ಮಾನಸ ಕೆ.ವಿ

ಬಸ್ ಮೇಲೆ ಕೇಕೆ ಹಾಕುತ್ತಾ ಸವಾರಿ ಮಾಡುತ್ತಿದ್ದ ಜನ | ಬಸ್ ಬ್ರೇಕ್ ಹಾಕಿದ ತಕ್ಷಣ ಪತ ಪತ ಕೆಳಕ್ಕೆ ಉದುರಿದ ವೈರಲ್ ವಿಡಿಯೋ !

ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಲ್ಲಾ ಒಂದು ಅಚ್ಚರಿಯ, ಅಪರೂಪದ ವಿಡಿಯೋಗಳು ಮತ್ತು ಸಂಗತಿಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದರೆ ನೀವು ಬೆಚ್ಚಿಬೀಳಬಹುದು. ಈ ವಿಡಿಯೋ ನೋಡಿ ನಿಮಗೆ ನಗು ಬರಬಹುದು. ಅದಕ್ಕಿಂತ ಹೆಚ್ಚಾಗಿ ಇದು ದೊಡ್ಡ ಪಾಠ ಕಲಿಸುವ ವಿಡಿಯೋ ಕೂಡಾ. ಈ ವಿಡಿಯೋದಲ್ಲಿ ಜನರ ಗುಂಪೊಂದು ಬಸ್ ಮೇಲ್ಛಾವಣಿಯ ಮೇಲೆ ಸವಾರಿ ಮಾಡುತ್ತಿದ್ದಾರೆ. ಸವಾರಿ ಮಾಡುತ್ತಿರುವ ಜನರು ತುಂಬಾ ಖುಷಿಯಿಂದ ಕೇಕೆ ಕೂಡ ಹಾಕುತ್ತಿದ್ದಾರೆ. ಅಷ್ಟರಲ್ಲಿ ಬಸ್ಸಿನ ಮುಂದೆ ಹೋಗುತ್ತಿದ್ದ ಬೈಕು …

ಬಸ್ ಮೇಲೆ ಕೇಕೆ ಹಾಕುತ್ತಾ ಸವಾರಿ ಮಾಡುತ್ತಿದ್ದ ಜನ | ಬಸ್ ಬ್ರೇಕ್ ಹಾಕಿದ ತಕ್ಷಣ ಪತ ಪತ ಕೆಳಕ್ಕೆ ಉದುರಿದ ವೈರಲ್ ವಿಡಿಯೋ ! Read More »

ಒಲಿಂಪಿಕ್ಸ್ ನಲ್ಲಿ ಬಾಲಿಕೆಯರದೇ ದೊಡ್ಡ ಸದ್ದು | 13 ನೇ ವಯಸ್ಸಿಗೇ ಚಿನ್ನ ಗೆದ್ದ ಹುಡುಗಿ

ಟೋಕಿಯೊ ಒಲಿಂಪಿಕ್ಸ್‌ನ ನಾಲ್ಕನೇ ದಿನದಂದು ಹದಿಹರೆಯದ ಆಟಗಾರರು ಸದ್ದು ಮಾಡಿದ್ದಾರೆ. ಇಲ್ಲಿಬ್ಬರು 13 ವರ್ಷದ ಇಬ್ಬರು ಬಾಲಕಿಯರು ಒಂದೇ ಆಟದಲ್ಲಿ ಎದುರುಬದುರಾಗಿ ಸ್ಪರ್ಧಿಸಿದ್ದಾರೆ. ಈ ಕಾರಣದಿಂದಾಗಿ ಸ್ಪರ್ಧೆಯು ಬಹಳ ರಸಭರಿತವಾಗಿತ್ತು. ಈ ವರ್ಷದ ಒಲಿಂಪಿಕ್ಸ್‌ನಲ್ಲಿ ಸ್ಕೇಟ್‌ಬೋರ್ಡಿಂಗ್ (skateboarding) ಆಟ ಪಾದಾರ್ಪಣೆ ಮಾಡುತ್ತಿದೆ. ಸ್ಕೇಟ್‌ಬೋರ್ಡಿಂಗ್‌ನಲ್ಲಿ ನಡೆದ ಫೈನಲ್‌ನಲ್ಲಿ ಇಬ್ಬರು ಹುಡುಗಿಯರು ಮುಖಾಮುಖಿಯಾಗಿದ್ದರು. ಜಪಾನ್‌ನ ನಿಶಿಯಾ ಮೊಮಿಜಿ ಚಿನ್ನದ ಪದಕ ಗೆದ್ದರೆ, ಬ್ರೆಜಿಲ್‌ನ ರೈಸಾ ಲೀಲ್ ಬೆಳ್ಳಿ ಪದಕ ಗೆದ್ದಿದ್ದಾರೆ. ನಿಶಿಯಾ ಮೊಮೊಜಿ ಒಲಿಂಪಿಕ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದ …

