ಇವರ ಮನೆಯ ದೈವಗಳು ಮನೆಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತವೆ | ಕದಿಯಲು ಬಂದ ಕಳ್ಳರು ಕದಲಲಾಗದೆ ನಿಲ್ಲುತ್ತಾರೆ !!
ತಾನು ನಂಬಿದ ದೈವಗಳು ತಮ್ಮ ಜೀವ ಉಳಿಸುವುದು, ಸ್ವತ್ತು, ಸಾಮಾನು, ದನಕರುಗಳು, ಆಸ್ತಿ-ಪಾಸ್ತಿ ರಕ್ಷಿಸಿದ್ದವೆನ್ನುವ ಘಟನೆಗಳು ದೈವಾರಾಧನೆಯನ್ನು ಪಾರಂಪರ್ಯವಾಗಿ ಶ್ರದ್ಧಾ ಭಕ್ತಿಗಳಿಂದ ಮಾಡಿಕೊಂಡು ಬರುತ್ತಿರುವ ತುಳುನಾಡಿನ ಜನರ ಬಾಯಲ್ಲಿ ಆಗಾಗ ಕೇಳಿ ಬರುತ್ತಿರುತ್ತವೆ.
ಮೊನ್ನೆ, ಇಂತಹುದೇ ನಿಗೂಢ ಘಟನೆಯೊಂದು ಉಪ್ಪಿನಂಗಡಿಯಲ್ಲಿ ನಡೆದಿದೆ.
ಅವತ್ತು ಸೋಮವಾರದ ನಡು ರಾತ್ರಿ. ಮನೆಯ ಮಾಲೀಕ ಉಲ್ಲಾಸ್ ಜಂಕ್ಷನ್ ನಿವಾಸಿ ಸುದರ್ಶನ್ ಅವರು ಮಲಗುವಾಗ 12 ಗಂಟೆ ದಾಟಿತ್ತು. ಹಾಗೆ ಮಲಗಿ ತಡವಾಗಿ ಬೆಳಿಗ್ಗೆ ಎದ್ದು ನೋಡಿದರೆ, ತಾವು ಮಲಗಿದ ಪಕ್ಕದ ರೂಮಿನಲ್ಲಿ ಓವ್ರ ಅಪರಿಚಿತ ವ್ಯಕ್ತಿ ನಿದ್ದೆ ಹೋಗಿದ್ದ !
ಇದೀಗ ಬಂದ ಸುದ್ದಿ !
ಪೊಲೀಸ್ ಠಾಣಾ ವ್ಯಾಪ್ತಿಯ ಸುದರ್ಶನ್ ಎಂಬವರ ಮನೆಗೆ ರಾತ್ರಿ ಸಮಯ ಅಪರಿಚಿತ ವ್ಯಕ್ತಿ ನುಗ್ಗಿ ಕಳ್ಳತನ ಮಾಡುವ ಉದ್ದೇಶದಿಂದ ಮನೆಯ ಹಂಚನು ತೆಗೆದು ಒಳಗಡೆ ಇದ್ದವನನ್ನು ಬೆಳಗಿನ ಜಾವ ಸುದರ್ಶನ್ ರವರು ನೋಡಿ ಹಿಡಿದು ಪೊಲೀಸ್ ರಿಗೆ ಒಪ್ಪಿಸಿದ್ದು ಆಪಾದಿತ ಅನಿಲ್ ಸಹಾನಿ (34), ಡೊಂಬುಡಿ ಪಂಚಾಯತ್, ಬುಡಿ ನಗರ್ ಜಗನಾಥ್ ತಾಲ್ಲೂಕು, ಮಜಿಪುರ್ ಜಿಲ್ಲೆ, ಬಿಹಾರ ರಾಜ್ಯ ಎಂಬುದಾಗಿ ತನಿಖೆಯಿಂದ ತಿಳಿದು ಬಂದಿದೆ.
ಪೊಲೀಸ್ ಠಾಣಾ ವ್ಯಾಪ್ತಿಯ ಸುದರ್ಶನ್ ಎಂಬವರ ಮನೆಗೆ ರಾತ್ರಿ ಸಮಯ ಅಪರಿಚಿತ ವ್ಯಕ್ತಿ ನುಗ್ಗಿ ಕಳ್ಳತನ ಮಾಡುವ ಉದ್ದೇಶದಿಂದ ಮನೆಯ ಹಂಚನು ತೆಗೆದು ಒಳಗಡೆ ಇದ್ದವನನ್ನು ಬೆಳಗಿನ ಜಾವ ಸುದರ್ಶನ್ ರವರು ನೋಡಿ ಹಿಡಿದು ಪೊಲೀಸ್ ರಿಗೆ ಒಪ್ಪಿಸಿದ್ದು ಆಪಾದಿತ ಅನಿಲ್ ಸಹಾನಿ (34), ಡೊಂಬುಡಿ ಪಂಚಾಯತ್, ಬುಡಿ ನಗರ್ ಜಗನಾಥ್ ತಾಲ್ಲೂಕು, ಮಜಿಪುರ್ ಜಿಲ್ಲೆ, ಬಿಹಾರ ರಾಜ್ಯ ಎಂಬುದಾಗಿ ತನಿಖೆಯಿಂದ ತಿಳಿದು ಬಂದಿದೆ.
