# Bank holidays in June: ಬ್ಯಾಂಕ್‌ ಗ್ರಾಹಕರೇ ಗಮನಿಸಿ:   ಜೂನ್ ತಿಂಗಳಲ್ಲಿ 12 ದಿನ ರಜೆ : ಇಲ್ಲಿದೆ ಡಿಟೇಲ್ಸ್‌

- Link: https://hosakannada.com/business/bank-holidays-in-june-2023/
- Published: 2023-05-25T11:50:58+00:00
- Author: ಕೆ. ಎಸ್. ರೂಪಾ

Bank holidays in June: ನವದೆಹಲಿ : ಮೇ ತಿಂಗಳು ಕೊನೆಗೊಳ್ಳಲು ಮತ್ತು ಜೂನ್ ಪ್ರಾರಂಭವಾಗಲು ಕೇವಲ
ಒಂದು ವಾರ ಮಾತ್ರ ಉಳಿದಿದೆ. ಈ ತಿಂಗಳಲ್ಲಿ ನೀವು ಯಾವುದೇ ಬ್ಯಾಂಕ್‌ ಸಂಬಂಧಿಸಿದ ಕೆಲಸವನ್ನು ಹೊಂದಿದ್ದರೆ
ಮುಂಚಿತವಾಗಿ ಮಾಡಿ. ಜೂನ್‌ ತಿಂಗಳಲ್ಲಿ 12 ದಿನಗಳ ಕಾಲ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. 
ಅದಕ್ಕಾಗಿಯೇ ನಾವು ಜೂನ್ ತಿಂಗಳಲ್ಲಿ ಆರ್ಬಿಐ ಅನುಮೋದಿಸಿದ ರಜಾದಿನಗಳ (Bank holidays in June)
ಪಟ್ಟಿ ಮಾಹಿತಿ ನೀಡಿದ್ದೇವೆ. ಇದರಿಂದ ನಿಮ್ಮ ಆಯಾ ರಾಜ್ಯಗಳಲ್ಲಿ ಬ್ಯಾಂಕುಗಳು ಯಾವ ದಿನದಂದು ಕಾರ್ಯನಿರ್ವಹಿಸುತ್ತವೆ
ಮತ್ತು ಅವು ಯಾವ ದಿನದಂದು ಕಾರ್ಯನಿರ್ವಹಿಸುವುದಿಲ್ಲ ಎಂಬುದರ ಪೂರ್ಣ ವಿವರಗಳನ್ನುತಿಳಿಯಬಹುದಾಗಿದೆ..

Sponsored

ಆದಾಗ್ಯೂ, ಎಟಿಎಂಗಳು ಮತ್ತು ಆನ್ಲೈನ್ ವಹಿವಾಟುಗಳು ಬ್ಯಾಂಕ್ ರಜಾದಿನದ ದಿನದಂದು ಕಾರ್ಯನಿರ್ವಹಿಸುತ್ತವೆ
ಎಂಬುದನ್ನು ನೆನಪಿಡಿ. ಅಲ್ಲದೆ, ಪ್ರತಿ ತಿಂಗಳ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್
ಮುಚ್ಚಲ್ಪಡುತ್ತದೆ. ತಿಂಗಳ ಎಲ್ಲಾ ಭಾನುವಾರಗಳಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಬಕ್ರೀದ್ ಹಬ್ಬವನ್ನು
ಜೂನ್ 28 ರಂದು ಆಚರಿಸಲಾಗುತ್ತದೆ, ಜೂನ್ ತಿಂಗಳಲ್ಲಿ ದೊಡ್ಡ ಹಬ್ಬಗಳಿಗೆ , ದೇಶಾದ್ಯಂತ ಎಲ್ಲಾ ಬ್ಯಾಂಕುಗಳು
ಬಂದ್‌ ಮಾಡಲಾಗುತ್ತದೆ ಎಂದು ವರದಿ ಮಾಡಲಾಗಿದೆ.

