# ಮಂಗಳೂರು: ಹಿಟ್‌ ಆಂಡ್‌ ರನ್‌ ಕೇಸ್‌: ಬಸ್‌ ವಶಕ್ಕೆ, ಚಾಲಕನ ವಿರುದ್ಧ ಕ್ರಮ

- Link: https://hosakannada.com/accident/mangalore-hit-and-run-case-bus-seized-action-taken-against-the-driver/
- Published: 2026-10-29T09:09:55+00:00
- Author: ಹೊಸಕನ್ನಡ ನ್ಯೂಸ್

ಮಂಗಳೂರು: ಜಪ್ಪಿನಮೊಗರಿನಲ್ಲಿ ಪಾದಚಾರಿಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದ ಬಸ್ಸನ್ನು
ಮಂಗಳೂರು ಸಂಚಾರ ದಕ್ಷಿಣ ಪೊಲೀಸರು ವಶಕ್ಕೆ ಪಡೆದಿದ್ದು, ಚಾಲಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

Sponsored

ಅ.22 ರಂದು ರಾತ್ರಿ ಸುಮಾರು 7.50 ಕ್ಕೆ ಜಪ್ಪಿನಮೊಗರು ಎ.ಕೆ.ಲಾಡ್ಜ್‌ ಎದುರು ರಾಷ್ಟ್ರೀಯ ಹೆದ್ದಾರಿ
66 ರಲ್ಲಿ ಮಹಾಕಾಳಿ ಪಡ್ಪು ಕಡೆಗೆ ಹೋಗುವ ರಸ್ತೆಯ ಎಡಬದಿಯ ಕಚ್ಚಾ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ
30 ರಿಂದ 35 ವರ್ಷ ವಯಸ್ಸಿನ ಅಪರಿಚಿತ ಯುವಕನಿಗೆ ಬಸ್‌ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ
ರಸ್ತೆಯ ಬದಿಗೆ ಬಿದ್ದ ಯುವಕನ ತಲೆಗೆ ತೀವ್ರ ಗಾಯವಾಗಿತ್ತು.

Advertisement

Advertisement

ಸ್ಥಳೀಯರು ಗಾಯಳುವನ್ನು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ
ದೃಢಪಡಿಸಿದ್ದರು. ಅಪಘಾತದ ಬಳಿಕ ಬಸ್‌ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿತ್ತು.

ಈ ಕುರಿತು ಮಂಗಳೂರು ಸಂಚಾರ ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮಾಡಲಾಗಿದ್ದು,
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಪೊಲೀಸರು ಬಸ್‌ನ್ನು ವಶಕ್ಕೆ ಪಡೆದಿದ್ದಾರೆ.

ಸಿಸಿಟಿವಿ ದೃಶ್ಯಾವಳಿ ಹಾಗೂ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರು ನೀಡಿದ ಮಾಹಿತಿಯ ಆಧಾರದಲ್ಲಿ
ಸುಧೀರ್‌ ಕೆ.(40) ಬಸ್‌ ಚಾಲನೆ ಮಾಡುತ್ತಿದ್ದ ಎಂಬುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಬಸ್‌ನಲ್ಲಿದ್ದ ಪ್ರಯಾಣಿಕರ ಮೊಬೈಲ್‌ ಲೊಕೇಶನ್‌ ವಿವರಗಳು ಸೇರಿ ಇತರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ,
ತನಿಕೆ ಮಾಡಲಾಗುವುದು ಎಂದು ಮಂಗಳೂರು ನಗರ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

Advertisement
