ಸಿಇಟಿ ಪರೀಕ್ಷೆಗೆ ದಿನ ನಿಗದಿ | ಯಾವಾಗ ನಡೆಯಲಿದೆ ಸಿಇಟಿ ಪರೀಕ್ಷೆ..? ಇಲ್ಲಿದೆ ಮಾಹಿತಿ

ಬೆಂಗಳೂರು : ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ರದ್ದುಪಡಿಸಿರುವುದರಿಂದ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಡಿಸಿಎಂ ಡಾ. ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದ್ದಾರೆ ಸಿಇಟಿ

ಮಾಜಿ ಸಚಿವ,ಹಾಲಿ ಶಾಸಕ ಸಿ.ಎಂ.ಉದಾಸಿ ನಿಧನ

ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಾಜಿ ಸಚಿವ,ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿ.ಎಂ. ಉದಾಸಿ ಇಂದು ನಿಧನ ಹೊಂದಿದರು. ಅನಾರೋಗ್ಯದಿಂದ ಮೇ.25ರಂದು ಆಸ್ಪತ್ರೆಗೆ ದಾಖಲಾಗಿದ್ದರು. 77 ವರ್ಷದ ಉದಾಸಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಿಎಂ

ವಿಟ್ಲ | ಬೈಕ್-ಸ್ಕೂಟಿ ಡಿಕ್ಕಿ ,ಸವಾರ ಗಂಭೀರ | ಮಂಗಳೂರು ಆಸ್ಪತ್ರೆಗೆ ದಾಖಲೆ

ಬಂಟ್ವಾಳ : ಬೈಕ್ ಹಾಗೂ ಸ್ಕೂಟಿ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನ ಎಂಬಲ್ಲಿ ನಡೆದಿದೆ. ಕನ್ಯಾನ ದಿಲ್ ದಾರ್ ಹೋಟೇಲ್ ಮಾಲಕರಾದ ಇಬ್ರಾಹಿಂ ಎಂಬವರು ಕನ್ಯಾನ ಪೇಟೆಗೆ ತೆರಳುತ್ತಿದ್ದ ಸಂದರ್ಭ ಎದುರಿನಿಂದ ಬಂದ ಸ್ಕೂಟಿ ಮಧ್ಯೆ ಈ

ದೇಶದಲ್ಲಿ ಇಳಿಕೆಯ ಹಾದಿಯಲ್ಲಿ ಕೊರೋನಾ | ಲಕ್ಷ ದಿಂದ ಸಾವಿರಕ್ಕೆ ಕುಸಿದ ಸಾವಿನ ಸಂಖ್ಯೆ

ಭಾರತದಲ್ಲಿ ಕೊರೋನಾ 2ನೇ ಅಲೆ ಇಳಿಕೆಯ ಹಾದಿಯಲ್ಲಿ ದಾಪುಗಾಲು ಹಾಕುತ್ತಾ ಮುಂದುವರೆದಿದ್ದು, ಇಂದು ಮಂಗಳವಾರ ಬೆಳಿಗ್ಗೆ ಸಮಯಕ್ಕೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಕೇವಲ 86,498 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದು ಕಳೆದ 62 ದಿನಗಳ ಕನಿಷ್ಠ ಪ್ರಮಾಣವಾಗಿದೆ. ಅದೇ ರೀತಿ ದೇಶದಲ್ಲಿ ಕೊಂಡು

ಉಡುಪಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ: ಪತ್ನಿ, ಪುತ್ರ ಸಹಿತ ಮೂವರು ಆರೋಪಿಗಳು ದೋಷಿ

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉದ್ಯಮಿ ಉಡುಪಿ ಇಂದ್ರಾಳಿಯ ಭಾಸ್ಕರ್ ಶೆಟ್ಟಿ(52)ಯನ್ನು ಕೊಲೆಗೈದು ಹೋಮಕುಂಡದಲ್ಲಿ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಅಂತಿಮ ತೀರ್ಪು ಪ್ರಕಟಿಸಿದ್ದು, ಪತ್ನಿ, ಮಗ ಸಹಿತ ಮೂವರು ಆರೋಪಿಗಳು

