ದಿಢೀರ್ ಶಬ್ದದಿಂದ ಭೂಮಿ ಸೀಳು, ಭಯಭೀತರಾದ ಶಿವಮೊಗ್ಗ ಮಂದಿ
ಶಿವಮೊಗ್ಗ : ದಿಢೀರ ಶಬ್ದದಿಂದ ಭೂಮಿ ಸೀಳು ಆಗಿರುವ ಘಟನೆ ಸಾಗರದ ನೆಹರು ನಗರದಲ್ಲಿ ನಡೆದಿದೆ. ಒಮ್ಮೆಲೇ ಬಂದ ಶಬ್ದಕ್ಕೆ ಜನ ಭಯಭೀತರಾಗಿ ಎಲ್ಲರೂ ಹೊರಗೆ ಓಡಿ ಬಂದು ನೋಡಿದರೆ, ಭೂಮಿ ಸೀಳು ಆಗಿರುವುದು ಕಂಡು ಬಂದಿದೆ. ಜನರು ಭೂಕಂಪ, ಸುನಾಮಿ ಆಗುತ್ತದೆಯೋ ಎಂದು ಹೆದರಿ ಹೋದ ಘಟನೆ ನೆಹರು ನಗರದಲ್ಲಿ ನಡೆದಿದೆ. ಭೂಮಿಯಿಂದ ನೀರು ಜೋರಾಗಿ ಉಕ್ಕಿ ಹರಿದಿದ್ದು, ಮನೆಗಳೆಲ್ಲ ಜಾಲವೃತಗೊಂಡಿದೆ. ಅಧಿಕಾರಿಗಳಿಗೆ ಎಷ್ಟು ಬಾರಿ ವಿಷಯ ತಿಳಿಸಿದರು, ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. …
ದಿಢೀರ್ ಶಬ್ದದಿಂದ ಭೂಮಿ ಸೀಳು, ಭಯಭೀತರಾದ ಶಿವಮೊಗ್ಗ ಮಂದಿ Read More »