ಮಂಗಳೂರು ಗೋಲಿಬಾರ್ । ತನಿಖೆಯಿಂದ ನಿರಪರಾಧಿಗಳೆಂದು ಸಾಬೀತಾದರೆ ಮಾತ್ರ 10 ಲಕ್ಷ ಪರಿಹಾರ
ಮಂಗಳೂರಿನಲ್ಲಿ ಪೌರತ್ವ ಮಸೂದೆ ವಿರೋಧಿ ಪ್ರತಿಭಟನೆ ವೇಳೆ ಹಿಂಸಾಚಾರದಲ್ಲಿ ಮೃತಪಟ್ಟ ಇಬ್ಬರು ವ್ಯಕ್ತಿಗಳ ಕುಟುಂಬಕ್ಕೆ ಘೋಷಿಸಿದ 10 ಲಕ್ಷ ರೂ.ಗಳ ಪರಿಹಾರವನ್ನು ಅಪರಾಧ ತನಿಖೆಯ ವಿಚಾರಣೆಯ ನಂತರವೇ ನಿರ್ಧರಿಸಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೇಳಿದರು.
“ಪೊಲೀಸ್ ಗುಂಡಿನ ದಾಳಿಯಲ್ಲಿ ಕೊಲ್ಲಲ್ಪಟ್ಟ ಆ ಇಬ್ಬರು ತಪ್ಪಿತಸ್ಥರೆಂದು ಸಾಬೀತಾದರೆ ಅವರ ಕುಟುಂಬಗಳಿಗೆ ಸರ್ಕಾರ ಯಾವುದೇ ಪರಿಹಾರವನ್ನು ನೀಡುವುದಿಲ್ಲ” ಎಂದು ಯಡಿಯೂರಪ್ಪ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೇಳಿದರು.
ಮೊನ್ನೆ ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರಿನಲ್ಲಿ 23 ವಯಸ್ಸಿನ ನೌಶೀಕ್ ಕುದ್ರೋಳಿ, ಮತ್ತೊಬ್ಬ 49 ವಯಸ್ಸಿನ ಮೀನು ವ್ಯಾಪಾರಿ ಜಲೀಲ್ ವಯಸ್ಸಿನ ಮೃತಪಟ್ಟಿದ್ದರು.
ಹಾಗೊಂದು ವೇಳೆ ಅಪರಾಧಿಗಳಿಗೆ, ಹಣಸಹಾಯಮಾಡಿದರೆ, ಅದು ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ತನಿಖೆ ನಡೆದು, ಅಪರಾಧಿಗಳು ನೇರವಾಗಿ ಹಿಂಸಾತ್ಮಕ ಕೃತ್ಯದಲ್ಲಿ ಭಾಗಿಯಾಗದೆ ಇದ್ದಲ್ಲಿ ಮಾತ್ರ ಇನ್ನು ಪರಿಹಾರ.