# ನೆಲ್ಯಾಡಿ: ಟ್ರಾನ್ಸ್‌ಫಾರ್ಮರ್‌ಗೆ ಕಾರು ಡಿಕ್ಕಿ, ಪ್ರಯಾಣಿಕರು ಅಪಾಯದಿಂದ ಪಾರು

- Link: https://hosakannada.com/accident/nelyadi-car-crashes-into-transformer-passengers-escape-danger/
- Published: 2026-11-05T03:11:32+00:00
- Author: ಹೊಸಕನ್ನಡ ನ್ಯೂಸ್

**ನೆಲ್ಯಾಡಿ: ಇಕೋ ಕಾರೊಂದು ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿಯಾಗಿ ಕಂಬ ಹಾಗೂ ವಿದ್ಯುತ್
ತಂತಿಗಳು ಕಾರಿನ ಮೇಲೆ ಬಿದ್ದ ಘಟನೆ ನ.4 ರಂದು ಮಧ್ಯಾಹ್ನ ನೆಲ್ಯಾಡಿ ಸಮೀಪದ ದೊಂತಿಲದಲ್ಲಿ ನಡೆದಿದೆ.
ಈ ಘಟನೆಯಲ್ಲಿ ಕಾರು ಚಾಲಕ ಸೇರಿ ಮೂವರು ಅಪಾಯದಿಂದ ಪಾರಾಗಿದ್ದಾರೆ.**

Sponsored

ನೆಲ್ಯಾಡಿ-ಬಲ್ಯ ರಸ್ತೆಯಲ್ಲಿ ನೆಲ್ಯಾಡಿಯಿಂದ ಬಲ್ಯ ಕಡೆಗೆ ಬಲ್ಯ ನಿವಾಸಿ ಸುಂದರ ಆಳ್ವ ಅವರು ಇಕೋ
ಕಾರಿನಲ್ಲಿ ತೆರಳುತ್ತಿದ್ದಾಗ ಕೌಕ್ರಾಡಿ ಗ್ರಾಮದ ದೊಂತಿಲದಲ್ಲಿ ರಸ್ತೆ ಬದಿಯಲ್ಲಿದ್ದ ವಿದ್ಯುತ್‌
ಟ್ರಾನ್ಸ್‌ಫಾರ್ಮರ್‌ಗೆ ಡಿಕ್ಕಿ ಹೊಡೆದಿದೆ.

Advertisement

Advertisement

ಡಿಕ್ಕಿಯ ರಭಸಕ್ಕೆ ಟ್ರಾನ್ಸ್‌ಫಾರ್ಮರ್‌ನ ಒಂದು ಕಂಬ ತುಂಡಾಗಿ ಕಂಬ ಹಾಗೂ ವಿದ್ಯುತ್‌ ತಂತಿಗಳು ಕಾರಿನ
ಮೇಲೆ ಬಿದ್ದಿದೆ. ಘಟನೆ ನಡೆದಾಗ ವಿದ್ಯುತ್‌ ಪ್ರವಹಿಸುತ್ತಿದ್ದರೂ, ವಿದ್ಯುತ್‌ ಸಂಪರ್ಕ ಟ್ರಿಪ್‌
ಆಗಿ ಸ್ಥಗಿತಗೊಂಡಿದೆ. ಕಾರು ಚಾಲಕ ಸುಂದರ ಆಳ್ವ, ಅವರ ಪತ್ನಿ ಹಾಗೂ ಸೊಸೆ ಯಾವುದೇ ಅಪಾಯವಿಲ್ಲದೆ 
ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ನೆಲ್ಯಾಡಿ ಮೆಸ್ಕಾಂ ಜೆಇ ರಾಮಣ್ಣ ಹಾಗೂ ಸಿಬ್ಬಂದಿ ಭೇಟಿ ನೀಡಿ ದುರಸ್ತಿ ಕಾರ್ಯ 
ಕೈಗೊಂಡಿದ್ದಾರೆ.

Advertisement
