ಕಡಬ

ಸವಣೂರು: ಅಂಬಾ ಬ್ರದರ್ಸ್ ವತಿಯಿಂದ ಹಡೀಲು ಬಿದ್ದ ಗದ್ದೆಯಲ್ಲಿ ಬೇಸಾಯಕ್ಕೆ ಚಾಲನೆ | ಗದ್ದೆಗಿಳಿಯೋಣ ಬಾ ಕಾರ್ಯಕ್ರಮದಲ್ಲಿ ಸಚಿವ ಎಸ್.ಅಂಗಾರ ಭಾಗಿ

ಸವಣೂರು : ಇಲ್ಲಿನ ಚಂದ್ರನಾಥ ಬಸದಿಯ ಸಮೀಪದ ಗದ್ದೆಯೊಂದು ಹಲವು ವರ್ಷಗಳಿಂದ ಬೇಸಾಯ ಮಾಡದೇ ಹಡೀಲು ಬಿದ್ದಿದ್ದು,ಸವಣೂರಿನ ಸಮಾನ ಮನಸ್ಕ ಯುವಕರ ತಂಡ ಅಂಬಾ ಬ್ರದರ್ಸ್ ಇದರ ವತಿಯಿಂದ ಈ ಗದ್ದೆಯಲ್ಲಿ ಈ ಬಾರಿ ಬೇಸಾಯ ನಡೆಯಲಿದೆ. ಅಂಬಾ ಬ್ರದರ್ಸ್ ತಂಡವು ಈಗಾಗಲೇ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು,ಇದೀಗ ಹಡೀಲು ಬಿದ್ದ ಗದ್ದೆಯಲ್ಲಿ ಭತ್ತದ ಬೇಸಾಯಕ್ಕೆ ಮುಂದಾಗಿದ್ದು ಈ ವಿನೂತನ ಕಾರ್ಯಕ್ರಮ ಅಂಬಾ ಗದ್ದೆಗಿಳಿಯೋಣ ಬಾ ಕಾರ್ಯಕ್ರಮಕ್ಕೆ ರವಿವಾರ ಸವಣೂರು ಬಸದಿಯ ಆವರಣದ ಗದ್ದೆಯಲ್ಲಿ ಗದ್ದೆಯ ಮಾಲಕ ನ್ಯಾಯವಾದಿ …

ಸವಣೂರು: ಅಂಬಾ ಬ್ರದರ್ಸ್ ವತಿಯಿಂದ ಹಡೀಲು ಬಿದ್ದ ಗದ್ದೆಯಲ್ಲಿ ಬೇಸಾಯಕ್ಕೆ ಚಾಲನೆ | ಗದ್ದೆಗಿಳಿಯೋಣ ಬಾ ಕಾರ್ಯಕ್ರಮದಲ್ಲಿ ಸಚಿವ ಎಸ್.ಅಂಗಾರ ಭಾಗಿ Read More »

ಕಡಬ : ರಕ್ತ ಸ್ರಾವ, ಅವಳಿ ಮಕ್ಕಳಿಗೆ ಜನ್ಮನೀಡಿದ ತಾಯಿ ಮೃತ್ಯು

ಕಡಬ : ವಿಪರೀತ ರಕ್ತಸ್ರಾವದಿಂದಾಗಿ ಕಡಬದ ಬಾಣಂತಿ ಮಹಿಳೆಯೋರ್ವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ. ಮೃತ ಮಹಿಳೆಯನ್ನು ಕಡಬ ತಾಲೂಕು ಕೊಂಬಾರು ಗ್ರಾಮದ ಇಡ್ಯಡ್ಕ ಕಟ್ಟೆ ನಿವಾಸಿ ಚೇತನ್ ಎಂಬವರ ಪತ್ನಿ ವಿದ್ಯಾ(30) ಎಂದು ಗುರುತಿಸಲಾಗಿದೆ. ಮೃತರನ್ನು ಹೆರಿಗೆಗಾಗಿ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬುಧವಾರ ಬೆಳಗಿನ ಜಾವ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎನ್ನಲಾಗಿದೆ. ಬಳಿಕ ತೀವ್ರ ರಕ್ತಸ್ರಾವದಿಂದಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ‌.

