Mahima Bhat

ಭಾರತದಲ್ಲಿ 8000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಈ ಖ್ಯಾತ ಸ್ಟಾರ್ಟ್ ಅಪ್‌ ಗಳು !

ಇತ್ತೀಚೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ಸ್ಟಾರ್ಟ್‌ಅಪ್‌ಗಳಲ್ಲಿ ಕೆಲಸ ಮಾಡುವ ಜನರು ಹಿಂದೆ ಮುಂದೆ ನೋಡುವಂತಾಗಿದೆ. ಭಾರತದಲ್ಲಿ 8000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮೀಶೋ, ಓಲಾ, ಅನ್ ಅಕಾಡೆಮಿ ಮತ್ತು ಇತರ ಸ್ಟಾರ್ಟ್‌ ಅಪ್‌ ಗಳು ವಜಾಗೊಳಿಸಿವೆ. ಕಂಪನಿಯು ಹಲವಾರು ಉದ್ಯೋಗಿಗಳನ್ನು ತೆಗೆದುಹಾಕುವುದರ ಹಿಂದಿನ ನಿಖರವಾದ ಕಾರಣವನ್ನು ಬಹಿರಂಗಪಡಿಸಿಲ್ಲ ಆದರೆ ಇದು ಪ್ರತಿ ವರ್ಷ ನಡೆಯುವ ಸಾಮಾನ್ಯ ಕಾರ್ಯಕ್ಷಮತೆ ಆಧಾರಿಸಿ ಮಾಡಿದ ವಜಾ ಎಂದು ಹೇಳಿದೆ. ಇನ್ನೂ ಕೆಲ ಕಾಲ ಭಾರತದಲ್ಲಿ ಉದ್ಯೋಗಿಗಳ ವಜಾ ಮುಂದುವರೆಯಲಿದೆ ಎಂದು ವರದಿಗಳು ತಿಳಿಸಿವೆ. …

ಭಾರತದಲ್ಲಿ 8000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಈ ಖ್ಯಾತ ಸ್ಟಾರ್ಟ್ ಅಪ್‌ ಗಳು ! Read More »

ಚಿತ್ರದುರ್ಗದ ಮುರಘಾಮಠಕ್ಕೆ ನೂತನ ಉತ್ತರಾಧಿಕಾರಿ ಘೋಷಣೆ

ಚಿತ್ರದುರ್ಗದ ಮುರುಘಾಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಲಾಗಿದೆ. ಐತಿಹಾಸಿಕ ಮುರುಘಾ ಮಠಕ್ಕೆ ಉತ್ತರಾಧಿಕಾರಿಯಾಗಿ ಮುರುಘಾ ಮಠದಲ್ಲೇ ಅಧ್ಯಯನ ಮಾಡುತ್ತಿದ್ದ ಬಸವಾದಿತ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಶುಕ್ರವಾರ ಬೆಳಿಗ್ಗೆ ಮುರುಘಾ ಮಠದ ಶಿರಸಿಂಗಿ ಮಹಾಲಿಂಗ ಸ್ವಾಮಿ ಸಭಾಂಗಣದಲ್ಲಿ ನಡೆದ ಶರಣ ಸಭೆಯಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ಬಸವಾದಿತ್ಯ ಶ್ರೀಗಳಿಗೆ ವಿಭೂತಿ ಧಾರಣೆ ಮಾಡಿ, ರುದ್ರಾಕ್ಷಿ ಮಾಲೆ ಹಾಕಿ ಪುಷ್ಪವೃಷ್ಠಿ ಮಾಡಿ ನೇಮಕ ಮಾಡಿದ್ದಾರೆ. ಬಸವಾದಿತ್ಯ ಶ್ರೀಗಳು ಚಿತ್ರದುರ್ಗ ತಾಲ್ಲೂಕಿನ ಹುಲ್ಲೂರು ಗ್ರಾಮದವರಾಗಿದ್ದಾರೆ. ಚಂದ್ರಕಲಾ-ಶಿವಮೂರ್ತಯ್ಯರ ದಂಪತಿ ಪುತ್ರ ಬಸವಾದಿತ್ಯ. ಸದ್ಯ ಮುರುಘಾಮಠದ ಕಾಲೇಜಲ್ಲಿ …

ಚಿತ್ರದುರ್ಗದ ಮುರಘಾಮಠಕ್ಕೆ ನೂತನ ಉತ್ತರಾಧಿಕಾರಿ ಘೋಷಣೆ Read More »