ಸುದರ್ಶನ್ ಒಂದು ಸಲ ಬೆಚ್ಚಿಬಿದ್ದು ಬಿಡುತ್ತಾರೆ. ನಂತರ ಮನೆಯ ಬಾಗಿಲುಗಳನ್ನು ಭದ್ರವಾಗಿಟ್ಟರೂ ಹೇಗೆ ಈ ವ್ಯಕ್ತಿ ಒಳ ನುಗ್ಗಿದ ಎಂದು ಅವರಿಗೆ ಅಚ್ಚರಿಯಾಗುತ್ತದೆ. ನಂತರ ಮನೆಯೊಳಗೇ ಮಲಗಿದ್ದ ಅಪರಿಚಿತ ವ್ಯಕ್ತಿಯನ್ನು ಪಕ್ಕದ ಮನೆಯವರ ಸಹಾಯದಿಂದ ಎಚ್ಚರಿಸಿ, ಆತನನ್ನು ಮನೆಯೊಳಗೇ ಸಣ್ಣಗೆ ರಿಪೇರಿ ಮಾಡಿದಾಗ ಆತ ತಾನು ಕಳ್ಳತನ ಮಾಡಲು ಬಂದುದಾಗಿ ಒಪ್ಪಿಕೊಳ್ಳುತ್ತಾನೆ. ಮತ್ತು ಮನೆಯ ಮಾಡಿನ ಹಂಚನ್ನು ಸರಿಸಿ ಒಳ ಬಂದುದಾಗಿಯೂ ಮತ್ತು ಮನೆಯಲ್ಲಿ ತಾನು ಹುಡುಕಾಟ ನಡೆಸಿ ಮನೆಯ ಮುಖ್ಯವಾದ ಬೀಗದ ಕೀ ಗಳನ್ನು ಮನೆಯ ಟಿ ವಿ ಸ್ಟ್ಯಾಂಡಿನಿಂದ ತೆಗೆದುಕೊಂಡಿದ್ದುದಾಗಿಯೂ ವಿವರಿಸುತ್ತಾನೆ.
ಆದರೆ ಘಟನೆಯ ನಿಗೂಢತೆಯೇನೆಂದರೆ, ಆತ ಯಾಕೆ ಮಲಗಿದ, ಕಳ್ಳತನ ಮಾಡಿ ಹೊರಗೆ ಯಾಕೆ ಹೋಗಿಲ್ಲ ಎನ್ನುವುದಕ್ಕೆ ಆತ ಸರಿಯಾದ ಕಾರಣ ನೀಡುತ್ತಿಲ್ಲ.
ಮನೆಯಿಂದ ಕಳ್ಳ ಹೊರಹೋಗದಂತೆ ದೈವ ಪಾರೋ ಕಾತೊಂದುಂಡಾ ?
ಈ ಸಂಬಂಧ ಮಾಧ್ಯಮದೊಂದಿಗೆ ಮಾತನಾಡಿದ ಮನೆ ಮಾಲಕ ಸುದರ್ಶನ್ ರವರು, ಇದು ತಾವು ನಂಬಿದ ದೈವದ ಕಾರ್ಣಿಕ ಎಂದು ಹೇಳುತ್ತಿದ್ದಾರೆ. ಅವರ ಈ ಮನೆಗೆ ಸುಮಾರು ಒಂದು ನೂರು ವರ್ಷಗಳ ಇತಿಹಾಸವಿದೆ. ಇಲ್ಲಿಯತನಕ ಇಲ್ಲಿ ಸಣ್ಣ ಪುಟ್ಟ ಕಳ್ಳತನದ ಪ್ರಕರಣಗಳು ಕೂಡ ಸಂಭವಿಸಿದ್ದಿಲ್ಲ. ಎತ್ತರದ ಛಾವಣಿಯಿಂದ ಕಷ್ಟದಿಂದ ಮೇಲೆ ಹತ್ತಿದ ಕಳ್ಳ ಅಲ್ಲಿಂದ ಮನೆಯೊಳಗೇ ಕೆಳಗಿಳಿದು, ಆ ನಂತರ ಮನೆಯ ಹೊರಗಡೆ ಹೋಗಲು ಸುಲಭ ದಾರಿಗಳಿದ್ದರೂ ತಪ್ಪಿಸಿಕೊಳ್ಳದೆ ನಿದ್ರೆಗೆ ಜಾರಿರುವುದು ಸುದರ್ಶನ್ ಅವರ ಪ್ರಕಾರ ತಾವು ನಂಬಿದ ದೈವ ದೇವರ ಪ್ರಭಾವ. ಹಾಗೆಂದು ಮನೆಯ ಮಾಲೀಕ ದೃಢವಾಗಿ ನಂಬುತ್ತಿದ್ದಾರೆ.