ಬೆಳ್ತಂಗಡಿ, ಸುಬ್ರಮಣ್ಯ | ಮಗಳನ್ನು ಮದುವೆ ಮಾಡಿ ಕೊಡಲ್ಲ ಅಂದದ್ದೆ ತಪ್ಪಾಯ್ತು, ಅಳಿಯನಾಗಲು ಹೊರಟವ ಅವಾಚ್ಯವಾಗಿ ಬೈದು ಮಂಡೆಕತ್ತಿ ಬೀಸಿದ !

ಬೆಳ್ತಂಗಡಿ;  ಮಗಳನ್ನು ಮದುವೆ ಮಾಡಿಕೊಡುವುದಿಲ್ಲ ಎಂದು ತಂದೆ ಹೇಳಿದ್ದೇ ತಪ್ಪಾಯಿತು. ಭಾವೀ ಅಳಿಯನಾಗಳು ಆಸೆಪಟ್ಟು ವ್ಯಕ್ತಿಯೇ ಕಟ್ಟಿ ಬೀಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಕಡಬ ತಾಲೂಕು ಸುಬ್ರಹ್ಮಣ್ಯ ಕೈಕಂಬ ನಿವಾಸಿ ದಿನೇಶ ಎಂಬಾತ ಲಾಯಿಲ ಗ್ರಾಮದ ವಿವೇಕಾನಂದ ನಗರ ಸೋಮನಾಥ ಕುಲಾಲ್ ಎಂಬವರಿಗೆ ಕತ್ತಿಯಿಂದ ಕಡಿದು ಗಾಯಗೊಳಿಸಿದ ಘಟನೆ ಜು.11 ರಂದು ಬೆಳಿಗ್ಗೆ ನಡೆದಿದೆ. ಆರೋಪಿಯು ಕೆಎ 51 ಇಜೆ174 ನಂಬರ್‌ನ ಬೈಕಿನಲ್ಲಿ ವಿವೇಕಾನಂದ ನಗರದ ಸೋಮನಾಥ ಕುಲಾಲ್ ಅವರ ಮನೆಯ ಸಿಟೌಟ್‌ ಗೆ ಏಕಾಏಕಿ ನುಗ್ಗಿ …

ಬೆಳ್ತಂಗಡಿ, ಸುಬ್ರಮಣ್ಯ | ಮಗಳನ್ನು ಮದುವೆ ಮಾಡಿ ಕೊಡಲ್ಲ ಅಂದದ್ದೆ ತಪ್ಪಾಯ್ತು, ಅಳಿಯನಾಗಲು ಹೊರಟವ ಅವಾಚ್ಯವಾಗಿ ಬೈದು ಮಂಡೆಕತ್ತಿ ಬೀಸಿದ ! Read More »