ಬಂಟ್ವಾಳ ರಸ್ತೆ ಅಪಘಾತ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಸಾವು

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವಳಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ತಲಪಾಡಿಯಲ್ಲಿ ನಡೆದಿದ್ದು, ಘಟನೆಯಿಂದ ಮಹಿಳೆ ಮೃತಪಟ್ಟಿದ್ದಾರೆ. ಕೈಕಂಬ ಸಮೀಪದ ತಲಪಾಡಿ ಎಂಬಲ್ಲಿ ಮೇ.26 ರಂದು ಇಂದು ಬೆಳಿಗ್ಗೆ ಸುಮಾರು 11 ಗಂಟೆ ವೇಳೆ ನಡೆದುಕೊಂಡು ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೂಲಿ ಕಾರ್ಮಿಕೆಯೊರ್ವಳಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಮಹಿಳೆಯನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.

ವಾಹನ ಸವಾರರೇ ಇಂದೇ ಇಂಧನ ಭರ್ತಿ ಮಾಡಿಕೊಳ್ಳಿ!

ಇಂದೇ ನಿಮ್ಮ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಹಾಕಿಸಿಕೊಳ್ಳಿ. ಇಲ್ಲದಿದ್ದರೆ 31ರ ನಂತರ ಪೆಟ್ರೋಲ್ ಬಂಕ್‍ಗಳಲ್ಲಿ ಇಂಧನ ಸಿಗುವ ಸಾಧ್ಯತೆಗಳಿಲ್ಲ! ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟವು ಇದೇ 31ರ ನಂತರ ಡಿಫೋಗಳಿಂದ ತೈಲ ಖರೀದಿಸದೆ ಪ್ರತಿಭಟನೆ ನಡೆಸಲಿದೆ. ಆದ್ದರಿಂದ ವಾಹನಗಳಿಗೆ ಬಂಕ್‍ಗಳಲ್ಲಿ ಇಂಧನ ಸಿಗದೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುವ  ಸಾಧ್ಯತೆಯಿದೆ. 2017ರಿಂದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ 1ರೂ. ಕಮಿಷನ್ ನೀಡಬೇಕೆಂಬುದು ಫೆಡರೇಷನ್‍ನ ಪ್ರಮುಖ ಬೇಡಿಕೆಯಾಗಿತ್ತು. ಅಂದಿನಿಂದ ಇಂದಿನವರೆಗೂ …

ವಾಹನ ಸವಾರರೇ ಇಂದೇ ಇಂಧನ ಭರ್ತಿ ಮಾಡಿಕೊಳ್ಳಿ! Read More »

ಡಿ.ಕೆ ಶಿವಕುಮಾರ್ ಗೆ ಮತ್ತೊಂದು ಕಂಟಕ! ಡಿಕೆಶಿ ವಿರುದ್ಧ ಚಾರ್ಜ್ ಶಿಟ್ ಸಲ್ಲಿಸಿದ ಇಡಿ

ಜಾರಿ ನಿರ್ದೇಶನಾಲಯ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ವಿರುದ್ಧ ಹೊಸದಾಗಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ನಿರಂತರ ಆದಾಯ ಹೆಚ್ಚಳ ಪ್ರಕರಣ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ವಿರುದ್ಧ ಇಡಿ ಅಧಿಕಾರಿಗಳು ಗುರುವಾರ ದೆಹಲಿ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. ಬೆಂಗಳೂರು ನಿವಾಸ ಸೇರಿದಂತೆ ದೆಹಲಿ, ಮುಂಬೈ ಸೇರಿ ಹಲವು ನಗರಗಳಲ್ಲಿ ಆಸ್ತಿ ಸಂಪಾದನೆ, ಹಲವು ವರ್ಷಗಳಿಂದ ನಿರಂತರ ಆದಾಯ ಹೆಚ್ಚಳ ಆರೋಪದ ಮೇಲೆ ಈ ಹಿಂದೆ ಇಡಿ ದಾಳಿ ಆಗಿತ್ತು. ಜಾಮೀನು ಪಡೆದು ಜೈಲಿನಿಂದ ಡಿಕೆಶಿ …

