# ಬೆಳ್ತಂಗಡಿ: ಕಾರು-ಬೈಕ್ ಅಪಘಾತ, ಮಹಿಳೆ ಸಾವು!

- Link: https://hosakannada.com/accident/belthangady-car-bike-accident-news-women-death/
- Published: 2026-05-17T21:27:29+00:00
- Author: ಹೊಸಕನ್ನಡ ನ್ಯೂಸ್

ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದಲ್ಲಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ.

Sponsored

ಮೂಡಬಿದಿರೆಯಿಂದ ಧರ್ಮಸ್ಥಳ ಕಡೆಗೆ ಸಾಗುತ್ತಿದ್ದ ಆಲ್ಟೋ ಕಾರು, ಮತ್ತು ಗುರುವಾಯನಕೆರೆಯಿಂದ ಗರ್ಡಾಡಿ
ಕಡೆಗೆ ಸಾಗುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ ನಲ್ಲಿದ್ದ ಮಹಿಳೆ
ಸಾವಿಗೀಡಾಗಿದ್ದಾರೆ. ಬೈಕ್ ನಲ್ಲಿ ಗಂಡ, ಹೆಂಡತಿ, ಮಗು ಇದ್ದಿದ್ದು ಮಹಿಳೆ ಸಾವಿಗೀಡಾಗಿದ್ದಾರೆ. 
ಮೃತ ಮಹಿಳೆ ನಾಲ್ಕೂರಿನ ಅನಿಲ್ ಬಳಂಜ ಅವರ ಹೆಂಡತಿ.

Advertisement

Advertisement

ಪ್ರಗತಿಪರ ಕೃಷಿಕ ಅನಿಲ್ ಬಳಂಜ ಗಂಭೀರಗಾಯಗೊಂಡಿದ್ದು, ಜೊತೆಯಲ್ಲಿದ್ದ ಮಗ ಸಣ್ಣಪುಟ್ಟ ಗಾಯಗಳೊಂದಿಗೆ
ಪಾರಾಗಿದ್ದಾರೆ. ಅನಿಲ್ ಬಳಂಜರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಘಟನೆ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Advertisement