ಎಡಮಂಗಲ ಕೋವಿಡ್ ಟೆಸ್ಟ್ ಗೆ ವಿರೋಧ: ಪೋಲೀಸರ ಅಸಹಕಾರ: ಕಾರ್ಯಪಡೆ ನೋಡಲ್ ಅಧಿಕಾರಿ ಆರೋಪ

ಕಡಬ : ಎಡಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲೋನಿಯೊಂದರ ವ್ಯಕ್ತಿಗೆ ಕೊರೊನ ಪಾಸಿಟಿವ್ ಬಂದ್ ಹಿನ್ನೆಲೆಯಲ್ಲಿ ಭಾನುವಾರ ಆ ಕಾಲೋನಿಯ ಜನರ ಕೋವಿಡ್ ಟೆಸ್ಟ್ ಗೆ ಹೋದ ಆರೋಗ್ಯ ಇಲಾಖಾಧಿಕಾರಿಗಳನ್ನೊಳಗೊಂಡ ಕೋವಿಡ್ ಕಾರ್ಯಪಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.ಇದಕ್ಕೆ ಪೋಲೀಸರ ಸಹಕಾರ ಕೋರಿದರೆ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಕಾರ್ಯಪಡೆ ಮುಖ್ಯಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಎಡಮಂಗಲ ಗ್ರಾಮ ಪಂಚಾಯತ್ ಸದಸ್ಯರೊಬ್ಬರಿಗೆ ಶನಿವಾರ ಕೊರೊನಾ ಪಾಸಿಟಿವ್ ವರದಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕೋವಿಡ್ ಪೀಡಿತ ಗ್ರಾ. ಪಂ.ಸದಸ್ಯರು ವಾಸಿಸುವ …

ಎಡಮಂಗಲ ಕೋವಿಡ್ ಟೆಸ್ಟ್ ಗೆ ವಿರೋಧ: ಪೋಲೀಸರ ಅಸಹಕಾರ: ಕಾರ್ಯಪಡೆ ನೋಡಲ್ ಅಧಿಕಾರಿ ಆರೋಪ Read More »

ವಾಹನ ಅಟ್ಟಾಡಿಸಿ ಓಡಿಸಿಕೊಂಡು ಬಂದ ಕಾಡಾನೆ | ಸುಬ್ರಹ್ಮಣ್ಯ-ಗುಂಡ್ಯ ರಸ್ತೆಯಲ್ಲಿ ಘಟನೆ

ಕಡಬ:ಕಾಡಾನೆಯೊಂದು ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ಅಟ್ಟಾಡಿಸಿದ ಘಟನೆ ಭಾನುವಾರದಂದು ಸುಬ್ರಹ್ಮಣ್ಯ – ಗುಂಡ್ಯ ರಾಜ್ಯ ಹೆದ್ದಾರಿಯ ಅನಿಲ ಎಂಬಲ್ಲಿ ನಡೆದಿದೆ. ಸಿರಿಬಾಗಿಲು ಗ್ರಾಮದ ಅನಿಲ ಸಮೀಪ ಹೆದ್ದಾರಿಗೆ ಆಗಮಿಸಿದ ಒಂಟಿ ಕಾಡಾನೆಯು ಕಾರು ಹಾಗೂ ದ್ವಿಚಕ್ರ ವಾಹನ ಸವಾರರನ್ನು ಓಡಿಸಿದೆ. ಈ ರಸ್ತೆಯ ಮೂಲಕ ತೆರಳುವವರು ಜಾಗ್ರತೆಯಿಂದ ಸಂಚರಿಸುವಂತೆ ಸ್ಥಳೀಯರು ತಿಳಿಸಿದ್ದಾರೆ.

