ಕೊರೋನಾ ಲಸಿಕೆ ನೀಡಿಕೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಭಾರತ | ದೈತ್ಯ ರಾಷ್ಟ್ರಗಳನ್ನು ಹಿಂದಿಕ್ಕಿ ಒಟ್ಟು 17 ಕೋಟಿ ಲಸಿಕೆ ವಿತರಣೆ !
ಭಾರತ ಜಾಗತಿಕವಾಗಿ ಅತಿ ಹೆಚ್ಚು ವೇಗವಾಗಿ ಕೋವಿಡ್-19 ಲಸಿಕೆ ನೀಡುವ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆ ಮೂಲಕ ದೈತ್ಯ ರಾಷ್ಟ್ರಗಳಾದ ಚೀನಾ ಮತ್ತು ಅಮೇರಿಕಾವನ್ನು ಭಾರತ ಹಿಂದಿಕ್ಕಿದೆ.
ಇಲ್ಲಿಯವರೆಗೆ ದೇಶದಲ್ಲಿ 17 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಆ ಮೂಲಕ 17 ಕೋಟಿ ಜನರಿಗೆ ವೇಗವಾಗಿ ಲಸಿಕೆ ಹಾಕಿದ ಮೊದಲ ದೇಶ ಎಂಬ ಕೀರ್ತಿಗೆ ಭಾರತ ಭಾಜನವಾಗಿದೆ. ಇಷ್ಟು ದೊಡ್ಡ ಪ್ರಮಾಣದ ಲಸಿಕೆಯನ್ನು ಭಾರತ ಕೇವಲ 114 ದಿನಗಳಲ್ಲಿ ವಿತರಿಸಿದೆ.
ಚೀನಾವು 17 ಕೋಟಿ ಲಸಿಕೆ ನೀಡಲು 119 ದಿನಗಳನ್ನು ತೆಗೆದುಕೊಂಡಿತ್ತು. ಇದೇ ಪ್ರಮಾಣದ ಲಸಿಕೆ ನೀಡಲು ಅಮೆರಿಕಾವು 115 ದಿನಗಳನ್ನು ತೆಗೆದುಕೊಂಡಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.
ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 17,01,76,603 ಡೋಸ್ ನ ಲಸಿಕೆ ನೀಡಲಾಗಿದೆ. ಈ ಪೈಕಿ ಇದರಲ್ಲಿ 95,47,102 ಆರೋಗ್ಯ ಕಾರ್ಯಕರ್ತರು ಮೊದಲನೇ ಹಾಗೂ 64,71,385 ಮಂದಿ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. 1,39,72,612 ಮುಂಚೂಣಿ ಕಾರ್ಯಕರ್ತರು ಮೊದಲನೇ ಹಾಗೂ 77,55,283 ಕಾರ್ಯಕರ್ತರು ಎರಡನೇ ಡೋಸ್ ಪಡೆದಿದ್ದಾರೆ. 18-45 ವಯಸ್ಸಿನ (1 ನೇ ಡೋಸ್) 20,31,854 ಫಲಾನುಭವಿಗಳು, 5,51,79,217 (1 ನೇ ಡೋಸ್) ಪಡೆದಿದ್ದಾರೆ.
45 ರಿಂದ 60 ವರ್ಷ ವಯಸ್ಸಿನ 65,61,851 (2 ನೇ ಡೋಸ್) ಫಲಾನುಭವಿಗಳು. 5,36,74,082 1 ನೇ ಡೋಸ್ ಫಲಾನುಭವಿಗಳು ಮತ್ತು 60 ವರ್ಷಕ್ಕಿಂತ ಹೆಚ್ಚು ವಯಸ್ಸಿನ 1,49,83,217 2 ನೇ ಡೋಸ್ ಫಲಾನುಭವಿಗಳಿದ್ದಾರೆ. ಕಳೆದ 24 ಗಂಟೆಗಳಲ್ಲಿ 6.8 ಲಕ್ಷಕ್ಕೂ ಹೆಚ್ಚು ಲಸಿಕೆ ಪ್ರಮಾಣವನ್ನು ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.