ಹಿರಿಯ ಸಹಕಾರಿ ಧುರೀಣ ಡಾ. ಜಿ. ವೆಂಕಟ್ರಮಣ ಭಟ್ ಕೋರೆಕ್ಕಾನ ನಿಧನ

ಸುಳ್ಯ ಕನಕಮಜಲು ಗ್ರಾಮದ ಕೋರೆಕ್ಕಾನ ನಿವಾಸಿ, ಹಲವು ವರ್ಷಗಳಿಂದ ಕನಕಮಜಲಿನಲ್ಲಿ ವೈದ್ಯರಾಗಿ, ಅಂಚೆಪಾಲಕರಾಗಿ ಸೇವೆ ಸಲ್ಲಿಸಿದ್ದ ಡಾ. ಜಿ.ವೆಂಕಟ್ರಮಣ ಭಟ್ ಅವರು ಹೃದಯಾಘಾತದಿಂದಾಗಿ ಜೂ.7ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಕನಕಮಜಲು ಪ್ರಾಥಮಿಕ ಕೃಷಿ

ಯಡಮೊಗೆ ಉದಯ ಗಾಣಿಗ ಕೊಲೆ ಪ್ರಕರಣ: ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಹಿತ ಮತ್ತಿಬ್ಬರ ಬಂಧನ

ಉಡುಪಿ : ಯಡಮೊಗೆ ಗ್ರಾಪಂ ವ್ಯಾಪ್ತಿಯ ಹೊಸಬಾಳು ಉದಯ ಕುಮಾರ್ ಗಾಣಿಗ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೇರಿದಂತೆ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಭಟ್ ಅಗ್ರಹಾರ ಹಾಗೂ ಯಡಮೊಗೆ ನಿವಾಸಿ ರಾಜೇಶ್ ಭಟ್

ದಕ್ಷಿಣ ಕನ್ನಡ ಕೋವಿಡ್ ನಿಯಮಾವಳಿ ಬಿಗಿ | ಅವಶ್ಯ ವಸ್ತು ಖರೀದಿಗೆ ನಡೆದುಕೊಂಡೇ ಹೋಗಿ,ಅವಧಿ ಮೀರಿ ಅಂಗಡಿ ತೆರೆದರೆ ಕಠಿಣ…

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಕೊರೊನಾ ಪಾಸಿಟಿವಿಟಿ ದರ ಶೇ. 20 ರಿಂದ 21ರಷ್ಟಿದ್ದು, ಅದನ್ನು ಶೇ. 5ಕ್ಕೆ  ಇಳಿಸಲು ಜನರ ಸಹಕಾರ ಅಗತ್ಯ. ಇದಕ್ಕೆ ಮುಂದಿನ ಒಂದು ವಾರ ನಿರ್ಣಾಯಕ. ಜೂ. 14ರವರೆಗೂ ಲಾಕ್‌ ಡೌನ್‌ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ.ಈ

ಪುತ್ತೂರು : ವಿವಾಹ ನಿಶ್ಚಿತಾರ್ಥವಾಗಿದ್ದ ಗೌರವ ಶಿಕ್ಷಕಿ ನೇಣಿಗೆ ಶರಣು

ಪುತ್ತೂರು: ವಿವಾಹ ನಿಶ್ಚಿತಾರ್ಥ ವಾಗಿದ್ದ ಯುವತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಗ್ರಾಮದ ಕುಳದಪಾರೆಯಲ್ಲಿ ನಡೆದಿದೆ. ನಿದಿಯಡ್ಕ ನಿವಾಸಿ ಸುಬ್ಬಣ್ಣ ನಾಯ್ಕ ಅವರ ಪುತ್ರಿ ಪ್ರಿಯಾಳೆ (25) ಮೃತ ಯುವತಿ. ತನ್ನ ಮನೆಯಲ್ಲಿ ನಿನ್ನೆ

ಹಸಿ ಕಸ ಒಣ ಕಸ ವಿಗಂಡಣೆ ಮಾಡದ ಅಪಾರ್ಟ್ಮೆಂಟ್ ಗೆ ಬರೋಬ್ಬರಿ 53 ಸಾವಿರ ದಂಡ ವಿಧಿಸಿದ ಮ.ನ.ಪಾ

ಮಂಗಳೂರು ಮಹಾನಗರ ಪಾಲಿಕೆಯು ಹಸಿ ಕಸ ಮತ್ತು ಒಣ ಕಸ ವಿಂಗಡಿಸದ ಅಪಾರ್ಟ್ ಮೆಂಟ್ ಗೆ ಬರೋಬ್ಬರಿ 53 ಸಾವಿರ ರೂಪಾಯಿ ದಂಡ ವಿಧಿಸಿದೆ. ಮಂಗಳೂರು ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಸಲು ಮಹಾನಗರಪಾಲಿಕೆ ಒಣ ಕಸ ಮತ್ತು ಹಸಿ ಕಸವನ್ನು ಪ್ರತ್ಯೇಕಿಸುವಂತೆ ಆದೇಶ ಹೊರಡಿಸಿದ್ದು, ಕೆಲವು