ಮದುವೆ ಮನೆಯಲ್ಲಿ ನೈಟ್ ಡಿಜೆ ಡ್ಯಾನ್ಸ್ | ವೀಡಿಯೋ ವೈರಲ್ ,ಕ್ರಮಕ್ಕೆ ಡಿಸಿ ಸೂಚನೆ
ಕೋವಿಡ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಸರಕಾರ ಕೋವಿಡ್ ನಿಯಮಾವಳಿಗಳನ್ನು ಜಾರಿಗೆ ತಂದಿದೆ.
ಆದರೆ ಹಲವೆಡೆ ಈ ನಿಯಮಗಳನ್ನು ಗಾಳಿಗೆ ತೂರಿ ಗಮ್ಜಾಲ್ ಮಾಡುತ್ತಿರುವುದು ಕಂಡು ಬರುತ್ತಿದೆ.ಇಲ್ಲೊಂದು ಕಡೆ ಮದುವೆ ಮನೆಯಲ್ಲಿ ರಾತ್ರಿ ಡಿಜೆ ನೈಟ್ ಪಾರ್ಟಿಯ ಗಮ್ಜಾಲ್ ಮಾಡಿದ್ದಲ್ಲದೆ ಅದರ ವೀಡಿಯೊ ಮಾಡಿ ವೈರಲ್ ಮಾಡಿದ್ದಾರೆ.
ಇದು ಮದುವೆ ಮನೆಯವರಿಗೆ ಸಂಕಷ್ಟ ತಂದಿದೆ.
ಮಂಗಳೂರು ನಗರದ ಹೊರವಲಯದ ಅಡ್ಯಾರ್ನ ಯುವಕನೊಬ್ಬನ ಮದುವೆ ರವಿವಾರ ಸಿದ್ಧಕಟ್ಟೆಯಲ್ಲಿರುವ ಯುವತಿಯ ಮನೆಯಲ್ಲಿ ನಡೆದಿತ್ತು. ಅವರು 25 ಜನರಿಗೆ ಗ್ರಾಪಂನಿಂದ ಅನುಮತಿ ಪಡೆದಿದ್ದರು.
ಕೊರೋನ ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸದೆ ಸುರಕ್ಷಿತ ಅಂತರ ಕಾಪಾಡದೆ ಡಿಜೆ ಹಾಕಿ ಯುವಕ, ಯುವತಿಯರು ಸಮೂಹ ನೃತ್ಯ ಮಾಡಿರುವ ವಿಡಿಯೋ ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದು ಜಿಲ್ಲಾಧಿಕಾರಿಯವರ ಗಮನಕ್ಕೆ ಬಂದಿದ್ದು, ತಕ್ಷಣ ಅವರು ತಹಶೀಲ್ದಾರ್ಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ತಹಶೀಲ್ದಾರ್ ಅಡ್ಯಾರ್ ಪಿಡಿಒ ಅವರಿಂದ ಮಾಹಿತಿ ಪಡೆದಿದ್ದಾರೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.