ಪ.ಜಾ /ಪ.ಪಂಗಡ ಉಪಯೋಜನೆಯಯ ಕ್ರಿಯಾಯೋಜನೆಗೆ ಅಭಿವೃದ್ಧಿ ಪರಿಷತ್ ಅನುಮೋದನೆ | ಈ ವರ್ಗದ ಜನರಿಗೆ 26 ಸಾವಿರ ಕೋಟಿಯ…

ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಸಮುದಾಯದ ಜನರಿಗೆ ರಾಜ್ಯ ಸರಕಾರ ಸಿಹಿ ಸುದ್ದಿ ನೀಡಿದೆ.ಪ.ಜಾತಿ,ಪ.ಪಂಗಡ ಉಪಯೋಜನೆ ಅಡಿಯಲ್ಲಿ 2021-22ನೇ ಸಾಲಿನಲ್ಲಿ 26,005 ಕೋಟಿ ರೂ ವೆಚ್ಚದ ಕ್ರಿಯಾಯೋಜನೆಗೆ ಸಿಎಂ ನೇತೃತ್ವದ ರಾಜ್ಯ ಅಭಿವೃದ್ಧಿ ಪರಿಷತ್ ಅನುಮೋದನೆ ನೀಡಿದೆ. ಎಸ್‌ಸಿಎಸ್‌ಪಿ ಅಡಿ

ಆತೂರು ಪೊಲೀಸ್ ಚೆಕ್ ಪೋಸ್ಟ್ ಧ್ವಂಸ : ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಎಸ್ಪಿಗೆ ವಿ.ಹಿಂ.ಪ.ಮನವಿ

ಕಡಬ : ಪೊಲೀಸ್ ಚೆಕ್ ಪೋಸ್ಟ್ ಬಳಿ ಶೆಡ್ ಧ್ವಂಸ ಮಾಡಿದವರ ಮೇಲೆ ಯಾವುದೇ ಒತ್ತಡಕ್ಕೆ ಮಣಿಯದೇ ಕೇಸ್ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದು ಜಾಗರಣ ವೇದಿಕೆ ಕಡಬ ತಾಲೂಕು ವತಿಯಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿದೆ. ಸಾರ್ವಜನಿಕರ ರಕ್ಷಣೆಗಾಗಿ ದುಡಿಯುವ

ಮಾನಹಾನಿ ಸುದ್ದಿ ಪ್ರಕಟಿಸದಂತೆ ತಡೆಯಾಜ್ಞೆ: ಡಿ.ವಿ.ಸದಾನಂದ ಗೌಡ‌ ಸ್ಪಷ್ಟನೆ

ಬೆಂಗಳೂರು: ತಮ್ಮ ಮಾನಕ್ಕೆ ಹಾನಿ ತರುವ ಯಾವುದೇ ಸುದ್ದಿಯನ್ನು ಪ್ರಕಟಿಸಬಾರದು ಎಂದು ಮಾಧ್ಯಮಗಳ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಬೆಂಗಳೂರು ಸಿಟಿ ಸಿವಿಲ್‌ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಈ ಮಧ್ಯೆ, ಚುನಾವಣೆ, ಸಂಪುಟ ರಚನೆ ಸಂದರ್ಭದಲ್ಲಿ ವಿರೋಧಿಗಳು ಈ

ಕೆಯ್ಯೂರು ಹಾಲು ಉತ್ಪಾದಕರ ಸಂಘದ ಮಾಜಿ ನಿರ್ದೇಶಕ ಮಾಡಾವು ಸಂಪಾಜೆ ಭವಾನಿಶಂಕರ್ ಎಂ.ಎಸ್.ನಿಧನ

ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಭವಾನಿಶಂಕರ ಮಾಡಾವು ಸಂಪಾಜೆ (70ವ)ರವರು ಜು.3 ರಂದು ನಸುಕಿನ ಜಾವ ನಿಧನರಾದರು. ಕೆಯ್ಯೂರು ಗ್ರಾಮದ ಮಾಡಾವು ನಿವಾಸಿಯಾಗಿರುವ ಪ್ರಗತಿಪರ ಕೃಷಿಕ ಭವಾನಿಶಂಕರ ಮಾಡಾವು ಸಂಪಾಜೆ ಅವರು ಎದೆ ನೋವು ಕಾಣಿಸಿಕೊಂಡಿದ್ದು ಪುತ್ತೂರು ಆಸ್ಪತ್ರೆಗೆ ಚಿಕಿತ್ಸೆಗೆ

ಹಿರಿಯ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ನಿಧನ

ಡಿಆರ್ ಡಿಒ ಮಾಜಿ ವಿಜ್ಞಾನಿ, ಹೆಚ್ಎಎಲ್ ಸಂಸ್ಥೆಯ ಹಿರಿಯ ನಿವೃತ್ತ ಇಂಜಿನಿಯರ್ ಸುಧೀಂದ್ರ ಹಾಲ್ದೊಡ್ಡೇರಿ ಜು.2 ರಂದು ಮಧ್ಯಾಹ್ನ ನಿಧನರಾಗಿದ್ದಾರೆ. ವಾರದ ಹಿಂದೆ ತೀವ್ರ ಹೃದಯಾಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರ ಆರೊಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದ ವೈದ್ಯರು "ಸುಧೀಂದ್ರ