ಡಿ.ಕೆ ಶಿವಕುಮಾರ್ ಗೆ ಮತ್ತೊಂದು ಕಂಟಕ! ಡಿಕೆಶಿ ವಿರುದ್ಧ ಚಾರ್ಜ್ ಶಿಟ್ ಸಲ್ಲಿಸಿದ ಇಡಿ Read More »

ಹವಾಮಾನ ಇಲಾಖೆಯಿಂದ ಈ ಮುಖ್ಯ ಸೂಚನೆ

ಕರ್ನಾಟಕದಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆ ಅಬ್ಬರ ಕಡಿಮೆಯಾಗಿದೆ. ಆದರೂ ಇಂದು ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಎರಡು ದಿನಗಳಲ್ಲಿ ಕೇರಳಕ್ಕೆ  ನೈಋತ್ಯ ಮುಂಗಾರು ಪ್ರವೇಶವಾಗುವ ಸಾಧ್ಯತೆಯಿದೆ. ಜೂನ್ ಮೊದಲ ವಾರದಲ್ಲಿ ಕರ್ನಾಟಕದಲ್ಲೂ ಮಾನ್ಸೂನ್  ಆರಂಭವಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಮುಂದಿನ 48 ಗಂಟೆಗಳಲ್ಲಿ ನೈಋತ್ಯ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಆಗ್ನೇಯ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಮಾಲ್ಡೀವ್ಸ್ ಮತ್ತು …

ಹವಾಮಾನ ಇಲಾಖೆಯಿಂದ ಈ ಮುಖ್ಯ ಸೂಚನೆ Read More »

ಕೊನೆಯುಸಿರೆಳೆದ ಕಾಡುಗಳ್ಳ ವೀರಪ್ಪನ್​ ಅಣ್ಣ

ಕಾಡುಗಳ್ಳ ವೀರಪ್ಪನ್​ ಅಣ್ಣ ಇಂದು ಜೈಲಿನಲ್ಲಿ ಮೃತಪಟ್ಟಿದ್ದಾನೆ. ಕಳೆದ 34 ವರ್ಷಗಳಿಂದ ಜೈಲಿನಲ್ಲಿಯೇ ಇದ್ದ ಮಾದಯ್ಯನ್​​ ಸೇಲಂ(80) ಮೃತಪಟ್ಟಿದ್ದಾರೆ. ತೀವ್ರ ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಇಂದು ಮೃತಪಟ್ಟಿದ್ದಾನೆ. 1987ರ ಅರಣ್ಯ ಸಿಬ್ಬಂದಿ ಚಿದಂಬರಂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈರೋಡ್​​ನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಹೀಗಾಗಿ, ಕಳೆದ 34 ವರ್ಷಗಳಿಂದ ಜೈಲಿನಲ್ಲಿಯೇ ಇದ್ದ. ಕೊಲೆ ಪ್ರಕರಣದಲ್ಲಿ ಮೈಸೂರಿನಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಈತನನ್ನು ಕೊನೆಗೆ ಕೊಯಮತ್ತೂರು ಮತ್ತು ಸೇಲಂ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು.

ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು

ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ, ಇಂದು ಮಾಗಡಿ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದಾರೆ. ಮಾರ್ಚ್/ಏಪ್ರಿಲ್ ನಲ್ಲಿ ನಡೆದಿದ್ದಂತ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಯೊಂದು ಸೋರಿಕೆಯಾಗಿತ್ತು. ಈ ಸಂಬಂಧ ಶಿಕ್ಷಣ ಇಲಾಖೆಯಿಂದ ಮಾಗಡಿ ಠಾಣೆಗೆ ದೂರು ನೀಡಲಾಗಿತ್ತು. ಈ ದೂರು ಆಧರಿಸಿ ಇದೀಗ ಮಾಗಡಿ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ನಡೆಸಿದಂತ ಪೊಲೀಸರು, ಇಂದು ಮಾಗಡಿ ಕೆಂಪೇಗೌಡ ಶಾಲೆಯ ಪ್ರಿನ್ಸಿಪಾಲ್ ಶ್ರೀನಿವಾಸ್, ಕ್ಲರ್ಕ್ ರಂಗೇಗೌಡ, ಶಿಕ್ಷಕರಾದಂತ ನಾಗರಾಜ್, ಅಲೀಂ, …

ಎಸ್ ಎಸ್ ಎಲ್ ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಹೊಸ ತಿರುವು Read More »