ವಾರದ ಹಿಂದಷ್ಟೇ ಸುದರ್ಶನ್ ಅವರ ದೈವಸ್ಥಾನದಲ್ಲೂ ಕಳ್ಳನನ್ನು ಕಂಕಟ್ಟು ಮಾಡಿ ಕಟ್ಟಿ ಹಾಕಿತ್ತು ದೈವ !
ಅಷ್ಟೇ ಅಲ್ಲ, ವಾರದ ಹಿಂದೆಯಷ್ಟೇ ಇಂತಹುದೇ ಕಳ್ಳತನದ ಪ್ರಯತ್ನ ಇದೆ ಸುದರ್ಶನ್ ಅವರ ದೈವಸ್ಥಾನದಲ್ಲೂ ಕೂಡ ನಡೆದಿತ್ತು. ಅಲ್ಲಿ ಕೂಡ ಕಳ್ಳ ಬೆಳಿಗ್ಗೆಯ ತನಕ ಕದ್ದ ದುಡ್ಡಿನೊಂದಿಗೆ ದೈವಸ್ಥಾನದ ಸುತ್ತಾನೇ ಗಿರಕಿ ಹೊಡೆಯುತ್ತಾ ಬೆಳಗಾಗುವವರೆಗೂ ಇದ್ದ. ಕಳ್ಳನಿಗೆ ಅಲ್ಲಿಂದ ತಪ್ಪಿಸಿಕೊಳ್ಳಲಾಗಿರಲಿಲ್ಲ. ಇದು ಕೂಡ ತಾವು ನಂಬಿದ ದೈವದ ಪ್ರಭಾವ ಎಂಬುದು ಸುದರ್ಶನ್ ಅವರ ಅಭಿಮತ.
ಆದರೆ ದೈವ- ಕಾರ್ಣಿಕ ಮುಂತಾದವುಗಳನ್ನು ನಂಬದ, ಎಲ್ಲವನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲೇ ಅಳೆದು ಸುರಿದು ನೋಡುವ ಜನರು ಇದು ದೈವದ ಮಹಿಮೆ ಎಂದು ಒಪ್ಪಲು ರೆಡಿ ಇಲ್ಲ. ಕಳ್ಳ ಮನೆ ಕಳ್ಳತನಕ್ಕೆ ಬರುವಾಗ ಧೈರ್ಯಕ್ಕೆ ಇರಲಿ ಅಂತ ಒಂದು ಕ್ವಾರ್ಟರ್ ಗಂಟಲಿಗೆ ಬಿಟ್ಟುಕೊಂಡು ಬಂದಿರಬಹುದು. ಇಲ್ಲಿ ಮನೆಯೊಳಗೆ ಇಳಿದು ಹುಡುಕಾಡುತ್ತಿರುವಾಗ ಅಮಲು ನೆತ್ತಿಗೆ ಒಮ್ಮೆಲೇ ಏರಿರಬಹುದು. ಆಗ ಆತ ಅಲ್ಲೇ ಬಿದ್ದು ನಿದ್ದೆ ಹೋಗಿರಬಹುದೆನ್ನುವ ತರ್ಕಕ್ಕೆ ಮೊರೆ ಹೋಗುತ್ತಿದ್ದಾರೆ.
ಏನೇ ಇರಲಿ, ಜನರ ನಂಬಿಕೆಯನ್ನು ಕಾಲದಿಂದ ಕಾಲಕ್ಕೆ ಬಲಪಡಿಸುವ ಇಂತಹ ಘಟನೆಗಳು ಆಗಿಂದೀಗ್ಗೆ ಘಟಿಸುತ್ತಲೇ ಇವೆ ; ಜನರ ನಂಬಿಕೆ ಗಟ್ಟಿಯಾಗುತ್ತಲೇ ಇದೆ.
ಕೊಳ್ತಿಗೆ | ಮದುವೆ ದಿನ ಮದುಮಗಳು ಪನಂದೆ ಪದ್ರಾಡ್ | ಮದುವೆ ರದ್ದು !