ಕುದ್ಮಾರು : ಅಡಿಕೆ ಗಿಡ ಕಿತ್ತು ದಬ್ಬಾಳಿಕೆ ನಡೆಸಿದ ಗೇರು ನಿಗಮ ಅಧಿಕಾರಿಗಳು

ಕಡಬ ತಾಲೂಕಿನ ಕುದ್ಮಾರು ಗ್ರಾಮದ ಕೆಡೆಂಜಿ ಎಂಬಲ್ಲಿ ಕೃಷಿಕರೋರ್ವರು ನಾಟಿ ಮಾಡಿದ ಅಡಿಕೆಗಳನ್ನು ಗೇರು ನಿಗಮದ ಅಧಿಕಾರಿಗಳು ಕಿತ್ತು ದಬ್ಬಾಳಿಕೆ ನಡೆಸಿದ್ದಾರೆ. ಕುದ್ಮಾರು ಗ್ರಾಮದ ಕೆಡೆಂಜಿ ಎಂಬಲ್ಲಿ ನಾಗೇಶ್ ಎಂಬವರು ತಮ್ಮ ಜಾಗದ ಪಕ್ಕದಲ್ಲಿರುವ ಭೂಮಿಯನ್ನು ಕಳೆದ ಹಲವಾರು ವರ್ಷಗಳಿಂದ ಅನುಭವಿಸಿಕೊಂಡು ಬರುತ್ತಿದ್ದು,ಎರಡು ವರ್ಷದ ಹಿಂದೆ ಅಡಿಕೆ ಗಿಡ ನಾಟಿ ಮಾಡಿದ್ದರು. ಆದರೆ ಗೇರುನಿಗಮದ ಅಧಿಕಾರಿ ಬಾಲಕೃಷ್ಣ ಹಾಗೂ ಸಿಬ್ಬಂದಿಗಳು ನಿಗಮದ ಹೆಸರಲ್ಲಿ ಜಾಗವಿಲ್ಲದಿದ್ದರೂ ಅಕ್ರಮವಾಗಿ ಪ್ರವೇಶಮಾಡಿ ನೆಟ್ಟ ಅಡಿಕೆ ಗಿಡವನ್ನು ಕಿತ್ತು ದಬ್ಬಾಳಿಕೆ ಮಾಡಿದ್ದಾರೆ.ಅಲ್ಲದೆ ಮನೆಯಲ್ಲಿ …

ಕುದ್ಮಾರು : ಅಡಿಕೆ ಗಿಡ ಕಿತ್ತು ದಬ್ಬಾಳಿಕೆ ನಡೆಸಿದ ಗೇರು ನಿಗಮ ಅಧಿಕಾರಿಗಳು Read More »

ಪರಿಸರ ಹೋರಾಟಗಾರ್ತಿಯಿಂದ ಕೇಂದ್ರ ಸಚಿವರ ತನಕ ಏರಿದ ಚಾರ್ವಾಕದ ಶೋಭಾ ಕರಂದ್ಲಾಜೆ

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಕಡಬ ತಾಲೂಕು ಚಾರ್ವಾಕ ಗ್ರಾಮದ ಶೋಭಾ ಕರಂದ್ಲಾಜೆ ಅವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸೇರಿದ್ದಾರೆ. ತಾನೆಷ್ಟೇ ದೊಡ್ಡ ಸ್ಥಾನಕ್ಕೆ ಏರಿದರೂ ಹುಟ್ಟೂರಿನ ಅಭಿಮಾನ ಹಾಗೂ ಸಂಪರ್ಕವನ್ನು ಇಂದಿಗೂ ಇರಿಸಿಕೊಂಡಿದ್ದಾರೆ. ಪ್ರತೀ ಬಾರಿಯೂ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ಮುನ್ನ ತನ್ನ ಊರಿನ ದೇವಸ್ಥಾನಗಳಿಗೆ ಬೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಮುಂದಿನ ಕಾರ್ಯ ನಡೆಸುವುದು ವಾಡಿಕೆ ಮಾಡಿಕೊಂಡವರು. ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೂ ಸಕ್ರಿಯವಾಗಿ ಗುರುತಿಸಿಕೊಂಡ ಶೋಭಾ …

ಪರಿಸರ ಹೋರಾಟಗಾರ್ತಿಯಿಂದ ಕೇಂದ್ರ ಸಚಿವರ ತನಕ ಏರಿದ ಚಾರ್ವಾಕದ ಶೋಭಾ ಕರಂದ್ಲಾಜೆ Read More »

ಕಡಬ : ಇಲಿ ಜ್ವರಕ್ಕೆ ಐತ್ತೂರಿನ ಯುವಕ ಬಲಿ

ಕಡಬ: ಕಡಬ ತಾಲೂಕು ಐತ್ತೂರು ಗ್ರಾಮದ ಪಂಜೋಡಿ ನಿವಾಸಿ ಶಿವಪ್ಪ ಗೌಡರ ಪುತ್ರ ಮೋಹಿತ್ (19) ಇಲಿ ಜ್ವರದಿಂದ ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಕೆಲವು ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.ಮೃತ ಮೋಹಿತ್ ತಾಯಿ ಸುಶೀಲಾ, ಸಹೋದರಿ ಗೀತಾ ಅವರನ್ನು ಅಗಲಿದ್ದಾರೆ