ಒಲಿಂಪಿಕ್ಸ್ ನಲ್ಲಿ ಬಾಲಿಕೆಯರದೇ ದೊಡ್ಡ ಸದ್ದು | 13 ನೇ ವಯಸ್ಸಿಗೇ ಚಿನ್ನ ಗೆದ್ದ ಹುಡುಗಿ Read More »

ಹಿಂದೂಗಳು ಹಾಕಿದ ಕಾಣಿಕೆ ದುಡ್ಡು ಅನ್ಯ ಧರ್ಮೀಯರ ಸವಲತ್ತುಗಳಿಗೆ ಹೋಗೋದು ಇನ್ಮುಂದೆ ಬಂದ್ | ಅಧಿಕೃತ ಆದೇಶ ಪ್ರಕಟ

ಹಿಂದು ಧಾರ್ಮಿಕ ದತ್ತಿ ಇಲಾಖೆಯಿಂದ ಹಿಂದುಯೇತರ ಧಾರ್ಮಿಕ ಸಂಸ್ಥೆಗಳಿಗೆ ನೀಡುತ್ತಿದ್ದ ತಸ್ತಿಕ್ ಮತ್ತು ವರ್ಷಾಸನಕ್ಕೆ ತಡೆ ನೀಡಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಮುಜರಾಯಿ ದೇವಸ್ಥಾನದ ಹುಂಡಿ ಹಣವನ್ನು ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಸ್ತಿಕ್ ಮತ್ತು ವರ್ಷಾಸನ ಬಿಡುಗಡೆ ಬಗ್ಗೆ ಈ ಹಿಂದೆಯೇ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಡೆ ನೀಡಿದ್ದರು. ಇವರ ಆದೇಶದಂತೆ ಹಿಂದು ಧಾರ್ಮಿಕ ದತ್ತಿ ಇಲಾಖೆ ದೇವಸ್ಥಾನದ ಹಣ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ …

ಹಿಂದೂಗಳು ಹಾಕಿದ ಕಾಣಿಕೆ ದುಡ್ಡು ಅನ್ಯ ಧರ್ಮೀಯರ ಸವಲತ್ತುಗಳಿಗೆ ಹೋಗೋದು ಇನ್ಮುಂದೆ ಬಂದ್ | ಅಧಿಕೃತ ಆದೇಶ ಪ್ರಕಟ Read More »

ಪಾಸ್ ಪೋರ್ಟ್ ಪಡೆಯೋಕೆ ಇನ್ನೂ ಪಾಸ್ ಪೋರ್ಟ್ ಸೇವಾ ಕೇಂದ್ರಕ್ಕೆ ಹೋಗಬೇಕಿಲ್ಲ, ಹತ್ತಿರದ ಅಂಚೆ ಕಚೇರಿಗೆ ಹೋದ್ರೆ ಸಾಕು ಇನ್ನು

ನೀವು ಪಾಸ್‌ಪೋರ್ಟ್ ಪಡೆಯುವ ಬಗ್ಗೆ ಯೋಚಿಸುತ್ತಿದ್ದರೆ, ಇನ್ನು ಮುಂದೆ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಹೋಗಬೇಕಾದ ಅಗತ್ಯವಿಲ್ಲ. ಇದೀಗ ನೀವು ನಿಮ್ಮ ಹತ್ತಿರದ ಅಂಚೆ ಕಛೇರಿಯಿಂದಲೂ ಪಾಸ್‌ಪೋರ್ಟ್ ಪಡೆಯಬಹುದಾಗಿದೆ. ಹೌದು, ಇಂಡಿಯಾ ಪೋಸ್ಟ್ (India Post) ಈಗ ದೇಶದ ಅನೇಕ ಅಂಚೆ ಕಚೇರಿಗಳಲ್ಲಿ ಪಾಸ್‌ಪೋರ್ಟ್ ನೋಂದಣಿ ಮತ್ತು ಪಾಸ್‌ಪೋರ್ಟ್ ಅರ್ಜಿಯಂತಹ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದಕ್ಕಾಗಿ, ನೀವು ಅಂಚೆ ಕಚೇರಿಯ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಕೌಂಟರ್‌ಗಳಿಗೆ ಹೋಗಬೇಕಾಗುತ್ತದೆ. ಈ ಕುರಿತಂತೆ ಇಂಡಿಯಾ ಪೋಸ್ಟ್ (India Post) ಟ್ವೀಟ್ …

