ಬೆಳ್ತಂಗಡಿಗೆ ಶಿವಕುಮಾರ್ ಸರ್ಕಲ್, ಬಂಟ್ವಾಳಕ್ಕೆ ನಾಗರಾಜ್ ಡಿ. ಕೆ , ವಿಟ್ಲಕ್ಕೆ ನಾಗರಾಜ್ ಎಚ್. ಇ. ಸೇರಿದಂತೆ 65 ಇನ್ಸ್ಪೆಕ್ಟರ್ ಗಳ ವರ್ಗಾವಣೆ

ಬೆಂಗಳೂರು: ರಾಜ್ಯದ 65 ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ ಕರ್ನಾಟಕ ಸರ್ಕಾರ.

ಅದರಂತೆ ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ಅಗಿ ಶಿವಕುಮಾರ್ ಬಿ. ಅವರನ್ನು ನೇಮಕ ಮಾಡಲಾಗಿದೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ನಾಗರಾಜ್ ಡಿ.ಕೆ ಅವರನ್ನು ವೃತ್ತ ನಿರೀಕ್ಷಕರಾಗಿ ನೇಮಕ ಮಾಡಲಾಗಿದೆ.

ವಿಟ್ಲ ಪೊಲೀಸ್ ಠಾಣೆಗೆ ನಾಗರಾಜ್ ಎಚ್. ಇ ಅವರನ್ನು ಇನ್ಸ್ಪೆಕ್ಟರ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಲೋಕಾಯುಕ್ತದಲ್ಲಿದ್ದ  ಭಾರತಿ ಜಿ. ಅವರನ್ನು ಮತ್ತೆ ಉರ್ವ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಭಾರತಿ ಮೂಡಬಿದ್ರೆ, ಪಣಂಬೂರು, ಉಳ್ಳಾಲ ಠಾಣೆಯಲ್ಲಿದ್ದು, ನಂತರ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿದ್ದರು.

ಇನ್ನುಳಿದಂತೆ ವಿಟ್ಲ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗಿ ಆದೇಶ ಬಂದಿದೆ.

Leave A Reply

Your email address will not be published.