Advertisement

Advertisement

ನೀವು ಬ್ಯಾಂಕಿಗೆ ಹೋಗಬೇಕಾದರೆ, ಕೆಳಗೆ ಉಲ್ಲೇಖಿಸಲಾದ ರಜಾದಿನಗಳ ಪಟ್ಟಿಯನ್ನು ಪರಿಗಣಿಸುವುದು ಸೂಕ್ತ.
ಇಲ್ಲದಿದ್ದರೆ ಅನಗತ್ಯವಾಗಿ ಸಮಯವ್ಯರ್ಥವಾಗುವ ಸಾಧ್ಯತೆಯಿದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ, 
ಬ್ಯಾಂಕಿಗೆ ಸಂಬಂಧಿಸಿದ ಬಹುತೇಕ ಎಲ್ಲಾ ಕೆಲಸಗಳನ್ನು ಆನ್ ಲೈನ್ ನಲ್ಲಿ ಮಾಡಬಹುದಾಗಿದೆ. ಎಷ್ಟೇ ಅನ್‌ಲೈನ್‌
ವ್ಯವಸ್ಥೆ ಇದ್ರೂ ಕೆಲ ಗ್ರಾಹಕರು ವಿವಿಧ ಉದ್ದೇಶಗಳಿಗಾಗಿ ಬ್ಯಾಂಕುಗಳಿಗೆ ಬರುತ್ತಾರೆ, ವಿಶೇಷವಾಗಿ
ಸಾಲಕ್ಕಾಗಿ ಅರ್ಜಿ ಸಲ್ಲಿಸಲು, ಅಥವಾ ಚಿನ್ನದ ಆಭರಣಗಳನ್ನು ಬ್ಯಾಂಕಿನಲ್ಲಿ ಅಡಮಾನ ಇಡಲು, ಅಥವಾ ತಮ್ಮ
ಬೆಲೆಬಾಳುವ ವಸ್ತುಗಳನ್ನು ಲಾಕರ್ನಲ್ಲಿ ಅಡಗಿಸಲು, ಅದಕ್ಕಾಗಿಯೇ ರಜಾದಿನಗಳ ಪಟ್ಟಿಯನ್ನು ಮುಂಚಿತವಾಗಿ
ಪರಿಶೀಲಿಸುವ ಮೂಲಕ ಯಾವುದೇ ಸಮಯ ವ್ಯರ್ಥವಾಗುವುದಿಲ್ಲ ಎಂದು ತಿಳಿಯಬಹುದಾಗಿದೆ.

ಜೂನ್ ಬ್ಯಾಂಕ್ ರಜಾದಿನಗಳು ಈ ಕೆಳಗಿನಂತಿವೆ:

ಜೂನ್ 4: ಭಾನುವಾರ‌

ಜೂನ್ 10- ಎರಡನೇ ಶನಿವಾರ

ಜೂನ್ 11: ಭಾನುವಾರ

ಜೂನ್ 15: ಗುರುವಾರ (ಮಿಜೋರಾಂ, ಒಡಿಶಾ)

ಜೂನ್ 18: ಭಾನುವಾರ

ಜೂನ್ 20: ಕಾಂಗ್ (ರಥಯಾತ್ರೆ. ಒಡಿಶಾ, ಮಣಿಪುರ)

ಜೂನ್ 24: ನಾಲ್ಕನೇ ಶನಿವಾರ

ಜೂನ್ 25: ಭಾನುವಾರ

ಜೂನ್ 26: ಖಾರ್ಚಿ ಪೂಜೆಯಿಂದಾಗಿ ತ್ರಿಪುರಾದಲ್ಲಿ ಮಾತ್ರ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಜೂನ್ 28: ಈದ್ ಉಲ್ ಅಝಾದಿಂದಾಗಿ ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ಮತ್ತು ಕೇರಳದಲ್ಲಿ ಬ್ಯಾಂಕುಗಳು
ಮುಚ್ಚಲ್ಪಡುತ್ತವೆ.

ಜೂನ್ 29: ಈದ್ ಉಲ್ ಅಝಾದಿಂದಾಗಿ ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ

ಜೂನ. 30: ಈದ್-ಉಲ್-ಅಧಾ ರಂಜಾನ್ ರಜಾದಿನದ ಬ್ಯಾಂಕುಗಳು ಮಿಜೋರಾಂ ಮತ್ತು ಒಡಿಶಾದಲ್ಲಿ ಮುಚ್ಚಲ್ಪಡುತ್ತವೆ.

ಇದನ್ನೂ ಓದಿ: [Job vacancy : ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ( NRLM) ನಲ್ಲಿ ಉದ್ಯೋಗವಕಾಶ! ಪುತ್ತೂರಿನಲ್ಲಿ ಹುದ್ದೆ, ಈ ಕೂಡಲೇ ಅರ್ಜಿ ಸಲ್ಲಿಸಿ](https://hosakannada.com/2023/05/25/nrlm-job-recruitment-2023-at-puttur/)

Advertisement