ಬಲ್ಯ : ದಲಿತರ ಮನೆಗೆ ತೆರಳುವ ದಾರಿಯನ್ನು ಅತಿಕ್ರಮಣ | ಸೂಕ್ತ ಕ್ರಮಕ್ಕೆ ದಲಿತ ಸೇವಾ ಸಮಿತಿ ಒತ್ತಾಯ

ಕಡಬ ತಾಲೂಕು ಬಲ್ಯ ಗ್ರಾಮದ ಕಜೆ ಎಂಬಲ್ಲಿ ದಲಿತ ವ್ಯಕ್ತಿಯೊರ್ವರ ಮನೆಗೆ ತೆರಳುವ ದಾರಿಯನ್ನು ವ್ಯಕ್ತಿಗಳಿಬ್ಬರು ಅಕ್ರಮವಾಗಿ ಅತಿಕ್ರಮಿಸಿದ್ದಾರೆ ಎಂದು ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಆರೋಪಿಸಿದ್ದಾರೆ. ಕಡಬ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು, ಬಲ್ಯ ಗ್ರಾಮದ ಕಜೆ ಎಂಬಲ್ಲಿ ಆನಂದ ಮುಗೇರ ಎಂಬುವವರ ಮನೆಗೆ ಹಾದು ಹೊಗುವ ದಾರಿಯನ್ನು ಗ್ರಾಮದ ಟಿ ಕುರಿಯಾನ್ ಹಾಗು ತೊಮಸ್ ಎಂಬುವವರು …

ಬಲ್ಯ : ದಲಿತರ ಮನೆಗೆ ತೆರಳುವ ದಾರಿಯನ್ನು ಅತಿಕ್ರಮಣ | ಸೂಕ್ತ ಕ್ರಮಕ್ಕೆ ದಲಿತ ಸೇವಾ ಸಮಿತಿ ಒತ್ತಾಯ Read More »

ನೆಟ್ಟಣ: ಮನೆಯೊಂದಕ್ಕೆ ಅರಣ್ಯಾಧಿಕಾರಿಗಳ ದಾಳಿ| ಕಾಡು ಪ್ರಾಣಿಯ ಮಾಂಸ ಪತ್ತೆ, ಓರ್ವ ವಶಕ್ಕೆ

ಕಡಬ : ಖಚಿತ ಮಾಹಿತಿಯ ಮೇರೆಗೆ ಮನೆಯೊಂದಕ್ಕೆ ಸುಬ್ರಹ್ಮಣ್ಯ ವಲಯಾರಣ್ಯಧಿಕಾರಿಗಳು ದಾಳಿ ನಡೆಸಿ ಕಾಡು ಪ್ರಾಣಿಯೊಂದರ ಮಾಂಸದೊಂದಿಗೆ ಓರ್ವ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡ ಘಟನೆ ಜು.6 ರ ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ. ಸುಬ್ರಹ್ಮಣ್ಯ ವಲಯಾರಣ್ಯಧಿಕಾರಿಗಳ ನೇತೃತ್ವದಲ್ಲಿ ನೆಟ್ಟಣ ವಾಲ್ತಾಜೆ ರಮೇಶ್ ಎಂಬವರ ಮನೆಗೆ ದಾಳಿ ನಡೆಸಿದ್ದು ಈ ಸಂದರ್ಭದಲ್ಲಿ ಮನೆಯಲ್ಲಿ ಕಾಡು ಪ್ರಾಣಿಯೊಂದರ ಮಾಂಸ ಪತ್ತೆಯಾಗಿತ್ತು ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!
Scroll to Top