ದೋಳ್ಪಾಡಿ : ಯುವತಿ ನಾಪತ್ತೆ, ಎಡಮಂಗಲದ ಯುವಕನೊಂದಿಗೆ ಪರಾರಿ ಶಂಕೆ

ಕಡಬ : ಕಾಣಿಯೂರು ಗ್ರಾ.ಪಂ.ವ್ಯಾಪ್ತಿಯ ದೋಳ್ಪಾಡಿ ಗ್ರಾಮದ ಕೋರೇಲು ನಿವಾಸಿ ಯುವತಿಯೋರ್ವಳು ನಾಪತ್ತೆಯಾಗಿದ್ದು,ಆಕೆ ಎಡಮಂಗಲದ ಯುವಕನೊಂದಿಗೆ ಪರಾರಿಯಾಗಿರುವ ಶಂಕೆ ವ್ಯಕ್ತಪಡಿಸಿ ಯುವತಿಯ ಅಣ್ಣ ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೋರೊಲು ನಿವಾಸಿ ಲಲಿತಾ(30ವ.) ಎಂಬ ಯುವತಿಯು

ಉಪ್ಪಿನಂಗಡಿ ಆಟೋ ಕಳವು ಪ್ರಕರಣ: ಇಬ್ಬರ ಬಂಧನ

ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಟೋ ರಿಕ್ಷಾ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಕಡಬ ತಾಲೂಕಿನ ಬಿಳಿನೆಲೆ ಸಮೀಪದ ಬಿಳಿನೆಲೆ ಬೈಲು ನಿವಾಸಿ ಸಂತೋಷ್(18 ವ) ಹಾಗೂ ಕೇರಳದ ಪಾತೂರು ಗ್ರಾಮದ ಸೀಂತೂರು ನಿವಾಸಿ 19

ದ.ಕ.ನಾಳೆಯಿಂದ ಸಂಜೆ 5 ರವರೆಗೆ ಅಂಗಡಿ ತೆರೆಯಲು ಅವಕಾಶ,ಶನಿವಾರ ಆದಿತ್ಯವಾರ ವೀಕೆಂಡ್ ಕರ್ಫ್ಯೂ

ದ.ಕ.ದಲ್ಲಿ ನಾಳೆಯಿಂದ ಸಂಜೆ 5 ರವರೆಗೆ ಅಂಗಡಿ ತೆರೆಯಲು ಅವಕಾಶ ಇದ್ದು,ಶನಿವಾರ ಆದಿತ್ಯವಾರ ವೀಕೆಂಡ್ ಕರ್ಫ್ಯೂ ಇರಲಿದೆ. ಕರ್ನಾಟಕ ಸರಕಾರದ ಮುಖ್ಯಕಾರ್ಯದರ್ಶಿಯವರ ಆದೇಶದಂತೆ ಜು.5 ರ ತನಕ ದಕ್ಷಿಣ ಕನ್ನಡ ಜಿಲ್ಲೆಗೆ 1ನೇ category ಯಲ್ಲಿರುವ ಜಿಲ್ಲೆಗಳಂತೆಯೇ ವಿನಾಯಿತಿ

ಕಡಬ: ಬಲ್ಯ ಸಮೀಪ ಸ್ಕೂಟಿ- ಓಮ್ನಿ ಡಿಕ್ಕಿ | ಬೈಕ್ ಸವಾರರಿಗೆ ಗಾಯ

ಕಡಬ: ಕುಟ್ರುಪ್ಪಾಡಿ ಗ್ರಾ.ಪಂ‌ ವ್ಯಾಪ್ತಿಯ ಬಲ್ಯ ಸಮೀಪ ಓಮಿನಿ ಕಾರು ಮತ್ತು ಸ್ಕೂಟಿ ನಡುವೆ ಅಪಘಾತ ನಡೆದು ಸ್ಕೂಟಿ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರ ನಡೆದಿದೆ. ಅಪಘಾತದಿಂದ ಸ್ಕೂಟಿ ನಜ್ಜುಗುಜ್ಜಾಗಿದ್ದು ಓಮ್ನಿಯ ಅಡಿಗೆ ಸಿಲುಕಿಕೊಂಡಿದೆ.ಅಲಂಕಾರಿನಿಂದ ಕಡಬಕ್ಕೆ ಬರುತ್ತಿದ್ದ

ಸೆಪ್ಟೆಂಬರ್ ವರೆಗೂ ಅವಧಿ ಮೀರಿದ ಡಿಎಲ್,ಆರ್‌ಸಿ ಬಳಸಬಹುದು

ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ (ಆರ್‌ಸಿ) ಮತ್ತು ಇತರ ಪರವಾನಗಿಗಳಂತಹ ದಾಖಲೆಗಳ ಸಿಂಧುತ್ವ (ವ್ಯಾಲಿಡಿಟಿ) ವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಸರ್ಕಾರ ಈ ಮೊದಲು ಜೂನ್ 30 ರವರೆಗೆ ಗಡುವು ನೀಡಿತ್ತು. ಇದನ್ನು ಈಗ ಸೆ.30ರವರೆಗೆ ವಿಸ್ತರಿಸಲಾಗಿದೆ. 2021 ಫೆಬ್ರವರಿ