ಜನವರಿ 22 | ನಿರ್ಭಯ ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳಿಗೆ ಕೊನೆಗೂ ಗಲ್ಲುಶಿಕ್ಷೆ
ಶಿಕ್ಷೆನಿರ್ಭಯ ಅತ್ಯಾಚಾರ ಮತ್ತು ಹತ್ಯೆ ಆರೋಪಿಗಳಿಗೆ ಕೊನೆಗೂ ಗಲ್ಲುಶಿಕ್ಷೆಯ ದಿನ ನಿಗದಿಯಾಗಿದೆ. ಇದೆ ಜನವರಿ 22 ರ ಮುಂಜಾನೆ 7 ಗಂಟೆಗೆ ಅಪರಾಧಿಗಳು ತಲೆಗೆ ಕಪ್ಪು ಬಟ್ಟೆ ಸುತ್ತಿಕೊಂಡು ನೇಣುಕುಣಿಕೆಯ ಒಳಗೆ ತಲೆಯೊಡ್ಡಲಿದ್ದಾರೆ.
ಇನ್ನು ಯಾವುದೇ ರೀತಿಯಿಂದಲೂ ಅಪರಾಧಿಗಳು ತಪ್ಪಿಸಿಕೊಳ್ಳುವಂತಿಲ್ಲ.
ಈಗ ಅವರ ಬದುಕಿನ ಎಲ್ಲಾ ಬಾಗಿಲುಗಳು ಮುಚ್ಚಿ ಬಿಟ್ಟಿವೆ. ಕಣ್ಣ ಮುಂದೆ ಸಾವಿನ ಕುಣಿಕೆ ನೇತಾಡುತ್ತಿದೆ.
ಗಲ್ಲು ಶಿಕ್ಷೆ ಗೆ ಬೇಕಾದ ಎಲ್ಲ ತಯಾರಿಯೂ ನಡೆದಿದೆ. ಬಿಹಾರದ ಜೈಲು ಹಕ್ಕಿಗಳು ನೇಯ್ದ ಮನಿಲಾ ನೇಣಿನ ಹಗ್ಗ ರೆಡಿಯಾಗಿದೆ. ಉತ್ತರಪ್ರದೇಶದ ಮೀರತ್ ಜೈಲಿನಿಂದ ಗಲ್ಲು ಹಾಕಲು ಪರಿಣಿತರು ಬಂದಿದ್ದಾರೆ.
ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದ ನಂತರ ಅಪರಾಧಿಗಳು ರಾಷ್ಟ್ರಪತಿಗೆ ಕ್ಷಮಾದಾನದ ಅರ್ಜಿಯನ್ನು ಹಾಕಿದ್ದರು. ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಅವರು ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಿದ್ದರು.
ಅನಂತರ ಅಪರಾಧಿಗಳನ್ನು ಒಬ್ಬರಾದ ಅಕ್ಷಯ್ ಶರ್ಮಾ ನು ಸುಪ್ರೀಂ ಕೋರ್ಟಿನ ಮೆಟ್ಟಿಲು ಹತ್ತಿದ್ದನು.
ದೆಹಲಿಯ ವಾಯುಮಾಲಿನ್ಯ ವಿಪರೀತವಾಗಿದೆ, ಮನುಷ್ಯನ ಆಯುಷ್ಯ ದಿನೇದಿನೇ ಕ್ಷೀಣಿಸುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ನಾವು ಸಾಯಲಿದ್ದೇವೆ. ಹಾಗಾಗಿ ಗಲ್ಲು ಶಿಕ್ಷೆಯನ್ನು ರದ್ದು ಪಡಿಸಿಕೊಂಡು ಹೇಗಾದರೂ ಅದನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಿಕೊಂಡು ಬದುಕಲು ಕೊನೆಯ ಪ್ರಯತ್ನ ನಡೆಸಿದ್ದ.
ಅಪರಾಧಿಗಳ ಡೆತ್ ವಾರಂಟ್ಗಳನ್ನು ಜಾರಿಗೊಳಿಸುವ ಮತ್ತು ಮರಣದಂಡನೆ ಮಾಡುವ ನಡುವೆ, ಅವರು ಗಲ್ಲುನಿರೋಧಕ ಅರ್ಜಿಗಳನ್ನು ಸಲ್ಲಿಸಲು ಬಯಸಿದರೆ ಅವರು ಹಾಗೆ ಮಾಡಬಹುದು ”ಎಂದು ಪ್ರಾಸಿಕ್ಯೂಷನ್ ಹೇಳಿದೆ. ಇಬ್ಬರು ಅಪರಾಧಿಗಳ-ಮುಖೇಶ್ ಮತ್ತು ವಿನಯ್ – ಪರ ವಕೀಲರು ಅವರು ಸುಪ್ರೀಂ ಕೋರ್ಟ್ನಲ್ಲಿ ಕ್ಯುರೇಟಿವ್ ಅರ್ಜಿಯನ್ನುಸಲ್ಲಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಹೇಳಿದರು.
ನಿರ್ಭಯಾಳನ್ನು ಅತ್ಯಾಚಾರ ಮಾಡಿ, ಆಕೆ ಬದುಕಿರುವ೦ತೆಯೇ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ಸರಳನ್ನು ತೂರಿಸಿ ಪೈಶಾಚಿಕತೆ ಯ ಪರಾಕಾಷ್ಟೆಯನ್ನು ಮೆರೆದಿದ್ದರು. ನಿರ್ಭಯಾಳ ನ್ನು ಕೊಂದ ಅಪರಾಧಿಗಳ ಗಲ್ಲಿನತ್ತಲೇ ಈಗ ದೇಶದ ಚಿತ್ತ.
ಇದನ್ನೂ ಓದಿ
ಸುದರ್ಶನ್ ಬಿ. ಪ್ರವೀಣ್, ಬೆಳಾಲು