ಪಾಸ್ ಪೋರ್ಟ್ ಪಡೆಯೋಕೆ ಇನ್ನೂ ಪಾಸ್ ಪೋರ್ಟ್ ಸೇವಾ ಕೇಂದ್ರಕ್ಕೆ ಹೋಗಬೇಕಿಲ್ಲ, ಹತ್ತಿರದ ಅಂಚೆ ಕಚೇರಿಗೆ ಹೋದ್ರೆ ಸಾಕು ಇನ್ನು Read More »

ಬೃಹತ್ ಗಾತ್ರದ ಹಲವು ಬಂಡೆಗಳು ಗುಡ್ಡದಿಂದ ಉರುಳಿ ಸೇತುವೆ ಮೇಲೆ ಬಿದ್ದ ಪರಿಣಾಮ ಟೆಂಪೋ ಸಹಿತ 9 ಜನ ನೀರು ಪಾಲು

ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಭೂಕುಸಿತದ ಕಾರಣ ಬೆಟ್ಟದಿಂದ ಬಂಡೆಕಲ್ಲುಗಳು ಉರುಳಿದ್ದು, ಒಂದು ಬೃಹತ್ ಕಲ್ಲು ಬಿದ್ದು ಬಸ್ಪಾ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆ ಎರಡು ತುಂಡಾಗಿ 9 ಜನ ಪ್ರವಾಸಿಗರು ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ರಾಜಸ್ಥಾನದ ಸಿಕಾರ್‌ನ ಮಾಯಾಲ್ ದೇವಿ ಬಿಯಾನಿ (55), ಅವರ ಪುತ್ರ ಅನುರಾಗ್ ಬಿಯಾನಿ (31) ಮತ್ತು ಮಗಳು ಮಾಯಾ ದೇವಿ ಬಿಯಾನಿ (25), ಮಹಾರಾಷ್ಟ್ರದ ಪ್ರತಿಭಾ ಸುನಿಲ್ ಪಾಟೀಲ್ (27), ಜೈಪುರದ ದೀಪ ಶರ್ಮಾ (34) ಅಮೋಘ್ ಬಾಪತ್ …

ಬೃಹತ್ ಗಾತ್ರದ ಹಲವು ಬಂಡೆಗಳು ಗುಡ್ಡದಿಂದ ಉರುಳಿ ಸೇತುವೆ ಮೇಲೆ ಬಿದ್ದ ಪರಿಣಾಮ ಟೆಂಪೋ ಸಹಿತ 9 ಜನ ನೀರು ಪಾಲು Read More »

ಮನೋಜ್ಞ ಅಭಿನೇತ್ರಿ, ಅಭಿನಯ ಶಾರದೆ ಜಯಂತಿ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, ಜಯಂತಿ ಅವರು ಇಂದು ಬೆಳಗ್ಗೆ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. 1945ರಲ್ಲಿ ಬಳ್ಳಾರಿಯಲ್ಲಿ ಜನಿಸಿದ ಜಯಂತಿ ಅವರ ಮೂಲ ಹೆಸರು ಕಮಲಾ ಕುಮಾರಿ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಮತ್ತು ಮರಾಠಿ ಸೇರಿದಂತೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತಮ್ಮ ಮನೋಜ್ಞ ಅಭಿನಯದ ಮೂಲಕವೇ ಮನೆ ಮಾತಾಗಿದ್ದ ಜಯಂತಿ ಅವರು ಅಭಿನಯ ಶಾರದೇ ಎಂದೇ ಕನ್ನಡ ಚಿತ್ರರಂಗದಲ್ಲಿ ಜನಜನಿತವಾಗಿದ್ದರು. 1968ರಲ್ಲಿ ತೆರೆ ಕಂಡ ವೈ.ಅರ್. ಸ್ವಾಮಿ ನಿರ್ದೇಶನದ “ಜೇನು ಗೂಡು” …

ಮನೋಜ್ಞ ಅಭಿನೇತ್ರಿ, ಅಭಿನಯ ಶಾರದೆ ಜಯಂತಿ ಇನ್ನಿಲ್ಲ Read More »

