# SBI ನಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಇದ್ದರೆ, ಈ ಹೊಸ ಸೇವೆಗಳ ಬಗ್ಗೆ ಇಲ್ಲಿದೆ ಮಾಹಿತಿ!

- Link: https://hosakannada.com/business/sbi-bank-account-details-can-be-viewed-on-whatsapp-itself/
- Published: 2023-03-08T16:07:33+00:00
- Author: ವಿದ್ಯಾ ಗೌಡ

SBI Account: [SBI](https://www.onlinesbi.sbi/) ಗ್ರಾಹಕರೇ, ನಿಮಗೊಂದು ಮಹತ್ವದ ಮಾಹಿತಿ 
ಇಲ್ಲಿದೆ. ಇನ್ಮುಂದೆ [SBI](https://www.onlinesbi.sbi/) ನಲ್ಲಿ ಬ್ಯಾಂಕ್ ಅಕೌಂಟ್ ಹೊಂದಿರುವವರು
ತಮ್ಮ ಅಕೌಂಟ್​ನ ಸಂಪೂರ್ಣ​ ಮಾಹಿತಿಯನ್ನು ವಾಟ್ಸಾಪ್​​ನಲ್ಲೇ ನೋಡಬಹುದು. ಹೇಗೆ ಅಂತೀರಾ? ವಿಶ್ವಾದ್ಯಂತ
ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ (Messaging
Platform) ವಾಟ್ಸಪ್ (WhatsApp) ಇದೀಗ ತನ್ನ ಬಳಕೆದಾರರಿಗೆ ಹೊಸ ಫೀಚರ್ (feature) ಅನ್ನು ಪರಿಚಯಿಸಿದೆ.
ಈ ಫೀಚರ್ ನಿಂದಾಗಿ ಇನ್ಮುಂದೆ ಎಸ್​​ಬಿಐ ಅಕೌಂಟ್​ (SBI Account) ಹೊಂದಿರುವವರು ತಮ್ಮ ಅಕೌಂಟ್​
ನ ​ಸಂಪೂರ್ಣ ಮಾಹಿತಿಯನ್ನು ವಾಟ್ಸಾಪ್​​ನಲ್ಲೇ ನೋಡಬಹುದು.

Sponsored

ಭಾರತೀಯ ಸ್ಟೇಟ್ ಬ್ಯಾಂಕ್ (SBI) ಹಾಗೂ ವಾಟ್ಸಾಪ್​ ಒಟ್ಟಾಗಿ ವಾಟ್ಸಾಪ್​ ಬ್ಯಾಂಕಿಂಗ್ ಸರ್ವೀಸ್​
ಅನ್ನು ಪ್ರಾರಂಭಿಸಿದೆ. ಈ ಹೊಸ ಫೀಚರ್ ಬಗ್ಗೆ ಎಸ್​ಬಿಐ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, “SBI 
ಗ್ರಾಹಕರು ಇನ್ಮುಂದೆ ವಾಟ್ಸ್​ಆ್ಯಪ್ ಮೂಲಕ ಖಾತೆಯ ಹಣ ಮತ್ತು ಮಿನಿ ಸ್ಟೇಟ್​ಮೆಂಟ್ ಅನ್ನು ಪಡೆಯಬಹುದು”
ಎಂದು ಹೇಳಿದೆ.

Advertisement

Advertisement

ವಾಟ್ಸಪ್ ನಲ್ಲಿ ಅಕೌಂಟ್​ನಲ್ಲಿನ ಹಣ ಚೆಕ್ ಮಾಡೋದು ಹೇಗೆ? ​
 • ವಾಟ್ಸಾಪ್​ನಲ್ಲಿ ಹಣ ಚೆಕ್ ಮಾಡಲು,
ನೀವು ನಿಮ್ಮ ಖಾತೆಯನ್ನು ನೋಂದಾಯಿಸಿಕೊಳ್ಳಬೇಕು. • ನೋಂದಾವಣೆಗೆ ನೀವು ಬ್ಯಾಂಕ್‌ಗೆ (bank) ಯಾವ
ಮೊಬೈಲ್ (mobile) ನಂಬರ್ ನೀಡಿರುತ್ತೀರಾ ಆ ಮೊಬೈಲ್ ಸಂಖ್ಯೆಯಿಂದ 917208933148 ಗೆ “SMS WAREG
A/c No” ಈ ರೀತಿ ಟೈಪ್ ಮಾಡಿ ಕಳುಹಿಸಬೇಕು. • ನಂತರ ಅಲ್ಲಿ ಅಕೌಂಟ್ ಬ್ಯಾಲೆನ್ಸ್, ಮಿನಿ ಸ್ಟೇಟ್​
ಮೆಂಟ್, ವಾಟ್ಸಾಪ್​​ ಬ್ಯಾಂಕಿಂಗ್‌ನಿಂದ ಡಿ–ರಿಜಿಸ್ಟರ್ ಮಾಡಿ ಎಂಬ ಆಯ್ಕೆಗಳು ಇರುತ್ತದೆ. • ನಿಮಗೆ
ಅಕೌಂಟ್ ಬ್ಯಾಲೆನ್ಸ್ ತಿಳಿದುಕೊಳ್ಳಬೇಕೆಂದಾದರೆ ಒಂದನ್ನು ಟೈಪ್​ ಮಾಡಿ ಸೆಂಡ್ ಮಾಡಿ. ಆಗ ನಿಮ್ಮ 
ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದರ ಮಾಹಿತಿ ಲಭ್ಯವಾಗುತ್ತದೆ.

ಇದನ್ನೂ ಓದಿ : [ಆಂಟಿ ಪ್ರೀತ್ಸೇ! 19 ರ ಯುವಕನೊಂದಿಗೆ ಮಹಿಳೆಯೋರ್ವಳ ಲವ್](https://hosakannada.com/2023/03/08/bangalore-crime-news-a-19-year-old-youth-stabbed-woman-face-because-of-the-breakup/)

Advertisement
