# ಸುಳ್ಯ: ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಪಿಕಪ್ ವಾಹನ

- Link: https://hosakannada.com/accident/sullia-pickup-vehicle-loses-control-and-crashes-into-house/
- Published: 2026-06-24T07:43:22+00:00
- Author: ಹೊಸಕನ್ನಡ ನ್ಯೂಸ್

ಸುಳ್ಯ: ಕುರುಂಜಿಗುಡ್ಡೆ ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಹಿಂಬದಿಗೆ
ಚಲಿಸಿ ಮನೆಯೊಂದಕ್ಕೆ ನುಗ್ಗಿದ ಪರಿಣಾಮ ಮನೆಯು ಭಾಗಶಃ ಹಾನಿಗೊಳಗಾದ ಘಟನೆ ಸಂಭವಿಸಿದೆ.

Sponsored

ಮಂಡ್ಯ ನೋಂದಣಿ ಹೊಂದಿರುವ ಪಿಕಪ್ ವಾಹನವು ಕುರುಂಜಿಗುಡ್ಡೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ 
ಏಕಾಏಕಿ ನಿಯಂತ್ರಣ ತಪ್ಪಿ ಹಿಂಬದಿಗೆ ಚಲಿಸಿದೆ ಎನ್ನಲಾಗಿದೆ.

Advertisement

Advertisement

ಬಳಿಕ ರಸ್ತೆ ಬದಿಯಲ್ಲಿದ್ದ ಮನೆಯೊಂದರ ಮೇಲೆ ಬಿದ್ದ ಪರಿಣಾಮ ಮನೆಯ ಒಂದು ಬದಿಯ ಗೋಡೆ ಹಾಗೂ ಇತರ ಭಾಗಗಳು
ಜಖಂಗೊಂಡಿವೆ. ವಾಹನದ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

Advertisement
