ಶ್ರೀ ದೇವಿ ಹೆಗ್ಡೆ

ನೆಲ್ಯಾಡಿ : ಬೈಕ್‌ಗೆ ಕಾರು ಡಿಕ್ಕಿ | ಬೈಕ್ ಸಹಸವಾರೆ ಗರ್ಭಿಣಿ ಗಾಯಗೊಂಡರೂ ಉಪಚರಿಸದೇ ತೆರಳಿದ ಕಾರು ಚಾಲಕ | ಪೊಲೀಸರಿಂದ ನೀರಕಟ್ಟೆಯಲ್ಲಿ‌ ಕಾರು ವಶಕ್ಕೆ

ನೆಲ್ಯಾಡಿ : ಬೈಕ್ ಗೆ ಢಿಕ್ಕಿ ಯಾಗಿ ಬೈಕ್ ಸವಾರ ಹಾಗೂ ಸಹ ಸವಾರೆ ಗಾಯಗೊಂಡಿದ್ದರೂ ಉಪಚರಿಸದೆ ತೆರಳಿದ ಕಾರನ್ನು ನೀರಕಟ್ಟೆ ಸಮೀಪ ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಮೇ 6ರಂದು ಈ ಘಟನೆ ನಡೆದಿದೆ.ನೆಲ್ಯಾಡಿ ಮರುವೋಡಿ ನಿವಾಸಿ ಮೋಹನ್ ಹಾಗೂ ಅವರ ಪತ್ನಿ ವಿದ್ಯಾ ರವರು ಆಸ್ಪತ್ರೆಗೆ ಹೋಗಲೆಂದು ಬೈಕ್ ನಲ್ಲಿ ಬಂದು ರಾಷ್ಟ್ರೀಯ ಹೆದ್ದಾರಿಯಿಂದ ಆಸ್ಪತ್ರೆಗೆ ಹೋಗುವ ರಸ್ತೆಗೆ ತಿರುಗುತ್ತಿದ್ದ ವೇಳೆ ಬೆಂಗಳೂರು ಕಡೆಯಿಂದ ಬಂದ ಕಾರೊಂದು ಇವರ ಬೈಕ್ ಗೆ ಢಿಕ್ಕಿ …

ನೆಲ್ಯಾಡಿ : ಬೈಕ್‌ಗೆ ಕಾರು ಡಿಕ್ಕಿ | ಬೈಕ್ ಸಹಸವಾರೆ ಗರ್ಭಿಣಿ ಗಾಯಗೊಂಡರೂ ಉಪಚರಿಸದೇ ತೆರಳಿದ ಕಾರು ಚಾಲಕ | ಪೊಲೀಸರಿಂದ ನೀರಕಟ್ಟೆಯಲ್ಲಿ‌ ಕಾರು ವಶಕ್ಕೆ Read More »

ಗೋಪಾಲ್ ನಾಯ್ಕ್ ಮೇಲಿನ ಹಲ್ಲೆಯನ್ನು ಖಂಡಿಸಿ ಶ್ರೀ ರಾಮ ಸೇನೆಯ ಮುಖಂಡರುಗಳಿಂದ ಮನೆಗೆ ಭೇಟಿ. ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ ರಾಜ್ಯ ಪ್ರಧಾನ ಕಾರ್ಯದರ್ಶಿ

ಶ್ರೀರಾಮಸೇನೆ ಕಡಬ ಮುಖಂಡರಾದ ಗೋಪಾಲ್ ನಾಯಕ್ ಮೇಲಿನ ಹಲ್ಲೆಯನ್ನು ವಿರೋಧಿಸಿ ಶ್ರೀ ರಾಮ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್ ಹಾಗೂ ಇತರ ಮುಖಂಡರುಗಳು ಇಂದು ಮನೆಗೆ ಭೇಟಿ ಕೊಟ್ಟು ಅವರಿಗೆ ಧೈರ್ಯ ತುಂಬಿದರು. ನಿಮ್ಮೊಂದಿಗೆ ನಾವಿದ್ದೇವೆ, ಹಿಂದೂ ಮುಖಂಡನ ಮೇಲೆ ಹಿಂದುಗಳೇ ಮಾಡಿದ ಹಲ್ಲೆ, ಕೊಲೆಯತ್ನ ಪ್ರಕರಣವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು. ಭೇಟಿಯ ಸಂದರ್ಭದಲ್ಲಿ ಮಂಗಳೂರು-ಉಡುಪಿ ವಿಭಾಗ ಪ್ರಧಾನ ಹರೀಶ್ ಅಮ್ಟಾಡಿ ಮಂಗಳೂರು ಜಿಲ್ಲಾ ಅಧ್ಯಕ್ಷ ಪ್ರದೀಪ್ …