ಇನ್ನು ಒಂದು ಮಿಸ್ಡ್ ಕಾಲ್ ಕೊಟ್ರೆ ಸಾಕು, ಮನೆ ಬಾಗಿಲಲ್ಲಿ ಗ್ಯಾಸ್ ಸಿಲಿಂಡರ್ ಪ್ರತ್ಯಕ್ಷ ಆಗಲಿದೆ

ಗ್ಯಾಸ್ ಸಿಲಿಂಡರ್ ಬುಕ್ ಮಾಡುವ ವಿಧಾನ ಈಗ ಇನ್ನಷ್ಟು ಸುಲಭವಾಗಿದೆ. ಗ್ಯಾಸ್ ಸಿಲಿಂಡರ್ ಅನ್ನು ಕೇವಲ ಮಿಸ್ಡ್ ಕಾಲ್ ಅಥವಾ ವಾಟ್ಸಾಪ್ ಸಂದೇಶದ ಮೂಲಕವೂ ಬುಕ್ ಮಾಡಬಹುದು. ಹೌದು, ಭಾರತದ ಅತಿದೊಡ್ಡ ಪೆಟ್ರೋಲಿಯಂ ಕಂಪನಿಗಳಾದ ಭಾರತ್ ಗ್ಯಾಸ್ (Bharat Gas), ಇಂಡೇನ್ ಗ್ಯಾಸ್ (Indane Gas) ಮತ್ತು ಎಚ್‌ಪಿ ಗ್ಯಾಸ್ (HP Gas) ಗ್ರಾಹಕರಿಗೆ ವಾಟ್ಸಾಪ್ ಮೂಲಕ ಸಿಲಿಂಡರ್‌ಗಳನ್ನು ಕಾಯ್ದಿರಿಸುವ ಸೇವೆಯನ್ನು ನೀಡುತ್ತಿದೆ. ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ನಿಮ್ಮ ಫೋನ್‌ನಲ್ಲಿ ಸಾಕಷ್ಟು ಬ್ಯಾಲೆನ್ಸ್ ಇಲ್ಲದಿದ್ದರೆ, ಮಿಸ್ಡ್ …

ಇನ್ನು ಒಂದು ಮಿಸ್ಡ್ ಕಾಲ್ ಕೊಟ್ರೆ ಸಾಕು, ಮನೆ ಬಾಗಿಲಲ್ಲಿ ಗ್ಯಾಸ್ ಸಿಲಿಂಡರ್ ಪ್ರತ್ಯಕ್ಷ ಆಗಲಿದೆ Read More »

ಬಾಲ್ಯದಲ್ಲಿ ಕಟ್ಟಿಗೆ ಮೂಟೆ ಹೊತ್ತು ಭುಜಕ್ಕೆ ಶಕ್ತಿ ತುಂಬಿಕೊಂಡಿದ್ದ ಹುಡುಗಿಗೆ ಇಂದು ಒಲಿಂಪಿಕ್ಸ್ ನಲ್ಲಿ ಬೆಳ್ಳಿ | ಉದ್ಯೋಗದ ಜೊತೆಗೆ ಒಂದು ಕೋಟಿ ಬಹುಮಾನ ಘೋಷಿಸಿದ ಮಣಿಪುರಿ ಸರ್ಕಾರ

ಅಂದು ತನ್ನ ಮನೆಯ ಅಗತ್ಯಗಳಿಗಾಗಿ ಆಕೆ ಹೊತ್ತಿದ್ದು ಕಟ್ಟಿಗೆ. ಕಾಡು ಹೊಕ್ಕಿ, ಕಟ್ಟಿಗೆ ಕಡಿದು, ಬಾಲ್ಯದಲ್ಲಿ ಹೊತ್ತಿದ್ದ ಕಟ್ಟಿಗೆ ಮೂಟೆ ಈಗ ಭುಜಗಳಿಗೆ ಶಕ್ತಿ ತುಂಬಿತ್ತು. ಅದೇ ಕಾರಣಕ್ಕೆ ಆ ಪುಟಾಣಿ ದೇಹವು ಬರೊಬ್ಬರಿ 87 ಕೆಜಿ ತೂಕವನ್ನು ಸಲೀಸಾಗಿ ಎತ್ತಿ, ಇಂದು ಕ್ರೀಡಾಲೋಕದ ತೀರ್ಥಕ್ಷೇತ್ರ ಒಲಿಂಪಿಕ್ಸ್ ನಲ್ಲಿ ಬೆಳ್ಳಿಯ ಪದಕ ಎತ್ತಿ ಹಿಡಿದಿದ್ದಾಳೆ ! ಆಕೆಯ ಇವತ್ತಿನ ಸಾಧನೆಯ ಕಟ್ಟೆಗೆ ಕಟ್ಟಿಗೆಯೇ ಇಟ್ಟಿಗೆಯಾಗಿತ್ತು ಎಂಬ ವಿಷಯವನ್ನು ಆಕೆಯ ಅಣ್ಣನೇ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದು, ಬೆಳೆಯುವ ಸಿರಿಗಾಗಿ …

