ಔಷಧಿಗೆಂದು ಪೇಟೆಗೆ ಬಂದ ಯುವಕನ ಕಪಾಳಕ್ಕೆ ಬಾರಿಸಿದ ಜಿಲ್ಲಾಧಿಕಾರಿ
ಆ ಯುವಕ ಲಾಕ್ ಡೌನ್ ಸಮಯದಲ್ಲಿ ಔಷದಿ ತರಬೇಕೆಂದು ಮನೆಯಿಂದ ಪೇಟೆಗೆ ಹೊರಟಿದ್ದ. ಆತ ಮನೆಯಿಂದ ಹೊರಗೆ ಬಂದಾಗ ದಾರಿಯಲ್ಲಿ ಸಿಕ್ಕ ಜಿಲ್ಲಾಧಿಕಾರಿಯು ವಿಚಾರಿಸಿದ್ದಾರೆ. ಯುವಕ ತಾನು ಕೊಳ್ಳ ಬೇಕಾಗಿದ್ದ ಔಷಧ ಪತ್ರವನ್ನು ಜಿಲ್ಲಾಧಿಕಾರಿಗೆ ತೋರಿಸಿದ್ದಾನೆ. ಒಂದು ಕ್ಷಣ ಜಿಲ್ಲಾಧಿಕಾರಿ ಆತನನ್ನು ಹೋಗಲು ಬಿಟ್ಟಿದ್ದಾರೆ. ಆದರೆ ಮತ್ತೆ ಮನಸ್ಸು ಬದಲಿಸಿದ ಜಿಲ್ಲಾಧಿಕಾರಿ ಯುವಕನನ್ನು ಕರೆದು ನಂತರ ಆತನ ಕಪಾಳಕ್ಕೆ ಬಾರಿಸಿದ್ದಾರೆ. ನಂತರ ಆತನ ಮೊಬೈಲ್ ಅನ್ನು ತೆಗೆದುಕೊಂಡು ರಸ್ತೆಗೆ ಎಸೆದು ಹೊಡೆದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಆ ಜಿಲ್ಲಾಧಿಕಾರಿಯು ತನ್ನ ಸುತ್ತಮುತ್ತ ಇದ್ದ ಕಮಾಂಡೋ ಗಳಿಗೆ ಹೇಳಿ ಆ ಯುವಕನಿಗೆ ಲಾಠಿಚಾರ್ಜ್ ಮಾಡಿದ್ದಾರೆ.
ಇದು ಛತ್ತೀಸ್ ಗಢದಲ್ಲಿ ನಡೆದಿದ್ದು, ಈ ಜಿಲ್ಲಾಧಿಕಾರಿಯ ಅಮಾನವೀಯ ವರ್ತನೆಯ ಬಗ್ಗೆ ಇದೀಗ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾಧಿಕಾರಿಯಾದ ರಣ್ ಬೀರ್ ಶರ್ಮಾ ರವರು ಯುವಕನ ಮೊಬೈಲ್ ಅನ್ನು ರಸ್ತೆಗೆ ಎಳೆದು ಬಿಸಾಕುವ ವಿಡಿಯೋ ಒಂದು ವೈರಲ್ ಆಗಿದೆ.
ಈ ಘಟನೆಗೆ ಸಂಬಂಧಪಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಸುದ್ದಿ ಹರಡಿದೆ. ಈ ವಿಚಾರ ಅಷ್ಟಕ್ಕೇ ನಿಲ್ಲದೆ, ವಿಡಿಯೋ ವೈರಲ್ ಆದ ಕಾರಣ ಜಿಲ್ಲಾಧಿಕಾರಿ ಮತ್ತೆ ಎಚ್ಚೆತ್ತುಕೊಂಡು ಬೇರೆಯದೇ ಪ್ಲಾನ್ ಮಾಡಿದ್ದಾನೆ. ಆ ಹುಡುಗನ ಮೇಲೆ ಅತಿವೇಗದ ಚಾಲನೆಯ ಕೇಸು ಹಾಕಿಸಿ FIR ಕೂಡ ಮಾಡಿಸಿದ್ದಾನೆ.
ಈ ಘಟನೆಯು ಸುರಾಜ್ ಪುರ್ ಜಿಲ್ಲೆಯ ಛತ್ತೀಸ್ ಗಢದಲ್ಲಿ ನಡೆದು ಬಂದಿದ್ದು, ಇದರ ಸುದ್ದಿ ಈಗ ಆ ರಾಜ್ಯದ ಗೃಹ ಕಚೇರಿಗೂ ತಲುಪಿದೆ. ಇನ್ನು ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಂತಾರಾಜ್ಯ ಮಂಡಳಿ ಸಚಿವಾಲಯ, ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಸಂಜಿವ್ ಗುಪ್ತ, ಜಿಲ್ಲಾಧಿಕಾರಿಗಳ ನಡೆಯು ಹೇಯ ಮತ್ತು ಐಎಎಸ್ ಅಧಿಕಾರಿಯಾಗಲು ನಾಲಾಯಕ್ ಎಂದು ಟೀಕಿಸಿದ್ದಾರೆ. ಈ ವಿಚಾರವನ್ನು ಛತ್ತೀಸ್‌ಗಢದ ಮುಖ್ಯ ಕಾರ್ಯದರ್ಶಿಯ ಗಮನಕ್ಕೆ ತಂದಿದ್ದಾರೆ.