ರಕ್ಷಿತ್ ಶೆಟ್ಟಿ ಮುಖದ ಮೇಲೆ ಗಾಯಗಳಾಗಿದ್ದು ಏಕೆ ? ಇಲ್ಲಿದೆ ಉತ್ತರ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈ ವರ್ಷವಿಡೀ ಅಭಿಮಾನಿಗಳಿಗೆ ಹಲವಾರು ಸಿನಿಮಾ ಊಟವನ್ನು ಬಡಿಸಲಿದ್ದಾರೆ. ಸಿಂಪಲ್​ ಸ್ಟಾರ್’ ರಕ್ಷಿತ್​ ಶೆಟ್ಟಿ  ಅವರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ನಿರ್ದೇಶಕ ಹೇಮಂತ್​ ಎಂ. ರಾವ್​ ಆಯಕ್ಷನ್​-ಕಟ್​ ಹೇಳುತ್ತಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ರಕ್ಷಿತ್​ ಶೆಟ್ಟಿ ಅವರು ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಬಿಡುಗಡೆ ಆಗಿದ್ದ ಪೋಸ್ಟರ್​ಗಳಲ್ಲಿ ಅವರು ಲವರ್ ಬಾಯ್​ ರೀತಿ ಕಾಣಿಸಿಕೊಂಡಿದ್ದರು. ಚಿತ್ರದ ದ್ವಿತೀಯಾರ್ಧದಲ್ಲಿ ರಕ್ಷಿತ್​ ಶೆಟ್ಟಿ ಲುಕ್​ ಹೇಗಿರಲಿದೆ ಎಂಬುದಕ್ಕೆ ಈಗ ಹೊಸ ಪೋಸ್ಟರ್​ ಮೂಲಕ …

ರಕ್ಷಿತ್ ಶೆಟ್ಟಿ ಮುಖದ ಮೇಲೆ ಗಾಯಗಳಾಗಿದ್ದು ಏಕೆ ? ಇಲ್ಲಿದೆ ಉತ್ತರ Read More »

ನಾಯಿಗಾಗಿ ಬದಲಾದ ಮಾನವ! ಇದಕ್ಕೆ ಈತ ಮಾಡಿದ್ದೇನು ಗೊತ್ತೆ ?

ಪ್ರಾಣಿಯಂತೆ ಕಾಣಬೇಕೆಂದು ಬಯಸಿದ ಜಪಾನಿನ ವ್ಯಕ್ತಿ ತನ್ನ ಕನಸನ್ನು ನನಸಾಗಿಸುವಲ್ಲಿ ಯಶಸ್ವಿಯಾಗಿದ್ದಾನೆ! ಮನುಷ್ಯ ನಾಯಿಯಾಗಬಹುದೇ! ಲಿಂಗ ಬದಲಾವಣೆ ಕೇಳಿರಬಹುದು ಆದರೆ ಇಲ್ಲಿ ಮನುಷ್ಯ ನಾಯಿಯಾಗಿ ಬದಲಾದ ವಿಚಿತ್ರ ಘಟನೆ ನಡೆದಿದೆ ಅವನು ತನ್ನ ನೆಚ್ಚಿನ ಪ್ರಾಣಿಯಾದ ‘ನಾಯಿ’ ಆಗಿ ಸಂಪೂರ್ಣವಾಗಿ ರೂಪಾಂತರಗೊಂಡಿದ್ದಾನೆ! ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಅವರ ಇತ್ತೀಚಿನ ಚಿತ್ರಗಳು ಜನರನ್ನು ಅಚ್ಚರಿಗೊಳಗಾಗುವಂತೆ ಮಾಡಿದೆ. ನೀವು ಎಂದಾದರೂ ಪ್ರಾಣಿಯಾಗಲು ಬಯಸಿದ್ದೀರಾ? ನಾನು ಹೊಂದಿದ್ದೇನೆ! ನಾನು ನನ್ನ ಕನಸನ್ನು ಈ ರೀತಿ ನನಸಾಗಿಸಿದೆ’ ಎಂದು ಅವರ ಯೂಟ್ಯೂಬ್ ವೀಡಿಯೊ …

ನಾಯಿಗಾಗಿ ಬದಲಾದ ಮಾನವ! ಇದಕ್ಕೆ ಈತ ಮಾಡಿದ್ದೇನು ಗೊತ್ತೆ ? Read More »

error: Content is protected !!
Scroll to Top