ಬಾಲ್ಯದಲ್ಲಿ ಕಟ್ಟಿಗೆ ಮೂಟೆ ಹೊತ್ತು ಭುಜಕ್ಕೆ ಶಕ್ತಿ ತುಂಬಿಕೊಂಡಿದ್ದ ಹುಡುಗಿಗೆ ಇಂದು ಒಲಿಂಪಿಕ್ಸ್ ನಲ್ಲಿ ಬೆಳ್ಳಿ | ಉದ್ಯೋಗದ ಜೊತೆಗೆ ಒಂದು ಕೋಟಿ ಬಹುಮಾನ ಘೋಷಿಸಿದ ಮಣಿಪುರಿ ಸರ್ಕಾರ Read More »

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಜಯರಾಜ್ ಜೈನ್, ಬೆಳಾಲು ಅವಿರೋಧ ಆಯ್ಕೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು, ಶಾಖೆ ಬೆಳ್ತಂಗಡಿ ಇದರ ಮುಂದಿನ ಅವಧಿಗೆ ನೂತನ ಅಧ್ಯಕ್ಷರಾಗಿ ಸರಕಾರಿ ಉನ್ನತೀಕರಿಸಿದ‌ ಪ್ರಾಥಮಿಕ‌ ಶಾಲೆ ಮಾಲಾಡಿ ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ಜಯರಾಜ್ ಜೈನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜುಲೈ 24 ರಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಘಟಕದ ಏಕತಾ ಸೌಧದಲ್ಲಿ ನಡೆದ ಚುನಾವಣೆ ಪ್ರಕ್ರೀಯೆಯಲ್ಲಿ ಅವರು ಆಯ್ಕೆಯಾದರು. ಸಂಘದಲ್ಲಿ ಈ ಹಿಂದೆ 22 ವರ್ಷಗಳ ಕಾಲ ಅಧ್ಯಕ್ಷರಾಗಿದ್ದ ಡಾ. ಜಯಕೀರ್ತಿ ಜೈನ್‌ …

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಜಯರಾಜ್ ಜೈನ್, ಬೆಳಾಲು ಅವಿರೋಧ ಆಯ್ಕೆ Read More »

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಮೊದಲ ಪದಕ | 87 ಕೆಜಿ ಭಾರ ಎತ್ತಿ ಬೆಳ್ಳಿಯ ಪದಕ ಎತ್ತಿ ಹಿಡಿದ ಮೀರಾಬಾಯಿ ಚಾನು !

ಟೋಕಿಯೋ: ಜಾಗತಿಕ ಕ್ರೀಡಾ ಹಬ್ಬ ಟೋಕಿಯೋ ಒಲಿಂಪಿಕ್ಸ್ ಆರಂಭವಾದ ಎರಡೇ ದಿನಕ್ಕೆ ಭಾರತ ಮೊದಲ ಪದಕ ಬೇಟೆಯಾಡಿದೆ. 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕವನ್ನು ಜಯಿಸಿದ್ದಾರೆ. 84 ಮತ್ತು 87 ಕೆ.ಜಿ ಭಾರವನ್ನು ಎತ್ತುವಲ್ಲಿ ಯಶಸ್ವಿಯಾದ ಮೀರಾಬಾಯಿ 89 ಕೆ.ಜಿ ಭಾರ ಎತ್ತುವಲ್ಲಿ ವಿಫಲವಾದರು. ಹೀಗಾಗಿ ಅವರು ಎರಡನೇ ಸ್ಥಾನವನ್ನು ಅಲಂಕರಿಸುವ ಮೂಲಕ ಬೆಳ್ಳಿ ಪದಕವನ್ನು ಜಯಿಸಿದರು. ಚೀನಾದ ಹೌ ಝಿಜು 94 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ …

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತದ ಮೊದಲ ಪದಕ | 87 ಕೆಜಿ ಭಾರ ಎತ್ತಿ ಬೆಳ್ಳಿಯ ಪದಕ ಎತ್ತಿ ಹಿಡಿದ ಮೀರಾಬಾಯಿ ಚಾನು ! Read More »

error: Content is protected !!
Scroll to Top