# ಭೀಕರ ರಸ್ತೆ ಅಪಘಾತ, ಗಾಯಕ ಯೋ ಯೋ ಹನಿ ಸಿಂಗ್‌ ಸೋದರಳಿಯ ಸೇರಿ ಇಬ್ಬರು ಸಾವು

- Link: https://hosakannada.com/accident/terrible-road-accident-singer-yo-yo-honey-singhs-cousin-among-two-people-dead/
- Published: 2026-11-01T09:56:09+00:00
- Author: ಹೊಸಕನ್ನಡ ನ್ಯೂಸ್

ಖ್ಯಾತ ಗಾಯಕ ಹಾಗೂ ರಾಪರ್ ಯೋ ಯೋ ಹನಿ ಸಿಂಗ್ ಅವರ ಸೋದರಳಿಯ ವಿದಿತ್ ಓಲಾಕ್ ಪಂಜಾಬ್‌ನ ಜಲಂಧರ್‌ನಲ್ಲಿ
ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.

Sponsored

ನವೆಂಬರ್ 1 ರಂದು ಮುಂಜಾನೆ ಜಲಂಧರ್‌ನ ಫ್ಲೈಓವರ್ ಮೇಲೆ ವಿದಿತ್ ಓಲಾಕ್ ಹಾಗೂ ಅವರ ಸ್ನೇಹಿತ ಆರ್ವ್
ತಲ್ವಾರ್ ಅವರು ಹುಟ್ಟುಹಬ್ಬದ ಪಾರ್ಟಿ ಮುಗಿಸಿ ವಾಪಸ್ಸಾಗುತ್ತಿದ್ದಾಗ ಇವರು ಪ್ರಯಾಣಿಸುತ್ತಿದ್ದ 
ಕಾರು ಅತಿವೇಗದಿಂದ ಬಂದು ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್ ಟ್ರೇಲರ್‌ಗೆ ಡಿಕ್ಕಿ ಹೊಡೆದಿದೆ.
​
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ಹನಿ ಸಿಂಗ್ ಸೋದರಳಿಯ ವಿದಿತ್ ಓಲಾಕ್ ಹಾಗೂ ಅವರ ಸ್ನೇಹಿತ ಸ್ಥಳದಲ್ಲೇ
ಮೃತಪಟ್ಟಿದ್ದಾರೆ.

Advertisement

Advertisement

ಈ ಅನಿರೀಕ್ಷಿತ ದುರ್ಘಟನೆಯಿಂದ ತೀವ್ರವಾಗಿ ನೊಂದಿರುವ ಹನಿ ಸಿಂಗ್, ತಮ್ಮ ಸಾಮಾಜಿಕ ಜಾಲತಾಣದಲ್ಲಿ
ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದು, “ಇದು ನನ್ನ ಜೀವನದ ಅತ್ಯಂತ ಕತ್ತಲೆಯಾದ ಹಾಗೂ ಕಷ್ಟದ ದಶಕವಾಗಿದೆ”
ಎಂದು ದುಃಖ ವ್ಯಕ್ತಪಡಿಸಿದ್ದಾರೆ.

Advertisement
