ಕೋವಿಡ್ ಉಚಿತ ಸೇವೆಯಲ್ಲಿ ಸುಳ್ಯ ಶಿವ ಅಂಬ್ಯುಲೆನ್ಸ್ |ಮಾಜಿ ಸಚಿವ ರಮಾನಾಥ ರೈ ಅಭಿನಂದನೆ

ಸುಳ್ಯ : ಕೋವಿಡ್ 19 ನ ಸಂದಿಗ್ಧ ಸಂದರ್ಭದಲ್ಲಿ ಉಚಿತ ಸೇವೆ ಮಾಡುತ್ತಿರುವ ಸುಳ್ಯದ ಶಿವ ಅಂಬ್ಯುಲೆನ್ಸ್ ನ ಚಾಲಕ ಹಾಗೂ ಮಾಲಕರನ್ನು ಗೌರವಿಸಲಾಯಿತು. ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಶಿವ ಅಂಬ್ಯುಲೆನ್ಸ್ ನ ಚಾಲಕ ಮಾಲಕರನ್ನು ಅಭಿನಂದಿಸಿ ಗೌರವಿಸಿದರು.

ಸರ್ವೆ : ಕುಸಿಯುವ ಹಂತದಲ್ಲಿದ್ದ ಬಡ ಕುಟುಂಬದ ಮನೆಯ ಮೇಲ್ಛಾವಣಿಯನ್ನು ದುರಸ್ತಿ ಮಾಡಿದ ಶ್ರೀ ಷಣ್ಮುಖ ಯುವಕ ಮಂಡಲ

ಸವಣೂರು: ಕುಸಿಯುವ ಹಂತದಲ್ಲಿದ್ದ ಸರ್ವೆ ಗ್ರಾಮದ ಬಾವಿಕಟ್ಟೆ ನಿವಾಸಿ ಬೊಗ್ಗ ಮೊಗೇರ-ರಾಧಾ ದಂಪತಿಗಳ ಮನೆಯ ಮೇಲ್ಚಾವಣಿಯನ್ನು 15000 ರೂ ವೆಚ್ಚದಲ್ಲಿ ದುರಸ್ತಿ ಮಾಡಿಕೊಡುವ ಮೂಲಕ ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ಸದಸ್ಯರು ಮಾನವೀಯತೆ ಮೆರೆದಿದ್ದಾರೆ. ಶಿಥಿಲಾವಸ್ಥೆಗೆ ತಲುಪಿದ್ದ

ದೇಶದ ಜನತೆಗೆ ಉಚಿತ ಕೋವಿಡ್ ಲಸಿಕೆ – ಪ್ರಧಾನಿ ಮೋದಿ ಅಭಯ

ದೇಶದಲ್ಲಿ ಕೋವಿಡ್ 19 ಸೋಂಕು ಪ್ರಕರಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಜನತೆಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡುವ ಮಹತ್ವದ ಘೋಷಣೆಯನ್ನು ಪ್ರಧಾನಿ ಹೇಳಿದರು.

ದ.ಕ. ಜಿಲ್ಲೆಯಲ್ಲಿ ಮುಂದಿನ ವಾರದಿಂದ ಕೋವಿಡ್ ನಿಯಂತ್ರಣ ನಿಯಮ ಇನ್ನಷ್ಟು ಬಿಗಿ | 150 ತಪಾಸಣಾ ತಂಡ ರಚನೆ-…

ಲಾಕ್ ಡೌನ್ ಕುರಿತಂತೆ ಜಿಲ್ಲೆಯಲ್ಲಿ ಈಗಿರುವ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಅವರು ಹೇಳಿದರು. ಜೂನ್ 07ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ‌ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ಕಳ್ಳತನ ಮಾಡಿ ಪರಾರಿಯಾಗುವಾಗ ಅಪಘಾತ | ಇಬ್ಬರು ಪೊಲೀಸರ ವಶಕ್ಕೆ

ಕಳ್ಳತನ ಮಾಡಿ ಬೈಕ್‍ನಲ್ಲಿ ಪರಾರಿಯಾಗುವಾಗ ಅಪಘಾತಗೊಂಡು ಇಬ್ಬರು ಆರೋಪಿಗಳು ಬೆಂಗಳೂರು ನಗರದ ಪೀಣ್ಯ ಠಾಣಾ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಪೀಣ್ಯಾದ ಟಿವಿಎಸ್ ವೃತ್ತದ ಬಳಿ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು ಬೆದರಿಸಿ ಸುಲಿಗೆ ಮಾಡಿ ಬೈಕ್‍ನಲ್ಲಿ ವೇಗವಾಗಿ ಆರೋಪಿಗಳು

ಹಣಕ್ಕಾಗಿ ಬಾಲಕನ ಅಪಹರಿಸಿ 25 ಲಕ್ಷ ಬೇಡಿಕೆ | ಹೆತ್ತವರಿಂದ ಪೊಲೀಸರಿಗೆ ದೂರು | ಬಾಲಕನ ಕೊಂದ ಅಪಹರಣಕಾರರು

