# ಉಳ್ಳಾಲ: ಚಾಲಕನಿಗೆ ರಕ್ತದೊತ್ತಡ ಕಡಿಮೆ, ಅಂಗಡಿಗೆ ನುಗ್ಗಿದ ಕಾರು

- Link: https://hosakannada.com/accident/ullal-driver-had-low-blood-pressure-car-crashes-into-shop/
- Published: 2026-11-07T12:21:12+00:00
- Author: ಹೊಸಕನ್ನಡ ನ್ಯೂಸ್

**ಉಳ್ಳಾಲ, ನ.7: ದೇರಳಕಟ್ಟೆ ಮಸೀದಿ ಎದುರು ಭಾಗದ ಚತುಷ್ಪಥ ರಸ್ತೆಯಲ್ಲಿ ನ.7 ರ ಶನಿವಾರ, ಕಾರೊಂದು
ಚಾಲಕನ ನಿಯಂತ್ರಣ ತಪ್ಪಿ ಹಣ್ಣಿನ ಅಂಗಡಿಗೆ ಡಿಕ್ಕಿ ಹೊಡೆದಿದ್ದು, ಬೆಳಗ್ಗೆ ಅಂಗಡಿಯಲ್ಲಿ ಗ್ರಾಹಕರಿಲ್ಲದೆ
ಇದ್ದ ಕಾರಣ ದೊಡ್ಡ ಅವಘಡವೊಂದು ತಪ್ಪಿದೆ.**

Sponsored

ಮಂಗಳೂರು ಕಡೆಯಿಂದ ನಾಟೆಕಲ್‌ ಕಡೆ ಸಂಚರಿಸುತ್ತಿದ್ದ ಕಾರು ಚಾಲಕನಿಗೆ ರಕ್ತದೊತ್ತಡ ಕಡಿಮೆಯಾದ ಕಾರಣ
ಕೂಡಲೇ ಕಾರನ್ನು ಎಡಕ್ಕೆ ತೆಗೆದಿದ್ದು, ಕಾರು ನಿಯಂತ್ರಣ ತಪ್ಪಿ ನೇರವಾಗಿ ಹಣ್ಣಿನ ಅಂಗಡಿಗೆ ಡಿಕ್ಕಿ
ಹೊಡೆದಿದೆ.

Advertisement

Advertisement

ಬೆಳಗ್ಗೆ ಅಂಗಡಿ ತೆರೆದು ಮಾಲಕ ಹಣ್ಣು ಹಂಪಲು ಹೊರಗಡೆ ಇಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅದೃಷ್ಟಕ್ಕೆ
ಅಂಗಡಿಯಲ್ಲಿ ಗ್ರಾಹಕರು ಇರಲಿಲ್ಲ. ಘಟನೆ ಸಂದರ್ಭ ಅಂಗಡಿ ಮಾಲಕ ಮತ್ತು ಕಾರಿನ ಚಾಲಕ ಯಾವುದೇ ಅವಘಡ
ಇಲ್ಲದೆ ಪಾರಾಗಿದ್ದಾರೆ. ಅಂಗಡಿಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದೆ. ನಂತರ ಸ್ಥಳೀಯರು ಆಗಮಿಸಿ ಕಾರನ್ನು
ತೆರವು ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿದ್ದು, ಯಾವುದೇ
ಪ್ರಕರಣ ದಾಖಲಿಸಲಿಲ್ಲ.

Advertisement