ಗೋಪಾಲ್ ನಾಯ್ಕ್ ಮೇಲಿನ ಹಲ್ಲೆಯನ್ನು ಖಂಡಿಸಿ ಶ್ರೀ ರಾಮ ಸೇನೆಯ ಮುಖಂಡರುಗಳಿಂದ ಮನೆಗೆ ಭೇಟಿ. ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ ರಾಜ್ಯ ಪ್ರಧಾನ ಕಾರ್ಯದರ್ಶಿ Read More »

ಭರದಿಂದ ಸಾಗುತ್ತಿದೆ ಹೊಸಮಠ ಹಳೇ ಸೇತುವೆ ತೆರವು ಕಾರ್ಯ..ದಶಕಗಳ ಇತಿಹಾಸವಿರುವ ಮುಳುಗು ಸೇತುವೆ ಇನ್ನು ಬರೀ ನೆನಪು..ಮುಳುಗು ಸೇತುವೆಯ ಮೇಲೊಂದು ನೋಟ

ತುಳುನಾಡಿನ ಹೆಸರಾಂತ ಮುಳುಗು ಸೇತುವೆ ಎಂದೇ ಪ್ರಸಿದ್ಧಿ ಪಡೆದ ಹೊಸ್ಮಠ ಮುಳುಗು ಸೇತುವೆ. ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಹೊಸಮಠದಲ್ಲಿ ಗುಂಡ್ಯ ಹೊಳೆಗೆ ಅಡ್ಡಲಾಗಿ ಕಟ್ಟಿದ ಮುಳುಗು ಸೇತುವೆ.ಈ ಸೇತುವೆಯ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣವಾದ ಬಳಿಕ ಉಪಯೋಗಕ್ಕೆ ಬಾರದೇ ಇಂದು ಮುಳುಗು ಸೇತುವೆಯ ತೆರವು ಕಾರ್ಯ ಆರಂಭ ಗೊಂಡಿದೆ.ಅನೇಕ ಅನಾಹುತ, ಅನೇಕ ನೆನಪನ್ನು ಮರುಕಳಿಸುವ ಹಳೇ ಸೇತುವೆ (ಹೊಸ್ಮಠ ಸಂಕ)ಇನ್ನು ಬರೀ ನೆನಪು ಮಾತ್ರ. ಆರು ದಶಕಗಳ ಇತಿಹಾಸವಿರುವ ಮುಳುಗು ಸೇತುವೆಯ ಮೇಲೊಂದು ನೋಟ : ಸುಮಾರು …

ಭರದಿಂದ ಸಾಗುತ್ತಿದೆ ಹೊಸಮಠ ಹಳೇ ಸೇತುವೆ ತೆರವು ಕಾರ್ಯ..ದಶಕಗಳ ಇತಿಹಾಸವಿರುವ ಮುಳುಗು ಸೇತುವೆ ಇನ್ನು ಬರೀ ನೆನಪು..ಮುಳುಗು ಸೇತುವೆಯ ಮೇಲೊಂದು ನೋಟ Read More »

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಖೈದಿಗಳ ಮಾರಾಮಾರಿ | ದರೋಡೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗಳ ನಡುವೆ ಪರಸ್ಪರ ಹಲ್ಲೆ

ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ನಡುವೆ ಮಾರಾಮಾರಿ ಹಲ್ಲೆ ನಡೆದಿದ್ದು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಪಣಂಬೂರು ಠಾಣೆಯಲ್ಲಿ ದರೋಡೆ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಸಮೀರ್ ಎಂಬಾತ ಜೈಲಿನಲ್ಲಿದ್ದ ಇತರ ವಿಚಾರಣಾಧೀನ ಕೈದಿಗಳಿಗೆ ಹಲ್ಲೆ ನಡೆಸಿದ್ದಾನೆ. ಮುಲ್ಕಿ ಠಾಣೆ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿತನಾಗಿದ್ದ ಅನ್ಸಾರ್ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಬೆಳಗ್ಗಿನ ಉಪಾಹಾರದ ಸಮಯದಲ್ಲಿ ಮಾರಾಮಾರಿ ನಡೆದಿದ್ದು ಸಮೀರ್ ಸ್ಟೀಲ್ ಚಮಚ ಮತ್ತಿತರ ಅಡುಗೆ ಸಾಮಗ್ರಿಗಳನ್ನು ಬಳಸಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಅನ್ಸಾರ್ ಮತ್ತು …

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಖೈದಿಗಳ ಮಾರಾಮಾರಿ | ದರೋಡೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಗಳ ನಡುವೆ ಪರಸ್ಪರ ಹಲ್ಲೆ Read More »

ಬರಹಗಾರಿಕೆಯಲ್ಲೇ ಸವಾಲೊಡ್ದುವ ‘ಬರವುದ ಮಾಣಿಕ್ಯ ‘ – ಕೇಶವ ನೆಲ್ಯಾಡಿ | ನಾವಿಂದು ಪರಿಚಯಿಸುವ ತೆರೆಮರೆಯ ಪ್ರತಿಭಾವಂತ ಕಲಾವಿದ !

ಬರಹಗಾರಿಕೆ ಕೂಡಾ ಒಂದು ಅತ್ಯದ್ಭುತ ಕಲೆ ಎಂದೇ ನಂಬಿಕೆ. ಆ ನಂಬಿಕೆ ನಿಜಕ್ಕೂ ಸತ್ಯ. ಎಲ್ಲರೂ ಬರಹಗಾರರಾಗಲು, ಅಥವಾ ಅರ್ಥೈಸಲು ಅರ್ಹರಾಗಿರುವುದಿಲ್ಲ. ಬರಹವೇ ತನ್ನ ಸರ್ವಸ್ವ, ಕೂತಲ್ಲಿ ನಿಂತಲ್ಲಿ, ಕಣ್ಣಿಗೆ ಕಾಣದನ್ನು ಕಲ್ಪನೆ ಮಾಡಿಕೊಂಡು ಬರೆಯುವ ಕವಿಯು ನಮ್ಮ ಕನ್ನಡ ನಾಡಿಗೆ ಅನೇಕ ಪ್ರಶಸ್ತೀ ತಂದುಕೊಟ್ಟಿದ್ದಾರೆ. ಇಂಥ ಕವಿ, ಲೇಖಕರ ಪಾಲಿಗೆ ಸೇರಿದ ಓರ್ವ ಧೀಮಂತ ವ್ಯಕ್ತಿ, ಕಷ್ಟದಿಂದಲೇ ಮೇಲೆ ಬಂದು ಉತ್ತಮ ಬರಹಗಾರರಾಗಿ ಅನೇಕ ನಾಟಕ, ಕವನಗಳನ್ನು ರಚಿಸಿ ನಿರ್ದೇಶಸಿ ಇದೀಗ ‘ಬರವುದ ಮಾಣಿಕ್ಯ’ ಎಂಬ …

ಬರಹಗಾರಿಕೆಯಲ್ಲೇ ಸವಾಲೊಡ್ದುವ ‘ಬರವುದ ಮಾಣಿಕ್ಯ ‘ – ಕೇಶವ ನೆಲ್ಯಾಡಿ | ನಾವಿಂದು ಪರಿಚಯಿಸುವ ತೆರೆಮರೆಯ ಪ್ರತಿಭಾವಂತ ಕಲಾವಿದ ! Read More »

