ಯಾನ್ ವಿತೇಶ್ ಮತ್ತು ಸಿಬ್ಬಂದಿ ಸತೀಶ್ ಹಿರೆಬಂಡಾಡಿ ಹಲ್ಲೆಗೊಳಗಾದ ಸಿಬ್ಬಂದಿಗಲಳೆಂದು ಗುರುತಿಸಲಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೊಳಗಾಗಿ ಗಾಯಗೊಂಡಿರುವ ಅವರಿಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ದೊಣ್ಣೆಯಿಂದ ಹಲ್ಲೆ ನಡೆಸಿದಾತ ಉಪ್ಪಿನಂಗಡಿ ಗ್ರಾಮದ …

ಉಪ್ಪಿನಂಗಡಿ:
ಮೆಸ್ಕಾಂ ಕಛೇರಿಗೆ ಆಡು ಬಂದ ವಿಚಾರವಾಗಿ ನಡೆದ ಜಗಳ, ಕರ್ತವ್ಯನಿರತ ಲೈನ್ ಮ್ಯಾನ್ ಗಳಿಗೆ ಹಲ್ಲೆ, ಆಸ್ಪತ್ರೆಗೆ ದಾಖಲು
Read More »

ಕಾರ್ಯಕರ್ತರಿಗೆ ಬಾಂಬ್,ಗ್ರಾನೈಡ್ ದೀಕ್ಷೆ ನೀಡಿಲ್ಲ,ತ್ರಿಶೂಲ ದೀಕ್ಷೆ ನೀಡಿದ್ದೇವೆ- ಶರಣ್ ಪಂಪ್‌ವೆಲ್

ಬಜರಂಗದಳದ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ಕಾರ್ಯಕ್ರಮದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದಂತೆ ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಬಾಂಬ್, ಗ್ರಾನೈಡ್ ದೀಕ್ಷೆ ಮಾಡಿಲ್ಲ. ಪ್ರತೀ ವರ್ಷವೂ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ನಡೆಸುತ್ತೇವೆ. ಆಯುಧಪೂಜೆ ಸಂದರ್ಭ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ಮಾಡಿದ್ದೇವೆ. ಇದು ಯಾರ ವಿರುದ್ಧವೂ ಅಲ್ಲ ಯಾರನ್ನು ಕೊಲ್ಲಬೇಕು ಎನ್ನುವ ದುರುದ್ದೇಶ ಇಲ್ಲ. ಕಾರ್ಯಕರ್ತರಿಗೆ ಆತ್ಮಸ್ಟೈರ್ಯ ತುಂಬಲು ತ್ರಿಶೂಲ ದೀಕ್ಷೆ ಮಾಡಿದ್ದೇವೆ. ಕಾನೂನು …

ಕಾರ್ಯಕರ್ತರಿಗೆ ಬಾಂಬ್,ಗ್ರಾನೈಡ್ ದೀಕ್ಷೆ ನೀಡಿಲ್ಲ,ತ್ರಿಶೂಲ ದೀಕ್ಷೆ ನೀಡಿದ್ದೇವೆ- ಶರಣ್ ಪಂಪ್‌ವೆಲ್ Read More »

error: Content is protected !!
Scroll to Top