ಹಣಕ್ಕಾಗಿ 10 ವರ್ಷದ ಬಾಲಕನನ್ನು ಅಪಹರಿಸಿದ ದುಷ್ಕರ್ಮಿಗಳು ಆ ಬಾಲಕನನ್ನು ಹತ್ಯೆಗೈದ ಘಟನೆ ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಶಿಕಾರಿಪಾಳ್ಯದ ಮುಹಮ್ಮದ್ ಆಸೀಫ್(10) ಕೊಲೆಯಾದ ದುರ್ದೈವಿ ಬಾಲಕ. ನಾಲ್ಕು

ಅಣ್ಣನ ಬರ್ತ್‌ಡೇ ಸಂಭ್ರಮದ ವೇಳೆ 5 ವರ್ಷದ ತಂಗಿಯನ್ನು ಕೊಂದ ಚಿರತೆ

ಅಣ್ಣನ ಬರ್ತ್‌ಡೇ ಎಂದರೆ ತಂಗಿಗೆ ಸಂಭ್ರಮ.ಈ ಸಂಭ್ರಮದ ಪಾರ್ಟಿ ವೇಳೆಯೇ 5 ವರ್ಷದ ಬಾಲಕಿಯನ್ನು ಚಿರತೆಯೊಂದು ಹೊತ್ತೊಯ್ದು ಕೊಂದು ಹಾಕಿದ ಘಟನೆ ಶ್ರೀನಗರದಲ್ಲಿ ನಡೆದಿದೆ. ಮೃತ ಬಾಲೆಯನ್ನು ಮಿರ್‌ ಅದ್ದಾ(5) ಎಂದು ಗುರುತಿಸಲಾಗಿದೆ. ಮನೆಯ ಹೊರಗೆ ನಿಂತಿದ್ದ ಮಿರ್‌ ಅದ್ದಾ, ಎಲ್ಲರನ್ನೂ

ದ.ಕ.ಉಸ್ತುವಾರಿ ಸಚಿವ ಕೋಟ ಅವರಿಂದ ಕೇಂದ್ರ ಸಚಿವ ಡಿ.ವಿ.ಎಸ್ ಭೇಟಿ | ಕೋವಿಡ್ ಲಸಿಕೆ ಸರಬರಾಜು ಹೆಚ್ಚಳಕ್ಕೆ ಮನವಿ

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರಿಂದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ ವಿ ಸದಾನಂದ ಗೌಡರನ್ನು ಭೇಟಿ. ಜಿಲ್ಲೆಯಲ್ಲಿ ಕೋವಿಡ್ - 19 ಲಸಿಕೆ ಕೊರತೆ ಕುರಿತು ಚರ್ಚೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ

ಕಡಬ : ಪಕ್ಷದ ಸಭೆಯಲ್ಲ ,ಕೊರೋನಾ ವಿಚಾರದಲ್ಲಿ ಪ್ರಮುಖರ ಸಭೆ,ನಿಯಮ ಉಲ್ಲಂಘನೆ ಆಗಿಲ್ಲ -ಸಚಿವ ಎಸ್.ಅಂಗಾರ

ಕಡಬ: ಇಲ್ಲಿನ ಸರಸ್ವತಿ ವಿದ್ಯಾಲಯದಲ್ಲಿ ಸುಳ್ಯ ಶಾಸಕ ಹಾಗೂ ಸಚಿವ ಎಸ್.ಅಂಗಾರ ನೇತೃತ್ವದಲ್ಲಿ ಕೋವಿಡ್ ಕುರಿತಾಗಿ ವಾರ್‌ರೂಂ ಹಾಗೂ ಸೇವಾ ಭಾರತಿ ಪ್ರಮುಖರ ಸಭೆ ನಡೆಯಿತು. ಸಭೆಯಲ್ಲಿ ಕೊವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂಬ ವರದಿಯ ಕುರಿತು ಸಚಿವ ಎಸ್.ಅಂಗಾರ ಅವರು

ಕಡಬದಲ್ಲಿ ಜಿಲ್ಲಾಡಳಿತದ ನಿಯಮ ಮುರಿದು ಸಚಿವ ಅಂಗಾರರ ಸಭೆ ಆರೋಪ | ಪತ್ರಕರ್ತರ ಮೇಲೆ ದರ್ಪ ತೋರಿದ ಕಾರ್ಯಕರ್ತರು

ಕಡಬದ ವಿದ್ಯಾನಗರದಲ್ಲಿರುವ‌ ಸರ ಸ್ವತಿ ಶಾಲೆಯಲ್ಲಿ ಬಂದರು ಹಾಗೂ ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರ ನೇತೃತ್ವದಲ್ಲಿ ಸಚಿವರ ವಾರ್ ರೂಂ ಹಾಗೂ ಸೇವಾ ಭಾರತಿ ಕಾರ್ಯಕರ್ತರ ಸಭೆ ಆರೆಸ್ಸೆಸ್ ನಾಯಕರ ಉಪಸ್ಥಿತಿಯಲ್ಲಿ ಬೃಹತ್ ಸಭೆ ನಡೆದಿದೆ. ರಸ್ತೆಯ ಎರಡೂ ಬದಿಗಳಲ್ಲಿಯೂ ಅಧಿಕ ವಾಹನಗಳು