ಜಿ.ಪಂ.,ತಾ.ಪಂ ಚುನಾವಣೆ ಮುಂದೂಡಲು ಚಿಂತನೆ -ಸಚಿವ ಈಶ್ವರಪ್ಪ

        ಕೋವಿಡ್ ಸೋಂಕು  ಏರುತ್ತಿರುವ ಹಿನ್ನೆಲೆಯಲ್ಲಿ  ಜಿ.ಪಂ, ತಾ.ಪಂ ಚುನಾವಣೆ ಸದ್ಯಕ್ಕೆ ಬೇಡ ಎಂಬ ಅಭಿಪ್ರಾಯ ಕೇಳಿಬರುತ್ತಿರುವುದರಿಂದ ಚುನಾವಣೆ ಮುಂದೂಡುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರವನ್ನು ಬಳಿಕ ಚುನಾವಣಾ ಆಯೋಗಕ್ಕೆ ತಿಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಚುನಾವಣೆ ನಡೆದರೆ 3.5ಕೋಟಿ ಜನ ಇದರಲ್ಲಿ ಭಾಗಿಯಾಗಬೇಕಾಗುತ್ತದೆ. ಹಾಗಾಗಿ ಚುನಾವಣೆ ಮುಂದೂಡುವುದು ಸೂಕ್ತ ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿಬರುತ್ತಿದೆ. ಈ ವಿಚಾರವನ್ನು ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಚುನಾವಣಾ …

ಜಿ.ಪಂ.,ತಾ.ಪಂ ಚುನಾವಣೆ ಮುಂದೂಡಲು ಚಿಂತನೆ -ಸಚಿವ ಈಶ್ವರಪ್ಪ Read More »

ಕಾರ್ಣಿಕದ ಶಕ್ತಿ ಉಬಾರಮಣ್ಣು ಶ್ರೀ ಕೋಡ್ದಬ್ಬು ದೇವಸ್ಥಾನದ ವಾರ್ಷಿಕ ನೇಮೋತ್ಸವ | ಮಕ್ಕಿಮನೆ ಕಲಾವೃಂದದಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ

ಮಂಗಳೂರು : ಕಾರ್ಣಿಕದ ಶಕ್ತಿ ಉಬಾರಮಣ್ಣು ಶ್ರೀ ಕೋಡ್ದಬ್ಬು ದೇವಸ್ಥಾನ ಕೊಳುವೈಲು, ಹಳೆಯಂಗಡಿ ಇದರ ವರ್ಷಾವಧಿ ನೇಮೋತ್ಸವ ಶುಕ್ರವಾರ ( 9/4/2021) ಜರಗಿತು.ಈ ಸಂದರ್ಭದಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ಸಂಯೋಜನೆಯಲ್ಲಿ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಪಡೆಯಿತು. ವಿ’ರಾಕ್ಸ್ ಡ್ಯಾನ್ಸ್ ಕಂಪನಿ ಬ್ರಹ್ಮಗಿರಿ ಉಡುಪಿ, ಮಂಗಳೂರು ಆಮೇಜಿಂಗ್ ಡ್ಯಾನ್ಸ್ ಕಂಪನಿ, ನಾಟ್ಯ ಕಲಾಂಜಲಿ ಮುಚ್ಚುರು.ನೃತ್ಯ ತಂಡಗಳು ಭಾಗವಸಿದ್ದು. ನಿತಿನ್ ಮೂಲ್ಕಿ ಅವರಿಂದ ಗಾಯನ , ವಿಜೆ ಗುರುಪ್ರಸಾದ್ ಕೋಟ್ಯಾನ್ ಹಾಗೂ ಶ್ರೇಯಾ ದಾಸ್ ಮಂಗಳೂರು …

ಕಾರ್ಣಿಕದ ಶಕ್ತಿ ಉಬಾರಮಣ್ಣು ಶ್ರೀ ಕೋಡ್ದಬ್ಬು ದೇವಸ್ಥಾನದ ವಾರ್ಷಿಕ ನೇಮೋತ್ಸವ | ಮಕ್ಕಿಮನೆ ಕಲಾವೃಂದದಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ Read More »

error: Content is protected !!
Scroll to Top