ಕೊಯಿಲ | ರಸ್ತೆ ಬದಿಯಲ್ಲಿ ಜಾನುವಾರಿನ ಎಲುಬು ಪತ್ತೆ | ಸೂಕ್ತಕ್ರಮಕ್ಕೆ ಹಿಂ.ಜಾ.ವೇ ಸಬಳೂರು ಶಾಖೆ ಆಗ್ರಹ

ಕಡಬ ತಾಲೂಕಿನ ಕೊಯಿಲ ಗ್ರಾಮದ ಕುದುಲೂರು -ಕೊಲ್ಯ -ಪರಂಗಜೆ -ಕೊರೆಪದವು ಯ ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ಕವರ್‌ನಲ್ಲಿ ಜಾನುವಾರಿನ ಎಲುಬುಗಳು ಪತ್ತೆಯಾಗಿದೆ. ಈ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿರುವ ಹಿಂದೂ ಜಾಗರಣ ವೇದಿಕೆಯ ಸಬಳೂರು ಅಯೋಧ್ಯಾನಗರ ಶಾಖೆಯ ಪದಾಧಿಕಾರಿಗಳು,ಇಂತಹ ಕೃತ್ಯ ಗಲಭೆ ಸೃಷ್ಟಿಸುವ ಹಿನ್ನೆಲೆಯಲ್ಲಿ ಮಾಡಲಾಗಿದ್ದು,ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದು ಹಿಂದೂಗಳ ಭಾವನೆಗೆ ದಕ್ಕೆ ಉಂಟುಮಾಡುತ್ತಿದೆ.ಈ ಕುರಿತು ಸಂಘಟನೆಯ ಪ್ರಮುಖರು ಕಡಬ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.